ETV Bharat / opinion

ಹೊಸ ಕಾನೂನುಗಳಲ್ಲಿನ ಉತ್ತಮ ಅಂಶಗಳೇನು? ಬದಲಾಗಬೇಕಿರುವುದೇನು?: ವಿಶ್ಲೇಷಣೆ - Analysis on New Laws

ಭಾರತದಲ್ಲಿ ಜಾರಿಯಾಗಿರುವ ಹೊಸ ಕಾನೂನು ಸಂಹಿತೆಗಳ ಸಾಧಕ ಬಾಧಕಗಳ ಬಗ್ಗೆ ನ್ಯಾಯಮೂರ್ತಿ ಮದನ್ ಲೋಕೂರ್ ಬರೆದ ಲೇಖನ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By Justice Madan Lokur

Published : Jul 29, 2024, 7:12 PM IST

ಕ್ರಿಮಿನಲ್ ನ್ಯಾಯ ಸಂಹಿತೆಗೆ ಸಂಬಂಧಿಸಿದ ಮೂರು ಹೊಸ ಕಾನೂನುಗಳನ್ನು ಜುಲೈ 1, 2024 ರಿಂದ ಜಾರಿಗೆ ತರಲಾಗಿದೆ. ಈಗ ಕೆಲ ತಿಂಗಳುಗಳಿಂದ ಇವುಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗುತ್ತಿತ್ತು. ಈ ಕಾನೂನುಗಳ ಸಾಕಷ್ಟು ಮಾಹಿತಿಯನ್ನು ಬರೆಯಲಾಗಿದೆ ಮತ್ತು ಮಾತನಾಡಲಾಗಿದೆ. ಈ ಸಮಯದಲ್ಲಿ ನಾನು ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ (ಬಿಎಸ್ಎ) ಇವುಗಳ ಬಗ್ಗೆ ಇಲ್ಲಿ ಹೇಳಲು ಬಯಸುತ್ತೇನೆ. ಕೇಂದ್ರ ಸರ್ಕಾರವು ಕ್ರಮವಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರೊಸೀಜರ್​ ಕೋಡ್​ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳ ಜಾಗದಲ್ಲಿ ಮೇಲಿನ ಮೂರು ಕಾಯ್ದೆಗಳನ್ನು ಜಾರಿಗೆ ತಂದಿದೆ.

ಈ ಕಾನೂನುಗಳ ಪರಿಣಾಮವನ್ನು ಇಷ್ಟು ಸಣ್ಣ ಲೇಖನದಲ್ಲಿ ಪೂರ್ಣವಾಗಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ, ನಾನು ಈ ಕಾನೂನುಗಳ ಕೆಲ ಅಂಶಗಳನ್ನು ಮಾತ್ರ ಪ್ರಸ್ತಾಪಿಸುತ್ತೇನೆ. ಅವುಗಳಲ್ಲಿ ಕೆಲವು ವಿಚಿತ್ರವಾಗಿವೆ, ಕೆಲವು ಒಳ್ಳೆಯದಾಗಿವೆ ಮತ್ತು ಕೆಲವೊಂದಕ್ಕೆ ತೀವ್ರ ಬದಲಾವಣೆಯ ಅಗತ್ಯವಿದೆ.

ಹೊಸ ಕಾನೂನುಗಳ ವಿಚಿತ್ರವಾದ ಅಂಶಗಳು: ವಸಾಹತುಶಾಹಿ ಮನಸ್ಥಿತಿಯನ್ನು ತೊಡೆದುಹಾಕುವುದು ಹೊಸ ಕಾನೂನುಗಳ ಉದ್ದೇಶವಾಗಿತ್ತು. ಆದರೆ, ಹೊಸ ಕಾನೂನುಗಳಲ್ಲಿ ಸುಮಾರು ಶೇ 90 ರಷ್ಟು ಹಳೆಯ ಕಾನೂನುಗಳನ್ನೇ ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ. ಹೀಗೆ ಮಾಡುವುದಾಗಿದ್ದರೆ ಐಪಿಸಿಯ ಮೂಲ ರಚನೆಯನ್ನೇ ಉಳಿಸಿಕೊಳ್ಳಬಹುದಿತ್ತು ಮತ್ತು ಅಗತ್ಯ ತಿದ್ದುಪಡಿಗಳನ್ನು ಮಾಡಬಹುದಿತ್ತು. ಬಹುಪಾಲು ವಸಾಹತುಶಾಹಿ ಶಾಸನವಾಗಿ ಮುಂದುವರಿಯುವ ಕಾನೂನುಗಳನ್ನು ಮತ್ತೆ ಜಾರಿಗೆ ತರುವ ಅಗತ್ಯವಿರಲಿಲ್ಲ. ಬಿಎನ್ಎಸ್ ಹೊಸ ಬಾಟಲಿಯಲ್ಲಿರುವ ಹಳೆಯ ವೈನ್ ರೀತಿಯಾಗಿವೆ ಅಷ್ಟೇ.

ಐಪಿಸಿಯಲ್ಲಿ ಅತಿ ಹೆಚ್ಚು ದುರುಪಯೋಗಪಡಿಸಿಕೊಳ್ಳಲಾದ ಕಾನೂನು ಎಂದರೆ ಅದು ದೇಶದ್ರೋಹ ವಿರೋಧಿ ಕಾನೂನು. ಏನೋ ತಿಳಿಯದೆ ಒಂದು ಟ್ವೀಟ್​ ಮಾಡಿದ ಕಾರಣಕ್ಕೇ ಯುವಕರನ್ನು ದೇಶದ್ರೋಹದ ಕಾನೂನಿನಡಿ ಬಂಧಿಸಲಾಯಿತು. ಕೆಲವು ಸಮಯದ ಹಿಂದೆ, ಈ ವಸಾಹತುಶಾಹಿ ನಿಬಂಧನೆಯನ್ನು ರದ್ದುಗೊಳಿಸಲಾಗುವುದು ಎಂಬ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಮತ್ತು ದೇಶಕ್ಕೆ ತಿಳಿಸಲಾಗಿತ್ತು. ಆದರೆ ಈಗ ಇದಕ್ಕೆ ವ್ಯತಿರಿಕ್ತವಾಗಿರುವುದು ಸಂಭವಿಸಿದೆ ಎಂಬುದು ಆಶ್ಚರ್ಯ. ಹೊಸ ನಿಬಂಧನೆ (ಸೆಕ್ಷನ್ 152 ಬಿಎನ್ಎಸ್) ದೇಶದ್ರೋಹದ ಪ್ಲಸ್ ಆಗಿದೆ. ಹೆಚ್ಚು ಕಠಿಣ ಶಿಕ್ಷೆಯೊಂದಿಗೆ ನಿಬಂಧನೆಯ ದುರುಪಯೋಗಕ್ಕೆ ಈಗ ಹೆಚ್ಚಿನ ಅವಕಾಶವಿದೆ. ಕೆಲ ದಿನಗಳ ಹಿಂದೆ, ಪ್ಯಾಲೆಸ್ಟೈನ್ ಧ್ವಜವನ್ನು ಬೀಸಿದ್ದಕ್ಕಾಗಿ ಕೆಲವರನ್ನು ಬಂಧಿಸಲಾಯಿತು. ಈಗ, ಸೆಕ್ಷನ್ 152 ಬಿಎನ್ಎಸ್ ಅಡಿ ವಿಧ್ವಂಸಕ ಚಟುವಟಿಕೆಗೆ ಅನಿರ್ದಿಷ್ಟ ಆರೋಪವನ್ನು ಅವರ ಮೇಲೆ ಹೊರಿಸಬಹುದು.

ಹಾಗೆಯೇ ಐಪಿಸಿಯಲ್ಲಿನ ಮತ್ತೊಂದು ಅತಿಹೆಚ್ಚು ದುರುಪಯೋಗವಾದ ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು) ಅನ್ನು ಮತ್ತೆ ಜಾರಿಗೆ ತರಲಾಗಿದೆ ಮತ್ತು ಸೆಕ್ಷನ್ 196 ಬಿಎನ್ಎಸ್ ಆಗಿ ವಿಸ್ತರಿಸಲಾಗಿದೆ. ಈ ಸೆಕ್ಷನ್ ಅಡಿ ಜಾಮೀನು ರಹಿತ ಅಪರಾಧಕ್ಕಾಗಿ ವ್ಯಕ್ತಿಯನ್ನು ಬಂಧಿಸಲು ಪೊಲೀಸರಿಗೆ ಅಪಾರ ಅವಕಾಶವನ್ನು ನೀಡಲಾಗಿದೆ. ಆದರೆ, ಹಿಂದಿನಂತೆ, ಇದನ್ನು ದ್ವೇಷ ಹರಡುವವರ ವಿರುದ್ಧ ಬಳಸಲು ಸಾಧ್ಯವಿಲ್ಲ.

ಹೊಸ ಕಾನೂನುಗಳ ಉತ್ತಮವಾದ ಅಂಶಗಳು: ಬಿಎನ್ಎಸ್ಎಸ್​ನಲ್ಲಿ ಕೆಲ ಉತ್ತಮ ಅಂಶಗಳೂ ಇವೆ. ಹುಡುಕಾಟದ ಸಂದರ್ಭಗಳಲ್ಲಿ (ಸೆಕ್ಷನ್ 185) ಮೊಬೈಲ್​ನಲ್ಲಿಯೇ ವೀಡಿಯೊಗ್ರಫಿ ಮಾಡುವುದು ಇಂಥ ಒಂದು ಒಳ್ಳೆಯ ಅಂಶವಾಗಿದೆ. ಇದು ಅಧಿಕಾರಿಗಳ ಸಾಂದರ್ಭಿಕ ಅತಿರೇಕದ ವರ್ತನೆಗಳನ್ನು ಕಡಿಮೆ ಮಾಡುತ್ತದೆ ಎಂದು ಆಶಿಸಬಹುದು. ಆದರೆ ವೀಡಿಯೊಗ್ರಫಿಗೆ ಯಾವುದೇ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವಿಲ್ಲ ಎಂದು ತೋರುತ್ತದೆ.

ಬಂಧಿತ ವ್ಯಕ್ತಿಗಳ ಪಟ್ಟಿಯನ್ನು ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು (ಸೆಕ್ಷನ್ 37) ಎಂದು ಕಾಯ್ದೆ ಮಾಡಲಾಗಿದೆ. ಇದು ಒಳ್ಳೆಯದು. ಆದರೆ ಅಧಿಕೃತವಾಗಿ ಬಂಧನವನ್ನೇ ತೋರಿಸದಿದ್ದರೆ ಏನು ಮಾಡುವುದು? ಇಂಥ ಆಟಗಳನ್ನು ಪೊಲೀಸರು ಮುಂಚಿನಿಂದ ಆಡುತ್ತಲೇ ಇದ್ದಾರೆ. 3 ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹದಾದ ಅಪರಾಧಗಳಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳನ್ನು (ಸೆಕ್ಷನ್ 35) ಬಂಧಿಸಲು ನಿರ್ಬಂಧಗಳಿವೆ. ಅಂದಹಾಗೆ, ಅಂತಹ ಹೆಚ್ಚಿನ ಅಪರಾಧಗಳು ಜಾಮೀನು ನೀಡಬಹುದಾದವು. ಆದ್ದರಿಂದ ಇದು ನಿಜವಾಗಿಯೂ ಬಹಳ ದೊಡ್ಡ ಸುಧಾರಣೆಯಾಗಿದೆ.

ಅಪರಾಧದ ಸಂತ್ರಸ್ತರಿಗೆ ಬಿಎನ್ಎಸ್ಎಸ್ ಮೇಲ್ನೋಟಕ್ಕೆ ಕೆಲ ಪ್ರಯೋಜನಗಳನ್ನು ಒದಗಿಸುತ್ತದೆ. ಉದಾಹರಣೆಗೆ, ಸೆಕ್ಷನ್ 193 ಲೈಂಗಿಕ ಅಪರಾಧ ಪ್ರಕರಣಗಳಲ್ಲಿ, ತನಿಖೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ತಿಳಿಸಲಾಗಿದೆ. ಈ ನಿಬಂಧನೆ ಉತ್ತಮವಾಗಿದ್ದರೂ, ಎರಡು ತಿಂಗಳೊಳಗೆ ತನಿಖೆ ಪೂರ್ಣಗೊಳ್ಳದಿದ್ದರೆ, ಸಮಯ ವಿಸ್ತರಣೆಗಾಗಿ ನ್ಯಾಯಾಲಯವನ್ನು ಸಂಪರ್ಕಿಸಬಹುದು. ಹಾಗಾದರೆ ಸಮಯದ ಮಿತಿಯನ್ನು ನಿಗದಿಪಡಿಸಿರುವುದಾದರೂ ಏಕೆ? ಲೈಂಗಿಕ ಅಪರಾಧದ ಪ್ರಕರಣದಲ್ಲಿ, ಪೊಲೀಸರು 90 ದಿನಗಳಲ್ಲಿ ತನಿಖೆಯ ಪ್ರಗತಿ ಬಗ್ಗೆ ಸಂತ್ರಸ್ತೆಗೆ ತಿಳಿಸಬೇಕು. ಆದರೆ, ಪೊಲೀಸರು ಹಾಗೆ ಮಾಡದಿದ್ದರೆ ಏನೂ ಆಗುವುದಿಲ್ಲ. ಪೊಲೀಸರು ನಿಜವಾಗಿಯೂ ಈ ನಿಬಂಧನೆಯನ್ನು ಗೌರವಿಸುತ್ತಾರೆಯೇ? ವಿಚಿತ್ರವೆಂದರೆ, 90 ದಿನಗಳ ನಂತರ ಮಾಹಿತಿ ಒದಗಿಸುವ ಅಗತ್ಯ ಇಲ್ಲದಿರುವುದು. ಕಡ್ಡಾಯವಾಗಿ ಪಾಲನೆ ಮಾಡುವ ನಿಬಂಧನೆ ಇಲ್ಲದಿದ್ದರೆ ಕೆಲ ಉತ್ತಮ ಕಾನೂನುಗಳು ಸಹ ನಿರರ್ಥಕವಾಗಬಹುದು.

ಹೊಸ ಕಾನೂನುಗಳಲ್ಲಿ ಈ ಬದಲಾವಣೆ ಅಗತ್ಯ: ಬಿಎನ್ಎಸ್ ಕಠಿಣ ಕಾನೂನುಗಳನ್ನು ಪರಿಚಯಿಸಿದೆ. ಉದಾಹರಣೆಗೆ, ಯಾವುದೇ ಒಂದು ಸಂಘಟನೆಯು ಭಯೋತ್ಪಾದಕ ಕೃತ್ಯ ಎಸಗಿದಲ್ಲಿ, ಆ ಸಂಘಟನೆಯ ಸದಸ್ಯರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಬಹುದು (ಸೆಕ್ಷನ್ 113). ಹೀಗಾಗಿ ಯಾವುದೋ ಕ್ಲಬ್​​ನ ಸದಸ್ಯನೊಬ್ಬ ಯಾವುದೋ ಭಯೋತ್ಪಾದಕ ಕೃತ್ಯ ಎಸಗಿದಲ್ಲಿ ಮತ್ತಾವುದೋ ಸದಸ್ಯನನ್ನು ಬಂಧಿಸಬಹುದು.

ಪೊಲೀಸರು ಬಂಧನದ ಅಧಿಕಾರವನ್ನು ಯಾವುದೇ ಹಿಂಜರಿಕೆ ಇಲ್ಲದೆ ದುರುಪಯೋಗಪಡಿಸಿಕೊಳ್ಳುವುದು ಗೊತ್ತೇ ಇದೆ. ಹೀಗಾಗಿ ಪ್ರಸ್ತುತ ಕಾಲದಲ್ಲಿ, ಉತ್ತರದಾಯಿತ್ವವು ಬಹಳ ಅವಶ್ಯಕವಾಗಿದೆ. ಕಾನೂನುಗಳನ್ನು ಬಲಪಡಿಸುವುದು ಮತ್ತು ಪೊಲೀಸರು ಅದರಿಂದ ತಪ್ಪಿಸಿಕೊಳ್ಳುವುದನ್ನು ನಾವು ನೋಡುತ್ತಿದ್ದೇವೆ. ಉತ್ತರದಾಯಿತ್ವದ ಅನುಪಸ್ಥಿತಿಯು ಸ್ವಾತಂತ್ರ್ಯ ಪೂರ್ವದಿಂದಲೂ ಇದ್ದು, ಈಗಲೂ ಮುಂದುವರಿಯುತ್ತಿದೆ. ಹೊಸ ಕಾನೂನುಗಳು ಕೂಡ ಉತ್ತರದಾಯಿತ್ವವನ್ನು ಒದಗಿಸಲು ವಿಫಲವಾಗಿವೆ. ಸುಳ್ಳು ಬಂಧನಗಳು ಮತ್ತು ನಕಲಿ ಎನ್ ಕೌಂಟರ್​ಗಳಿಗೆ ಪೊಲೀಸರನ್ನು ಹೊಣೆಗಾರರನ್ನಾಗಿ ಮಾಡಬೇಕು.

ಜಾಮೀನು ನೀಡುವ ಷರತ್ತುಗಳ ಬಗ್ಗೆ ಗೊಂದಲ ಮೂಡಿಸಲಾಗಿದೆ(ಸೆಕ್ಷನ್ 480 ಬಿಎನ್ಎಸ್ಎಸ್). ಕೊಲೆ ಆರೋಪ ಹೊತ್ತಿರುವ ವ್ಯಕ್ತಿಗೆ ಜಾಮೀನು ನೀಡಲು ಸಾಧ್ಯವೇ ಇಲ್ಲ ಎಂಬರ್ಥದ ರೀತಿಯಲ್ಲಿ ಅದನ್ನು ಅರ್ಥೈಸಬಹುದಾಗಿದೆ. ಇದಲ್ಲದೇ, ಪೊಲೀಸರು ಆರೋಪಿಯನ್ನು ಬಂಧಿಸಿದ ಮೊದಲ 40 ದಿನಗಳಲ್ಲಿ ಯಾವುದೇ ಸಮಯದಲ್ಲಿ ಮತ್ತು ಈ ಅವಧಿಯಲ್ಲಿ ಅನೇಕ ಬಾರಿ ಕಸ್ಟಡಿಗೆ ಪಡೆಯಬಹುದು. ಇದು ನ್ಯಾಯಾಧೀಶರು ಜಾಮೀನು ನೀಡುವುದಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ ಕೆಲ ಸಂದರ್ಭಗಳಲ್ಲಿ ಬಂಧನವಾದ ತಕ್ಷಣ 40 ದಿನಗಳ ಜೈಲು ಶಿಕ್ಷೆ ಹೆಚ್ಚು ಕಡಿಮೆ ಖಾತರಿ ಎಂದಾಗುತ್ತದೆ.

ಶೂನ್ಯ ಎಫ್ಐಆರ್ ದಾಖಲಿಸುವುದು ಈಗ ಕಾನೂನಿನ ಭಾಗವಾಗಿದೆ (ಸೆಕ್ಷನ್ 173 ಬಿಎನ್ಎಸ್ಎಸ್). ಈ ಅಭ್ಯಾಸವು ಈಗಾಗಲೇ ಚಾಲ್ತಿಯಲ್ಲಿತ್ತು, ಆದರೆ ಈಗ ಇದಕ್ಕೆ ಶಾಸನಬದ್ಧ ಮಾನ್ಯತೆ ನೀಡಲಾಗಿದೆ. ಆದರೆ ಎಫ್ಐಆರ್ ಅನ್ನು ತಕ್ಷಣವೇ ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಗೆ ವರ್ಗಾಯಿಸಲು ಯಾವುದೇ ಅವಕಾಶವಿಲ್ಲ. ನೆನಪಿಡಿ, ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದಾಗ, ಶೂನ್ಯ ಎಫ್ಐಆರ್ ದಾಖಲಿಸಲಾಗಿತ್ತು. ಆದರೆ ಸುಮಾರು ಎರಡು ವಾರಗಳವರೆಗೆ ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಗೆ ವರ್ಗಾಯಿಸಲಿಲ್ಲ. ಈ ವಿಳಂಬದಿಂದ ಏನಾಯಿತು ಎಂಬುದು ನಮಗೆಲ್ಲ ಗೊತ್ತಿದೆ.

ಇಂಥ ಹಲವಾರು ಕಾನೂನುಗಳನ್ನು ಅಸ್ಪಷ್ಟವಾಗಿ ಬರೆಯಲಾಗಿದೆ. ಹೀಗಾಗಿ ಇವುಗಳ ಬಗ್ಗೆ ವಕೀಲರು ನ್ಯಾಯಾಲಯಗಳಲ್ಲಿ ಸುದೀರ್ಘವಾಗಿ ವಾದ ಮಾಡಬೇಕಾಗಬಹುದು. ಇದರಿಂದ ವಿಚಾರಣಾ ನ್ಯಾಯಾಲಯಗಳು ಮತ್ತು ಹೈಕೋರ್ಟ್ ಗಳಲ್ಲಿನ ನ್ಯಾಯಾಧೀಶರ ಮೇಲಿನ ಕೆಲಸದ ಹೊರೆ ಹೆಚ್ಚಾಗುತ್ತದೆ. ಅವರು ಕೆಲವು ಪ್ರಕರಣಗಳನ್ನು ಹಳೆಯ ಕಾನೂನು ಆಡಳಿತದ ಅಡಿಯಲ್ಲಿ ಮತ್ತು ಕೆಲವು ಪ್ರಕರಣಗಳನ್ನು ಹೊಸ ಕಾನೂನು ಆಡಳಿತದ ಅಡಿಯಲ್ಲಿ ವ್ಯವಹರಿಸಬೇಕಾಗುತ್ತದೆ. ಇದು ಸುಲಭದ ಕೆಲಸವಲ್ಲ. ಪರಿಣಾಮವಾಗಿ ಎಲ್ಲೆಡೆ ಗೊಂದಲ ಮೂಡಬಹುದು ಮತ್ತು ಪ್ರಕರಣಗಳ ವಿಲೇವಾರಿ ಪ್ರಮಾಣ ಕುಸಿಯುತ್ತದೆ.

ಈ ಸಮಸ್ಯೆಗೆ ಪರಿಹಾರವೇನು? ಸಾಮಾನ್ಯ ನಾಗರಿಕನಾಗಿರಲಿ, ಹಿರಿಯ ಅಧಿಕಾರಿಯಾಗಿರಲಿ ಅಥವಾ ಪೊಲೀಸ್ ಅಧಿಕಾರಿಯಾಗಿರಲಿ, ಎಲ್ಲ ಕಡೆಯೂ ಉತ್ತರದಾಯಿತ್ವ ಇರಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ. ಕಾನೂನುಗಳ ಅನುಷ್ಠಾನದಲ್ಲಿ ಸಮಾನತೆ ಬರದಿದ್ದರೆ ನಾವು ಎರಡು ರೀತಿಯ ಕಾನೂನು ವ್ಯವಸ್ಥೆಗಳಿಂದ ಆಳಲ್ಪಡುತ್ತೇವೆ. ಒಂದು ಅಧಿಕಾರ ಹೊಂದಿರುವವರಿಗೆ ಮತ್ತು ಇನ್ನೊಂದು ಸಾಮಾನ್ಯ ನಾಗರಿಕರಿಗೆ ಆಗಿರುತ್ತದೆ. ವಸಾಹತುಶಾಹಿ ಮನಸ್ಥಿತಿಯನ್ನುಕಿತ್ತೊಗೆಯುವ ಬಗ್ಗೆ ನಾವು ಗಂಭೀರವಾಗಿದ್ದರೆ, ಎಲ್ಲರಿಗೂ ಕಾನೂನು ಒಂದೇ ರೀತಿಯಾಗಿ ಅನ್ವಯಿಸಬೇಕು ಮತ್ತು ನ್ಯಾಯ ವಿತರಣೆಯಲ್ಲಿ ವಾಷಿಂಗ್ ಮೆಷಿನ್ ಸಿಂಡ್ರೋಮ್ ಅನ್ನು ಮುಂದುವರಿಸಬಾರದು.

ಲೇಖನ : ನ್ಯಾಯಮೂರ್ತಿ ಮದನ್ ಲೋಕೂರ್, ನ್ಯಾಯಮೂರ್ತಿ ಲೋಕೂರ್ ಭಾರತೀಯ ನ್ಯಾಯಶಾಸ್ತ್ರಜ್ಞ. ಸದ್ಯ ಫಿಜಿಯ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದಾರೆ. ಅವರು ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರು. ಆಂಧ್ರಪ್ರದೇಶ ಹೈಕೋರ್ಟ್ ಮತ್ತು ಗುವಾಹಟಿ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ದೆಹಲಿ ಹೈಕೋರ್ಟ್​ನ ನ್ಯಾಯಾಧೀಶರೂ ಆಗಿದ್ದರು.

ಇದನ್ನೂ ಓದಿ : ನಗರೀಕರಣಕ್ಕೆ ಬಜೆಟ್​ನಲ್ಲಿ ಆದ್ಯತೆ: ನಗರಗಳ ಅಭಿವೃದ್ಧಿಗೆ ಕೇಂದ್ರದ ಕೊಡುಗೆ ಶ್ಲಾಘನೀಯ - Union Budget 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.