ETV Bharat / opinion

ಸೈಬರ್​ ಕ್ರೈಂ: ಹೂಡಿಕೆ ವಂಚನೆಯ ವಿವಿಧ ಮೋಸಗಳಿವು: ಈ ಜಾಲದ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿಗಳು ಇಲ್ಲಿವೆ - Investment Scams

ಸೈಬರ್ ವಂಚಕರು ಜನರನ್ನು ಹೇಗೆಲ್ಲ ವಂಚಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Cyber Crimಆರ್ಥಿಕ ವಂಚನೆಯ ವಿವಿಧ ಮುಖಗಳು: ಎಚ್ಚೆತ್ತುಕೊಳ್ಳಬೇಕಿದೆ ಜನ, ಈ ಬಗ್ಗೆ ಹಿರಿಯ ಪೊಲೀಸ್​ ಅಧಿಕಾರಿಗಳು ಹೇಳುವುದೇನು?e
Cybಆರ್ಥಿಕ ವಂಚನೆಯ ವಿವಿಧ ಮುಖಗಳು: ಎಚ್ಚೆತ್ತುಕೊಳ್ಳಬೇಕಿದೆ ಜನ, ಈ ಬಗ್ಗೆ ಹಿರಿಯ ಪೊಲೀಸ್​ ಅಧಿಕಾರಿಗಳು ಹೇಳುವುದೇನು?er Crime (ETV Bharat)
author img

By ETV Bharat Karnataka Team

Published : May 21, 2024, 5:37 PM IST

Updated : May 21, 2024, 6:00 PM IST

ಆರ್ಥಿಕ ವಂಚನೆಯ ವಿವಿಧ ಮುಖಗಳು: ಎಚ್ಚೆತ್ತುಕೊಳ್ಳಬೇಕಿದೆ ಜನ, ಈ ಬಗ್ಗೆ ಹಿರಿಯ ಪೊಲೀಸ್​ ಅಧಿಕಾರಿಗಳು ಹೇಳುವುದೇನು? (ETV Bharat)

ಹೂಡಿಕೆ ಹಗರಣಗಳು: ಇಂದಿನ ದಿನಮಾನಗಳಲ್ಲಿ ಹಣ ಹೂಡಿಕೆ ಮಾಡಿಸಿ ವಂಚಿಸುವ ಹಗರಣಗಳ ಸಂಖ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಇಂಥ ಹಗರಣಗಳಲ್ಲಿ ಸಾಮಾನ್ಯವಾಗಿ ಒಂದು ರೂಪಾಯಿ ಹೂಡಿಕೆ ಮಾಡಿದರೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಭಾರಿ ಲಾಭದ ಭರವಸೆಯನ್ನು ಜನರಿಗೆ ನೀಡಲಾಗುತ್ತದೆ. ಇಂಥ ಆಮಿಷ ಜನರಿಗೆ ಬಹಳ ಆಕರ್ಷಕವಾಗಿ ಕಾಣಿಸುತ್ತದೆ. ಆದರೆ ಇದೊಂದು ಕುತಂತ್ರವಲ್ಲದೆ ಮತ್ತೇನೂ ಅಲ್ಲ. ಸೈಬರ್ ಅಪರಾಧಿಗಳು ತಮ್ಮ ತಂತ್ರಗಳಿಂದ ಆಮಿಷವನ್ನು ಇನ್ನಷ್ಟು ಉತ್ತಮವಾಗಿ ಕಾಣುವಂತೆ ಮಾಡುತ್ತಾರೆ ಮತ್ತು ಜನರನ್ನು ಆಕರ್ಷಿಸುತ್ತಾರೆ. ಜನರ ಹಣ ತಮ್ಮ ಖಾತೆಗೆ ಬರುತ್ತಲೇ ಈ ವಂಚಕರು ಕಣ್ಮರೆಯಾಗಿ ಬಿಡುತ್ತಾರೆ. ಇಂಥ ಹಗರಣಗಳು ಈಗ ಸಾಕಷ್ಟು ನಡೆಯುತ್ತಿವೆ. ಆದಾಗ್ಯೂ ಸೈಬರ್ ವಂಚನೆಯಲ್ಲಿ ಹಲವಾರು ವಿಧಾನಗಳ ಮೂಲಕ ಜನರ ಹಣವನ್ನು ಎಗರಿಸಲಾಗುತ್ತದೆ. ಕೆಲವೊಂದು ಪ್ರಮುಖ ಮಾದರಿಯ ವಂಚನೆಗಳು ಹೇಗಾಗುತ್ತವೆ ತಿಳಿಯೋಣ. ಅಂಥ ಒಂದಿಷ್ಟು ಉದಾಹರಣೆಗಳು ಇಲ್ಲಿವೆ.

1) ವೆಬ್ ಸೈಟ್ ಆಧಾರಿತ ಹಗರಣಗಳು: ಇತ್ತೀಚೆಗೆ ಸ್ಕ್ಯಾಮರ್​ಗಳು ಜನರನ್ನು ಮೋಸಗೊಳಿಸಲು ವೆಬ್ ಸೈಟ್​ಗಳನ್ನು ಬಳಸುತ್ತಿದ್ದಾರೆ. ಮುಗ್ಧ ಜನರನ್ನು ವಂಚಿಸಲು ಇವರು ಬೋಗಸ್​ ಆಫರ್​ಗಳನ್ನು ಜನರ ಮುಂದಿಡುತ್ತಾರೆ. ಉದಾಹರಣೆಗೆ ನೀವು ಬ್ರೌಸ್ ಮಾಡುವಾಗ ಪಾಪ್ ಒಂದು ಕಾಣಿಸಿಕೊಂಡು ಪ್ರಖ್ಯಾತ ಬ್ರಾಂಡಿನ ಮೊಬೈಲ್ ಅನ್ನು ಕಡಿಮೆ ಬೆಲೆಗೆ ಖರೀದಿಸಿ ಎಂಬ ಸಂದೇಶ ಕಾಣಿಸಬಹುದು. ಇದು ಸ್ಟಾಕ್ ಕ್ಲಿಯರೆನ್ಸ್ ಮಾರಾಟ ಎಂದು ನಿಮ್ಮನ್ನು ನಂಬಿಸಲಾಗುತ್ತದೆ. ನೀವು ಹೆಚ್ಚಿನ ಸಂಖ್ಯೆಯಲ್ಲಿ ಸರಕು ಖರೀದಿಸಿದರೆ ಇನ್ನೂ ಹೆಚ್ಚಿನ ಡಿಸ್ಕೌಂಟ್ ನೀಡಲಾಗುವುದು ಎಂದು ನಂಬಿಸಲಾಗುತ್ತದೆ. ಇಂಥ ಆಫರ್​ನಲ್ಲಿ ಫೋನ್ ಕೊಂಡು ಸಂತೋಷವಾಗಿದ್ದಾರೆ ಎಂದು ಚಿತ್ರಿಸುವ ಗ್ರಾಹಕರ ಚಿತ್ರಗಳನ್ನು ಸಹ ನಿಮಗೆ ತೋರಿಸಬಹುದು. ನೀವು ಇದನ್ನು ನಂಬಿ ಹಣ ಪಾವತಿಸಿದರೆ ನಿಮಗೆ ಚೊಂಬೇ ಗತಿ. ಹೈದರಾಬಾದ್​ನ ದೊಡ್ಡ ಸಾಫ್ಟ್​ವೇರ್ ಕಂಪನಿಯೊಂದರ ಎಕ್ಸಿಕ್ಯೂಟಿವ್ ಒಬ್ಬರು ತನ್ನ ಸಿಬ್ಬಂದಿಗೆ ಬಹುಮಾನವಾಗಿ ನೀಡುವ ಸಲುವಾಗಿ ಇಂಥ ಆಫರ್​ನಲ್ಲಿ 20 ಲಕ್ಷ ರೂ. ಮೌಲ್ಯದ ಪೋನ್​ಗಳನ್ನು ಆರ್ಡರ್ ಮಾಡಿದ್ದರು. ಆದರೆ ಫೋನ್ ಡೆಲಿವರಿ ಆಗಲಿಲ್ಲ ಮತ್ತು ಹಣವೂ ಹೋಯಿತು. ಕೊನೆಗೆ ಅವರು ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ.

ಆರ್ಥಿಕ ವಂಚನೆಯ ವಿವಿಧ ಮುಖಗಳು
ಆರ್ಥಿಕ ವಂಚನೆಯ ವಿವಿಧ ಮುಖಗಳು (ಆರ್ಥಿಕ ವಂಚನೆಯ ವಿವಿಧ ಮುಖಗಳು)

2) ವಿದೇಶೀ ವಿನಿಮಯ ವ್ಯಾಪಾರದ ಹೆಸರಲ್ಲಿ ವಂಚನೆ: ವಿದೇಶಿ ವಿನಿಮಯ (ವಿದೇಶಿ ವಿನಿಮಯ) ವ್ಯಾಪಾರದ ಹೆಸರಲ್ಲಿ ಜನರನ್ನು ವಂಚಿಸಲು ಸ್ಕ್ಯಾಮರ್​ಗಳು ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ (ವಿಒಐಪಿ) ಕರೆಗಳನ್ನು ಬಳಸುತ್ತಿದ್ದಾರೆ. ಇವರು ವಿದೇಶಿ ವಿನಿಮಯ ವ್ಯಾಪಾರ ಕಂಪನಿಗಳ ಪ್ರತಿನಿಧಿಗಳಂತೆ ನಟಿಸುತ್ತಾರೆ ಮತ್ತು ನೀವು ಅವರ ಬಳಿ ಹೂಡಿಕೆ ಮಾಡಿದರೆ ಭಾರಿ ಲಾಭ ನೀಡುವುದಾಗಿ ಭರವಸೆ ನೀಡುತ್ತಾರೆ. ಅಂತರರಾಷ್ಟ್ರೀಯ ವಹಿವಾಟುಗಳು ಹೆಚ್ಚಾಗುತ್ತಿದ್ದು ಕರೆನ್ಸಿ ವಿನಿಮಯಕ್ಕೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಇದರಲ್ಲಿ ದೊಡ್ಡ ಲಾಭವಿದೆ ಎಂದು ಅವರು ನಿಮ್ಮನ್ನು ನಂಬಿಸುತ್ತಾರೆ. ಜನರಿಂದ ಹಣ ಹೂಡಿಕೆ ಮಾಡಿಸಿಕೊಳ್ಳಲು ಅವರು ನಕಲಿ ವೆಬ್​ಸೈಟ್​ಗಳು ಮತ್ತು ಬ್ಯಾಂಕ್ ಖಾತೆಗಳನ್ನು ತೆರೆಯುತ್ತಾರೆ. ಗ್ರಾಹಕರ ವಿಶ್ವಾಸ ಗಳಿಸಲು, ಅವರು ಆರಂಭದಲ್ಲಿ ಸಣ್ಣ ಪ್ರಮಾಣದ ಕಮಿಷನ್ ಪಾವತಿಸುತ್ತಾರೆ. ಇದರಿಂದ ಜನ ಮತ್ತಷ್ಟು ಹೆಚ್ಚಿನ ಪ್ರಮಾಣದ ಹೂಡಿಕೆ ಮಾಡುತ್ತಾರೆ. ಹೀಗೆ ದೊಡ್ಡ ಮೊತ್ತದ ಹೂಡಿಕೆ ಬರುತ್ತಿರುವಂತೆಯೇ ಅವರು ಕಣ್ಮರೆಯಾಗಿ ಬಿಡುತ್ತಾರೆ. ಗಚಿಬೌಲಿಯ ಸಾಫ್ಟ್​ವೇರ್ ಎಂಜಿನಿಯರ್ ಒಬ್ಬರು ಇಂಥ ಹಗರಣದಿಂದ 73 ಲಕ್ಷ ರೂ. ಕಳೆದುಕೊಂಡಿದ್ದಾರೆ.

3) ಫ್ರಾಂಚೈಸಿ ನೀಡುವುದಾಗಿ ವಂಚನೆ: ಅನೇಕ ಕಂಪನಿಗಳು ಈಗ ತಮ್ಮ ಶಾಖೆಗಳನ್ನು ಆರಂಭಿಸಲು ಫ್ರಾಂಚೈಸಿ ನೀಡುವುದು ಸಾಮಾನ್ಯ. ಆದರೆ ಸ್ಕ್ಯಾಮರ್​ಗಳು ನಕಲಿ ಫ್ರಾಂಚೈಸಿ ಆಫರ್​ಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಹೀಗಾಗಿ ಜನ ಜಾಗರೂಕರಾಗಿರಬೇಕಾಗುತ್ತದೆ. ವಂಚಕರು ತಾವು ಪ್ರಸಿದ್ಧ ಕಂಪನಿಗಳ ಫ್ರಾಂಚೈಸಿ ನೀಡುವುದಾಗಿ ಆಫರ್ ಮಾಡುತ್ತಾರೆ. ಇದಕ್ಕಾಗಿ ಅಸಲಿಯಂತೆ ಕಾಣೀಸುವ ದಾಖಲೆಗಳನ್ನು ಸಹ ಅವರು ನಿಮಗೆ ತೋರಿಸುತ್ತಾರೆ. ಆದರೆ ಒಂದೊಮ್ಮೆ ನೀವು ಫ್ರಾಂಚೈಸಿಗಾಗಿ ಹಣ ಪಾವತಿಸಿದರೆ ಅವರು ಹಣ ತೆಗೆದುಕೊಂಡು ಮಾಯವಾಗಿ ಬಿಡುತ್ತಾರೆ. ಹೈದರಾಬಾದ್​ನಲ್ಲಿ ವ್ಯಕ್ತಿಯೊಬ್ಬರು ಕೆಎಫ್​ಸಿ ಫ್ರಾಂಚೈಸಿ ಪಡೆಯುವ ಹೆಸರಿನಲ್ಲಿ 26.27 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಇನ್ನೊಬ್ಬ ವ್ಯಕ್ತಿ ಗ್ಯಾಸ್ ಡೀಲರ್ ಶಿಪ್ ಹೆಸರಲ್ಲಿ 45 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.

4) ಪಾರ್ಟ್​ ಟೈಮ್ ಜಾಬ್ ಹೆಸರಲ್ಲಿ ವಂಚನೆ: ವಂಚಕರು ಪಾರ್ಟ್​ ಟೈಮ್ ಜಾಬ್ ಹೆಸರಲ್ಲಿ ಉದ್ಯೋಗಾಕಾಂಕ್ಷಿಗಳನ್ನು ದೊಡ್ಡ ಪ್ರಮಾಣದಲ್ಲಿ ವಂಚಿಸುತ್ತಿದ್ದಾರೆ. ಪ್ರಸಿದ್ಧ ಕಂಪನಿಯ ಪಾರ್ಟ್​ ಟೈಮ್ ಜಾಬ್​ ಕೊಡಿಸುವುದಾಗಿ ಇವರು ಆನ್​ಲೈನ್​ನಲ್ಲಿ ಜಾಹೀರಾತು ಹಾಕುತ್ತಾರೆ. ನಂತರ ಕೆಲಸ ಬೇಕೆಂದು ಕೇಳಿದ ಉದ್ಯೋಗಾಕಾಂಕ್ಷಿಗಳಿಗೆ ನಕಲಿ ನೇಮಕಾತಿ ಪತ್ರಗಳನ್ನು ಸಹ ಕಳುಹಿಸುತ್ತಾರೆ. ಯಾವುದೋ ವಿಮರ್ಶೆ ಬರೆಯುವ ಮೂಲಕ ಅಥವಾ ಕತೆ ಬರೆಯುವ ಮೂಲಕ ಹಣ ಗಳಿಸಬಹುದು, ಗೂಗಲ್ ರಿವೀವ್ ಬರೆದು ಹಣ ಗಳಿಸಬಹುದು ಎಂದು ಇವರು ನಂಬಿಸುತ್ತಾರೆ. ಆದರೆ ಪಾರ್ಟ್​ ಟೈಮ್ ಜಾಬ್​ ಪಡೆಯಲು ಇಂಥವರಿಗೆ ಹಣ ಪಾವತಿಸಿದರೆ ಕೆಲಸ ಸಿಗುವುದು ದೂರದ ಮಾತು, ಕೊಟ್ಟ ಹಣವೂ ಹೋಗುತ್ತದೆ. ಇಂಥ ಹಗರಣವೊಂದಕ್ಕೆ ಬಲಿಯಾಗಿ ಸರ್ಕಾರಿ ಉದ್ಯೋಗಿಯೊಬ್ಬರು 84.9 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.

ಸೈಬರ್ ವಂಚಕರು ಜನರನ್ನು ಹೇಗೆಲ್ಲ ವಂಚಿಸುತ್ತಿದ್ದಾರೆ
ಸೈಬರ್ ವಂಚಕರು ಜನರನ್ನು ಹೇಗೆಲ್ಲ ವಂಚಿಸುತ್ತಿದ್ದಾರೆ (ETV Bharat)

5) ಷೇರು ಮಾರುಕಟ್ಟೆಯಲ್ಲಿ ಲಾಭ ಕೊಡಿಸುವುದಾಗಿ ವಂಚನೆ: ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಸ್ಕ್ಯಾಮರ್​ಗಳು ಷೇರು ಮಾರುಕಟ್ಟೆಯ ಹೆಸರಲ್ಲಿಯೂ ಈಗ ಜನರನ್ನು ವಂಚಿಸುತ್ತಿದ್ದಾರೆ. ಈ ವಂಚಕರು ತಾವು ಸ್ಟಾಕ್​ ಬ್ರೋಕರ್​ಗಳೆಂದು ಹೇಳಿಕೊಂಡು ಆನ್​ಲೈನ್​ನಲ್ಲಿ ಜಾಹೀರಾತು ನೀಡುತ್ತಾರೆ. ಯಾವ ಕಂಪನಿಯ ಷೇರು ಬೆಲೆ ಹೆಚ್ಚಾಗುತ್ತವೆ ಎಂಬ ಬಗ್ಗೆ ತಮಗೆ ಮಾಹಿತಿ ಇರುವುದಾಗಿ ಹೇಳಿ ತ್ವರಿತ ಲಾಭದ ಭರವಸೆ ನೀಡುತ್ತಾರೆ. ನೀವು ಬೆಳಿಗ್ಗೆ ಹೂಡಿಕೆ ಮಾಡಿದರೆ, ಸಂಜೆಯ ವೇಳೆಗೆ ಲಕ್ಷಾಂತರ ರೂಪಾಯಿ ಆದಾಯ ಪಡೆಯಬಹುದು ಎಂದು ಹೇಳುತ್ತಾರೆ. ಆರಂಭದಲ್ಲಿ ನಿಮ್ಮ ಖಾತೆಗೆ ಒಂದಿಷ್ಟು ಲಾಭಾಂಶವನ್ನು ಕೂಡ ಅವರು ಹಾಕುತ್ತಾರೆ. ಅಲ್ಲದೆ ಅಪ್ಲಿಕೇಶನ್​ನಲ್ಲಿ ರಜಿಸ್ಟರ್ ಮಾಡಲು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಹ ಅವರು ಪಡೆಯುತ್ತಾರೆ. ಆದರೆ ಲಾಭ ಬಂದಿದೆ ಎಂದು ನೀವು ಹಣ ಹಿಂಪಡೆಯಲು ಯತ್ನಿಸಿದಾಗ ಅದು ಸಾಧ್ಯವಾಗುವುದಿಲ್ಲ. ಆಗ ಮತ್ತಷ್ಟು ಹೂಡಿಕೆ ಮಾಡಿದರೆ ಲಾಭದ ಹಣವನ್ನು ಪಡೆಯಬಹುದು ಎಂದು ನಂಬಿಸಿ ಮತ್ತೆ ಹೂಡಿಕೆ ಮಾಡಿಸಿಕೊಳ್ಳುತ್ತಾರೆ. ಆದರೆ ಕೊನೆಗೆ ಎಲ್ಲ ಹಣವನ್ನು ಎಗರಿಸಿ ವಂಚಕರು ಕಣ್ಮರೆಯಾಗುತ್ತಾರೆ. ಇಂಥ ಹಗರಣಕ್ಕೆ ಬಲಿಯಾದ ಹೈದರಾಬಾದಿನ ವ್ಯಕ್ತಿಯೊಬ್ಬರು 36 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

6) ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ: ಕಳೆದ ಕೆಲ ವರ್ಷಗಳಲ್ಲಿ ಕ್ರಿಪ್ಟೋಕರೆನ್ಸಿ ಲಾಭ ಗಳಿಸುವ ಆಕರ್ಷಕ ಮಾರ್ಗವಾಗಿ ಕಾಣಿಸಿದೆ. ಆದರೆ ವಂಚಕರು ಇದನ್ನೇ ಬಂಡವಾಳ ಮಾಡಿಕೊಂಡು ಜನರನ್ನು ದೊಡ್ಡ ಪ್ರಮಾಣದಲ್ಲಿ ವಂಚಿಸುತ್ತಿದ್ದಾರೆ. ಆರಂಭದಲ್ಲಿ ವಂಚಕರು ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮೂಲಕ ಜನರನ್ನು ಸಂಪರ್ಕಿಸುತ್ತಾರೆ ಮತ್ತು ದೊಡ್ಡ ಲಾಭದ ಭರವಸೆ ನೀಡುತ್ತಾರೆ. ಒಮ್ಮೆ ಹೂಡಿಕೆ ಮಾಡಿದರೆ ಸಾಕು ತ್ವರಿತವಾಗಿ ಲಾಭ ಗಳಿಸಬಹುದು ಎಂದು ನಂಬಿಸುತ್ತಾರೆ. ಆದರೆ ಒಮ್ಮೆ ನೀವು ಹೂಡಿಕೆ ಮಾಡಿದ ನಂತರ ನಿಮ್ಮ ಹಣವನ್ನು ಹಿಂಪಡೆಯಲು ಸಾಧ್ಯವೇ ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ಮತ್ತಷ್ಟು ಹೂಡಿಕೆ ಮಾಡುವಂತೆ ಅವರು ಜನರನ್ನು ಪ್ರೆರೇಪಿಸಿ ಎಲ್ಲ ಹಣ ಬಾಚಿಕೊಂಡು ಪರಾರಿಯಾಗುತ್ತಾರೆ. ಹೈದರಾಬಾದ್​ನ ಕಾಪ್ರಾ ಪ್ರದೇಶದ ಐಟಿ ಉದ್ಯೋಗಿಯೊಬ್ಬರು ಇಂಥ ಹಗರಣದಲ್ಲಿ 78 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.

7) ಪೊಂಜಿ ಸ್ಕೀಮ್​ಗಳು: ಪೊಂಜಿ ಸ್ಕೀಮ್ ಎಂಬುದು ಜನರನ್ನು ವಂಚಿಸುವ ಮತ್ತೊಂದು ಮಾರ್ಗವಾಗಿದೆ. ಇಂಥ ಹಗರಣದಲ್ಲಿ ವಂಚಕರು ತಾವು ಸ್ಟಾಕ್ ಬ್ರೋಕಿಂಗ್ ಕಂಪನಿಯವರು ಅಥವಾ ಮತ್ತಾವುದೋ ಹೂಡಿಕೆ ಕಂಪನಿಯವರು ಎಂದು ನಂಬಿಸುತ್ತಾರೆ. ಜನ ತಾವು ಹೂಡಿಕೆ ಮಾಡುವುದಲ್ಲದೆ ಬೇರೆಯವರಿಂದ ಹೂಡಿಕೆ ಮಾಡಿಸಿದರೆ ದೊಡ್ಡ ಮೊತ್ತದ ಲಾಭ ಬರುವುದಾಗಿ ನಂಬಿಸುತ್ತಾರೆ. ಹೀಗೆ ಒಬ್ಬರಿಂದ ಮತ್ತೊಬ್ಬರನ್ನು ಹೂಡಿಕೆ ಮಾಡಿಸಿಕೊಳ್ಳುತ್ತ ದೊಡ್ಡ ಮೊತ್ತ ಸಂಗ್ರಹ ಮಾಡಿಕೊಳ್ಳುತ್ತಾರೆ. ನಂತರ ಒಂದು ದಿನ ಕಣ್ಮರೆಯಾಗುತ್ತಾರೆ. ಒಟ್ಟಾರೆಯಾಗಿ ಒಬ್ಬನಿಂದ ಹೂಡಿಕೆ ಮಾಡಿಸಿಕೊಂಡು ಅವನಿಗೆ ಕಮಿಷನ್ ನೀಡಲು ಅವನಿಂದಲೇ ಮತ್ತೊಬ್ಬನು ಹೂಡಿಕೆ ಮಾಡುವಂತೆ ಮಾಡುವುದು ಪೊಂಜಿ ಸ್ಕೀಮ್​ನ ತಿರುಳಾಗಿದೆ. ಕೊನೆಗೊಂದು ದಿನ ಈ ಚಕ್ರ ಕುಸಿದು ಬೀಳುತ್ತದೆ ಮತ್ತು ವಂಚಕರು ದೊಡ್ಡ ಮೊತ್ತದೊಂದಿಗೆ ಪರಾರಿಯಾಗುತ್ತಾರೆ.

ಒಟ್ಟು ದಾಖಲಾದ ಪ್ರಕರಣಗಳು: 20,500

ಒಟ್ಟು ನಷ್ಟ ರೂ. 582,30,82,984.

Investment Scams story
ಸೈಬರ್​ ಕ್ರೈಂ ಮಾಹಿತಿ (ETV Bharat)
Investment Scams story
ಸೈಬರ್​ ಕ್ರೈಂ ಮಾಹಿತಿ (ETV Bharat)
Investment Scams story
ಸೈಬರ್​ ಕ್ರೈಂ ಮಾಹಿತಿ (ETV Bharat)

ಉನ್ನತ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಹೇಳುವುದು ಏನು? : ಈಟಿವಿ ಭಾರತ ಜೊತೆ ಮಾತನಾಡಿದ ಸಿಐಡಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿ ಶಿಖಾ ಗೋಯೆಲ್, ಇತ್ತೀಚೆಗೆ ಸ್ಟಾಕ್​ ಟ್ರೇಡಿಂಗ್​ ವಂಚನೆ ಎಂಬುದು ದೊಡ್ಡ ಸೈಬರ್​ ವಂಚನೆಯ ಮೂಲ ಎಂಬಂತಾಗಿದೆ ಎಂದು ಹೇಳಿದ್ದಾರೆ. "ಸ್ಟಾಕ್, ಐಪಿಒ ಹೂಡಿಕೆಯಲ್ಲಿ ನಾವು ನಿಮ್ಮ ಹಣವನ್ನು ದ್ವಿಗುಣಗೊಳಿಸುತ್ತೇವೆ ಎಂದು ಹೇಳುವ ಮೂಲಕ ವಂಚಕರು ನಿಮಗೆ ಆಮಿಷ ಒಡ್ಡುತ್ತಾರೆ ಎನ್ನುವುದು ಹಿರಿಯ ಪೊಲೀಸ್​ ಅಧಿಕಾರಿಗಳ ಅನಿಸಿಕೆ. ವಂಚಕರು ಮೊದಲು ನಿಮಗೆ ವಾಟ್ಸ್​ಆ್ಯಪ್​ ಮೂಲಕ ಸಂವಹನ ನಡೆಸುತ್ತಾರೆ, ನಿಮಗೆ ವ್ಯಾಪಾರ ಸಲಹೆಗಳನ್ನು ನೀಡುವುದಾಗಿ ಹೇಳಿಕೊಳ್ಳುತ್ತಾರೆ, ಹೂಡಿಕೆ ಮಾಡುವುದು ಹೇಗೆ , ಎಷ್ಟು ಹೂಡಿಕೆ ಮಾಡಬೇಕು, ಯಾವ IPO, ಯಾವುದು ಟ್ರೆಂಡಿಂಗ್ ಆಗಿದೆ, ಯಾವುದು ಹೆಚ್ಚು ಹಣವನ್ನು ಹೊಂದಿದೆ, ಅಲ್ಲಿ ನೀವು ಲಾಭ ಪಡೆಯಬಹುದು ಎಂಬ ಬಗ್ಗೆ ವಿಶ್ವಾಸ ಬರುವ ಹಾಗೆ ವಿವರಣೆ ನೀಡುತ್ತಾರೆ. ಈ ಬಗ್ಗೆ ಹೂಡಿಕೆ ಮಾಡಲು ಇಷ್ಟ ಇರುವವರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಸಿಐಡಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿ ಶಿಖಾ ಗೋಯಲ್​​ ಹೇಳುವ ಪ್ರಕಾರ, "ಯಾರು ಹಣ ತೊಡಗಿಸಲು ಇಷ್ಟ ಇದೆ ಎಂಬುದನ್ನು ವಾಟ್ಸ್​ಆ್ಯಪ್​ ಮೂಲಕ ಸಂಪರ್ಕಿಸಿರುವರೊಂದಿಗೆ ಸಂಪರ್ಕ ಮಾಡಲು ಶುರು ಮಾಡಿದ ಬಳಿಕ, ಮೊದಲಿಗೆ ಅಸಲಿ ವೆಬ್​ಸೈಟ್​ಗಳ ಮೂಲಕ ತಮ್ಮ ನಕಲಿ ವೆಬ್​​ಸೈಟ್​ಗಳನ್ನ ಕ್ಲೋನ್​ ಮಾಡಿ ನಂಬಿಕೆ ಬರುವಂತೆ ಮಾಡುತ್ತಾರೆ. ಆ ಬಳಿಕ ಕೆಲವು ಪ್ರಸಿದ್ಧ ಕಂಪನಿಗಳ ಕ್ಲೋನ್ ಮಾಡಿದ - ನಕಲಿ ವೆಬ್‌ಸೈಟ್‌ನಲ್ಲಿ ಖಾತೆಗಳನ್ನು ರಚಿಸುವಂತೆ ಅವರ ಬಲಿಗೆ ಬಿದ್ದ ಸಂತ್ರಸ್ತರನ್ನು ಪ್ರೇರೇಪಿಸುತ್ತಾರೆ. ಒಂದೊಮ್ಮೆ ಖಾತೆ ರಚಿಸಿದರೆ, ನೀವು ಆ ಸ್ಟಾಕ್‌ಗಳನ್ನು ಖರೀದಿಸಿದ್ದೀರಿ ಎಂದು ತೋರಿಸುತ್ತಾರೆ. ಅವರು ದೊಡ್ಡ ಪ್ರಮಾಣದಲ್ಲಿ ಷೇರುಗಳನ್ನು ಖರೀದಿಸುವಂತೆ ಪ್ರೇರೇಪಿಸುತ್ತಾರೆ. 20-30 ಲಕ್ಷ ಮೌಲ್ಯದ ಷೇರುಗಳನ್ನು ಖರೀದಿಸಿದರೆ ಅವುಗಳು ನಿಮಗೆ ಕಡಿಮೆ ದರದಲ್ಲಿ ದೊರೆಯುತ್ತವೆ, ಇದರಿಂದ ನೀವು ದೊಡ್ಡ ಮಟ್ಟದ ಲಾಭ ಗಳಿಸಬಹುದು ಎಂದು ನಿಮ್ಮನ್ನು ನಂಬಿಸುತ್ತಾರೆ. ಆಗ ನೀವು ಹೆಚ್ಚಿನ ಲಾಭದ ಆಸೆಗೆ ಬಿದ್ದು ಅವುಗಳನ್ನು ಖರೀದಿಸುವಂತೆ ವಂಚಕರು ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಹಣ ದ್ವಿಗುಣದ ಆಮಿಷ: ರಾಜ್ಯ ಸೈಬರ್ ಸೆಕ್ಯುರಿಟಿ ಬ್ಯೂರೋ ಪ್ರತಿದಿನ ಇಂತಹ 50 ರಿಂದ 60 ಕರೆಗಳನ್ನು ಸ್ವೀಕರಿಸುತ್ತಿದೆ ಎಂದು ಗೋಯಲ್ ಹೇಳಿದ್ದಾರೆ. "ಜನರು ತ್ವರಿತವಾಗಿ ಹಣ ದ್ವಿಗುಣ ಮಾಡಬಹುದು ಎಂಬ ಆಮಿಷಕ್ಕೆ ಬಲಿಯಾಗುತ್ತಾರೆ" ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸ್ಟಾಕ್ ಟ್ರೇಡಿಂಗ್ ಮೂಲಗಳು: ಡಿಮ್ಯಾಟ್ ಖಾತೆಗಳು ಸ್ಟಾಕ್ ಟ್ರೇಡಿಂಗ್‌ಗೆ ಮೂಲಾಧಾರಗಳಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಯಾವುದೇ ಕಂಪನಿಯು ತಮ್ಮ ಷೇರುಗಳನ್ನು ಖರೀದಿಗಾಗಿ ಖಾತೆ ತೆರೆಯಲು ಅವಕಾಶ ನೀಡುವುದಿಲ್ಲ, ಏಕೆಂದರೆ ಷೇರುಗಳನ್ನು ವಿನಿಮಯದ ಮೂಲಕ ಮಾತ್ರವೇ ಮಾರಾಟ ಮಾಡಬಹುದು. ಡಿಮ್ಯಾಟ್ ಖಾತೆಯ ಮೂಲಕವಲ್ಲದೇ ಬೇರೆ ರೂಪದಲ್ಲಿ ಯಾವುದೇ ಸ್ಟಾಕ್​ಗಳನ್ನು ಖರೀದಿಸಲು ಬರುವುದಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕಿ ಶಿಖಾ ಗೋಯೆಲ್ ಹೇಳಿದ್ದಾರೆ.

ಯಾವುದೇ ಸ್ಟಾಕ್​ ಖರೀದಿ ಮಾಡಬೇಕು ಎಂದು ಎಣಿಸಿದರೆ, ಕಂಪನಿಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಬೇಕು. ಮತ್ತು ಹಲವು ಆಕರಗಳ ಮೂಲಕ ಕಂಪನಿಯ ಸ್ಟ್ರೆಂತ್​ - ವೀಕ್​​ನೆಸ್​​​​ ಬಗ್ಗೆ ಭವಿಷ್ಯದಲ್ಲಿ ಕಂಪನಿ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡು ಸ್ಟಾಕ್​ ಮಾರ್ಕೆಟ್​ನಲ್ಲಿ ಹೂಡಿಕೆ ಮಾಡಬೇಕು ಎಂದು ಎಡಿಜಿಪಿ ಸಲಹೆ ನೀಡಿದರು. ಷೇರುಗಳನ್ನು ಖರೀದಿಸಲು ಯಾವುದೇ ಖಾಸಗಿ ಖಾತೆಗಳಿಗೆ ಹಣವನ್ನು ವರ್ಗಾಯಿಸದಂತೆ ಅವರು ಷೇರು ಪೇಟೆಯಲ್ಲಿ ಹಣ ತೊಡಗಿಸಬೇಕು ಎಂಬ ಮನಸಿರುವವರಿಗೆ ಸಲಹೆ ರೂಪದ ಎಚ್ಚರಿಕೆಯನ್ನು ನೀಡಿದ್ದಾರೆ. ಸ್ಟಾಕ್​ ಮಾರ್ಕೆಟ್​ನಲ್ಲಿ ಹೂಡಿಕೆ ಮಾಡುವ ಬಗ್ಗೆ ಪೂರ್ವಾಪರಗಳನ್ನು ತಿಳಿದುಕೊಳ್ಳಬೇಕು. ಮೂಲ ಮುನ್ನೆಚ್ಚರಿಕೆಗಳು ತೆಗೆದುಕೊಳ್ಳುವುದರಿಂದ ಹೂಡಿಕೆದಾರರನ್ನು ವಂಚನೆಯಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ಚಪ್ಪಲಿ ವ್ಯಾಪಾರಿಗಳ ಮನೆಗಳ ಮೇಲೆ ಐಟಿ ದಾಳಿ: 100 ಕೋಟಿಗೂ ಹೆಚ್ಚು ನಗದು, ಚಿನ್ನಾಭರಣ ಪತ್ತೆ: ಹಣ ಎಣಿಕೆ ಮಾಡಿ ಸುಸ್ತಾದ ಯಂತ್ರಗಳು!! - IT Raids On Agra Shoe Trader

ಇಂದು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ: ಜಾಗತಿಕ ಭಯೋತ್ಪಾದನೆಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ? - National Anti Terrorism Day

Last Updated : May 21, 2024, 6:00 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.