ಇತ್ತೀಚಿನ ವಾರಗಳಲ್ಲಿ ಪಾಕಿಸ್ತಾನದ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಡೆಯಲ್ಲಿ ಬದಲಾವಣೆಯ ಲಕ್ಷಣಗಳು ಕಂಡು ಬಂದಿವೆ. ಭದ್ರತಾ ಕ್ಷೇತ್ರ ಮತ್ತು ಭದ್ರತೆಯ ಆಚೆಗಿನ ಪ್ರದೇಶಗಳಲ್ಲಿ ಪಾಕಿಸ್ತಾನದೊಂದಿಗೆ ತನ್ನ ಸಂಬಂಧವನ್ನು ಮರುಹೊಂದಿಸುವ ಉದ್ದೇಶವು ಅಮೆರಿಕದ ಕಡೆಯಿಂದ ಇದೆಯೇ ಎಂಬ ಚರ್ಚೆಯನ್ನು ಇದು ಹುಟ್ಟುಹಾಕಿದೆ.
ಪಾಕಿಸ್ತಾನದಲ್ಲಿ ಸಂಸತ್ತಿನ ಚುನಾವಣೆಗಳು ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷದ ನಾಯಕ ಶಹಬಾಜ್ ಷರೀಫ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಈ ಅಮೆರಿಕದ ಸೂಚನೆಗಳು ಬಂದಿವೆ. ಇದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ದಶಕಗಳಿಂದ ಪಾಕಿಸ್ತಾನವು ಅಮೆರಿಕ ಭದ್ರತಾ ಮಾಪನದಲ್ಲಿ ಪ್ರಮುಖ ಸ್ಥಾನ ಹೊಂದಿದೆ ಎಂದು ತಿಳಿಯಬೇಕು. ವಿಶೇಷವಾಗಿ ಅಫ್ಘಾನಿಸ್ತಾನದಲ್ಲಿ ಯುಎಸ್/ನಾಟೋ ವಿಸ್ತರಣೆ ಸಂದರ್ಭದಲ್ಲಿ ಎಂಬುವುದು ಇಲ್ಲಿ ಸ್ಮರಿಸಬಹದು.
ಅಫ್ಘಾನಿಸ್ತಾನದಿಂದ ಅಮೆರಿಕವು ಅನೌಪಚಾರಿಕ ಮತ್ತು ಅವಸರದ ವಾಪಸಾತಿ ಮತ್ತು 2021ರ ಆಗಸ್ಟ್ 15ರಂದು ತಾಲಿಬಾನ್ ಅಧಿಕಾರಕ್ಕೆ ಮರಳುವುದರೊಂದಿಗೆ ಪರಿಸ್ಥಿತಿಯು ಬದಲಾಗಿದೆ. ಅಫ್ಘಾನಿಸ್ತಾನದಿಂದ ಅಮೆರಿಕದ ವಾಪಸಾತಿಯು ಜೋ ಬೈಡನ್ ಜನಪ್ರಿಯತೆಯ ಮೇಲೆ ಪರಿಣಾಮ ಬೀರಿತ್ತು. ಯಾಕೆಂದರೆ, 2021ರ ಜನವರಿಯಲ್ಲಿ ಅಮೆರಿಕ ಅಧ್ಯಕ್ಷರಾಗಿ ಬೈಡನ್ ಅಧಿಕಾರ ವಹಿಸಿಕೊಂಡ ಕೆಲ ತಿಂಗಳಲ್ಲೇ ಅಲ್ಲಿಂದ ವಾಪಸ್ ಆಗಿತ್ತು. ಆದರೆ, ಇವರ ಹಿಂದಿನ ಅಧ್ಯಕ್ಷ ಟ್ರಂಪ್ ಅಧಿಕಾರಾವಧಿಯಲ್ಲಿ ನ್ಯಾಟೋ ಹಿಂತೆಗೆದುಕೊಳ್ಳುವಿಕೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಇಲ್ಲಿಂದ ಮುಂದಕ್ಕೆ ಅಧ್ಯಕ್ಷ ಬೈಡನ್ ಪಾಕಿಸ್ತಾನದ ನಾಯಕತ್ವದ ಕಡೆಗೆ ಶೀತಲದ ಹೆಜ್ಜೆಗಳನ್ನು ಮುಂದುವರೆಸಿದರು. ಇದು ಆಗಿನ ಪ್ರಧಾನಿಗಳಾದ ಇಮ್ರಾನ್ ಖಾನ್ ಅಥವಾ ಶಹಬಾಜ್ ಷರೀಫ್ ಅವರೊಂದಿಗೆ ಬೈಡನ್ ಹೆಚ್ಚು ಸಂವಹನ ನಡೆಸಲಿಲ್ಲ.
ಅಮೆರಿಕ ಜೊತೆಗಿನ ಪಾಕಿಸ್ತಾನದ ಸಂಬಂಧಗಳಲ್ಲಿ ಭೌಗೋಳಿಕ ಅರ್ಥಶಾಸ್ತ್ರ ಮರುಹೊಂದಿಸುವ ಇಮ್ರಾನ್ ಖಾನ್ ಇಚ್ಛೆಗೆ ಬೈಡನ್ ಪ್ರತಿಕ್ರಿಯಿಸಲಿಲ್ಲ. 2022ರ ಅಕ್ಟೋಬರ್ನಲ್ಲಿ ಬೈಡನ್ ಪಾಕಿಸ್ತಾನವು ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದಿದ್ದರು. ಅಲ್ಲದೇ, ಪಾಕಿಸ್ತಾನದ ಪರಮಾಣು ಸುರಕ್ಷತಾ ಶಿಷ್ಟಾಚಾರಗಳ ಬಗ್ಗೆ ಪ್ರಶ್ನಿಸಿದ್ದರು. ಏತನ್ಮಧ್ಯೆ, ಪಾಕಿಸ್ತಾನ ಮತ್ತು ತಾಲಿಬಾನ್ ನಡುವೆ ಗಡಿಗಳು, ಡ್ಯುರಾಂಡ್ ಲೈನ್‌ನಲ್ಲಿ ಉದ್ವಿಗ್ನತೆ ಬೆಳೆಯಿತು. ಇದರರ್ಥ, ಅಮೆರಿಕದ ಆಜ್ಞೆಯ ಮೇರೆಗೆ ತಾಲಿಬಾನ್‌ನ ಮೇಲೆ ಪ್ರಭಾವ ಬೀರುವ ಪಾಕಿಸ್ತಾನದ ಸಾಮರ್ಥ್ಯವು ಕಡಿಮೆಯಾಗಿದೆ ಎಂದಾಗಿತ್ತು.
2021ರಲ್ಲಿ ಅಫ್ಘಾನಿಸ್ತಾನದ ಕುಸಿತದ ನಂತರ ಅಮೆರಿಕದ ದೃಷ್ಟಿಕೋನದಿಂದ ಪಾಕಿಸ್ತಾನವು ಈ ಪ್ರದೇಶದಲ್ಲಿ ತನ್ನ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ ಎಂದು ಸೂಕ್ಷ್ಮವಾಗಿ ಊಹಿಸಬಹುದು. ಸರಿಯಾಗಿ ಹೇಳಬೇಕೆಂದರೆ, ಅಮೆರಿಕದ ಎರಡು ಹಳಿಗಳ ನೀತಿಯ ಭಾಗವಾಗಿ ಬೈಡನ್ ಪಾಕಿಸ್ತಾನಿ ನಾಯಕತ್ವವನ್ನು ಶಾಂತಗೊಳಿಸುವ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಭವಿಷ್ಯಕ್ಕಾಗಿ ಬಾಗಿಲು ತೆರೆಯಲು ಪಾಕಿಸ್ತಾನವನ್ನು ತೊಡಗಿಸಿಕೊಳ್ಳುವುದನ್ನು ಮುಂದುವರೆಸಿದ್ದಾರೆ.
2024ರ ಮಾರ್ಚ್ ತಿಂಗಳ ಆರಂಭದಲ್ಲಿ ನವಾಜ್ ಷರೀಫ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲ ವಾರಗಳಲ್ಲೇ, ಅವರಿಗೆ ಬೈಡನ್ ವೈಯಕ್ತಿಕ ಪತ್ರ ಬರೆಯುವ ಮೂಲಕ ತಮ್ಮ ನಡೆಯಲ್ಲಿ ಮೊದಲ ಮಹತ್ವದ ಬದಲಾವಣೆ ತೋರಿ, ಭದ್ರತೆಗೆ ಮತ್ತೊಮ್ಮೆ ಒತ್ತು ನೀಡಿಸಿದರು. ಅಲ್ಲದೇ, ನಮ್ಮ ರಾಷ್ಟ್ರಗಳ ನಡುವಿನ ನಿರಂತರ ಪಾಲುದಾರಿಕೆಯು ನಮ್ಮ ಜನರ ಮತ್ತು ಪ್ರಪಂಚದಾದ್ಯಂತದ ಜನರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ನಿರ್ಣಾಯಕವಾಗಿದೆ. ನಮ್ಮ ಕಾಲದ ಅತ್ಯಂತ ಜಾಗತಿಕ ಮತ್ತು ಪ್ರಾದೇಶಿಕ ಸವಾಲುಗಳನ್ನು ನಿಭಾಯಿಸಲು ಅಮೆರಿಕವು ಪಾಕಿಸ್ತಾನದೊಂದಿಗೆ ನಿಲ್ಲುವುದನ್ನು ಮುಂದುವರಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆರೋಗ್ಯ ಭದ್ರತೆ, ಎಲ್ಲರಿಗೂ ಶಿಕ್ಷಣ, ಪರಿಸರ ಇತ್ಯಾದಿಗಳ ಬಗ್ಗೆಯೂ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಪಾಕಿಸ್ತಾನದ ನಾಯಕತ್ವಕ್ಕೆ ಬೈಡನ್ ಈ ಸಂದೇಶವು ತಮ್ಮ ನಾಲ್ಕು ವರ್ಷಗಳ ಅವಧಿಯ ಅಂತ್ಯದ ವೇಳೆಗೆ ರವಾನೆಯಾಗಿದೆ. ಆದ್ದರಿಂದ ಇದನ್ನು ದೇಶೀಯ ಕ್ಷೇತ್ರಗಳನ್ನು ಪರಿಹರಿಸಲು ರಾಜಕೀಯವಾಗಿ ಪ್ರೇರಿತ ಕ್ರಮವಾಗಿ ಬದಿಗೆ ಇರಿಸಲಾಗುತ್ತಿದೆ. ಆದಾಗ್ಯೂ, ಇಸ್ರೇಲ್ - ಹಮಾಸ್ ಸಂಘರ್ಷ ಮತ್ತು ಇರಾನ್ ಮತ್ತು ಇಸ್ರೇಲ್ ನಡುವಿನ ಸಂಬಂಧಗಳು ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ದೊಡ್ಡ ಸಂಘರ್ಷದ ಸಂಭವನೀಯ ಏಕಾಏಕಿ ಬೆದರಿಕೆಯೊಡ್ಡುವ ಕಾರಣ ಪತ್ರವು ಬಂದಿರುವುದಾಗಿ ಗಮನಿಸಬೇಕಾದ ಅಂಶವಾಗಿದೆ.
ಅಮೆರಿಕದ ಗ್ರಹಿಕೆಯಲ್ಲಿ ಪಾಕಿಸ್ತಾನವು ವಿಶೇಷವಾಗಿ ಇರಾನ್‌ನೊಂದಿಗೆ ಪಾಕಿಸ್ತಾನವು ಬೆಳೆಯುತ್ತಿರುವ ಸಾಮೀಪ್ಯದ ಸಂದರ್ಭದಲ್ಲಿ ಉಪಯುಕ್ತವಾಗಬಹುದು. ಕುತೂಹಲಕಾರಿಯಾಗಿ ಇರಾನ್ ಅಧ್ಯಕ್ಷರ ಪಾಕಿಸ್ತಾನದ ಭೇಟಿಯು ಇಸ್ರೇಲ್‌ನ ಮೇಲೆ ಇರಾನ್‌ನ ನೇರ ದಾಳಿಯ ನಂತರ ಶೀಘ್ರದಲ್ಲೇ ಬಂದಿತ್ತು. 2024ರಸಂಸತ್ತಿನ ಚುನಾವಣೆಯ ನಂತರ ಪಾಕಿಸ್ತಾನಕ್ಕೆ ಮೊದಲ ಭೇಟಿಯೂ ಇದಾಗಿದೆ. ಪಾಕಿಸ್ತಾನದ ಶಕ್ತಿಯ ಅಗತ್ಯಗಳನ್ನು ಪರಿಹರಿಸಲು ಇರಾನ್-ಪಾಕಿಸ್ತಾನ ಅನಿಲ ಪೈಪ್ ಲೈನ್ಅನ್ನು ಪೂರ್ಣಗೊಳಿಸುವ ಕುರಿತು ಎರಡೂ ಕಡೆ ಪರಸ್ಪರ ಚರ್ಚಿಸಲಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಮೆರಿಕದ ಭದ್ರತಾ ಕಲನಶಾಸ್ತ್ರದಲ್ಲಿ ಪಾಕಿಸ್ತಾನವು ನಿಧಾನವಾಗಿ ತನ್ನ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಮರಳಿ ಪಡೆಯುತ್ತಿದೆ ಎಂದು ಊಹಿಸಬಹುದು.
ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಹಿತಾಸಕ್ತಿಗಳನ್ನು ಕಾಪಾಡಲು ಇರಾನ್ ಮೇಲೆ ಪ್ರಭಾವ ಬೀರಲು ಪಾಕಿಸ್ತಾನದ ಮೇಲೆ ಈ ಬಾರಿ ಅಮೆರಿಕ ಲೆಕ್ಕಾಚಾರ ಹಾಕುತ್ತಿದೆ. ಅದೇ ಸಮಯದಲ್ಲಿ ಇಸ್ರೇಲ್ ಮತ್ತು ಯುಎಸ್ಎಯ ಬದ್ಧ ವಿರೋಧಿಯಾದ ಇರಾನ್ ಪ್ರಭಾವದ ವಲಯಕ್ಕೆ ಪಾಕಿಸ್ತಾನ ಬೀಳುವುದನ್ನು ಅಮೆರಿಕ ನೋಡಲು ಇಷ್ಟಪಡುವುದಿಲ್ಲ. ಇರಾನ್ ಅಧ್ಯಕ್ಷರು ಪಾಕಿಸ್ತಾನಕ್ಕೆ ಭೇಟಿ ನೀಡಿದ ನಂತರ ಇಸ್ಲಾಮಾಬಾದ್‌ಗೆ ಅಮೆರಿಕ ಸಹಾಯಕ ವಿದೇಶಾಂಗ ಕಾರ್ಯದರ್ಶಿಯ ಭೇಟಿಯನ್ನು ಸಹ ಗಮನಿಸಬಹುದು.
ಈ ಸಮಯದಲ್ಲಿ ಭದ್ರತೆಯ ಹೊರತಾಗಿ ಹಲವಾರು ವಿಷಯಗಳನ್ನು ಚರ್ಚಿಸಲಾಗಿದೆ ಎಂದು ವರದಿಯಾಗಿದೆ. ಪಾಕಿಸ್ತಾನದೊಂದಿಗೆ ಸಾಂಪ್ರದಾಯಿಕವಲ್ಲದ ಪ್ರದೇಶಗಳಲ್ಲಿ ನವೀಕರಿಸಿದ ಕಾರ್ಯತಂತ್ರದ ಮೈತ್ರಿ ಅಥವಾ ಸಹಕಾರವನ್ನು ಬಲಪಡಿಸುವಲ್ಲಿ ಅಮೆರಿಕ ಎಷ್ಟು ದೂರ ಹೋಗಲಿದೆ ಎಂಬುದನ್ನು ನೋಡಬೇಕಾಗಿದೆ.
ಇದು ಭಾರತದ ಆತಂಕಕ್ಕೆ ಏನಾದರೂ ಕಾರಣವಾಗುತ್ತದೆ ಎಂದು ನೋಡಿದರರೆ. ಬಹುಶಃ ಏನೂ ಇಲ್ಲ. ಮೊದಲ ಮತ್ತು ಅಗ್ರಗಣ್ಯವಾಗಿ ಪಾಕಿಸ್ತಾನದೊಂದಿಗೆ ಬಲವಾದ ಅಮೆರಿಕ ಮೈತ್ರಿಯ ಹೊರತಾಗಿಯೂ ಅಮರಿಕೆದೊಂದಿಗೆ ಭಾರತದ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯು ಅಭಿವೃದ್ಧಿಗೊಂಡಿದೆ. ಇದಲ್ಲದೇ, ಹೆಚ್ಚಿನ ಪ್ರಭಾವಿ ಜಾಗತಿಕ ಪ್ರಮಖರು ಭಾರತ ಮತ್ತು ಪಾಕಿಸ್ತಾನದೊಂದಿಗಿನ ತಮ್ಮ ಸಂಬಂಧಗಳನ್ನು ಹೈಫನೇಟ್ ಮಾಡುತ್ತಿದ್ದಾರೆ. ಅಷ್ಟೇ ಮುಖ್ಯವಾದ ಸಂಗತಿಯೆಂದರೆ, ಭಾರತ-ಅಮೆರಿಕೆ ಸಂಬಂಧಗಳು ತುಂಬಾ ವಿಸ್ತಾರವಾಗಿವೆ. ಅದು ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಉಲ್ಲಂಘಿಸದ ಹೊರತು ಅಮೆರಿಕ ಮತ್ತು ಪಾಕಿಸ್ತಾನದ ನಡುವಿನ ಯಾವುದೇ ಹೊಂದಾಣಿಕೆಯಿಂದ ಪ್ರಭಾವಿತವಾಗುವುದಿಲ್ಲ.
ಇದನ್ನೂ ಓದಿ: ಇರಾನ್‌ನ ಚಬಹಾರ್ ಬಂದರು ನಿರ್ವಹಣೆಗಾಗಿ 10 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ ಭಾರತ