ETV Bharat / spiritual

ವಾರದ ಭವಿಷ್ಯ: ಅವಿವಾಹಿತರಿಗೆ ಧನಾತ್ಮಕ ಫಲಿತಾಂಶ, ಪ್ರೇಮಿಗಳಿಗೆ ಹೆಚ್ಚಿನ ಸವಾಲು! - WEEKLY HOROSCOPE

ಈ ವಾರದ ರಾಶಿ ಭವಿಷ್ಯ ಹೀಗಿದೆ.

weekly horoscope
ವಾರದ ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : Oct 20, 2024, 7:46 AM IST

ಮೇಷ : ಅವಿವಾಹಿತರಿಗೆ ಈ ವಾರವು ಒಳ್ಳೆಯದು. ಅವರಿಗೆ ಮದುವೆಯ ಪ್ರಸ್ತಾವನೆ ಬರಬಹುದು. ಪ್ರೇಮ ಜೀವನವು ಎಂದಿನಂತೆಯೇ ಮುಂದುವರಿಯಲಿದೆ. ಇತರರೊಂದಿಗೆ ಉಂಟಾಗುವ ಸಂಘರ್ಷದ ಕಾರಣ ವಿವಾಹಿತರು ಮನೆಯಲ್ಲಿ ಸವಾಲುಗಳನ್ನು ಎದುರಿಸಬಹುದು. ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ ಇರಲಿದೆ. ಆದರೆ ಖರ್ಚುವೆಚ್ಚ ಮಾಡುವಾಗ ಬಜೆಟ್‌ ಅನ್ನು ಪಾಲಿಸುವುದು ಒಳ್ಳೆಯದು. ನೀವು ಎಲ್ಲಾದರೂ ಹೂಡಿಕೆ ಮಾಡಿದ್ದರೆ ಅದಕ್ಕೆ ತಕ್ಕುದಾದ ಪ್ರತಿಫಲ ದೊರೆಯಲಿದೆ. ಉದ್ಯೋಗದಲ್ಲಿರುವ ವ್ಯಕ್ತಿಗಳು ಹಿರಿಯ ಅಧಿಕಾರಿಗಳಿಂದ ಧನಾತ್ಮಕ ಸುದ್ದಿಯನ್ನು ಪಡೆಯಲಿದ್ದಾರೆ. ಉದ್ಯಮಿಗಳಿಗೆ ವ್ಯವಹಾರದಲ್ಲಿ ಹೊಸ ಸಂಪರ್ಕಗಳು ದೊರೆಯಲಿವೆ. ಉನ್ನತ ಶಿಕ್ಷಣವನ್ನು ಮುಂದುವರಿಸಲು ಈ ಅವಧಿಯು ಸೂಕ್ತ ಸಮಯವಾಗಿದ್ದು, ನಿಮ್ಮ ಅಧ್ಯಯನದ ಮೇಲೆ ಹೆಚ್ಚಿನ ಗಮನ ಹರಿಸುತ್ತಾ ನಿಮ್ಮ ನಿರೀಕ್ಷೆಯ ಯಶಸ್ಸನ್ನು ನೀವು ಗಳಿಸಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರಿಂದ ನಿಮಗೆ ಉತ್ತೇಜನ ದೊರೆಯಲಿದ್ದು, ಇದರಿಂದ ನಿಮ್ಮ ವೃತ್ತಿಪರ ಕಾರ್ಯಗಳಲ್ಲಿ ಸಹಕಾರ ದೊರೆಯಲಿದೆ. ಗೆಳೆಯರೊಂದಿಗೆ ಹೊರಗೆ ಹೋಗುವುದು ಒಳ್ಳೆಯದು. ಅದರೆ ಹೆಚ್ಚಿನ ಸಾಲವನ್ನು ಮಾಡಬೇಡಿ.

ವೃಷಭ : ವೃಷಭ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಅನುಕೂಲಕರವಾಗಿದೆ. ಪ್ರೇಮ ಸಂಬಂಧವು ಪ್ರೀತಿ ಮತ್ತು ವಾತ್ಸಲ್ಯದಿಂದ ತುಂಬಿರಲಿದ್ದು, ನಿಮ್ಮ ಸಂಗಾತಿಯ ಜೊತೆಗೆ ಸಮಯವನ್ನು ಚೆನ್ನಾಗಿ ಕಳೆಯಲಿದ್ದೀರಿ. ಈ ಸಂಬಂಧದಲ್ಲಿ ಪರಸ್ಪರ ಸಂತಸ ಮತ್ತು ಗೌರವ ನೆಲೆಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಂತೃಪ್ತಿ ಮತ್ತು ನೆಮ್ಮದಿ ನೆಲೆಸಲಿದ್ದು, ಕುಟುಂಬದ ಸದಸ್ಯರ ನೆರವು ಸಹ ದೊರೆಯಲಿದೆ. ಕುಟುಂಬದ ಜೊತೆಗೆ ತೊಡಗಿಸಿಕೊಂಡರೆ ಹಾಗೂ ಅವರೊಂದಿಗೆ ಹಣಕಾಸಿನ ವಿವರಗಳನ್ನು ಚರ್ಚಿಸಿಕೊಂಡರೆ ಹಣದ ಉಳಿತಾಯದಲ್ಲಿ ಅಗತ್ಯ ಒಳನೋಟ ದೊರೆಯಲಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದ್ದು, ನೀವು ವ್ಯವಹಾರದಲ್ಲಿ ಹೊಸ ಸಂಪರ್ಕಗಳನ್ನು ಸಾಧಿಸುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವವರಿಗೆ ಪ್ರಗತಿ ಸಾಧಿಸಲು ಅವಕಾಶ ಲಭಿಸಲಿದ್ದು, ಅವರ ಒಟ್ಟಾರೆ ಯೋಗಕ್ಷೇಮ ಉಂಟಾಗಲಿದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುರಿಯತ್ತ ಗಮನ ನೀಡಬೇಕು. ಏಕೆಂದರೆ ಗೆಳೆಯರಿಂದಾಗಿ ಅವರ ಗಮನಭಂಗ ಉಂಟಾಗಬಹುದು. ನಿಮ್ಮ ಒಡಹುಟ್ಟಿದವರ ಶಿಕ್ಷಣಕ್ಕಾಗಿ ನೀವು ಹಣವನ್ನು ನೀಡಲಿದ್ದು, ಮನೆಯ ದುರಸ್ತಿ ಮತ್ತು ನಿರ್ವಹಣೆಗಾಗಿಯೂ ವೆಚ್ಚ ಮಾಡಲಿದ್ದೀರಿ.

ಮಿಥುನ : ಈ ವಾರದಲ್ಲಿ ವಿವಾಹದ ಮೂಲಕ ನೀವು ಸಂಗಾತಿಯನ್ನು ಪಡೆಯುವ ಸಾದ್ಯತೆ ಇದ್ದು, ಪ್ರಣಯಭರಿತ ಸಂಬಂಧಕ್ಕೆ ನೀವು ಕಾಲಿಡುವ ಸಾಧ್ಯತೆ ಇದೆ. ಸೂಕ್ತ ಜೀವನ ಸಂಗಾತಿಯನ್ನು ಹುಡುಕಲು ಇದು ಸಕಾಲವಾಗಿದ್ದು, ಬದುಕಿನಲ್ಲಿ ಸಂತಸ ಮತ್ತು ಯಶಸ್ಸು ನೆಲೆಸಲಿದೆ. ವಿವಾಹಿತ ಜೋಡಿಗಳು ತಮ್ಮ ಕೌಟುಂಬಿಕ ಜೀವನದಲ್ಲಿ ಸಂತೃಪ್ತಿ ಅನುಭವಿಸಲಿದ್ದು, ಸಾಕಷ್ಟು ಆರ್ಥಿಕ ಲಾಭದ ಸೂಚನೆಯನ್ನು ಸಹ ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ ಇರಲಿದೆ. ಆದರೆ ನಿಮ್ಮ ವೆಚ್ಚವನ್ನು ನೀವು ನಿಭಾಯಿಸಬೇಕು ಮತ್ತು ಬಜೆಟ್‌ ಅನ್ನು ಎಚ್ಚರಿಕೆಯಿಂದ ಯೋಜಿಸಬೇಕು. ನಿಮ್ಮ ಆರ್ಥಿಕ ಸ್ಥಿರತೆಯ ಮೇಲೆ ಗಮನ ಹರಿಸಬೇಕಾದ ಅಗತ್ಯವಿದೆ. ಈ ಅವಧಿಯು ಮುಖ್ಯವಾಗಿ ವಿದ್ಯಾರ್ಥಿಗಳ ಪಾಲಿಗೆ ಅನುಕೂಲಕರವಾಗಿದೆ. ಅಧ್ಯಯನಕ್ಕೆ ನೀವು ಹೆಚ್ಚಿನ ಗಮನ ನೀಡಲಿದ್ದು, ನಿಮ್ಮ ಬದುಕಿನಲ್ಲಿ ಅದ್ಭುತ ಸಾಧನೆ ಮಾಡಲಿದ್ದೀರಿ. ಉನ್ನತ ಶಿಕ್ಷಣ ಮುಂದುವರಿಸಲು ಇದು ಸಕಾಲವಾಗಿದ್ದು, ನಿಮ್ಮ ಆಯ್ಕೆಯ ವಿಷಯಗಳನ್ನು ಆರಿಸಲು ನಿಮಗೆ ಅವಕಾಶ ಲಭಿಸಲಿದೆ. ನಿಮ್ಮ ಆರೋಗ್ಯದ ಕುರಿತು ನೀವು ಗಮನ ನೀಡಬೇಕು. ಈಗ ನಿಮ್ಮನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಯಿಂದ ನಿಮಗೆ ಮುಕ್ತಿ ದೊರೆಯಲಿದೆ. ನಿಮ್ಮ ಪೋಷಕರ ನೆರವು ನಿಮಗೆ ಲಭಿಸಲಿದ್ದು, ನಿಮ್ಮ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಲು ಅವರು ನಿಮ್ಮನ್ನು ಉತ್ತೇಜಿಸಲಿದ್ದಾರೆ.

ಕರ್ಕಾಟಕ : ಈ ವಾರದಲ್ಲಿ ಏಕಾಂತದ ಕ್ಷಣಗಳನ್ನು ಹಾಗೂ ನಿಮ್ಮ ಪ್ರೇಮಿಯೊಂದಿಗೆ ಅನುರಾಗದ ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶ ಲಭಿಸಲಿದೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಪ್ರಾರ್ಥನಾ ಸ್ಥಳಕ್ಕೆ ಭೇಟಿ ನೀಡುವುದನ್ನು ನೀವು ಪರಿಗಣಿಸಲಿದ್ದು, ಇದರಿಂದ ನಿಮಗೆ ಆತ್ಮತೃಪ್ತಿ ದೊರೆಯಲಿದೆ ಮಾತ್ರವಲ್ಲದೆ ಕುಟುಂಬದ ಸದಸ್ಯರೊಂದಿಗೆ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ಪ್ರೇಮ ಸಂಬಂಧಕ್ಕೆ ಸಂಬಂಧಿಸಿದಂತೆ ಈ ವಾರವು ತೃಪ್ತಿದಾಯಕವಾಗಿದ್ದು, ನಿಮ್ಮಿಬ್ಬರ ನಡುವಿನ ಅನುರಾಗವು ಇನ್ನಷ್ಟು ಗಟ್ಟಿಗೊಳ್ಳಲಿದೆ. ಆರ್ಥಿಕ ದೃಷ್ಟಿಯಿಂದ ಹೇಳುವುದಾದರೆ ಸಂಪತ್ತನ್ನು ಗಳಿಸಲು ಈ ವಾರವು ಅನುಕೂಲಕರವಾಗಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದ್ದು, ನಿಮ್ಮ ಬದ್ಧತೆಗಳನ್ನು ಈಡೇರಿಸಲು ನಿಮಗೆ ಅವಕಾಶ ಲಭಿಸಲಿದೆ. ಆದರೆ ಈ ವಾರದಲ್ಲಿ ಉದ್ಯೋಗದಲ್ಲಿರುವವರಿಗೆ ಒಂದಷ್ಟು ಸವಾಲುಗಳು ಎದುರಾಗಬಹುದು. ಹೀಗಾಗಿ ವೃತ್ತಿಪರ ಕೆಲಸಗಳಲ್ಲಿ ಸಮರ್ಪಣಾಭಾವದ ಅಗತ್ಯತೆ ಕಂಡುಬರಬಹುದು. ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರಮುಖ ಮೈಲಿಗಲ್ಲೊಂದನ್ನು ಸಾಧಿಸುವ ಕ್ಷಣವು ಎದುರಾಗಿದೆ. ನಿಮ್ಮ ಆಯ್ಕೆಯ ಅಧ್ಯಯನ ಕ್ಷೇತ್ರವನ್ನು ಆರಿಸಿಕೊಳ್ಳುವ ಅವಕಾಶವು ನಿಮಗೆ ಲಭಿಸಲಿದ್ದು, ಹೊಸ ಸಂಗಾತಿಗಳನ್ನು ಪಡೆಯುವುದರಿಂದ ನಿಮ್ಮ ಶೈಕ್ಷಣಿಕ ಪ್ರಯಾಣದಲ್ಲಿ ಪ್ರಗತಿ ಉಂಟಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆರೋಗ್ಯಕ್ಕೆ ಗಮನ ನೀಡಿದರೆ ಒಳ್ಳೆಯದು.

ಸಿಂಹ : ಈ ವಾರದಲ್ಲಿ ವಿವಾಹಿತರ ಬದುಕಿನಲ್ಲಿ ಸಂತಸ ಮತ್ತು ಪರಮಾನಂದದ ಸುಖ ಲಭಿಸಲಿದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಕಳೆಯಲು ಅವಕಾಶ ಲಭಿಸಲಿದೆ. ಇದರಿಂದ ನಿಮ್ಮ ಬಂಧವನ್ನು ಗಟ್ಟಿಗೊಳಿಸಲು ಸಾಧ್ಯವಾಗಲಿದೆ. ಆದರೆ ಪ್ರೇಮ ಸಂಬಂಧದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಒಳ್ಳೆಯದು. ಯಾವುದೇ ಆರ್ಥಿಕ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಾಕಷ್ಟು ಪರ್ಯಾಲೋಚನೆ ನಡೆಸಿ. ಏಕೆಂದರೆ ಇದು ನಿಮ್ಮ ವೃತ್ತಿಪರ ಬದುಕಿನ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಉದ್ಯೋಗದಲ್ಲಿರುವವರಿಗೆ ಈ ವಾರವು ಅನುಕೂಲಕರವಾಗಿದೆ. ಕೆಲಸದ ಸ್ಥಳದಲ್ಲಿ ವಿವಿಧ ಬದಲಾವಣೆಗಳು ಉಂಟಾಗುವ ಸಾಧ್ಯತೆ ಇದೆ. ಅಲ್ಪಕಾಲೀನ ಮತ್ತು ದೀರ್ಘಕಾಲೀನ ವಿಹಾರಕ್ಕೆ ಹೋಗುವ ಅವಕಾಶಗಳಿದ್ದು, ವ್ಯವಹಾರ ಪಾಲುದಾರರೊಂದಿಗಿನ ನಿಮ್ಮ ಸಂಬಂಧವು ಗಟ್ಟಿಗೊಳ್ಳಲಿದೆ. ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸವನ್ನು ತೋರದೆ ತಮ್ಮ ಶೈಕ್ಷಣಿಕ ಕಾರ್ಯವನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ಈ ವಾರದಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ನಿಯಮಿತ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಹಾಗೂ ಆರೋಗ್ಯದಾಯಕ ಜೀವನಶೈಲಿಯನ್ನು ಮೈಗೂಡಿಸಿಕೊಳ್ಳಬೇಕು. ಅಲ್ಲದೆ ತಾಯಿಯೊಂದಿಗೆ ಸಮಯವನ್ನು ಕಳೆದು ಅವರಿಗೆ ಅಗತ್ಯ ಗೌರವವನ್ನು ನೀಡುವುದು ಒಳ್ಳೆಯದು.

ಕನ್ಯಾ : ಕನ್ಯಾ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ಅನುಭವಿಸಲಿದ್ದೀರಿ. ಈ ಬದುಕನ್ನು ಆನಂದಿಸಲು ನಿಮಗೆ ಸಾಧ್ಯವಾಗಲಿದೆ. ಆದರೆ ನಿಮ್ಮ ಜೀವನ ಸಂಗಾತಿಯ ಆರೋಗ್ಯಕ್ಕೆ ನೀವು ಗಮನ ನೀಡಬೇಕು. ಏಕೆಂದರೆ ಅವರ ಆರೋಗ್ಯದಲ್ಲಿ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಪ್ರೇಮ ಸಂಬಂಧವು ಎಂದಿನಂತೆ ಮುಂದುವರಿಯಲಿದ್ದು, ಹೆಚ್ಚೇನೂ ವಿಶೇಷತೆ ಕಾಣಿಸಿಕೊಳ್ಳದು. ವ್ಯವಹಾರದಲ್ಲಿರುವ ಜನರು ನಿರೀಕ್ಷಿತ ಲಾಭವನ್ನು ಪಡೆಯಲಿದ್ದಾರೆ. ನಿರುದ್ಯೋಗಿಗಳು ಒಳ್ಳೆಯ ಉದ್ಯೋಗವನ್ನು ಪಡೆಯಲಿದ್ದಾರೆ. ಉದ್ಯೋಗದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇದ್ದು, ನಿಮ್ಮ ವ್ಯವಹಾರವನ್ನು ವಿಸ್ತರಿಸುವಲ್ಲಿ ಯಶಸ್ಸನ್ನು ಗಳಿಸಲಿದ್ದೀರಿ. ಸ್ಪರ್ಧೆಯಲ್ಲಿ ಈ ವಾರದಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದ್ದು, ರಾಜಕೀಯದಲ್ಲೂ ನಿಮಗೆ ಯಶಸ್ಸು ಲಭಿಸಲಿದೆ. ನಿಮ್ಮ ಗಮನಭಂಗ ಉಂಟಾಗದಂತೆ ನೋಡಿಕೊಳ್ಳಿ. ಸಹೋದರ ಮತ್ತು ಸಹೋದರಿಯ ನಡುವಿನ ಕಲಹವು ಕೊನೆಗೊಳ್ಳಲಿದೆ. ಕೆಟ್ಟವರ ಸಹವಾಸದಿಂದ ನೀವು ಸಮಸ್ಯೆಯನ್ನು ಎದುರಿಸಬಹುದು. ಆದರೆ ನೀವು ಪೋಷಕರ ಇಚ್ಛೆಯನ್ನು ಈಡೇರಿಸಲಿದ್ದೀರಿ. ಮಕ್ಕಳೊಂದಿಗೆ ನೀವು ಉದ್ಯಾನವನ ಅಥವಾ ಪಿಕ್ನಿಕ್‌ ಗೆ ಹೋಗುವುದನ್ನು ಆನಂದಿಸಬಹುದು.

ತುಲಾ : ನಿಮಗೆ ಒತ್ತಡದ ಕ್ಷಣಗಳು ಎದುರಾಗುವ ಸಾಧ್ಯತೆ ಇದ್ದು, ಸ್ವನಿಯಂತ್ರಣ ಮತ್ತು ಜಾಗರೂಕತೆಯ ಅಗತ್ಯವಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಏರುಪೇರು ಉಂಟಾಗಬಹುದು. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಬಹುದು. ಆದರೆ ಖರ್ಚುವೆಚ್ಚದಲ್ಲಿಯೂ ಹೆಚ್ಚಳ ಉಂಟಾಗಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರದಲ್ಲಿ ಸಾಮಾನ್ಯ ಫಲ ದೊರೆಯಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಹೆಚ್ಚಿನ ಗಮನ ನೀಡಲಿದ್ದು, ಗಂಭೀರವಾಗಿ ತೊಡಗಿಸಿಕೊಳ್ಳಲಿದ್ದಾರೆ. ಉನ್ನತ ಅಧ್ಯಯನವನ್ನು ಮುಂದುವರಿಸಲು ಇದು ಸಕಾಲವಾಗಿದೆ. ವಿದೇಶದಲ್ಲಿ ಅಧ್ಯಯನ ನಡೆಸಲು ಸಹ ಅವಕಾಶಗಳು ಲಭಿಸಬಹುದು. ನಿಮ್ಮ ಕುಟುಂಬವನ್ನು ಆಧರಿಸುವುದಕ್ಕಾಗಿ ನಿಮ್ಮ ಸಂಗಾತಿಯೊಂದಿಗೆ ಸೇರಿಕೊಂಡು ಸಹಾಯ ಮಾಡಲಿದ್ದೀರಿ. ಸಣ್ಣ ವ್ಯಾಪಾರಿಗಳು ತಮ್ಮ ನಿರೀಕ್ಷೆಯ ಲಾಭವನ್ನು ಪಡೆಯಲಿದ್ದಾರೆ. ಮನೆಯಲ್ಲಿ ಪೂಜೆ, ಪ್ರವಚನಗಳನ್ನು ಆಯೋಜಿಸುವ ಸಾಧ್ಯತೆ ಇದ್ದು, ಅತಿಥಿಗಳನ್ನು ಸತ್ಕರಿಸಲಿದ್ದೀರಿ. ಈ ವಾರದಲ್ಲಿ ನೀವು ಎದುರಿಸುವ ಸವಾಲುಗಳ ಹೊರತಾಗಿಯೂ, ಧನಾತ್ಮಕ ಮನೋಭಾವ ಮತ್ತು ಸ್ಥಿರತೆಯನ್ನು ಕಾಪಾಡುವುದರೊಂದಿಗೆ ನಿಮ್ಮ ಗುರಿಯತ್ತ ನೀವು ಮುಂದುವರಿಯುವುದು ಒಳ್ಳೆಯದು. ಪರಿಶ್ರಮ ಮತ್ತು ಪ್ರಯತ್ನದಿಂದ ನೀವು ಈ ಅಡಚಣೆಗಳನ್ನು ದಾಟಿ ನಿಮ್ಮ ಗುರಿಯನ್ನು ಸಾಧಿಸಲಿದ್ದೀರಿ.

ವೃಶ್ಚಿಕ : ಈ ವಾರದಲ್ಲಿ ಏರುಪೇರುಗಳ ನಡುವೆ ನೀವು ಮುಂದುವರಿಯಲಿದ್ದೀರಿ. ಇವೆಲ್ಲದರ ನಡುವೆ ಪ್ರಣಯ ಸಂಗಾತಿಗಳು ಸಂತಸ ಮತ್ತು ಸಂಭ್ರಮದಿಂದ ಬದುಕನ್ನು ಸಾಗಿಸಲಿದ್ದು, ತಮ್ಮ ಪ್ರೇಮ ಜೀವನವನ್ನು ಉತ್ತುಂಗಕ್ಕೆ ಕೊಂಡೊಯ್ಯಲಿದ್ದಾರೆ. ವಿವಾಹಿತರು ಒಂದಷ್ಟು ಒತ್ತಡಕ್ಕೆ ಒಳಗಾಗಬಹುದು. ಇತರರ ಹಸ್ತಕ್ಷೇಪವು ಉದ್ವೇಗವನ್ನುಂಟು ಮಾಡಬಹುದು. ಆದರೆ ನೀವು ಆರಂಭದಲ್ಲಿ ಮಾಡಿದ ಹೂಡಿಕೆಗೆ ತಕ್ಕುದಾದ ಫಲ ದೊರೆಯಬಹುದು. ಸರ್ಕಾರಿ ವಲಯದಲ್ಲಿ ಸಾಕಷ್ಟು ಲಾಭ ದೊರೆಯುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಗುರಿ ಸಾಧಿಸಲಿದ್ದು, ಹೊಸ ಸಂಪರ್ಕವನ್ನು ಪಡೆಯಲು ಸಾಧ್ಯತೆಗಳಿವೆ. ಉದ್ಯೋಗದಲ್ಲಿರುವವರು ಕೆಲಸದ ಸ್ಥಳದಲ್ಲಿ ಸವಾಲುಗಳನ್ನು ಎದುರಿಸಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಮಾರ್ಗದರ್ಶಕರ ಮಾರ್ಗದರ್ಶನ ಪಡೆಯಲಿದ್ದಾರೆ. ಈ ಮೂಲಕ ಅವರ ಶಿಕ್ಷಣದಲ್ಲಿ ಪ್ರಗತಿ ಸಾಧಿಸಲಿದ್ದಾರೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ಬೆಳಗ್ಗಿನ ನಡಿಗೆ, ಯೋಗ ಮತ್ತು ಧ್ಯಾನದಂತಹ ಚಟುವಟಿಕೆಗಳು ನಿಮ್ಮ ದೈನಂದಿನ ವೇಳಾಪಟ್ಟಿಗೆ ಸೇರಿಸಿಕೊಂಡರೆ ಒಳ್ಳೆಯದು. ನಿಮ್ಮ ತಂದೆಯೊಂದಿಗೆ ಮುಕ್ತವಾಗಿ ಮಾತನಾಡಿ ಅವರ ಮಾರ್ಗದರ್ಶನವನ್ನು ಪಡೆಯಲು ಮರೆಯಬೇಡಿ.

ಧನು : ನಿಮ್ಮ ಪ್ರಣಯ ಸಂಬಂಧದಲ್ಲಿ ಈ ವಾರದಲ್ಲಿ ಏರುಪೇರನ್ನು ಅನುಭವಿಸಲಿದ್ದೀರಿ. ತಪ್ಪು ಸಂವಹನದ ಕಾರಣ ಭಿನ್ನಾಭಿಪ್ರಾಯ ಉಂಟಾಗಬಹುದು. ವಿವಾಹಿತ ಜೋಡಿಗಳು ತಮ್ಮ ವೈಯಕ್ತಿಕ ಬದುಕಿನಲ್ಲಿ ಸವಾಲುಗಳನ್ನು ಎದುರಿಸಬಹುದು. ನಿಮ್ಮ ಸಂಗಾತಿಯು ಹೊಸ ಕೆಲಸವನ್ನು ಪ್ರಾರಂಭಿಸಲಿದ್ದು, ಅವರನ್ನು ನೀವು ಹುರಿದುಂಬಿಸಲಿದ್ದೀರಿ. ಈ ವಾರದಲ್ಲಿ ಆರ್ಥಿಕ ಸ್ಥಿರತೆ ಕಾಣಿಸಿಕೊಳ್ಳಲಿದ್ದು, ಆದಾಯದಲ್ಲಿ ಉಂಟಾಗುವ ಹೆಚ್ಚಳವು ನಿಮ್ಮ ಆರ್ಥಿಕ ಸ್ಥಿತಿಯಲ್ಲಿನ ಸುಧಾರಣೆಗೆ ಕಾರಣವೆನಿಸಲಿದೆ. ವ್ಯಾಪಾರಿಗಳಿಗೆ ಸಾಕಷ್ಟು ಲಾಭ ದೊರೆಯಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅಷ್ಟೊಂದು ಅನುಕೂಲಕರವಾಗಿಲ್ಲ. ನಿಮ್ಮ ಶಿಕ್ಷಣಕ್ಕೆ ಗಮನ ನೀಡುವ ಬದಲಿಗೆ ನೀವು ಬೇರೆ ಕಡೆಗೆ ಗಮನ ನೀಡಬಹುದು. ನಿಮ್ಮ ಕುಟುಂಬದ ಸದಸ್ಯರ ನೆರವು ದೊರೆಯಲಿದ್ದು, ಎಲ್ಲರೂ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಅವಧಿಯಲ್ಲಿ ವಿಶ್ರಾಂತಿ ಮಾತ್ತು ಮಾನಸಿಕ ಚೇತರಿಕೆಗೆ ಅವಕಾಶ ಲಭಿಸಲಿದೆ. ನಿಮ್ಮ ತಾಯಿಯ ಜೊತೆಗೆ ವಾಕ್‌ ಗೆ ಹೋದರೆ ಸಂತೃಪ್ತಿ ದೊರೆಯಲಿದೆ. ನಿಮ್ಮ ಒಡಹುಟ್ಟಿದವರು ನೆರವನ್ನು ಒದಗಿಸಲಿದ್ದಾರೆ.

ಮಕರ : ಈ ವಾರವು ಪ್ರಣಯ ಸಂಬಂಧದಲ್ಲಿರುವವರಿಗೆ ಅನುಕೂಲಕರವಾಗಿದೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಅಂತರವು ಕಡಿಮೆಯಾಗಲಿದ್ದು, ಬಂಧವು ಗಟ್ಟಿಗೊಳ್ಳಲಿದೆ. ವಿವಾಹಿತ ವ್ಯಕ್ತಿಗಳು, ತಮ್ಮ ಖಾಸಗಿ ಬದುಕಿನಲ್ಲಿ ಬಾಹ್ಯ ಹಸ್ತಕ್ಷೇಪದ ಕಾರಣ ವಿಪರೀತ ಒತ್ತಡವನ್ನು ಅನುಭವಿಸಲಿದ್ದಾರೆ. ಕುಟುಂಬದಲ್ಲಿ ನಿಮ್ಮ ಮಕ್ಕಳ ಸಂತಸವನ್ನು ನೀವು ಅನುಭವಿಸಲಿದ್ದೀರಿ. ತಂದೆಯ ಜೊತೆಗಿನ ಸಂವಾದದಲ್ಲಿ ಹೆಚ್ಚಳ ಉಂಟಾಗಲಿದೆ. ಪಿತ್ರಾರ್ಜಿತ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು ಬದಲಾವಣೆಯನ್ನು ಜಾರಿಗೊಳಿಸಲಿದ್ದು, ಲಾಭದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ದೈನಂದಿನ ಆದಾಯದಲ್ಲಿ ಹೆಚ್ಚಳ ಸಾಧಿಸುವುದಕ್ಕಾಗಿ ನೀವು ಹೊಸ ಮೂಲವನ್ನು ಪಡೆಯಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ವೃತ್ತಿಯಲ್ಲಿ ಹೊಸ ಪಥವನ್ನು ಹುಡುಕುವ ಅವಕಾಶ ಲಭಿಸಲಿದೆ. ವಿದ್ಯಾರ್ಥಿಗಳಲ್ಲಿ ಅಧ್ಯಯನದಲ್ಲಿ ಹೊಸ ಉತ್ಸಾಹ ಚಿಗುರಲಿದ್ದು, ತಮ್ಮ ಶೈಕ್ಷಣಿಕ ಪಥದಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಪೂಜೆ ಮತ್ತು ಪ್ರವಚನದ ಕಾರಣ ನಿಮ್ಮ ಸಹೋದರಿಯ ವಿವಾಹಕ್ಕೆ ಸಂಬಂಧಿಸಿದಂತೆ ಎದುರಾಗುತ್ತಿದ್ದ ಸವಾಲುಗಳು ನಿವಾರಣೆಯಾಗಲಿವೆ. ನಿಮ್ಮ ಮನೆಯಲ್ಲಿ ಸಂಭ್ರಮಾಚರಣೆ ನಡೆಯಲಿದ್ದು, ನಿಮ್ಮ ಕುಟುಂಬದ ಸದಸ್ಯರು ಒಟ್ಟು ಸೇರಲಿದ್ದಾರೆ.

ಕುಂಭ : ಈ ವಾರದಲ್ಲಿ ನಿಮಗೆ ಸಾಕಷ್ಟು ಉತ್ತೇಜನ ದೊರೆಯಲಿದ್ದು, ಚೈತನ್ಯದಿಂದ ತುಂಬಿರಲಿದ್ದೀರಿ. ಬಾಕಿ ಉಳಿದಿರುವ ಎಲ್ಲಾ ಕೆಲಸಗಳನ್ನು ಉತ್ಸಾಹದಿಂದ ನಿಭಾಯಿಸಲಿದ್ದೀರಿ. ನಿಮ್ಮ ಸಂಗಾತಿಯ ಜೊತೆಗೆ ನೀವು ಅನುರಾಗದ ಕ್ಷಣಗಳನ್ನು ಕಳೆಯಲಿದ್ದು, ಆಳವಾದ ಮತ್ತು ಅನುರಾಗದಿಂದ ಕೂಡಿದ ಸಂವಹನದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಮನೆಯ ವಾತಾವರಣವು ಸಂತಸದಿಂದ ಕೂಡಿರಲಿದ್ದು, ಎಲ್ಲರೂ ಸಾಮರಸ್ಯ ಮತ್ತು ಶಾಂತಿಯಿಂದ ಬದುಕನ್ನು ಸಾಗಿಸಲಿದ್ದಾರೆ. ನಿಮ್ಮ ಸಂಗಾತಿಯು ನಿಮಗೆ ದೃಢ ಬೆಂಬಲವನ್ನು ನೀಡಲಿದ್ದು, ಒಟ್ಟಿಗೆ ನೀವು ಕುಟುಂಬದ ಯೋಗಕ್ಷೇಮಕ್ಕಾಗಿ ಶ್ರಮಿಸಲಿದ್ದೀರಿ. ನಿಮಗೆ ಹೆಚ್ಚುವರಿ ಕೌಟುಂಬಿಕ ಜವಾಬ್ದಾರಿಗಳನ್ನು ವಹಿಸಲಿದ್ದು, ಸಂತಸದಿಂದಲೇ ಅವುಗಳನ್ನು ನೀವು ವಹಿಸಿಕೊಳ್ಳಲಿದ್ದೀರಿ. ನೀವು ಹೊರಗಿರುವಾಗ ಹಿರಿಯರ ಆಶೀರ್ವಾದವನ್ನು ಪಡೆದರೆ ನಿಮ್ಮ ಪ್ರಯತ್ನಗಳಿಗೆ ಯಶಸ್ಸು ದೊರೆಯುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದ್ದು, ನಿಮ್ಮ ವ್ಯವಹಾರದಲ್ಲಿ ನೀವು ಮಾಡಿರುವ ಪ್ರಯತ್ನಕ್ಕೆ ತಕ್ಕುದಾದ ಫಲ ದೊರೆಯಲಿದೆ. ವಿದೇಶದಲ್ಲಿ ವ್ಯವಹಾರವನ್ನು ನಡೆಸುವವರು ಮಾಡುವ ಪ್ರಯಾಣದಿಂದ ಅವರಿಗೆ ಲಾಭ ದೊರೆಯಲಿದೆ. ಉನ್ನತ ಶಿಕ್ಷಣಕ್ಕೆ ಕಾಲಿಡಲು ಈ ಸಮಯವು ಅನುಕೂಲಕರವಾಗಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ.

ಮೀನ : ಮೀನ ರಾಶಿಯವರಿಗೆ ಈ ವಾರದಲ್ಲಿ ಧನಾತ್ಮಕ ಫಲಿತಾಂಶ ದೊರೆಯಲಿದೆ. ನಿಮ್ಮ ಸಂಗಾತಿಯ ಅಚಲ ಬೆಂಬಲವು ನಿಮಗೆ ದೊರೆಯಲಿದ್ದು, ಕುಟುಂಬದ ಸದಸ್ಯರ ನೆರವು ಸಹ ಲಭಿಸಲಿದೆ. ಒಡಹುಟ್ಟಿದವರ ನಡುವಿನ ಕಲಹಕ್ಕೆ ಪರಿಹಾರ ಲಭಿಸಲಿದೆ. ನಿಮ್ಮ ಪ್ರಣಯ ಬದುಕು ಅರಳಲಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದ್ದು, ಹೊರಗೆ ಬಾಕಿಯಾಗಿರುವ ಹಣವು ಮರಳಲಿದೆ. ನೀವು ಈ ಹಿಂದೆ ಮಾಡಿದ ಹೂಡಿಕೆಗೆ ತಕ್ಕುದಾದ ಫಲ ದೊರೆಯಲಿದೆ. ನಿಮ್ಮ ಮಕ್ಕಳು ಸಾಕಷ್ಟು ಬೆಂಬಲವನ್ನು ಪಡೆಯಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಉನ್ನತ ಶಿಕ್ಷಣವನ್ನು ಪಡೆಯಲು ಈ ಅವಧಿಯು ಅನುಕೂಲಕರವಾಗಿದೆ. ಪ್ರಯಾಣಕ್ಕಾಗಿ ನೀವು ಮಾಡುವ ಖರ್ಚು ಸರಿಯಾಗಿ ವಿನಿಯೋಗವಾಗಲಿದೆ. ನಿಮ್ಮ ಸಹೋದರನ ವಿವಾಹದಲ್ಲಿ ಎದುರಾಗುವ ಸವಾಲುಗಳು ನಿವಾರಣೆಯಾಗಲಿವೆ. ಬಿಡುವಿಲ್ಲದ ನಿಮ್ಮ ವೇಳಾಪಟ್ಟಿಯ ನಡುವೆಯೂ ನಿಮ್ಮ ಇಷ್ಟದ ಹವ್ಯಾಸಗಳಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಹವಾಮಾನದಲ್ಲಿ ಉಂಟಾಗುವ ಬದಲಾವಣೆಯಿಂದಾಗಿ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಪ್ರಣಯ ಬದುಕು ಅರಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.