ETV Bharat / sports

ಕೆಲವೇ ಗಂಟೆಗಳಲ್ಲಿ ಭಾರತ-ಪಾಕಿಸ್ತಾನ ಫೈಟ್​: ಪಂದ್ಯ ಯಾವಾಗ, ಸಮಯ, ನೇರಪ್ರಸಾರ ಎಲ್ಲಿ? - IND VS PAK

Ind vs Pak: ಇಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಅಂಡರ್​-19 ಏಷ್ಯಾಕಪ್ ಪಂದ್ಯ ನಡೆಯಲಿದೆ.

ACC Under 19 Asia Cup  India vs Pakistan  Under 19 Asia Cup
Ind vs Pak Match (AP)
author img

By ETV Bharat Sports Team

Published : Dec 15, 2024, 10:18 AM IST

Ind vs Pak: 19 ವರ್ಷದೊಳಗಿನವರ ಎಸಿಸಿ ಮಹಿಳಾ ಏಷ್ಯಾಕಪ್ 2024 ಇಂದಿನಿಂದ ಪ್ರಾರಂಭವಾಗಲಿದ್ದು, ಆತಿಥೇಯ ಮಲೇಷ್ಯಾ ತಂಡವು ಶ್ರೀಲಂಕಾದೊಂದಿಗೆ ಪಂದ್ಯಾವಳಿಯ ಆರಂಭಿಕ ಪಂದ್ಯವನ್ನು ಆಡಲಿದೆ.

ಎರಡನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಅಂಡರ್-19 ಮಹಿಳಾ ವಿಶ್ವಕಪ್​ನಲ್ಲಿ​ ಭಾಗಿಯಾಗಿದ್ದ ಭಾರತ ಮಹಿಳಾ ತಂಡದ ಮೂವರು ಆಟಗಾರ್ತಿಯರು ಈ ಟೂರ್ನಿಗೆ ಆಯ್ಕೆಯಾಗಿದ್ದಾರೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಕೌಲಾಲಂಪುರದಲ್ಲಿ ಮುಖಾಮುಖಿಯಾಗಲಿವೆ.

ಪ್ರಥಮ ಬಾರಿಗೆ ನಡೆಯುತ್ತಿರುವ ಈ ಏಷ್ಯಾಕಪ್ ನಲ್ಲಿ ಒಟ್ಟು ಆರು ತಂಡಗಳು ಭಾಗವಹಿಸುತ್ತಿವೆ. ಭಾರತ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಮಲೇಷ್ಯಾ ತಂಡಗಳು ಆಡುತ್ತಿದ್ದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ಭಾರತ-ಪಾಕಿಸ್ತಾನ ಪಂದ್ಯ: ಅಂಡರ್-19 ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವು ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 11.30ಕ್ಕೆ ಪ್ರಾರಂಭವಾಗಲಿದೆ.

ನೇರ ಪ್ರಸಾರ ಎಲ್ಲಿ: ಭಾರತದಲ್ಲಿ, ಈ ಪಂದ್ಯ ಟಿವಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೇರಪ್ರಸಾರವಾಗಲಿದೆ. ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಸೋನಿ ಲಿವ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ಸ್ ಟಿವಿ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಅಂಡರ್ 19 ಮಹಿಳಾ ಏಷ್ಯಾಕಪ್​ಅನ್ನು ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ.

ಭಾರತ ತಂಡವನ್ನು ನಿಕ್ಕಿ ಪ್ರಸಾದ್ ಮುನ್ನಡೆಸಲಿದ್ದರೆ, ಸಾನಿಕಾ ಛಲ್ಕೆ ಉಪನಾಯಕಿ ಆಗಿದ್ದಾರೆ. ಪಾಕಿಸ್ತಾನ ತಂಡವನ್ನು ಜೋಫಿಶಾ ಅಯಾಜ್ ಮುನ್ನಡೆಸಲಿದ್ದು, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೋಮಲ್ ಖಾನ್ ಅವರಿಗೆ ಉಪನಾಯಕಿ ಆಗಿದ್ದಾರೆ.

ಸಂಭಾವ್ಯ ತಂಡಗಳು-ಭಾರತ: ನಿಕ್ಕಿ ಪ್ರಸಾದ್ (ನಾಯಕಿ), ಸಾನಿಕಾ ಚಲ್ಕೆ (ಉಪನಾಯಕಿ), ಜಿ ತ್ರಿಶಾ, ಕಮಲಿನಿ ಜಿ (ವಿಕೆಟ್ ಕೀಪರ್), ಈಶ್ವರಿ ಅವಸಾರೆ, ಮಿಥಿಲಾ ವಿನೋದ್, ಜೋಶಿತಾ ವಿಜೆ, ಆಯುಷಿ ಶುಕ್ಲಾ, ಆನಂದಿತಾ ಕಿಶೋರ್, ಎಂಡಿ ಶಬ್ನಮ್, ನಂದನಾ ಎಸ್.

ಪಾಕಿಸ್ತಾನ: ಜೊಫಿಶನ್ ಅಯಾಜ್ (ನಾಯಕಿ), ಕೋಮಲ್ ಖಾನ್ (ಉಪನಾಯಕಿ, ವಿಕೆಟ್ ಕೀಪರ್), ಹನಿಯಾ ಅಹ್ಮರ್, ರೋಜಿನಾ ಅಕ್ರಮ್, ಆರಿಶಾ ಅನ್ಸಾರಿ, ಮಹಮ್ ಅನೀಸ್, ಶಹರ್ ಬಾನೊ, ಫಾತಿಮಾ ಖಾನ್, ಅಲಿಸಾ ಮುಖ್ತಿಯಾರ್, ಕುರಾತುಲೈನ್, ಮಹ್ನೂರ್ ಝೆಬ್.

ಇದನ್ನೂ ಓದಿ: IPL 2025: ಈ ಮೂವರಲ್ಲಿ ಒಬ್ಬರು RCB ತಂಡದ ನಾಯಕರಾಗುವುದು ಫಿಕ್ಸ್​?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.