ಹೈದರಾಬಾದ್: ಭಾರತದ ಸ್ಟಾರ್ ಕ್ರಿಕೆಟಿಗ ಮತ್ತು ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಗ್ರಗಣ್ಯ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಅಸಾಧಾರಣ ಕೌಶಲ್ಯಗಳಿಗೆ ಹೆಸರುವಾಸಿಯಾಗಿರುವ ಕೊಹ್ಲಿ ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಕೊಹ್ಲಿ ಕೇವಲ ಆಟದಾಲ್ಲಿ ಮಾತ್ರವಲ್ಲದೇ ಶ್ರೀಮಂತ ಕ್ರೀಡಾಪಟುಗಳಲ್ಲೂ ಒಬ್ಬರಾಗಿದ್ದಾರೆ. ಇವರು ಸಾವಿರಾರು ಕೋಟಿ ರೂಗಳ ಒಡೆಯರಾಗಿದ್ದಾರೆ.
ಐಷಾರಾಮಿ ಮನೆ, ಕಾರುಗಳನ್ನೂ ಹೊಂದಿರುವ ಕೊಹ್ಲಿ ಅತೀ ದುಬಾರಿ ಕೈ ಗಡಿಯಾರವನ್ನು ಹೊಂದಿದ್ದಾರೆ. ಒಂದಲ್ಲ ಎರಡಲ್ಲ ಕೊಹ್ಲಿ 10 ದುಬಾರಿ ವಾಚ್ಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಇವುಗಳ ಒಂದೊಂದರೆ ಬೆಲೆ ಕೇಳಿದರೇ ಅಚ್ಚರಿಗೊಳ್ಳುವುದಂತೂ ಖಂಡಿತ. ಹಾಗಾದರೆ ಕೊಹ್ಲಿ ಬಳಿ ಇರುವ ವಾಚ್ಗಳು ಯಾವವು ಮತ್ತು ಅವುಗಳ ಬೆಲೆ ಎಷ್ಟು ಎಂದು ಈ ಸುದ್ಧಿಯಲ್ಲಿ ತಿಳಿಯಿರಿ.
ವಿರಾಟ್ ಕೊಹ್ಲಿ ವಾಚ್ ಕಲೆಕ್ಷನ್
- Rolex Daytona: ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಹೊಂದಿರುವ ಅತೀ ದುಬಾರಿ ವಾಚ್ ರೈನೋ ಎವೆರೋಸ್ ಗೋಲ್ಡ್ ರೋಲೆಕ್ಸ್ ಡೇಟಾನೋ ಆಗಿದೆ. ಇದು ವಜ್ರದಿಂದ ಕೂಡಿದ್ದು, ಈ ಟೈಮ್ ಪೀಸ್ನ ಬೆಲೆ 4.6 ಕೋಟಿ ರೂಪಾಯಿ ಆಗಿದೆ.
- ರೋಲೆಕ್ಸ್ ಡೈಟಾನ್ ವಿತ್ ಡೈಯಲ್ ವಾಚ್: ಬೆಲೆ 3.2 ಕೋಟಿ ರೂಪಾಯಿ.
- ಪ್ಲಾಟಿನಂ ಪಾಟೆಕ್ ಫಿಲಿಪ್ ಗ್ರಾಂಡ್ ಕಾಂಪ್ಲಿಕೇಶನ್ ವಾಚ್ ಸಹ ಕೊಹ್ಲಿ ಅವರ ಕಲೆಕ್ಷನ್ನಲ್ಲಿ ಸೇರಿದೆ. ಇದರ ಬೆಲೆ ರೂ.2.6 ಕೋಟಿ ರೂ ಆಗಿದೆ.
- ಪಾಟಿಕ್ ಫಿಲಿಪ್ ನಾಟಿಲಸ್ 5712/12 ವಾಚ್ ಪೀಸ್ ಇದು ರೂ 1.14 ಕೋಟಿ ರೂ ಮೌಲ್ಯದ್ದಾಗಿದೆ.
- ರೋಲೆಕ್ಸ್ ಆಯ್ಸ್ಟರ್ ಪರ್ಪೆಚುಯಲ್ ಸ್ಕೈ-ಡ್ವೆಲ್ಲರ್ ವಾಚ್ ಇದರ ಮಾರುಕಟ್ಟೆ ಬೆಲೆ ರೂ. 1.8 ಕೋಟಿ ರೂಪಾಯಿ ಆಗಿದೆ.
- ಪ್ಲಾಟಿನಂ ರೋಲೆಕ್ಸ್ ಡೇಟೋನಾ ಜೊತೆಗೆ ಐಸ್ ಬ್ಲೂ ಡಯಲ್ ಮತ್ತು ಬ್ರೌನ್ ಸೆರಾಮಿಕ್ ಬೆಜೆಲ್ ವಾಚ್ ಇದರ ಬೆಲೆ: ರೂ. 1.23 ಕೋಟಿ ರೂಪಾಯಿ.
- ಆಡೆಮರ್ಸ್ ಪಿಗುಯೆಟ್ ರಾಯಲ್ ಓಕ್ ಡಬಲ್ ಬ್ಯಾಲೆನ್ಸ್ ವ್ಹೀಲ್ ವಾಚ್, ಇದು ರೂ. 1.2 ಕೋಟಿ ರೂಪಾಯಿಗಳಾಗಿದೆ.
- 8KT ಗೋಲ್ಡ್ ರೋಲೆಕ್ಸ್ ಡೇಟೋನಾ ಗ್ರೀನ್ ಡಯಲ್ ವಾಚ್ ಇದರ ಬೆಲೆ: ರೂ. 1.1 ಕೋಟಿ ಆಗಿದೆ.
- ಸ್ಕೆಲಿಟನ್ ಕಾನ್ಸೆಪ್ಟ್ ರೋಲೆಕ್ಸ್ ವಾಚ್, ಬೆಲೆ: ರೂ. 86 ಲಕ್ಷ ಆಗಿದೆ.
- ರೋಲೆಕ್ಸ್ ಡೇ-ಡೇಟ್ ರೋಸ್ ಗೋಲ್ಡ್ ಆಲಿವ್ ಡಯಲ್ ವಾಚ್, ಬೆಲೆ: ರೂ. 57 ಲಕ್ಷ ರೂ.