ETV Bharat / sports

ಒಲಿಂಪಿಕ್​ಗೆ ಪಾದಾರ್ಪಣೆ ಮಾಡಿದ ಭಾರತದ 10 ಆಟಗಾರರು: ಹೆಚ್ಚಿದ ಪದಕ ನಿರೀಕ್ಷೆ - indian players to debut in olympic

ಪ್ಯಾರಿಸ್​ ಒಲಿಂಪಿಕ್​ಗೆ ಭಾರತದ 10 ಆಟಗಾರರು ಪಾದಾರ್ಪಣೆ ಮಾಡುತ್ತಿದ್ದು, ಈ ಆಟಗಾರರ ಮೇಲೆ ಪದಕದ ನಿರೀಕ್ಷೆ ಹೆಚ್ಚಾಗಿದೆ.

ಪ್ಯಾರಿಸ್ ಒಲಿಂಪಿಕ್​ 2024​
ಪ್ಯಾರಿಸ್ ಒಲಿಂಪಿಕ್​ 2024​ (Etv Bharat)
author img

By ETV Bharat Karnataka Team

Published : Jul 24, 2024, 3:22 PM IST

Updated : Jul 24, 2024, 3:37 PM IST

ನವದಹೆಲಿ: ಪ್ಯಾರಿಸ್​ ಒಲಿಂಪಿಕ್​ 2024ಕ್ಕೆ ಕೇವಲ 2 ದಿನಗಳ ಬಾಕಿ ಉಳಿದಿದೆ. ಭಾರತದಿಂದ ಒಟ್ಟು 117 ಕ್ರೀಡಾಪಟುಗಳು ಒಲಿಂಪಿಕ್​ಗೆ ಅರ್ಹತೆ ಪಡೆದಿದ್ದು, ಈ ಬಾರಿ ಹೆಚ್ಚಿನ ಪದಕಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಮತ್ತೊಂದು ವಿಶೇಷತೆಯೆಂದರೆ ಈ ಬಾರಿ ಒಲಿಂಪಿಕ್​ಗೆ 10 ಜನ ಪಾದಾರ್ಪಣೆ ಮಾಡುತ್ತಿದ್ದು, ಈ ಆಟಗಾರರ ಮೇಲೆ ಪದಕ ಜಯಿಸುವ ನಿರೀಕ್ಷೆಯು ಹೆಚ್ಚಾಗಿದೆ. ಈ ಕ್ರೀಡಾಪಟುಗಳು ಯಾರು ಮತ್ತು ಅವರ ಒಲಿಂಪಿಕ್​ ಪಯಣದ ಬಗ್ಗೆ ಈ ಸುದ್ದಿಯಲ್ಲಿ ತಿಳಿಯೋಣ.

ಪ್ಯಾರಿಸ್ ಒಲಿಂಪಿಕ್​ಗೆ ಪಾದಾರ್ಪಣೆ ಮಾಡಿದ ಆಟಗಾರರು

ಸಿಫ್ಟ್ ಕೌರ್ ಸಮ್ರಾ: ಭಾರತದ ಶೂಟರ್ ಆಗಿರುವ ಸಿಫ್ಟ್ ಕೌರ್ ಸಮ್ರಾ ಪ್ಯಾರಿಸ್ ಒಲಿಂಪಿಕ್​ ಮೂಲಕ ಕ್ರೀಡಾಕೂಟಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಕೌರ್​, ಮಹಿಳೆಯರ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಇದೀಗ ಪ್ಯಾರಿಸ್​ ಒಲಿಂಪಿಕ್​​ನಲ್ಲೂ ಪದಕ ಗೆಲ್ಲವ ನಿರೀಕ್ಷೆಯಿದೆ.

ಸಿಫ್ಟ್ ಕೌರ್ ಸಮ್ರಾ
ಸಿಫ್ಟ್ ಕೌರ್ ಸಮ್ರಾ (ANI)

ಇಶಾ ಸಿಂಗ್: ಇವರು ಕೂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸ್ಪರ್ಧಿಯಾಗಿದ್ದಾರೆ. ಹೈದರಾಬಾದ್‌ ಮೂಲದ 19 ವರ್ಷದ ಪಿಸ್ತೂಲ್ ಶೂಟರ್, ಕಳೆದ ವರ್ಷ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಸಿಂಗಲ್ಸ್​ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಜಕಾರ್ತನಲ್ಲಿ ನಡೆದ ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ ಪಂದ್ಯದಲ್ಲಿ ಚಿನ್ನದ ಪದಕವನ್ನೂ ಗೆದ್ದಿದ್ದರು. ಇದೀಗ ಪ್ಯಾರಿಸ್‌ನಲ್ಲೂ ಪದಕಕ್ಕೆ ಕೊರಳೊಡ್ಡಲು ಸಜ್ಜಾಗಿದ್ದಾರೆ.

ಧೀರಜ್ ಬೊಮ್ಮದೇವರ: ಭಾರತದ ಬಿಲ್ಲುಗಾರ ಧೀರಜ್ ಬೊಮ್ಮದೇವರ ಅವರು 2024ರ ಒಲಿಂಪಿಕ್​ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಆಂಧ್ರಪ್ರದೇಶ ಮೂಲದ 23 ವರ್ಷದ ಬಿಲ್ಲುಗಾರ, ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ರಿಕರ್ವ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಆರ್ಚರಿ ಕಾಂಟಿನೆಂಟಲ್ ಅರ್ಹತಾ ಪಂದ್ಯಾವಳಿಯಲ್ಲಿಯೂ ಗೆದ್ದು ಪ್ಯಾರಿಸ್ ಒಲಿಂಪಿಕ್​ಗೆ ಅರ್ಹತೆ ಪಡೆದಿದ್ದಾರೆ.

ಪ್ರೀತಿ ಸಾಯಿ ಪವಾರ್: ಭಾರತದ ಬಾಕ್ಸರ್ ಪ್ರೀತಿ ಸಾಯಿ ಪವಾರ್ ಅವರ ಮೇಲೆ ಪದಕ ಗೆಲ್ಲುವ ನಿರೀಕ್ಷೆಯಿದೆ. ಇವರು ಏಷ್ಯನ್ ಗೇಮ್ಸ್‌ನ ಬಾಕ್ಸಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು ಮತ್ತು ಹ್ಯಾಂಗ್‌ಝೌನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್​ಗೆ ಅರ್ಹತೆ ಪಡೆದಿದ್ದಾರೆ. ಇದೀಗ ಪ್ರೀತಿ ಚೊಚ್ಚಲ ಒಲಿಂಪಿಕ್​ನಲ್ಲಿ ಸದ್ದು ಮಾಡಲು ಸಿದ್ಧವಾಗಿದ್ದಾರೆ.

ಪ್ರೀತಿ ಸಾಯಿ ಪವಾರ್
ಪ್ರೀತಿ ಸಾಯಿ ಪವಾರ್ (ANI)

ಧಿನಿಧಿ ದೇಸಿಂಗು: 14 ವರ್ಷದ ಯುವ ಈಜುಗಾರ್ತಿ ಧಿನಿಧಿ ದೇಸಿಂಗು ಒಲಿಂಪಿಕ್​ಗೆ ಆಯ್ಕೆಯಾಗಿರುವ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಕರ್ನಾಟಕ ಮೂಲದವರಾಗಿರುವ ಇವರು, ರಾಷ್ಟ್ರೀಯ ಕ್ರೀಡಾಕೂಟ ಮತ್ತು ಹಿರಿಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪದಕ ಗೆದ್ದಿದ್ದಾರೆ. ಈಗ ಪ್ಯಾರಿಸ್‌ನಲ್ಲೂ ಉತ್ತಮ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ.

ರಿತಿಕಾ ಹೂಡಾ: ಭಾರತದ ಕುಸ್ತಿಪಟು ರಿತಿಕಾ ಹೂಡಾ ಪ್ಯಾರಿಸ್‌ನಲ್ಲಿ ಭಾರತಕ್ಕಾಗಿ ಚೊಚ್ಚಲ ಒಲಿಂಪಿಕ್​ ಆಡಲಿದ್ದಾರೆ. ಹರಿಯಾಣ ಮೂಲದವರಾಗಿರುವ ಇವರು 2023ರ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದಾರೆ ಮತ್ತು ರಿಯೊ ಒಲಿಂಪಿಕ್​ನಲ್ಲಿ ಕಂಚಿನ ಪದಕವನ್ನೂ ವಶಪಡಿಸಿಕೊಂಡಿದ್ದಾರೆ. ಇದೀಗ ಒಲಿಂಪಿಕ್​ನಲ್ಲಿ ಪದಕ ಮೇಲೆ ಕಣ್ಣಿಟ್ಟಿದ್ದಾರೆ.

ಶ್ರೀಜಾ ಅಕುಲಾ: ಭಾರತದ ಯುವ ಟೇಬಲ್ ಟೆನ್ನಿಸ್ ಆಟಗಾರ್ತಿ ಶ್ರೀಜಾ ಅಕುಲಾ ಪ್ಯಾರಿಸ್ ಒಲಿಂಪಿಕ್​ಗೆ ಪಾದಾರ್ಪಣೆ ಮಾಡಿದ್ದಾರೆ. ಅವರು ಟೇಬಲ್ ಟೆನ್ನಿಸ್‌ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ನೀಡುವ ನಿರೀಕ್ಷೆ ಹೊಂದಿದ್ದಾರೆ. ವಿಶ್ವ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈಗ ಪ್ಯಾರಿಸ್ ಒಲಿಂಪಿಕ್​ನಲ್ಲೂ ದೇಶಕ್ಕಾಗಿ ಪದಕ ಗೆಲ್ಲುವ ಗುರಿ ಇಟ್ಟಿದ್ದಾರೆ.

ಅಂತಿಮ್​ ಪಂಗಲ್: ಭಾರತದ ಯುವ ಕುಸ್ತಿಪಟು ಅಂತಿಮ್​ ಪಂಗಲ್ ಚೊಚ್ಚಲ ಒಲಿಂಪಿಕ್​​ನಲ್ಲಿ ದೇಶಕ್ಕೆ ಪದಕ ಗೆಲ್ಲುವ ನಿರೀಕ್ಷೆಯಿದೆ. ಪಂಗಲ್ ಎರಡು ಬಾರಿ ಕುಸ್ತಿಯಲ್ಲಿ 20 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದಿದ್ದಾರೆ. ಇದರೊಂದಿಗೆ ಏಷ್ಯನ್ ಗೇಮ್ಸ್, ಏಷ್ಯನ್ ಚಾಂಪಿಯನ್‌ಶಿಪ್ ಮತ್ತು ಸೀನಿಯರ್ ವರ್ಲ್ಡ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪದಕ ಗೆದ್ದಿದ್ದಾರೆ.

ರಾಜ್ ಕುಮಾರ್ ಪಾಲ್: ಭಾರತ ಹಾಕಿ ತಂಡದ ಮಿಡ್‌ಫೀಲ್ಡರ್ ರಾಜ್ ಕುಮಾರ್ ಪಾಲ್ ಈ ಒಲಿಂಪಿಕ್​ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರು ತಮ್ಮ ಸ್ಫೋಟಕ ಆಟದಿಂದ ಭಾರತ ಹಾಕಿ ತಂಡಕ್ಕೆ ಚಿನ್ನದ ಪದಕ ಗೆಲ್ಲಲು ಸಹಾಯ ಮಾಡುವ ನಿರೀಕ್ಷೆಯಿದೆ. 2022 ರಲ್ಲಿ ಜಕಾರ್ತಾ ಮತ್ತು ಏಷ್ಯಾ ಕಪ್​ನಲ್ಲಿ ಕಂಚಿನ ಪದಕ ಗೆಲ್ಲಲು ತಂಡಕ್ಕೆ ಸಹಾಯ ಮಾಡಿದರು. ಈಗ ಪ್ಯಾರಿಸ್‌ನಲ್ಲಿ ತಮ್ಮ ಕೈಚಳಕ ತೋರಿಸಲು ಸಿದ್ಧಳಾಗಿದ್ದಾರೆ.

ತುಲಿಕಾ ಮಾನ್
ತುಲಿಕಾ ಮಾನ್ (ANI)

ತುಲಿಕಾ ಮಾನ್: ಭಾರತದ ಮಹಿಳಾ ಜೂಡೋ ಆಟಗಾರ್ತಿ ತುಲಿಕಾ ಮಾನ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾದಾರ್ಪಣೆ ಮಾಡಿದ್ದಾರೆ. 25ರ ಹರೆಯದ ತುಲಿಕಾ ಮಾನ್‌ಗೆ ಜೂಡೋ ಉತ್ತಮ ಆಟಗಾರ್ತಿಯಾಗಿದ್ದು, ಈ ಕ್ರೀಡೆಯಲ್ಲಿ ಭಾರತ ಮೊದಲ ಪದಕ ಪಡೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: ಒಲಿಂಪಿಕ್ ಪದಕ ವಿಜೇತರು ಪಡೆಯುವ ಬಹುಮಾನದ ಮೊತ್ತ ಎಷ್ಟು ಗೊತ್ತಾ?! - Olympic Medal Winners Prize Money

Last Updated : Jul 24, 2024, 3:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.