ಹೈದರಾಬಾದ್ (ತೆಲಂಗಾಣ): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಪಂದ್ಯದ ಮೊದಲ ದಿನ ಬೌಲರ್ಗಳು ಪ್ರಾಬಲ್ಯ ಮೆರೆದಿದ್ದರೆ, ಎರಡನೇ ದಿನವಾದ ಇಂದು ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಿದರು. ಇದರಿಂದ ಇಂದಿನ ದಿನದಾಟ ಅಂತ್ಯಕ್ಕೆ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 421 ರನ್ ಗಳಿಸಿ, 175 ರನ್ಗಳ ಮುನ್ನಡೆ ಸಾಧಿಸಿದೆ.
-
Stumps on Day 2 in Hyderabad! 🏟️#TeamIndia move to 421/7, lead by 175 runs 🙌
— BCCI (@BCCI) January 26, 2024 " class="align-text-top noRightClick twitterSection" data="
See you tomorrow for Day 3 action 👋
Scorecard ▶️ https://t.co/HGTxXf8b1E#INDvENG | @IDFCFIRSTBank pic.twitter.com/sul21QNVgh
">Stumps on Day 2 in Hyderabad! 🏟️#TeamIndia move to 421/7, lead by 175 runs 🙌
— BCCI (@BCCI) January 26, 2024
See you tomorrow for Day 3 action 👋
Scorecard ▶️ https://t.co/HGTxXf8b1E#INDvENG | @IDFCFIRSTBank pic.twitter.com/sul21QNVghStumps on Day 2 in Hyderabad! 🏟️#TeamIndia move to 421/7, lead by 175 runs 🙌
— BCCI (@BCCI) January 26, 2024
See you tomorrow for Day 3 action 👋
Scorecard ▶️ https://t.co/HGTxXf8b1E#INDvENG | @IDFCFIRSTBank pic.twitter.com/sul21QNVgh
ಗುರುವಾರ ಟಾಸ್ ಗೆದ್ದಿದ್ದ ಇಂಗ್ಲೆಂಡ್ ತಂಡ 246 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಬಳಿಕ ತನ್ನ ಇನ್ನಿಂಗ್ಸ್ ಶುರು ಮಾಡಿದ್ದ ರೋಹಿತ್ ಪಡೆ ದಿನದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 119 ರನ್ ಕಲೆ ಹಾಕಿತ್ತು. ನಾಯಕ ರೋಹಿತ್ (24) ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ದರು. ಮತ್ತೊಂದೆಡೆ, ಯಶಸ್ವಿ ಜೈಸ್ವಾಲ್ 70 ಎಸೆತಗಳಲ್ಲಿ 76 ರನ್ ಗಳಿಸಿ ಹಾಗೂ ಶುಭಮನ್ ಗಿಲ್ 14 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದರು.
ಇಂದು ದಿನದಾಟ ಆರಂಭವಾದ ಸ್ವಲ್ಪ ಹೊತ್ತಿನಲ್ಲಿ ಜೈಸ್ವಾಲ್ (80) ನಿರ್ಗಮಿಸಿದರು. ಇದಾದ ಬಳಿಕ ಗಿಲ್ (23) ಸಹ ಪೆವಿಲಿಯನ್ ಸೇರಿದರು. ಇದರ ನಡುವೆ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ 64 ರನ್ಗಳ ಜೊತೆಯಾಟ ನೀಡಿದರು. ಅಯ್ಯರ್ (35) ಔಟಾದ ಬಳಿಕ ಬಂದ ರವೀಂದ್ರ ಜಡೇಜಾ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೇ, ರಾಹುಲ್ ಅವರಿಗೆ ಜಡೇಜಾ ಉತ್ತಮ ಸಾಥ್ ನೀಡಿದರು. ಈ ಜೋಡಿ 5ನೇ ವಿಕೆಟ್ಗೆ 74 ಬಾಲ್ಗಳಲ್ಲೇ 65 ರನ್ಗಳನ್ನು ಬಾರಿಸಿತು.
ಶತಕದತ್ತ ಮುನ್ನುಗ್ಗುತ್ತಿದ್ದ ರಾಹುಲ್ 86 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆಗ ಜಡೇಜಾ ಜೊತೆಗೂಡಿದ ಶ್ರೀಕರ್ ಭರತ್ ಸಹ ಉತ್ತಮವಾಗಿ ರನ್ ಕಲೆ ಹಾಕಿದರು. ಜಡೇಜಾ ಮತ್ತು ಭರತ್ 6ನೇ ವಿಕೆಟ್ಗೆ 68 ರನ್ ಪೇರಿಸಿದರು. ಭರತ್ 41 ರನ್ಗೆ ವಿಕೆಟ್ ನಿರ್ಮಿಸಿದರು. ಬಳಿಕ ರವಿಚಂದ್ರನ್ ಅಶ್ವಿನ್ (1) ರನೌಟ್ಗೆ ಬಲಿಯಾದರು.
8ನೇ ವಿಕೆಟ್ಗೆ ಜಡೇಜಾ ಅವರಿಗೆ ಅಕ್ಷರ್ ಪಟೇಲ್ ಜೊತೆಯಾಗಿದ್ದು, ಈ ಜೋಡಿ ಕೂಡ ಉತ್ತಮವಾಗಿ ರನ್ ಪೇರಿಸುತ್ತಿದೆ. ಜಡೇಜಾ 81 ರನ್ ಹಾಗೂ ಅಕ್ಷರ್ 35 ರನ್ ಗಳಿಸಿ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪರ ಟಾಮ್ ಹಾರ್ಟ್ಲಿ, ಜೋ ರೂಟ್ ತಲಾ 2 ವಿಕೆಟ್ ಮತ್ತು ಜ್ಯಾಕ್ ಲೀಚ್ರೆಹಾನ್ ಅಹ್ಮದ್ ತಲಾ 1 ವಿಕೆಟ್ ಪಡೆದಿದ್ದಾರೆ.
ಗಿಲ್ ಬಗ್ಗೆ ಗವಾಸ್ಕರ್ ಟೀಕೆ: ಈ ಪಂದ್ಯದಲ್ಲಿ ಯುವ ಬ್ಯಾಟರ್ ಶುಭ್‌ಮನ್ ಗಿಲ್ ವಿಕೆಟ್ ಒಪ್ಪಿಸಿದ ರೀತಿ ಬಗ್ಗೆ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ. ಕಳಪೆ ಹೊಡೆತಕ್ಕೆ ಯತ್ನಿಸಿದ್ದನ್ನು ಪ್ರಶ್ನಿಸಿರುವ ಗವಾಸ್ಕರ್, ಗಿಲ್ ಯಾವ ರೀತಿಯ ಹೊಡೆತವನ್ನು ಆಡಲು ಬಯಸುತ್ತಿದ್ದರು?, ಅದು ಕೆಟ್ಟ ಆನ್-ಡ್ರೈವ್ ಆಗಿತ್ತು. ಎಲ್ಲ ಕಠಿಣ ಶ್ರಮದ ನಂತರವೂ ಅಂತಹ ಶಾಟ್ಅನ್ನು ಗಿಲ್ ಆಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Ind vs Eng test: ಮೊದಲ ದಿನದಾಂತ್ಯಕ್ಕೆ ಇಂಗ್ಲೆಂಡ್ 246 ರನ್ಗಳಿಗೆ ಆಲೌಟ್.. ಭಾರತ 119-1