ETV Bharat / sports

ಶುಭಮನ್​ ಗಿಲ್​ ಟೀಕಿಸಿದ ವಿರಾಟ್​​ ಕೊಹ್ಲಿ ವಿಡಿಯೋ ವೈರಲ್​: ಇದರ ಅಸಲಿಯತ್ತೇನು? - Virat Kohli Viral Video

author img

By ETV Bharat Sports Team

Published : Aug 29, 2024, 3:35 PM IST

ವಿರಾಟ್​ ಕೊಹ್ಲಿ ಸಹ ಆಟಗಾರ ಶುಭ​ಮನ್​ ಗಿಲ್​ ಅವರನ್ನು ಗುರಿಯಾಗಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇದು ಅಸಲಿಯಾ ಅಥವಾ ನಕಲಿಯಾ ಎಂಬುದರ ಬಗ್ಗೆ ಈ ಸುದ್ದಿಯಲ್ಲಿ ತಿಳಿಯಿರಿ.

ವಿರಾಟ್​ ಕೊಹ್ಲಿ ಮತ್ತು ಶುಭಮನ್​ ಗಿಲ್​
ವಿರಾಟ್​ ಕೊಹ್ಲಿ ಮತ್ತು ಶುಭಮನ್​ ಗಿಲ್​ (AFP)

ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್​​ ವಿರಾಟ್ ಕೊಹ್ಲಿ ಸಹ ಕ್ರಿಕೆಟರ್​ ಶುಭಮನ್ ಗಿಲ್ ಅವರನ್ನು ಗುರಿಯಾಗಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಕ್ಲಿಪ್​ನಲ್ಲಿ ಸಂದರ್ಶನವೊಂದರ ವಿಡಿಯೋದಲ್ಲಿ, ಗಿಲ್​ ಅವರನ್ನು ತನ್ನೊಂದಿಗೆ ಹೋಲಿಕೆ ಮಾಡುತ್ತಿರುವುದರ ಬಗ್ಗೆ ಕೊಹ್ಲಿ ಮಾತನಾಡಿದ್ದು, ಗಿಲ್ ತನಗಿಂತ ಮುಂದೆ ಹೋಗಲಾರ ಎಂದು ಹೇಳಿರುವುದನ್ನು ಇದರಲ್ಲಿ ಕಾಣಬಹುದಾಗಿದೆ.

ವಿಡಿಯೋ ಕ್ಲಿಪ್​ನಲ್ಲಿ, "ನಾನು ಗಿಲ್ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಅವರು ಪ್ರತಿಭಾವಂತ ಆಟಗಾರ, ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಲೆಜೆಂಡ್ ಆಟಗಾರನಾಗುವುದಕ್ಕೆ ಬಹಳ ಅಂತರವಿದೆ. ಗಿಲ್ ಬ್ಯಾಟಿಂಗ್​ ಅದ್ಭುತವಾಗಿದೆ. ಆದರೆ, ಆತ ನನಗಿಂತ ಮುಂದೆ ಹೋಗಲಾರ. ಜನರು ಮುಂದಿನ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಾರೆ. ಆದರೆ ನಾನು ಸ್ಪಷ್ಟಪಡಿಸುತ್ತೇನೆ, ಎಂದಿಗೂ ವಿರಾಟ್ ಕೊಹ್ಲಿ ಒಬ್ಬನೇ ಇರಲಿದ್ದಾನೆ. ನಾನು ಅತ್ಯಂತ ಕಠಿಣ ಬೌಲರ್‌ಗಳನ್ನು ಎದುರಿಸಿದ್ದೇನೆ, ಕಠಿಣ ಪರಿಸ್ಥಿತಿಯಲ್ಲಿ ಪ್ರದರ್ಶನ ನೀಡಿದ್ದೇನೆ, ಕಳೆದ ಒಂದು ದಶಕದಿಂದ ಇದೆಲ್ಲ ಮಾಡಿದ್ದೇನೆ. ಇದನ್ನು ಕೆಲವೇ ಉತ್ತಮ ಇನ್ನಿಂಗ್ಸ್‌ಗಳಿಂದ ಬದಲಾಯಿಸಲು ಸಾಧ್ಯವಿಲ್ಲ. ಭಾರತೀಯ ಕ್ರಿಕೆಟ್‌ನಲ್ಲಿ, ಮೊದಲು ದೇವರು (ಸಚಿನ್ ತೆಂಡೂಲ್ಕರ್), ನಂತರ ನಾನು. ಗಿಲ್ ಈ ಮಟ್ಟವನ್ನು ತಲುಪಲು ಬಹಳ ದೂರ ಸಾಗಬೇಕಾಗಿದೆ ಎಂದು ವಿಡಿಯೋದಲ್ಲಿ ಹೇಳಿರುವುದನ್ನು ಕಾಣಬಹುದಾಗಿದೆ.

ಆದರೆ ವಾಸ್ತವಾಗಿ ಇದೊಂದು ಡೀಪ್​ಫೇಕ್​ ವಿಡಿಯೋ ಆಗಿದೆ. ಕೊಹ್ಲಿ ಅವರ ಸಂದರ್ಶನವೊಂದರ ತುಣುಕನ್ನು ಬಳಸಿಕೊಂಡಿರುವ ಕಿಡಿಗೇಡಿಗಳು ಡೀಪ್ ​ಫೇಕ್​ ಮಾಡಿ ಈ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಅಭಿಮಾನಿಗಳು ಈ ಪೋಸ್ಟ್‌ಗೆ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ನೀಡಿದ್ದು, ವಿಡಿಯೋ ಎಡಿಟ್ ಆಗಿದೆ ಎಂದು ಹಲವರು ಹೇಳಿದ್ದಾರೆ. ಈ ಕ್ಲಿಪ್‌ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು, ' ವಿರಾಟ್ ಎಂದಿಗೂ ಮತ್ತೊಬ್ಬ ಆಟಗಾರರ ಬಗ್ಗೆ ಈ ರೀತಿಯಲ್ಲಿ ಮಾತನಾಡುವುದಿಲ್ಲ. ಹಾಗೇ ವಿಡಿಯೋದಲ್ಲಿರುವ ಧ್ವನಿಯೂ ಅವರದಲ್ಲ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ಇದು AI ರಚಿತ ವಿಡಿಯೋ ಆಗಿದೆ. ಒಂದು ಕ್ಷಣ, ಇದು ನಿಜ ಎಂದು ನಾನು ಭಾವಿಸಿದ್ದರೆ ಬಳಿಕ ಇದರ ಅಸಲಿಯತ್ತು ತಿಳಿಯಿತು. AI ಖಂಡಿತವಾಗಿಯೂ ಅಪಾಯಕಾರಿಯಾಗಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದ ಅತ್ಯಂತ ಪ್ರತಿಭಾವಂತ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಗಿಲ್ ಅವರನ್ನು ಭಾರತ ತಂಡದ ಮುಂದಿನ ವಿರಾಟ್​ ಕೊಹ್ಲಿ ಎಂದು ಅಭಿಮಾನಿಗಳು ಕೆರೆಯುತ್ತಾರೆ. ಪಂಜಾಬ್ ಮೂಲದ ಈ ಕ್ರಿಕೆಟಿಗ ಕಳೆದ ವರ್ಷ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಗಿಲ್ 29 ಪಂದ್ಯಗಳಲ್ಲಿ 63.36 ಸರಾಸರಿಯಲ್ಲಿ 5 ಶತಕಗಳ ಸಹಾಯದಿಂದ ಒಟ್ಟು 1584 ರನ್ ಗಳಿಸಿದ್ದರು.

ಇದನ್ನೂ ಓದಿ: ರೊನಾಲ್ಡೊ ಯೂಟ್ಯೂಬ್​ ಚಾನೆಲ್ ಕೇವಲ​ ಜಾಹೀರಾತಿನಿಂದ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ! - Ronaldo Youtube Channel Income

ETV Bharat Logo

Copyright © 2024 Ushodaya Enterprises Pvt. Ltd., All Rights Reserved.