RCB Captain Virat Kohli: ಮುಂದಿನ ಆವೃತ್ತಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕರಾಗುವ ಸಾಧ್ಯತೆಗಳಿವೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಈ ಬಗ್ಗೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಅಧಿಕೃತವಾಗಿ ಘೋಷಿಸದಿದ್ದರೂ, ತಂಡದ ಸಂಯೋಜನೆ ಗಮನಿಸಿದರೆ ವಿರಾಟ್ ನಾಯಕರಾಗುತ್ತಾರೆ ಎಂದು ಅವರು ಭಾವಿಸಿದ್ದಾರೆ.
ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ, ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರ ಕುರಿತು ಅವರು ಪ್ರತಿಕ್ರಿಯಿಸಿದರು. ಹರಾಜಿನಲ್ಲಿ ವೇಗಿಗಳಾದ ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್ ಮತ್ತು ಲುಂಗಿ ಎಂಗಿಡಿ ಸಿಕ್ಕಿರುವುದು ಸಂತಸ ತಂದಿದೆ ಎಂದರು.
ಒಳ್ಳೆಯ ಸ್ಪಿನ್ನರ್ ಇಲ್ಲ: ಎಂಗಿಡಿ ಫಾರ್ಮ್‌ಗೆ ಬಂದರೆ ಅತ್ಯುತ್ತಮ ಆಟಗಾರ ಎಂದು ಹೊಗಳಿದ ಅವರು, ಆರ್‌ಸಿಬಿಗೆ ಹೊಸ ಶಕ್ತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ಆದ್ರೆ, ಪಂದ್ಯದ ಪರಿಸ್ಥಿತಿಯನ್ನೇ ಬದಲಾಯಿಸುವ ಒಳ್ಳೆಯ ಸ್ಪಿನ್ನರ್ RCBಯಲ್ಲಿ ಇಲ್ಲದಿರುವುದೊಂದೇ ಕೊರತೆ ಎಂದಿದ್ದಾರೆ.
ವಿರಾಟ್ ಕೊಹ್ಲಿ 2013-2021ರ ಅವಧಿಯಲ್ಲಿ ತಂಡದ ನಾಯಕರಾಗಿದ್ದರು. ಈ ವೇಳೆ ತಂಡ ನಾಲ್ಕು ಬಾರಿ ಪ್ಲೇಆಫ್ ತಲುಪಿತ್ತು. 2016ರಲ್ಲಿ ಫೈನಲ್ಗೂ ತಲುಪಿ ಸೋಲನುಭವಿಸಿತ್ತು. ಕಳೆದ ಋತುವಿನಲ್ಲಿ ಫಾಫ್ ಡುಪ್ಲೆಸಿಸ್ ನಾಯಕನ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ ಈ ಬಾರಿ ಅವರನ್ನು ರಿಟೇನ್ ಮಾಡಿಕೊಳ್ಳದೇ ಇರುವುದು ಮತ್ತು ಸದ್ಯ ತಂಡದಲ್ಲಿರುವ ಆಟಗಾರರಲ್ಲಿ ಕೊಹ್ಲಿ ಅನುಭವಿ ಆಟಗಾರನಾಗಿದ್ದು ಅವರೇ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ.
ಹರಾಜಿನಲ್ಲಿ RCB ಖರೀದಿಸಿದ ಆಟಗಾರರು: ಹೇಜಲ್‌ವುಡ್ (ರೂ. 12 ಕೋಟಿ), ಜಿತೇಶ್ ಶರ್ಮಾ (ರೂ. 11 ಕೋಟಿ), ಫಿಲ್ ಸಾಲ್ಟ್ (ರೂ. 11.50 ಕೋಟಿ), ಲಿವಿಂಗ್‌ಸ್ಟನ್ (ರೂ. 8.75 ಕೋಟಿ ), ಭುವನೇಶ್ವರ್ ಕುಮಾರ್ (ರೂ. 10.75 ಕೋಟಿ), ರಸಿಕ್ ದಾರ್ (ರೂ. 6 ಕೋಟಿ), ಕೃನಾಲ್ ಪಾಂಡ್ಯ (ರೂ. 5.75 ಕೋಟಿ), ಟಿಮ್ ಡೇವಿಡ್ (3 ಕೋಟಿ ರೂ.), ಜೇಕಬ್ ಬೆಥೆಲ್ (2.60 ಕೋಟಿ ರೂ.), ಸುಯಶ್ ಶರ್ಮಾ (2.60 ಕೋಟಿ ರೂ.), ದೇವದತ್ ಪಡಿಕ್ಕಲ್ (2 ಕೋಟಿ ರೂ.), ನುವಾನ್ ತುಷಾರ (1.60 ಕೋಟಿ ರೂ.), ರೊಮಾರಿಯೊ ಶೆಫರ್ಡ್ (ರೂ. 1.50) ಕೋಟಿಗಳು) ), ಎಂಗಿಡಿ (ರೂ. ಕೋಟಿ), ಸ್ವಪ್ನಿಲ್ ಸಿಂಗ್ (ರೂ. 50 ಲಕ್ಷ), ಮೋಹಿತ್ ರಾಧೆ (ರೂ. 30 ಲಕ್ಷ), ಅಭಿನಂದನ್ ಸಿಂಗ್ (ರೂ. 30 ಲಕ್ಷ), ಸ್ವಸ್ತಿಕ್ ಚಿಕಾರ (ರೂ. 30 ಲಕ್ಷ), ಮನೋಜ್ ಭಾಂಡಗೆ (ರೂ. 30 ಲಕ್ಷ).
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ದ ಮೊದಲ ಟೆಸ್ಟ್ ಗೆದ್ದರೂ ಟೀಂ ಇಂಡಿಯಾಗೆ ಟೆನ್ಶನ್: ಕಾರಣವೇನು?