ETV Bharat / spiritual

ಟಿಟಿಡಿಯಲ್ಲಿ ತಿಮ್ಮಪ್ಪನ ದರ್ಶನಕ್ಕಿವೆ ನಾನಾ ಪ್ರಕಾರದ ಟಿಕೆಟ್​ಗಳು: ಸರ್ವದರ್ಶನದಿಂದ ಸ್ಲಾಟೆಡ್ ಬುಕಿಂಗ್‌ವರೆಗೆ - HOW MANY TYPES OF DARSHAN

ಭಕ್ತಾದಿಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಟಿಟಿಡಿ ನಾನಾ ವ್ಯವಸ್ಥೆಗಳನ್ನು ಮಾಡಿದೆ. ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಕಷ್ಟದಿಂದ ತಪ್ಪಿಸಿಕೊಳ್ಳಲು ಈ ಸೌಲಭ್ಯಗಳನ್ನು ಬಳಸಿಕೊಂಡರೆ ಸುಲಭವಾಗಿ ದರ್ಶನ ಪಡೆದುಕೊಳ್ಳಬಹುದು.

different-types-of-darshan-information-at-tirumala-temple
ಟಿಟಿಡಿಯಲ್ಲಿ ತಿಮ್ಮಪ್ಪನ ದರ್ಶನಕ್ಕಿವೆ ನಾನಾ ಪ್ರಕಾರಗಳು:ಸರ್ವದರ್ಶನದಿಂದ ಸ್ಲಾಟೆಡ್ ಬುಕಿಂಗ್‌ವರೆಗೆ (ETV Bharat)
author img

By ETV Bharat Karnataka Team

Published : Dec 17, 2024, 7:17 AM IST

ತಿರುಮಲ, ಆಂಧ್ರಪ್ರದೇಶ; ಆ ಏಳು ಬೆಟ್ಟಗಳ ಮೇಲೆ ಇರುವ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕನ ದರ್ಶನ ಪಡೆಯಲು ಕೋಟಿಗಟ್ಟಲೆ ಭಕ್ತರು ತಿರುಮಲಕ್ಕೆ ಬರುತ್ತಾರೆ. ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಪಡೆಯುವುದು ಹೇಗೆ ಯಾವೆಲ್ಲ ಸೌಲಭ್ಯಗಳಿಗೆ ಎಂಬ ಬಗ್ಗೆ ಬಹಳಷ್ಟು ಜನರಿಗೆ ಅನೇಕ ಅನುಮಾನಗಳಿವೆ. ತಿರುಮಲ ಶ್ರೀವಾರಿಯ ದರ್ಶನಕ್ಕಾಗಿ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಟಿಟಿಡಿ ಒದಗಿಸುವ ಅವಕಾಶಗಳನ್ನು ತಿಳಿಯಲು ಭಕ್ತರು ಯಾವಾಗಲೂ ಉತ್ಸುಕರಾಗಿರುತ್ತಾರೆ. ಅದಕ್ಕಾಗಿಯೇ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಟಿಟಿಡಿ ನಾನಾ ವ್ಯವಸ್ಥೆಗಳನ್ನು ಮಾಡಿದೆ.

ಯೋಜನಾಬದ್ಧವಾಗಿ ತಿರುಮಲ ಬೆಟ್ಟಕ್ಕೆ ಬರುವ ಭಕ್ತರಿಗೆ ಶ್ರೀನಿವಾಸನ ದರ್ಶನ ಕಷ್ಟವಾಗುವುದಿಲ್ಲ. ಭಕ್ತರು ಟಿಟಿಡಿ ಒದಗಿಸುವ ಸೌಲಭ್ಯಗಳ ಬಗ್ಗೆ ತಿಳಿದುಕೊಂಡರೆ ಅನಾವಶ್ಯಕ ಖರ್ಚನ್ನು ಕೂಡಾ ತಪ್ಪಿಸಬಹುದು. ಸರತಿ ಸಾಲಿನಲ್ಲಿ ಮತ್ತು ಕಂಪಾರ್ಟ್‌ಮೆಂಟ್‌ಗಳಲ್ಲಿ ಗಂಟೆಗಟ್ಟಲೆ ಕಾಯುವ ಯಾವುದೇ ತೊಂದರೆಯಿಂದಲೂ ಪಾರಾಗಬಹುದು.

ಶ್ರೀವಾರಿ ಸರ್ವದರ್ಶನ: ತಿರುಮಲಕ್ಕೆ ಬರುವ ಭಕ್ತರು ಯಾವುದೇ ಟಿಕೆಟ್ ಇಲ್ಲದೇ ಆ ಭಗವಂತನ ದರ್ಶನ ಮಾಡಬಹುದು. ಇವರೆಲ್ಲರನ್ನು ವೈಕುಂಟಂ-2 ರ 32 ಕೊಠಡಿಗಳ ಮೂಲಕ (ಪ್ರತಿ ಕೊಠಡಿಯಲ್ಲಿ 450 ಜನರು) ಸರತಿ ಸಾಲಿನಲ್ಲಿ ಕಳುಹಿಸಲಾಗುತ್ತದೆ. ಅಲ್ಲಿಂದ ಭಗವಂತನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈ ಕೊಠಡಿಗಳು ಭರ್ತಿಯಾಗಿದ್ದರೆ, ನಾರಾಯಣಗಿರಿ ಉದ್ಯಾನದಲ್ಲಿ ಸ್ಥಾಪಿಸಲಾದ ಇನ್ನೂ ಒಂಬತ್ತು ವಿಭಾಗಗಳಲ್ಲಿ (ತಲಾ 900 ಜನರು) ದರ್ಶನಕ್ಕಾಗಿ ಕಾಯಲು ಅವಕಾಶವಿದೆ. ಕೊನೆಗೆ ಅವುಗಳು ತುಂಬಿದ್ದರೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ.

ಕ್ಯೂ ಲೈನ್‌ನಿಂದ ವೈಕುಂಟಂ-2 ಪ್ರವೇಶಿಸುವ ಸಮಯದಲ್ಲಿ ದರ್ಶನದ ಸಮಯವನ್ನು ಸೂಚಿಸುವ ಟೋಕನ್ ನೀಡಲಾಗುತ್ತದೆ. ದರ್ಶನಕ್ಕೆ ಹೆಚ್ಚು ಸಮಯ ಸಿಕ್ಕರೆ, ನಿಗದಿತ ದರ್ಶನದ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಅಲ್ಲಿಂದ ಹೊರಗೆ ಬಂದು ನೇರವಾಗಿ ಮ್ಯೂಸಿಯಂಗೆ ಹೋಗುವ ಮಾರ್ಗದಲ್ಲಿರುವ ಪಶ್ಚಿಮ ಮಾದ ಬೀದಿಯಿಂದ ಕಂಪಾರ್ಟ್‌ಮೆಂಟ್‌ಗೆ ಹೋಗಬಹುದು.

ಸೌಲಭ್ಯಗಳು: ಕಂಪಾರ್ಟ್‌ಮೆಂಟ್‌ಗಳು ಮತ್ತು ಕೊಠಡಿಗಳಲ್ಲಿ ತಂಗಿರುವ ಭಕ್ತರಿಗೆ ಟಿಟಿಡಿ ಸಿಬ್ಬಂದಿ ಊಟ, ಚಹಾ ಮತ್ತು ಹಾಲು ಒದಗಿಸುತ್ತಾರೆ. ಅಗತ್ಯವಿದ್ದವರಿಗೆ ವೈದ್ಯಕೀಯ ಸೌಲಭ್ಯಗಳೂ ಕೂಡಾ ಲಭ್ಯ ಇವೆ. ಅದೇ ರೀತಿ ಸರತಿ ಸಾಲಿನಲ್ಲಿ ನಿಂತಿರುವ ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ದರ್ಶನಕ್ಕೆ ತೆಗೆದುಕೊಳ್ಳುವ ಸಮಯ: ಇದು ಸುಮಾರು 15 ರಿಂದ 16 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಸ್ಲಾಟೆಡ್ ಸರ್ವದರ್ಶನ್ (SSD): ಸರ್ವದರ್ಶನಕ್ಕೆ ಬರುವ ಭಕ್ತರಿಗೆ ನಿಗದಿತ ಸಮಯವನ್ನು ಸೂಚಿಸಿ ಶ್ರೀವಾರಿ ದರ್ಶನಕ್ಕೆ ಟೈಮ್ ಸ್ಲಾಟ್ ಟೋಕನ್ ನೀಡಲಾಗುತ್ತದೆ. ಅವರು ನಿಗದಿತ ಸಮಯಕ್ಕೆ ವೈಕುಂಟಂ-1 ರಿಂದ ಕಂಪಾರ್ಟ್‌ಮೆಂಟ್‌ಗಳಿಗೆ ಹೋಗಬೇಕು. ಅಲಿಪಿರಿ ಕಡೆಯಿಂದ ತಿರುಮಲ ಬೆಟ್ಟದ ಮೇಲೆ ನಡೆದಾಡುವವರು ಇಲ್ಲಿ ದರ್ಶನ ಟೋಕನ್‌ಗಳನ್ನು ತೆಗೆದುಕೊಳ್ಳಬಹುದು.

ದರ್ಶನದ ಅವಧಿ: ಸಾಮಾನ್ಯ ದಿನಗಳಲ್ಲಿ 4 ಗಂಟೆಗಳು. ಬ್ಯುಸಿ ದಿನಗಳಲ್ಲಿ 7 ರಿಂದ 8 ಗಂಟೆಗಳು.

ಟಿಕೆಟ್‌ಗಳು ಎಲ್ಲಿ ದೊರೆಯುತ್ತವೆ? : ವಿಷ್ಣು ನಿವಾಸ, ಭೂದೇವಿ ಸಂಕೀರ್ಣ, ಶ್ರೀವಾರಿ ಮೆಟ್ಟು, ತಿರುಪತಿ ಶ್ರೀನಿವಾಸಂ.

ಯಾವಾಗ ನೀಡಲಾಗುತ್ತದೆ?: ಮುಂಜಾನೆ 4 ಗಂಟೆಯಿಂದ.

ದಿನಕ್ಕೆ ಎಷ್ಟು ಟೋಕನ್: ತಿರುಪತಿಯಲ್ಲಿ 14 ಸಾವಿರ, ಶ್ರೀವಾರಿಮೆಟ್ಟು ದಲ್ಲಿ 6 ಸಾವಿರ.

ವಿಶೇಷ ಪ್ರವೇಶ ದರ್ಶನ (SED) ಟಿಕೆಟ್ ರೂ.300: ಇದಕ್ಕೂ ಮೂರು ತಿಂಗಳ ಮೊದಲು ಆನ್‌ಲೈನ್‌ನಲ್ಲಿ ಟಿಕೆಟ್ ನೀಡಲಾಗುತ್ತದೆ. ಟಿಕೆಟ್‌ನಲ್ಲಿ ನಿರ್ದಿಷ್ಟಪಡಿಸಿದ ಸಮಯದಲ್ಲಿ ವೈಕುಂಟಂ-1 ಅನ್ನು ತಲುಪಬೇಕಾಗುತ್ತದೆ. 12 ವರ್ಷದೊಳಗಿನ ಮಕ್ಕಳು ಟಿಕೆಟ್ ತೆಗೆದುಕೊಳ್ಳುವ ಅಗತ್ಯವಿಲ್ಲ.

ಭೇಟಿಯ ಅವಧಿ: ಸುಮಾರು 3 ರಿಂದ 4 ಗಂಟೆಗಳು.

ಬುಕ್ ಮಾಡಲು ವೆಬ್‌ಸೈಟ್: https://ttdevasthanams.ap.gov.in

ವಲಸಿಗರಿಗೆ ವಿಶೇಷ ಪ್ರವೇಶ ದರ್ಶನ (SED): ತಮ್ಮ ಪಾಸ್‌ಪೋರ್ಟ್‌ನಲ್ಲಿ ಇಮಿಗ್ರೇಷನ್ ಸ್ಟ್ಯಾಂಪ್ ಪರೀಕ್ಷಿಸಿದ ನಂತರ ಭೇಟಿ ನೀಡಲು ಅವಕಾಶವನ್ನ ಕಲ್ಪಿಸಲಾಗುತ್ತದೆ. ಅವರು ಆಧಾರ್ ಪ್ರತಿ ಮತ್ತು ಪಾಸ್‌ಪೋರ್ಟ್‌ಗಳೊಂದಿಗೆ ಅರ್ಜಿ ಸಲ್ಲಿಸಬೇಕು.

APNRTS (ಆಂಧ್ರ ಪ್ರದೇಶ ಅನಿವಾಸಿ ತೆಲುಗು ಸೊಸೈಟಿ) ನಿಂದ ದಿನಕ್ಕೆ ಎರಡು ಶಿಫಾರಸು ಪತ್ರಗಳನ್ನು ನೀಡಲಾಗುತ್ತದೆ. ಪ್ರತಿ ಪತ್ರಕ್ಕೆ ಆರು ಮಂದಿ ಪ್ರವೇಶ ಪಡೆದುಕೊಳ್ಳಬಹುದು.

  • ಎಲ್ಲಿ ಅರ್ಜಿ ಸಲ್ಲಿಸಬೇಕು?: ಸುಪಥಮ್ ನಲ್ಲಿ
  • ಟಿಕೆಟ್: ರೂ.300
  • ಭೇಟಿಯ ಅವಧಿ: ಸುಮಾರು 3 ರಿಂದ 4 ಗಂಟೆಗಳು.
  • ಶ್ರೀವಾಣಿ ದರ್ಶನ ಟಿಕೆಟ್ ರೂ.10 ಸಾವಿರ: ಶ್ರೀವೆಂಕಟೇಶ್ವರ ದೇವಸ್ಥಾನ ನಿರ್ಮಾಣ ಟ್ರಸ್ಟ್‌ಗೆ 10,000 ರೂ ದೇಣಿಗೆ ನೀಡುವವರು ಹೆಚ್ಚುವರಿ ರೂ.500ಗಳ ಪ್ರಯೋಜನದೊಂದಿಗೆ ಒಬ್ಬ ವ್ಯಕ್ತಿಗೆ ಭಗವಂತನ ದರ್ಶನಕ್ಕೆ ಟಿಕೆಟ್ ಪಡೆದುಕೊಳ್ಳುತ್ತಾರೆ.

ದಿನಕ್ಕೆ ಎಷ್ಟು ಟಿಕೆಟ್ ನೀಡಲಾಗುತ್ತದೆ?: 1,500

ಟಿಕೆಟ್ ಎಲ್ಲೆಲ್ಲಿ?: ತಿರುಮಲದ ರೇಣಿಗುಂಟಾ ವಿಮಾನ ನಿಲ್ದಾಣದಲ್ಲಿ ನೀಡಿದ ಟಿಕೆಟ್‌ಗಳೊಂದಿಗೆ ದರ್ಶನ ಪಡೆಯಬಹುದು. ಇದನ್ನು ಮೂರು ತಿಂಗಳ ಮುಂಚಿತವಾಗಿ ಆನ್‌ಲೈನ್‌ನಲ್ಲಿ ತೆಗೆದುಕೊಳ್ಳಬಹುದು.

ಭೇಟಿಯ ಅವಧಿ: ಒಂದರಿಂದ ಎರಡು ಗಂಟೆಗಳವರೆಗೆ.

ಶ್ರೀನಿವಾಸ ದಿವ್ಯಾನುಗ್ರಹಹೋಮ: ಇಬ್ಬರಿಗೆ ದರ್ಶನದ ಅವಕಾಶ

ತಿರುಪತಿಯ ಅಲಿಪಿರಿಯಲ್ಲಿರುವ ಸಪ್ತಗೋಪ್ರದಕ್ಷಿಣಾ ಮಂದಿರದಲ್ಲಿ ಶ್ರೀನಿವಾಸ ದಿವ್ಯಾನುಗ್ರಹ ಹೋಮವನ್ನು ನಡೆಸಲಾಗುತ್ತದೆ. ಇದಕ್ಕಾಗಿ ನೀವು 1000 ರೂಪಾಯಿಗಳನ್ನು ಪಾವತಿಸಿ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಬೇಕು. ಆಫ್‌ಲೈನ್ ಟಿಕೆಟ್‌ಗಳನ್ನು ಸಹ ಪ್ರತಿದಿನ ಬೆಳಗ್ಗೆ 5 ಗಂಟೆಗೆ ಇಲ್ಲಿ ನೀಡಲಾಗುತ್ತದೆ. ಹೋಮದ ನಂತರ ಅಧಿಕೃತ ಮುದ್ರೆ ಹಾಕಿದರೆ ಇಬ್ಬರಿಗೆ ರೂ.300ಗಳ ಶ್ರೀವಾರಿ ದರ್ಶನ ಟಿಕೆಟ್ ಸಿಗಲಿದೆ.

ಭೇಟಿಯ ಅವಧಿ: 3 ರಿಂದ 4 ಗಂಟೆಗಳು.

ಮಕ್ಕಳಿಗೆ, ವೃದ್ಧರಿಗೆ, ಅಂಗವಿಕಲರಿಗೆ, ರೋಗಿಗಳಿಗೆ ವಿಶೇಷ ವ್ಯವಸ್ಥೆ: ಚಿಕ್ಕ ಮಕ್ಕಳಿರುವವರಿಗೆ ತಿರುಮಲ ಶ್ರೀವಾರಿ ದರ್ಶನಕ್ಕೆ ವಿಶೇಷ ಕೋಟಾ ಇದೆ. 10 ವರ್ಷದೊಳಗಿನ ಮಕ್ಕಳ ಪೋಷಕರು ಮಗು ಅಥವಾ ಮಗುವಿನ ಜನ್ಮ ದಿನಾಂಕದ ಪುರಾವೆಯೊಂದಿಗೆ ಮೂರು ತಿಂಗಳ ಮುಂಚಿತವಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡಬೇಕು. ಅವರಿಗೆ ಪ್ರತಿ ತಿಂಗಳು ಕೋಟಾ ಬಿಡುಗಡೆಯಾಗುತ್ತದೆ. ಶ್ರೀವಾರಿ ದೇವಸ್ಥಾನದ ಮುಂಭಾಗದಿಂದ ಅವರಿಗೆ ವಿಶೇಷ ಸರತಿ ಸಾಲು ಇದೆ.

ಅಲ್ಲದೇ ವಿಕಲಚೇತನರು ಮತ್ತು ಹಿರಿಯ ನಾಗರಿಕರು ಮೂರು ತಿಂಗಳ ಮುಂಚಿತವಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಅವರಿಗೆ ಸಂಜೆ ಮೂರು ಗಂಟೆಗೆ ವಿಶೇಷ ಸ್ಲಾಟ್‌ಗಳನ್ನು ಹಂಚಿಕೆ ಮಾಡಲಾಗುತ್ತದೆ. ದಿನಕ್ಕೆ 750 ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತಿದೆ.

ಅಸ್ವಸ್ಥ ಭಕ್ತರಿಗೆ ಬಯೋಮೆಟ್ರಿಕ್ ಗೇಟ್ ಮೂಲಕ ದೇವಸ್ಥಾನಕ್ಕೆ ಪ್ರವೇಶ ಕಲ್ಪಿಸಲಾಗುತ್ತದೆ. ರೋಗಿಯು ಮತ್ತು ಅವನ ಪರಿಚಾರಕರು ಮೊದಲು ವೈಕುಂಟಂ-1 ನಲ್ಲಿ ಟಿಕೆಟ್ ತಪಾಸಣೆ ಸಿಬ್ಬಂದಿಗೆ ತಿಳಿಸಬೇಕು. ಅದರ ನಂತರ, ತಪಾಸಣೆ ಸಿಬ್ಬಂದಿ ರೋಗಿಯನ್ನು ಮತ್ತು ಕುಟುಂಬದ ಸದಸ್ಯರನ್ನು ಮಹಾದ್ವಾರಕ್ಕೆ ಕಳುಹಿಸುತ್ತಾರೆ. ಅಲ್ಲಿನ ಟಿಟಿಡಿ ಉದ್ಯೋಗಿ ರೋಗಿಯ ವಿವರಗಳನ್ನು ದಾಖಲಿಸಿ ಪರಿಚಾರಕರೊಂದಿಗೆ ಕಳುಹಿಸಲು ವ್ಯವಸ್ಥೆ ಮಾಡುತ್ತಾರೆ. ಇಚ್ಛೆಯನ್ನು ಅವಲಂಬಿಸಿ, ಈ ಜವಾಬ್ದಾರಿಯನ್ನು ಕುಟುಂಬದ ಸದಸ್ಯರಿಗೆ ವಹಿಸಿಕೊಡಲಾಗುತ್ತದೆ. ಇಲ್ಲವೇ ಮತ್ತೆ ಮುಖ್ಯದ್ವಾರಕ್ಕೆ ಕಳುಹಿಸಿ ದರ್ಶನ ವ್ಯವಸ್ಥೆ ಮಾಡುತ್ತಾರೆ. ಇಲ್ಲಿ ರೋಗಿಯ ಅಗತ್ಯತೆಗಳ ಮೌಲ್ಯಮಾಪನವನ್ನು ಮಾಡಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ.

ಸೈನಿಕರು, ರಕ್ತದಾನಿಗಳಿಗೂ ಇದೇ ವಿಶೇಷ ಟಿಕೆಟ್​: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ (ಫೀಲ್ಡ್ ಸ್ಟಾಫ್ ಮಾತ್ರ) ರೂ.300 ಟಿಕೆಟ್ ನೀಡಲಾಗುವುದು. ಅವರು ತಮ್ಮ ಗುರುತಿನ ಚೀಟಿ ತೋರಿಸಿ ಟಿಕೆಟ್ ತೆಗೆದುಕೊಳ್ಳಬಹುದು.

ಅಶ್ವನಿ ಆಸ್ಪತ್ರೆಯು ಸುಪಥಮ್ ಮಾರ್ಗದ ಮೂಲಕ ರಕ್ತದಾನ ಮಾಡುವವರಿಗೆ ಪ್ರವೇಶ ನೀಡುತ್ತದೆ. ಆದರೆ ವೈದ್ಯರಿಂದ ಪ್ರಮಾಣಪತ್ರವನ್ನು ತೋರಿಸಬೇಕು.

ಇದನ್ನು ಓದಿ:ಸೋಮನಾಥ ಜ್ಯೋತಿರ್ಲಿಂಗ, ದ್ವಾರಕಾ, ಏಕತೆಯ ಪ್ರತಿಮೆ ವೀಕ್ಷಿಸಲು IRCTC 'ಸುಂದರ ಸೌರಾಷ್ಟ್ರ ಪ್ಯಾಕೇಜ್'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.