ETV Bharat / spiritual

ವಾರದ ಭವಿಷ್ಯ: ಈ ರಾಶಿಯಲ್ಲಿ ಹುಟ್ಟಿದವರು ಅವಸರದ ನಿರ್ಧಾರ ತೆಗೆದುಕೊಳ್ಳಬೇಡಿ - WEEKLY HOROSCOPE

ಈ ವಾರದ ರಾಶಿ ಭವಿಷ್ಯ ಹೀಗಿದೆ.

Weekly Horoscope
ವಾರದ ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : Oct 13, 2024, 7:44 AM IST

ಮೇಷ : ಮೇಷ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಅನುಕೂಲಕರ ಮತ್ತು ಸೂಕ್ತವೆನಿಸಲಿದೆ. ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮ್ಮ ಕನಸು ನನಸಾಗಲಿದೆ. ಅಲ್ಲದೆ ನಿಮ್ಮ ವೃತ್ತಿಯಲ್ಲಿ ನೀವು ನಿರೀಕ್ಷಿಸುತ್ತಿದ್ದ ಆರ್ಥಿಕ ಯಶಸ್ಸು ನಿಮಗೆ ಲಭಿಸಲಿದೆ. ಹೊಸ ಆದಾಯ ಮೂಲವು ನಿಮಗೆ ಲಭಿಸಲಿದ್ದು, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಹಣಕಾಸಿನ ವಿಚಾರದಲ್ಲಿ ಹೇಳುವುದಾದರೆ ಈ ತಿಂಗಳು ನಿಮ್ಮ ಪಾಲಿಗೆ ಶುಭಕರವೆನಿಸಲಿದೆ. ಕುಟುಂಬದಲ್ಲಿ ನಿಮ್ಮ ಪೋಷಕರು ಮತ್ತು ಒಡಹುಟ್ಟಿದವರ ಅಚಲ ಬೆಂಬಲ ನಿಮಗೆ ದೊರೆಯಲಿದ್ದು, ನಿಮ್ಮ ಮಕ್ಕಳು ಸಹ ನಿಮ್ಮ ಪ್ರಸ್ತಾವನೆಯನ್ನು ಸ್ವೀಕರಿಸಲಿದ್ದಾರೆ. ವಾರದ ಕೊನೆಗೆ ನೀವು ಗಣನೀಯ ಪ್ರಮಾಣದಲ್ಲಿ ಖರೀದಿಯನ್ನು ಮಾಡಲಿದ್ದು, ಇದು ನಿಮ್ಮ ಭೌತಿಕ ಯೋಗಕ್ಷೇಮವನ್ನು ವೃದ್ಧಿಸಲಿದೆ. ಅಲ್ಲದೆ ನಿಮ್ಮ ಸಂಗಾತಿಯೊಂದಿಗೆ ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ. ಪ್ರಣಯ ಸಂಬಂಧದ ತೀವ್ರತೆಯು ಹೆಚ್ಚಲಿದ್ದು, ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ನಿಮ್ಮ ಸಂಗಾತಿಯು ಸುಂದರ ಉಡುಗೊರೆಯೊಂದರ ಮೂಲಕ ನಿಮ್ಮನ್ನು ಅಚ್ಚರಿಪಡಿಸಬಹುದು.

ವೃಷಭ : ವೃಷಭ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಯಾವುದೇ ನಿರ್ಧಾರವನ್ನು ಅವಸರದಿಂದ ತೆಗೆದುಕೊಳ್ಳಬೇಡಿ. ಯಾವುದೇ ಅಪಘಾತ ಉಂಟಾಗದಂತೆ ನೋಡಿಕೊಳ್ಳುವುದಕ್ಕಾಗಿ ರಸ್ತೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡಿರಿ. ಸಣ್ಣಪುಟ್ಟ ಸಮಸ್ಯೆಗಳು ಮತ್ತು ವೈಯಕ್ತಿಕ ಕರ್ತವ್ಯದ ಹೊರೆಯ ನಡುವೆಯೂ ನಿಮ್ಮ ಆತ್ಮೀಯ ಗೆಳೆಯರ ಬೆಂಬಲವು ನಿಮಗೆ ಸಾಂತ್ವನ ಮತ್ತು ಸಂತಸ ನೀಡಲಿದೆ. ಕೆಲಸದ ಸ್ಥಳದಲ್ಲಿ ಇತರರ ಅಭಿಪ್ರಾಯಗಳಿಗೆ ಕಿವಿಗೊಡುವ ಬದಲಿಗೆ ನಿಮ್ಮ ಗುರಿಯತ್ತ ನೀವು ಗಮನ ನೀಡುವುದು ಒಳ್ಳೆಯದು. ಯುವಜನರು ಸಂಭ್ರಮ ಮತ್ತು ಮೋಜಿನಲ್ಲಿ ಸಮಯ ಕಳೆಯಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರು ಯಶಸ್ಸು ಗಳಿಸಬೇಕಾದರೆ ಶೃದ್ಧೆಯಿಂದ ಪ್ರಯತ್ನಿಸಬೇಕು. ಅಲ್ಲದೆ ಉತ್ತಮ ಆರೋಗ್ಯವನ್ನು ಕಾಪಾಡುವುದು ಅಗತ್ಯ. ಋತುಮಾನಕ್ಕೆ ಸಂಬಂಧಿಸಿದ ಕಾಯಿಲೆಗಳ ಕುರಿತು ಎಚ್ಚರಿಕೆ ವಹಿಸಿ ಹಾಗೂ ನಿಮ್ಮ ಪ್ರಣಯ ಸಂಬಂಧದಲ್ಲಿ ಜಾಗರೂಕೆಯಿಂದ ಹೆಜ್ಜೆ ಇಡಿ. ನಿಮ್ಮ ಸಂಗಾತಿಯನ್ನು ವಿಪರೀತವಾಗಿ ಅನ್ಯೋನ್ಯತೆ ಬೆಳೆಸಿಕೊಳ್ಳಬೇಡಿ.

ಮಿಥುನ : ವೃಷಭ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ಧೈರ್ಯ ತೋರಲು ಸಲಹೆ ನೀಡಲಾಗಿದೆ. ಅಡೆತಡೆಗಳು ಮತ್ತು ಕಠಿಣ ಸಂದರ್ಭಗಳನ್ನು ಎದುರಿಸುವಾಗ ದೃಢವಾಗಿ ಮತ್ತು ಧೈರ್ಯದಿಂದ ಉಳಿಯುವುದು ಬಹಳ ಅಗತ್ಯ. ಈ ವಾರದ ಆರಂಭದಲ್ಲಿ ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಬಹುದು. ಆದರೆ ಪ್ರಮುಖ ಹೆಜ್ಜೆಯನ್ನು ಇಡುವ ಮೊದಲು ಆಪ್ತ ಸ್ನೇಹಿತರ ಸಲಹೆಯನ್ನು ಪಡೆಯುವುದು ಒಳ್ಳೆಯದು. ಉದ್ಯೋಗದಲ್ಲಿರುವ ಮಹಿಳೆಯರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಬದುಕಿನ ನಡುವೆ ಸಂತುಲನ ಕಾಪಾಡುವುದಕ್ಕಾಗಿ ಹೆಣಗಾಡಬೇಕಾದೀತು. ವೃತ್ತಿ ಮತ್ತು ವ್ಯವಹಾರದ ದೃಷ್ಟಿಯಿಂದ ವಾರದ ಆರಂಭಿಕ ದಿನಗಳು ಸವಾಲಿನಿಂದ ಕೂಡಿರಬಹುದು. ಆದರೆ ವಾರವು ಮುಂದುವರಿದಂತೆ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಪ್ರಣಯ ಸಂಬಂಧದಲ್ಲಿ ಪ್ರಮುಖ ಆಯ್ಕೆಗಳನ್ನು ಮಾಡುವಾಗ, ಭವಿಷ್ಯದಲ್ಲಿ ಪರಿತಪಿಸದಿರಲು ನಿಮ್ಮ ಕುಟುಂಬದ ಸದಸ್ಯರ ಭಾವನೆಗಳನ್ನು ಪರಿಗಣಿಸುವುದು ಒಳ್ಳೆಯದು. ಪ್ರಣಯ ಸಂಬಂಧದಲ್ಲಿ ಕಾಳಜಿಯನ್ನು ತೋರಿರಿ ಹಾಗೂ ನಿಮ್ಮ ಸಂಗಾತಿಯ ಅಗತ್ಯತೆಗಳು ಮತ್ತು ಇಚ್ಛೆಗಳನ್ನು ಅರಿತುಕೊಳ್ಳಲು ಯತ್ನಿಸಿ.

ಕರ್ಕಾಟಕ : ಕರ್ಕಾಟಕ ರಾಶಿಯವರು ಈ ವಾರದಲ್ಲಿ ಗಮನ ಕೇಂದ್ರೀಕರಿಸಿ ಕಠಿಣ ಶ್ರಮ ಪಡಬೇಕು. ನಿಮ್ಮ ಗುರಿಗಳಿಗೆ ಗಮನ ನೀಡಿರಿ ಹಾಗೂ ಪ್ರಯತ್ನವನ್ನು ಮುಂದುವರಿಸಿ. ಹಿರಿಯ ಹಾಗೂ ಕಿರಿಯ ಸಹೋದ್ಯೋಗಿಗಳೊಂದಿಗೆ ಸಹಯೋಗವನ್ನು ಸಾಧಿಸುವುದು ಒಳ್ಳೆಯದು. ವಾರದ ಕೊನೆಗೆ ಕೆಲಸ ಮತ್ತು ವ್ಯವಹಾರದಲ್ಲಿ ಕೆಲವೊಂದು ಸವಾಲುಗಳು ಎದುರಾಗಬಹುದು. ಇದು ನಿಮ್ಮ ಉತ್ಪಾದಕತೆಯ ಮೇಲೆ ಪರಿಣಾಮ ಬೀರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ದತೆ ನಡೆಸುತ್ತಿರುವವರು ಅಡಚಣೆಯನ್ನು ದೂರ ಮಾಡಿ ತಮ್ಮ ಗಮನವನ್ನು ಕೇಂದ್ರೀಕರಿಸಬೇಕು. ಪ್ರೇಮ ಸಂಬಂಧದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ನಿಮ್ಮ ಸಂಗಾತಿಯ ಜೊತೆಗಿನ ಸಂವಹನದಲ್ಲಿ ಕೊರತೆ ಕಾಣಿಸಿಕೊಳ್ಳಬಹುದು. ವಾರದ ಕೊನೆಗೆ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದ್ದು, ಮೋಜು ಮತ್ತು ವಿಶ್ರಾಂತಿಗೆ ಅದ್ಭುತ ಅವಕಾಶ ಲಭಿಸಲಿದೆ. ಪ್ರಯಾಣವು ಹೊಸ ಅನುಭವ ಮತ್ತು ಏಕಾಂತತೆಯ ಕ್ಷಣಗಳನ್ನು ಕರುಣಿಸಬಹುದು. ನಿಮ್ಮ ಗುರಿ ಮತ್ತು ಅರೋಗ್ಯದ ನಡುವೆ ಸಂತುಲನವನ್ನು ಕಾಪಾಡಿ ಮತ್ತು ಅಗತ್ಯ ಬಿದ್ದಲ್ಲಿ ವೃತ್ತಿಪರ ಸಲಹೆಯನ್ನು ಪಡೆಯಿರಿ.

ಸಿಂಹ : ಸಿಂಹ ರಾಶಿಯಲ್ಲಿ ಹುಟ್ಟಿದವರಿಗೆ ಮುಂದಿನ ವಾರದಲ್ಲಿ ಸಂತಸ, ನೆಮ್ಮದಿ ಮತ್ತು ಆರ್ಥಿಕ ಯಶಸ್ಸು ದೊರೆಯಲಿದೆ. ನಿಮ್ಮ ಯಾವುದಾದರೂ ನಿರ್ದಿಷ್ಟ ಕೆಲಸವು ಬಾಕಿ ಉಳಿದಿದ್ದರೆ, ನಿಮ್ಮ ಗೆಳೆಯ ಅಥವಾ ಯಾರಾದರೂ ಪ್ರಭಾವಿ ವ್ಯಕ್ತಿಯ ಸಹಾಯದಿಂದ ಅದನ್ನು ಪೂರ್ಣಗೊಳಿಸಲು ಇದು ಸಕಾಲ. ನಿಮ್ಮ ವ್ಯವಹಾರದಲ್ಲಿ ವೃದ್ಧಿ ಉಂಟಾಗಲಿದೆ. ವಾರದ ಕೊನೆಯಲ್ಲಿ, ನಿಮ್ಮ ಅರಾಮದಾಯಕತೆಯನ್ನು ವೃದ್ಧಿಸುವ ಮತ್ತು ಜೀವನಶೈಲಿಯಲ್ಲಿ ಬದಲಾವಣೆಯನ್ನು ತರುವ ವಸ್ತುಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸಿ. ನಿಮ್ಮ ಪೋಷಕರಿಂದ ಪ್ರೀತಿ ಮತ್ತು ನೆರವು ಲಭಿಸಲಿದೆ. ನಿಮ್ಮ ಕುಟುಂಬದಲ್ಲಿ ಅದೃಷ್ಟಶಾಲಿ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ. ಈ ವಾರದಲ್ಲಿ ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಪ್ರಣಯ ಸಂಬಂಧದಲ್ಲಿ ಯಾವುದಾದರೂ ಸಮಸ್ಯೆಗಳಿದ್ದಲ್ಲಿ ಅವುಗಳಿಗೆ ಪರಿಹಾರ ದೊರೆಯಲಿದ್ದು, ಸಂಬಂಧದಲ್ಲಿ ಇನ್ನಷ್ಟು ಸಾಮರಸ್ಯ ಇರಲಿದೆ. ನಿಮ್ಮ ಸಂಗಾತಿಯ ಜೊತೆಗೆ ನೀವು ಚೆನ್ನಾಗಿ ಸಮಯ ಕಳೆಯಲಿದ್ದು, ಅವರೊಂದಿಗೆ ಸಂಬಂಧದಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ವಾರದ ಕೊನೆಗೆ, ನಿಮ್ಮ ಮಕ್ಕಳಿಂದ ನೀವು ಶುಭ ಸುದ್ದಿಯನ್ನು ಪಡೆಯಲಿದ್ದೀರಿ.

ಕನ್ಯಾ : ಕನ್ಯಾ ರಾಶಿಯಲ್ಲಿ ಹುಟ್ಟಿದವರಿಗೆ ಹೊಸ ವಾರವು ಏರುಪೇರಿನಿಂದ ಕೂಡಿರಲಿದೆ. ಉದ್ಯೋಗದ ಸ್ಥಳದಲ್ಲಿ ಕೆಲಸದ ಒತ್ತಡವು ಹೆಚ್ಚಲಿದ್ದು, ಇದನ್ನು ನಿಭಾಯಿಸಲು ನೀವು ಹೆಚ್ಚಿನ ಶ್ರಮ ಪಡಬೇಕು. ನೀವು ಹೇಗೆ ವರ್ತಿಸುತ್ತೀರಿ ಹಾಗೂ ಪ್ರಸ್ತುತಪಡಿಸುತ್ತೀರಿ ಎಂಬುದರದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಲು ಈ ವಾರವು ನಿರ್ಣಾಯಕವಾಗಿದೆ. ಈ ರೀತಿ ಮಾಡುವುದರಲ್ಲಿ ನೀವು ಯಶಸ್ಸನ್ನು ಸಾಧಿಸಿದರೆ ನೀವು ಅತ್ಯಂತ ಕಠಿಣ ಕೆಲಸವನ್ನು ಸಕಾಲದಲ್ಲಿ ಮುಗಿಸಬಹುದು. ಇಡೀ ಕುಟುಂಬದ ಮೇಲೆ ಪರಿಣಾಮ ಬೀರುವ ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳುವಾಗ, ನಿಮ್ಮ ಕುಟುಂಬದ ಸದಸ್ಯರ ಭಾವನೆಗಳು ಮತ್ತು ಅವರು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಪರಿಗಣಿಸುವುದು ಒಳ್ಳೆಯದು. ಈ ವಾರದಲ್ಲಿ ನಿಮ್ಮ ಯೋಗಕ್ಷೇಮ ಮತ್ತು ಆರೋಗ್ಯಕ್ಕೆ ಗಮನ ನೀಡಿರಿ. ಪ್ರಣಯ ಸಂಬಂಧದಲ್ಲಿ ನಿಮ್ಮ ಸಂಗಾತಿಯ ಖಾಸಗಿ ವಿಷಯಗಳಿಗೆ ಕೈ ಹಾಕದಿರುವುದು ಒಳ್ಳೆಯದು. ಏಕೆಂದರೆ ಹೀಗೆ ಮಾಡಿದರೆ ಸಂಘರ್ಷ ಮತ್ತು ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ವೈವಾಹಿಕ ಬದುಕಿನಲ್ಲಿ ಸಂತಸ ಇರಬೇಕಾದರೆ ನಿಮ್ಮ ಸಂಗಾತಿಗೆ ಏನು ಬೇಕು ಎಂಬುದನ್ನು ಗ್ರಹಿಸುವುದು ಅಗತ್ಯ. ನಿಮ್ಮ ಜಂಜಾಟದ ಬದುಕಿನ ನಡುವೆಯೂ ಅವರೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸಿರಿ.

ತುಲಾ : ವಾರದ ಆರಂಭದಲ್ಲಿ, ಕೆಲಸ ಅಥವಾ ಯೋಜನೆಯಲ್ಲಿ ಗಣನೀಯ ಯಶಸ್ಸನ್ನು ನೀವು ಗಳಿಸಲಿದ್ದು, ಇದು ನಿಮ್ಮಲ್ಲಿ ಸಂತಸವನ್ನುಂಟು ಮಾಡಲಿದೆ. ವೃತ್ತಿ ಅಥವಾ ವ್ಯವಹಾರದಲ್ಲಿ ದೂರದ ಊರಿಗೆ ಪ್ರಯಾಣಿಸಲು ಅವಕಾಶ ಲಭಿಲಿದ್ದು, ನಿಮಗೆ ಬಡ್ತಿ ಅಥವಾ ನಿಮ್ಮ ಆಯ್ಕೆಯ ಸ್ಥಳಕ್ಕೆ ವರ್ಗಾವಣೆ ಸಿಗಲಿದೆ. ಈ ವಾರದಲ್ಲಿ ಹಣ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಿ ಹಾಗೂ ಈ ನಿಟ್ಟಿನಲ್ಲಿ ಎದುರಾಗುವ ಅಪಾಯವನ್ನು ಅರಿತುಕೊಳ್ಳಿರಿ. ಆದರೆ ನೀವು ಜೂಜು ಅಥವಾ ಲಾಟರಿಯಲ್ಲಿ ಹಣ ಹಾಕದೆ ಇದ್ದರೆ ಒಳ್ಳೆಯದು. ಈ ವಾರದಲ್ಲಿ ನಿಮ್ಮ ಆರೋಗ್ಯವು ಎಂದಿನಂತೆ ಇರಲಿದೆ. ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ಚೆನ್ನಾಗಿ ಸಮಯ ಕಳೆಯಲು ನಿಮಗೆ ಅವಕಾಶ ಲಭಿಸಲಿದ್ದು, ನಿಮ್ಮ ಜೀವನ ಸಂಗಾತಿಯ ಜೊತೆಗೆ ಪ್ರಯಾಣಕ್ಕೆ ಹೋಗಲು ನೀವು ಯೋಜನೆ ರೂಪಿಸಬಹುದು. ಪ್ರೇಮ ಸಂಬಂಧದಲ್ಲಿ ನಿಮ್ಮ ಸಂಗಾತಿಯತ್ತ ಸಾಕಷ್ಟು ಕಾಳಜಿ ತೋರಿಸಿ ಹಾಗೂ ಅವರ ಭಾವನೆಗಳನ್ನು ಗೌರವಿಸಿ.

ವೃಶ್ಚಿಕ : ವೃಶ್ಚಿಕ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಕೆಲಸದ ಸ್ಥಳದಲ್ಲಿ ಕೆಲವೊಂದು ಸವಾಲುಗಳು ಎದುರಾಗಲಿದ್ದು ನೀವು ಸಾಕಷ್ಟು ಹೆಣಗಾಟ ಮಾಡಬೇಕಾದೀತು. ಆದರೆ, ವಾರವು ಮುಂದುವರಿದಂತೆ, ಅಡಚಣೆಗಳು ನಿವಾರಣೆಯಾಗಲಿದ್ದು, ಕೆಲಸದ ಸ್ಥಳದಲ್ಲಿ ನಿಮ್ಮ ಗುರಿಯನ್ನು ಸಾಧಿಸಲಿದ್ದೀರಿ. ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೂ ಈ ವಾರವು ಅನುಕೂಲಕರವಾಗಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಬೇರೆಯವರ ಮೇಲೆ ಹೇರದಿರುವುದು ಒಳ್ಳೆಯದು. ಬದಲಾಗಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಸಹೋದ್ಯೋಗ ಸಾಧಿಸಿ. ಈ ರೀತಿ ನಡೆದುಕೊಳ್ಳದಿದ್ದರೆ ಸಮಸ್ಯೆಗಳು ಎದುರಾಗಲಿದ್ದು, ನಿಮ್ಮ ವೃತ್ತಿಪರ ವರ್ಚಸ್ಸಿಗೆ ಧಕ್ಕೆಯುಂಟಾಗಬಹುದು. ಈ ವಾರದಲ್ಲಿ ನೀವು ಆರೋಗ್ಯಕ್ಕೆ ಗಮನ ನೀಡಬೇಕು. ಹೊರಗಡೆ ಆಹಾರ ಸೇವಿಸಬೇಡಿ. ನಿಮ್ಮ ದಿನಚರಿಯನ್ನು ಪಾಲಿಸಿ ಹಾಗೂ ನಿಮ್ಮ ಆಹಾರಕ್ರಮಕ್ಕೆ ವಿಶೇಷ ಒತ್ತು ನೀಡಿರಿ. ಪ್ರಣಯ ಸಂಬಂಧದಲ್ಲಿ ಕ್ಷಿಪ್ರವಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಸಂಗಾತಿಯ ಅಗತ್ಯತೆಗಳನ್ನು ಅರಿತುಕೊಳ್ಳಲು ಯತ್ನಿಸಿ ಹಾಗೂ ಅವರ ಭಾವನೆಗಳನ್ನು ಗೌರವಿಸಿ. ಈ ಅಂಶವನ್ನು ನಿರ್ಲಕ್ಷಿಸಿದರೆ ಸಂಕೀರ್ಣತೆಗಳು ಎದುರಾಗಬಹುದು. ಸವಾಲುಗಳ ನಡುವೆಯೂ ವೈಯಕ್ತಿಕ ಬದುಕಿನಲ್ಲಿ ಸಂತಸದ ಕ್ಷಣಗಳು ಎದುರಾಗಲಿವೆ.

ಧನು : ಈ ವಾರದಲ್ಲಿ ಎದುರಾಗಬಹುದಾದ ಸಂಭಾವ್ಯ ಸಮಸ್ಯೆಗಳನ್ನು ತಪ್ಪಿಸುವುದಕ್ಕಾಗಿ ನಿಮ್ಮ ಸಮಯ ಮತ್ತು ಹಣವನ್ನು ಚೆನ್ನಾಗಿ ನಿಭಾಯಿಸುವುದು ಒಳ್ಳೆಯದು. ನಿಮ್ಮ ಮನೆಯನ್ನು ನವೀಕರಿಸುವಾಗ ಅಥವಾ ದುಬಾರಿ ವಸ್ತುಗಳನ್ನು ಖರೀದಿಸುವಾಗ, ಭವಿಷ್ಯದಲ್ಲಿ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುವುದಕ್ಕಾಗಿ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಿ ಹಾಗೂ ಸಾಲದಿಂದ ದೂರವಿರಿ. ಬಲವಾದ ಸಂಬಂಧವನ್ನು ರೂಪಿಸಿಕೊಳ್ಳುವುದಕ್ಕಾಗಿ ನಿಮ್ಮ ಗೆಳೆಯರು ಮತ್ತು ಕುಟುಂಬದ ಸದಸ್ಯರ ನಡುವಿನ ಸಂಪರ್ಕವನ್ನು ಗಟ್ಟಿಗೊಳಿಸಿ. ನಿಮ್ಮ ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಕಾನೂನು ಸಮಸ್ಯೆಗಳಿಂದ ದೂರವಿದ್ದರೆ ಒಳ್ಳೆಯದು. ನಿಮಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ನಿಮ್ಮ ಆಹಾರಕ್ರಮದ ಮೇಲೆ ನಿಗಾ ಇರಿಸುವುದು ಹಾಗೂ ಧ್ಯಾನ ಮತ್ತು ಯೋಗದಂತಹ ಅಭ್ಯಾಸಗಳಿಗೆ ಸಮಯವನ್ನು ಮೀಸಲಿರಿಸುವುದು ಒಳ್ಳೆಯದು. ಈ ವಾರದಲ್ಲಿ ನಿಮ್ಮ ಯೋಗಕ್ಷೇಮಕ್ಕೆ ಗಮನ ನೀಡಿರಿ. ನಿಮ್ಮ ಸಂಗಾತಿಯ ಜೊತೆಗೆ ಸರಸ ಸಲ್ಲಾಪದ ಮಾತುಗಳು ವಿನಿಮಯಗೊಳ್ಳಬಹುದು. ಪ್ರೇಮ ಮತ್ತು ಪಂಗಡ ಕಾರ್ಯ ಇರುವುದನ್ನು ದೃಢೀಕರಿಸಿ. ಪ್ರಣಯ ಸಂಬಂಧದಲ್ಲಿ ಮೂರನೇ ವ್ಯಕ್ತಿಯು ಒಳಗೊಳ್ಳುವ ಕಾರಣ ನೋವುಂಟಾಗಬಹುದು. ಹೀಗಾಗಿ ಯಾವುದೇ ತಪ್ಪು ಗ್ರಹಿಕೆಯನ್ನು ದೂರ ಮಾಡುವುದಕ್ಕಾಗಿ ಮುಕ್ತ ಸಂವಹನಕ್ಕೆ ಒತ್ತು ನೀಡಿರಿ.

ಮಕರ : ಮಕರ ರಾಶಿಯ ಜನರು ಈ ವಾರದಲ್ಲಿ ಜಾಗರೂಕರಾಗಿದ್ದು ಸಂಯಮ ವಹಿಸುವುದು ಒಳ್ಳೆಯದು. ಆಯಾಸ ಮತ್ತು ನಿರ್ಲಕ್ಷ್ಯವನ್ನು ನೀವು ದೂರ ಮಾಡುವುದು ಒಳ್ಳೆಯದು. ಏಕೆಂದರೆ ಇದರಿಂದಾಗಿ ನಿಮಗೆ ವಿಪರೀತ ನಷ್ಟ ಉಂಟಾಗಬಹುದು. ನಿಮ್ಮ ವ್ಯವಹಾರದಲ್ಲಿ ನೀವು ಕಠಿಣ ಸ್ಪರ್ಧೆ ಎದುರಿಸಬಹುದು. ಹೀಗಾಗಿ ನೀವು ಜಾಗರೂಕರಾಗಿರಬೇಕು. ಅಲ್ಪಕಾಲೀನ ಲಾಭಕ್ಕಾಗಿ ದೀರ್ಘಕಾಲೀನ ಲಾಭವನ್ನು ಕಳೆದುಕೊಳ್ಳಬೇಡಿ. ಸಾಕಷ್ಟು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರವೇ ನಿಮ್ಮ ಆರ್ಥಿಕ ವಿಚಾರಗಳ ಕುರಿತು ನಿರ್ಧಾರವನ್ನು ತೆಗೆದುಕೊಳ್ಳಿ. ಭೂಮಿ, ಕಟ್ಟಡ ಅಥವಾ ವಾಹನ ಇತ್ಯಾದಿಗಳನ್ನು ಖರೀದಿಸುವಾಗ ನಿಮ್ಮ ಕುಟುಂಬದ ಸದಸ್ಯರ ಸಲಹೆಯನ್ನು ಗಮನದಲ್ಲಿಟ್ಟುಕೊಂಡು ಜಾಣ ನಿರ್ಧಾರವನ್ನು ತೆಗೆದುಕೊಳ್ಳಿ. ಪ್ರೇಮ ಸಂಬಂಧದಲ್ಲಿ ನೀವು ಗೆಳತಿಯೊಬ್ಬರ ಸಹಾಯವನ್ನು ಪಡೆದುಕೊಂಡರೆ ಇದು ಪರಿಣಾಮಕಾರಿಯಾದೀತು. ಪ್ರೇಮ ಅಥವಾ ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಾಳ್ಮೆಯಿಂದ ಹೆಜ್ಜೆ ಹಾಕಿದರೆ ಒಳ್ಳೆಯದು. ನಿಮ್ಮ ಮಾತಿನ ಮೇಲೆ ನಿಗಾ ಇರಲಿ. ಒರಟಾದ ಮಾತುಗಳನ್ನು ಬಳಸಬೇಡಿ. ವೈವಾಹಿಕ ಬದುಕಿನಲ್ಲಿ ಮಾಧುರ್ಯ ನೆಲೆಸಲಿದೆ. ನಿಮ್ಮ ಜೀವನ ಸಂಗಾತಿಯು ನಿಮ್ಮನ್ನು ಬೆಂಬಲಿಸಲಿದ್ದು ಕಷ್ಟಕರ ಸಂದರ್ಭದಲ್ಲಿ ಬಲ ಒದಗಿಸಲಿದ್ದಾರೆ. ನಿಮ್ಮ ಕುಟುಂಬದ ಹಿರಿಯ ಸದಸ್ಯರ ಆರೋಗ್ಯದ ಕುರಿತು ನಿಮಗೆ ಚಿಂತೆ ಉಂಟಾಗಬಹುದು.

ಕುಂಭ : ಕುಂಭ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಸಾಮಾನ್ಯ ಫಲ ದೊರೆಯಲಿದೆ. ಸಂಭಾವ್ಯ ಎದುರಾಳಿಗಳ ಎದುರು ನಿಮ್ಮ ದೌರ್ಬಲ್ಯಗಳನ್ನು ಬಿಚ್ಚಿಡಬೇಡಿ. ಏಕೆಂದರೆ ಅವರು ಅದನ್ನು ಭವಿಷ್ಯದಲ್ಲಿ ಬಳಸಿಕೊಂಡು ನಿಮ್ಮನ್ನು ಶೋಷಿಸಬಹುದು. ಈ ಅವಧಿಯಲ್ಲಿ, ಕುಟುಂಬಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಆತ್ಮೀಯ ಗೆಳೆಯರು ಮತ್ತು ಕುಟುಂಬದ ಸದಸ್ಯರು ನಿಮಗೆ ಅಚಲ ಬೆಂಬಲವನ್ನು ನೀಡಲಿದ್ದಾರೆ. ಆರಂಭದ ದಿನಗಳಿಗೆ ಹೋಲಿಸಿದರೆ ಈ ವಾರದ ಉತ್ತರಾರ್ಧದಲ್ಲಿ ಸ್ವಲ್ಪ ಸುಧಾರಣೆ ಕಾಣಿಸಿಕೊಳ್ಳಲಿದೆ. ನೀವು ಹೆಚ್ಚಿನ ಸಮಯವನ್ನು ಧಾರ್ಮಿಕ ಮತ್ತು ಸಾಮಾಜಿಕ ಸಭೆ ಸಮಾರಂಭಗಳಿಗೆ ಮೀಸಲಿಡಲಿದ್ದು ನಿಮ್ಮ ವರ್ಚಸ್ಸಿನಲ್ಲಿ ಸುಧಾರಣೆ ಉಂಟಾಗಲಿದೆ. ವಾರದ ಕೊನೆಗೆ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಪ್ರಯಾಣಿಸುವ ಸಾಧ್ಯತೆ ಇದ್ದು, ಇದರಿಂದ ಆನಂದ ಮತ್ತು ಪ್ರಯೋಜನ ಎರಡೂ ಲಭಿಸಲಿದೆ. ಈ ಪ್ರಯಾಣದ ವೇಳೆ ನೀವು ಪ್ರಮುಖ ವ್ಯಕ್ತಿಯೊಬ್ಬರನ್ನು ಭೇಟಿಯಾಗಲಿದ್ದು, ಭವಿಷ್ಯದಲ್ಲಿ ಯಶಸ್ವಿ ಕಾರ್ಯತಂತ್ರವನ್ನು ರೂಪಿಸಲು ಅವರು ನಿಮಗೆ ನೆರವಾಗಲಿದ್ದಾರೆ. ನಿಮ್ಮ ಪ್ರಣಯ ಸಂಬಂಧವನ್ನು ವರ್ಧಿಸುವುದಕ್ಕಾಗಿ, ಇಬ್ಬರೂ ಸಂಗಾತಿಗಳು ಸಮನ್ವಯದ ಪ್ರಯತ್ನವನ್ನು ಮಾಡಿದರೆ ನಿಮ್ಮ ಸಂಗಾತಿಯ ಜೊತೆಗೆ ನೀವು ಸಮಯವನ್ನು ಆನಂದಿಸಲಿದ್ದೀರಿ.

ಮೀನ : ಮೀನ ರಾಶಿಯವರು ಈ ವಾರದಲ್ಲಿ ಸಹನೆಯಿಂದ ವರ್ತಿಸಿ ತಮ್ಮ ಗುರಿಯತ್ತ ಗಮನ ನೀಡುವುದು ಒಳ್ಳೆಯದು. ನಿಮ್ಮ ಗುರಿಯನ್ನು ಸಾಧಿಸುವುದಕ್ಕಾಗಿ ಧನಾತ್ಮಕ ಮನೋಭಾವವನ್ನು ಮೈಗೂಡಿಸಿಕೊಂಡು ಜಾಣ ನಿರ್ಧಾರವನ್ನು ತೆಗೆದುಕೊಳ್ಳಿ. ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ಸಾಕಷ್ಟು ಸಮಯವನ್ನು ಕಳೆಯುವುದರಿಂದ ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ನಿಮ್ಮ ವ್ಯವಹಾರದಲ್ಲಿ ನೀವು ಧನಾತ್ಮಕ ಫಲಿತಾಂಶವನ್ನು ಕಾಣಲಿದ್ದೀರಿ. ವಾರದ ಕೊನೆಗೆ ನೀವು ಕುತೂಹಲಕಾರಿ ಸುದ್ದಿಯನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳು ಮತ್ತು ಸ್ಪರ್ಧೆಯಲ್ಲಿರುವವರು ತಮ್ಮ ಅವಕಾಶಗಳ ಕುರಿತು ಆಶಾಭಾವವನ್ನು ಹೊಂದಬಹುದು. ಮಹಿಳೆಯರು ತಮ್ಮ ಹೆಚ್ಚಿನ ಸಮಯವನ್ನು ಪ್ರಾರ್ಥನೆ, ಧಾರ್ಮಿಕ ಗ್ರಂಥಗಳನ್ನು ಓದುವುದು ಮತ್ತು ಧಾರ್ಮಿಕ ಅಭ್ಯಾಸಗಳಿಗಾಗಿ ಮೀಸಲಿಡಲಿದ್ದಾರೆ. ಪ್ರೇಮ ಸಂಬಂಧವು ಚೆನ್ನಾಗಿರಲಿದ್ದು, ನಿಮ್ಮ ಸಂಗಾತಿಯೊಂದಿಗೆ ಅರ್ಥಪೂರ್ಣವಾಗಿ ಸಮಯವನ್ನು ಕಳೆಯಲಿದ್ದೀರಿ. ನಿಮ್ಮ ಸಂಗಾತಿಯ ಜೊತೆಗೆ ಉತ್ತಮ ಸಂವಹನ ನಡೆಯಲಿದೆ. ಈ ವಾರದಲ್ಲಿ ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ಸ್ವಂತ ಆರೈಕೆ, ನೈರ್ಮಲ್ಯ ಮತ್ತು ಪೌಷ್ಟಿಕಾಂಶಭರಿತ ಆಹಾರಕ್ರಮಕ್ಕೆ ಒತ್ತು ನೀಡುವುದು ಒಳ್ಳೆಯದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.