ETV Bharat / opinion

ಧರ್ಮಶಾಲಾದಲ್ಲಿ ಅಮೆರಿಕ ನಿಯೋಗದಿಂದ ದಲೈ ಲಾಮಾ ಭೇಟಿ: ಚೀನಾಗೆ ಕಠಿಣ ಸಂದೇಶ ರವಾನಿಸಿದ ಭಾರತ - Nancy Pelosi in Dharamshala

ಧರ್ಮಶಾಲಾದಲ್ಲಿ ಟಿಬೆಟ್ ಧರ್ಮಗುರು ದಲೈ ಲಾಮಾ ಅವರನ್ನು ಭೇಟಿ ಮಾಡಲು ಅಮೆರಿಕದ ನಿಯೋಗಕ್ಕೆ ಅವಕಾಶ ನೀಡುವ ಮೂಲಕ ಭಾರತವು ಚೀನಾಗೆ ಕಠಿಣ ಸಂದೇಶ ರವಾನಿಸಿದೆ.

ಧರ್ಮಶಾಲಾದಲ್ಲಿ ಅಮೆರಿಕ ನಿಯೋಗದಿಂದ ದಲೈ ಲಾಮಾ ಭೇಟಿ
ಧರ್ಮಶಾಲಾದಲ್ಲಿ ಅಮೆರಿಕ ನಿಯೋಗದಿಂದ ದಲೈ ಲಾಮಾ ಭೇಟಿ (IANS)
author img

By ETV Bharat Karnataka Team

Published : Jun 27, 2024, 7:13 PM IST

ಕಳೆದ ವಾರ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನ ಮಾಜಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಹೌಸ್ ಫಾರಿನ್ ಅಫೇರ್ಸ್ ಕಮಿಟಿಯ ರಿಪಬ್ಲಿಕನ್ ಅಧ್ಯಕ್ಷ ಮೈಕೆಲ್ ಮೆಕ್ಕಾಲ್ ನೇತೃತ್ವದ ಏಳು ಸದಸ್ಯರ ದ್ವಿಪಕ್ಷೀಯ ನಿಯೋಗದ ಭಾಗವಾಗಿ ಭಾರತಕ್ಕೆ ಆಗಮಿಸಿದ್ದರು. ವೈದ್ಯಕೀಯ ಚಿಕಿತ್ಸೆಗಾಗಿ ದಲೈ ಲಾಮಾ ಅವರು ಅಮೆರಿಕಕ್ಕೆ ತೆರಳುವ ಮುನ್ನ ಅವರನ್ನು ಭೇಟಿಯಾಗುವುದು ನಿಯೋಗದ ಉದ್ದೇಶವಾಗಿತ್ತು. ಟಿಬೆಟಿಯನ್ ಜನತೆಯೊಂದಿಗೆ ಅಮೆರಿಕದ ಬೆಂಬಲವನ್ನು ಪ್ರದರ್ಶಿಸಲು ನ್ಯಾನ್ಸಿ ಪೆಲೋಸಿ ಅವರು ಧರ್ಮಶಾಲಾದಲ್ಲಿ ಎರಡು ದಿನ ತಂಗಿದ್ದರು. ದಲೈ ಲಾಮಾ ಮತ್ತು ದೇಶಭ್ರಷ್ಟ ಟಿಬೆಟಿಯನ್ ಸರ್ಕಾರವನ್ನು ಭೇಟಿ ಮಾಡುವುದರ ಹೊರತಾಗಿ, ಅವರು ಟಿಬೆಟಿಯನ್ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.

ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ 'ರಿಸಾಲ್ವ್ ಟಿಬೆಟ್ ಆಕ್ಟ್' (Resolve Tibet Act) ನಿರ್ಣಯವನ್ನು ಅಂಗೀಕರಿಸಿದ ಸಮಯದಲ್ಲಿಯೇ ನ್ಯಾನ್ಸಿ ಪೆಲೋಸಿ ದಲೈ ಲಾಮಾ ಅವರನ್ನು ಭೇಟಿಯಾಗಿದ್ದು ಗಮನಾರ್ಹ. 'ರಿಸಾಲ್ವ್ ಟಿಬೆಟ್ ಆಕ್ಟ್' ಕಾಯ್ದೆಯು 2010 ರಿಂದ ಸ್ಥಗಿತಗೊಂಡಿರುವ ಟಿಬೆಟಿಯನ್ ನಾಯಕರೊಂದಿಗೆ ಮಾತುಕತೆಯನ್ನು ಪುನರಾರಂಭಿಸಲು ಬೀಜಿಂಗ್ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ. ಮೈಕೆಲ್ ಮೆಕ್ಕಾಲ್ ಹೇಳಿದಂತೆ, 'ಇದು ಟಿಬೆಟ್ ಜನರಿಗೆ ತಮ್ಮ ಭವಿಷ್ಯದ ಸರ್ಕಾರವನ್ನು ರಚಿಸಿಕೊಳ್ಳಲು ಸಹಾಯ ಮಾಡುತ್ತದೆ.'

ಧರ್ಮಶಾಲಾದಲ್ಲಿ ಮಾಡಿದ ಭಾಷಣದಲ್ಲಿ, ಪೆಲೋಸಿ ಕ್ಸಿ ಜಿನ್ ಪಿಂಗ್ ಅವರನ್ನು ಟೀಕಿಸಿದರು. 'ಜ್ಞಾನ, ಸಂಪ್ರದಾಯ, ಸಹಾನುಭೂತಿ, ಆತ್ಮ ಶುದ್ಧತೆ ಮತ್ತು ಪ್ರೀತಿಯ ಸಂದೇಶದೊಂದಿಗೆ ಪವಿತ್ರ ದಲೈ ಲಾಮಾ ದೀರ್ಘಕಾಲ ಬದುಕುತ್ತಾರೆ ಮತ್ತು ಅವರ ಪರಂಪರೆ ಶಾಶ್ವತವಾಗಿ ಉಳಿಯುತ್ತದೆ. ಆದರೆ ಚೀನಾದ ಅಧ್ಯಕ್ಷರಾದ ನೀವು ಹೊರಟುಹೋಗುವಿರಿ ಮತ್ತು ನಿಮಗೆ ಸಂಬಂಧಿಸಿದ ಯಾವುದಕ್ಕೂ ಜನ ಮನ್ನಣೆ ನೀಡುವುದಿಲ್ಲ.' ಎಂದು ಪೆಲೋಸಿ ಹೇಳಿದರು. ಪೆಲೋಸಿ ಅವರ ಧರ್ಮಶಾಲಾ ಭೇಟಿಯನ್ನು ವಾಷಿಂಗ್ಟನ್, ನವದೆಹಲಿ ಮತ್ತು ಬೀಜಿಂಗ್​​ನಲ್ಲಿನ ಚೀನಾ ಅಧಿಕಾರಿಗಳು ಉಗ್ರವಾಗಿ ಟೀಕಿಸಿದ್ದಾರೆ.

ಈ ಭೇಟಿಗೆ ಮುಂಚೆಯೇ ವಾಷಿಂಗ್ಟನ್​​ನಲ್ಲಿರುವ ತಮ್ಮ ರಾಯಭಾರ ಕಚೇರಿಯ ಚೀನಾದ ಸಚಿವ-ಸಲಹೆಗಾರ ಝೌ ಜೆಂಗ್ ಮಾತನಾಡಿ, "ಈ ಭೇಟಿಯು ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ. ಚೀನಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುತ್ತದೆ. ಚೀನಾ ಇದನ್ನು ತೀವ್ರವಾಗಿ ಖಂಡಿಸುತ್ತದೆ. 13 ನೇ ಶತಮಾನದಲ್ಲಿ ಯುವಾನ್ ರಾಜವಂಶದ ನಂತರ ಕ್ಸಿಜಾಂಗ್ (ಟಿಬೆಟ್) ಇದು ಚೀನಾದ ಭೂಪ್ರದೇಶದ ಅವಿಭಾಜ್ಯ ಅಂಗವಾಗಿದೆ" ಎಂದು ಹೇಳಿದರಲ್ಲದೆ, ಭೇಟಿಯನ್ನು ರದ್ದುಗೊಳಿಸುವಂತೆ ಅವರು ಯುಎಸ್ ಸರ್ಕಾರಕ್ಕೆ ಸಲಹೆ ನೀಡಿದರು. ಆದರೆ ಅಮೆರಿಕ ಈ ಸಲಹೆಯನ್ನು ನಿರ್ಲಕ್ಷಿಸಿತು.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಮಾತನಾಡಿ, '14 ನೇ ದಲೈ ಲಾಮಾ ಶುದ್ಧ ಧಾರ್ಮಿಕ ವ್ಯಕ್ತಿಯಲ್ಲ. ಅವರು ಧರ್ಮದ ಸೋಗಿನಲ್ಲಿ ಚೀನಾ ವಿರೋಧಿ ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿರುವ ರಾಜಕೀಯ ದೇಶಭ್ರಷ್ಟರಾಗಿದ್ದಾರೆ' ಎಂದು ಹೇಳಿದರು. ದೆಹಲಿಯಲ್ಲಿನ ಚೀನಾದ ರಾಯಭಾರ ಕಚೇರಿಯು ದಲೈ ಲಾಮಾ ಅವರನ್ನು 'ಧಾರ್ಮಿಕ ನೆಪದಲ್ಲಿ ಮರೆಮಾಚಲಾದ ಚೀನಾದ ಹಿತಾಸಕ್ತಿಗಳಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿರುವ ರಾಜಕೀಯ ದೇಶಭ್ರಷ್ಟ' ಎಂದು ಬಣ್ಣಿಸಿದೆ.

ಪೆಲೋಸಿ ಅವರನ್ನು ಒಳಗೊಂಡ ನಿಯೋಗವು ಪ್ರಧಾನಿಯನ್ನು ಭೇಟಿ ಮಾಡಿ, ಐತಿಹಾಸಿಕ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದೆ ಎಂದು ಭಾರತ ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಭಾರತದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಯ ಪ್ರಮಾಣ, ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಈ ನಿಯೋಗವು ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರೊಂದಿಗೆ ಸಂವಹನ ನಡೆಸಿತು.

"@HouseForeignGOP ಅಧ್ಯಕ್ಷ @RepMcCaul ನೇತೃತ್ವದ ನಿಯೋಗದಲ್ಲಿ ಯುಎಸ್ ಕಾಂಗ್ರೆಸ್​ನ ಸ್ನೇಹಿತರೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇನೆ. ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುನ್ನಡೆಸುವಲ್ಲಿ ಬಲವಾದ ದ್ವಿಪಕ್ಷೀಯ ಬೆಂಬಲವನ್ನು ಗೌರವಿಸುತ್ತೇನೆ." ಎಂದು ಪ್ರಧಾನಿ ಕಚೇರಿಯು ಟ್ವೀಟ್ ಮಾಡಿದೆ. ಆದರೆ ಇದರಲ್ಲಿ ಧರ್ಮಶಾಲಾ ಭೇಟಿಯ ಬಗ್ಗೆ ಯಾವುದೇ ಅಧಿಕೃತ ಉಲ್ಲೇಖವಿಲ್ಲ.

ದಲೈ ಲಾಮಾ ಹೇಗಿದ್ದರೂ ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗುವವರಿದ್ದರು. ಅಮೆರಿಕದ ನಿಯೋಗವು ಅವರನ್ನು ಅಲ್ಲಿಯೇ ಭೇಟಿ ಮಾಡಬಹುದಿತ್ತು. ಆದರೆ ಅಮೆರಿಕದಿಂದ ನೇರವಾಗಿ ಧರ್ಮಶಾಲಾಕ್ಕೆ ಬರುವುದರಲ್ಲಿ ದೊಡ್ಡ ಕಾರಣ ಇಲ್ಲದೆ ಇರಲು ಸಾಧ್ಯವಿಲ್ಲ. ಇದಲ್ಲದೆ, ಭಾರತ ಸರ್ಕಾರದ ಮೌನ ಅನುಮೋದನೆಯಿಲ್ಲದೆ ಈ ಭೇಟಿ ನಡೆಯುತ್ತಿರಲಿಲ್ಲ. ಇದು ಜಗತ್ತಿಗೆ ನಿರ್ದಿಷ್ಟ ಸಂದೇಶಗಳನ್ನು ರವಾನಿಸುತ್ತದೆ.

ಮೊದಲನೆಯದಾಗಿ, ಇದು ದಲೈ ಲಾಮಾ ಅವರಿಗೆ ಮತ್ತು ಅವರ 'ಧಾರ್ಮಿಕ' ಉದ್ದೇಶಕ್ಕೆ ಭಾರತದ ಬೆಂಬಲವನ್ನು ಪ್ರದರ್ಶಿಸುತ್ತದೆ. ದಲೈ ಲಾಮಾ ಅವರ ಬಗ್ಗೆ ಭಾರತ ಸರ್ಕಾರದ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿದೆ ಎಂದು ಭಾರತದ ವಿದೇಶಾಂಗ ಕಚೇರಿ ವಕ್ತಾರರು ಹೇಳಿರುವುದು ಗಮನಾರ್ಹ. ದಲೈ ಲಾಮಾ ಅವರು ಪೂಜ್ಯ ಧಾರ್ಮಿಕ ನಾಯಕರಾಗಿದ್ದಾರೆ ಮತ್ತು ಭಾರತದ ಜನರಿಂದ ಗೌರವಿಸಲ್ಪಟ್ಟಿದ್ದಾರೆ. ಅವರ ಪವಿತ್ರತೆಗೆ ಅವರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳನ್ನು ನಡೆಸಲು ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂಬ ಸಂದೇಶವನ್ನು ಇದು ರವಾನಿಸಿದೆ. ಎರಡನೆಯದಾಗಿ, ಯುಎಸ್ ಮತ್ತು ಭಾರತವು ನಿಕಟ ಮಿತ್ರರು ಮತ್ತು ಟಿಬೆಟ್ ಮತ್ತು ಚೀನಾ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಒಮ್ಮತವನ್ನು ಹೊಂದಿವೆ ಎಂಬುದನ್ನು ಬಿಂಬಿಸುತ್ತದೆ.

ಮೂರನೆಯದಾಗಿ, ನಿಯೋಗವು ಜಾಗತಿಕ ಟಿಬೆಟಿಯನ್ ಸಮುದಾಯಕ್ಕೆ ಅವರು ಎದುರಿಸುತ್ತಿರುವ ಅತ್ಯಂತ ನಿರ್ಣಾಯಕ ವಿಷಯ ಅಂದರೆ ಹದಿನೈದನೇ ದಲೈ ಲಾಮಾ ಅವರ ಆಯ್ಕೆಯ ಬಗ್ಗೆ ಪ್ರಮುಖ ಸಂದೇಶವನ್ನು ರವಾನಿಸಿತು. ಚೀನೀಯರು ಸದ್ಯದ ದಲೈ ಲಾಮಾ ಅವರ ಬದಲಿಗೆ ಉತ್ತರಾಧಿಕಾರಿಯನ್ನು ನಾಮನಿರ್ದೇಶನ ಮಾಡಲು ಉತ್ಸುಕರಾಗಿದ್ದಾರೆ. ದಲೈ ಲಾಮಾ ಅವರ ನಿಯಂತ್ರಣವಿಲ್ಲದೆ, ಟಿಬೆಟ್ ಮೇಲಿನ ತನ್ನ ಹಿಡಿತ ಅಪೂರ್ಣ ಎಂದು ಚೀನಾಕ್ಕೆ ತಿಳಿದಿದೆ.

1995ರಲ್ಲಿ ದಲಾಯಿ ಲಾಮಾ ಅವರ ಸ್ಥಾನದಲ್ಲಿ ಚೀನಾ ಪಂಚೆನ್ ಲಾಮಾ ಅವರನ್ನು ನೇಮಕ ಮಾಡಿತ್ತು. ಅವರು ಕೂಡ ನೇಮಕಗೊಂಡ ಕೂಡಲೇ ದಲೈ ಲಾಮಾ ಅವರಿಗೆ ನಿಷ್ಠೆ ತೋರಿದರು. ಅಂದಿನಿಂದ, ಅವರು ಎಲ್ಲಿದ್ದಾರೆಂದು ತಿಳಿದಿಲ್ಲ. ಸುಮಾರು ಕಾಲು ಶತಮಾನದಿಂದ ಅವರು ರಾಜಕೀಯ ಖೈದಿಯಾಗಿ ಉಳಿದಿದ್ದಾರೆ. ಮುಂದಿನ ದಲೈ ಲಾಮಾ ಅವರಿಗೂ ಚೀನಾ ಇದೇ ಗತಿ ಕಾಣಿಸಲು ಯೋಜಿಸುತ್ತಿದೆ. ಪ್ರಸ್ತುತ ದಲೈ ಲಾಮಾ ತಮ್ಮ ಉತ್ತರಾಧಿಕಾರಿಯ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. ತಮ್ಮ ಉತ್ತರಾಧಿಕಾರಿಯು ಪುನರ್ಜನ್ಮ ಪಡೆಯದಿರಬಹುದು ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಚೀನಾದ ನಿಯಂತ್ರಿತ ಪ್ರದೇಶದಲ್ಲಿ ದಲೈ ಲಾಮಾ ಪುನರ್ಜನ್ಮ ಪಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯುಎಸ್​ ನಿಯೋಗವು ಭಾರತಕ್ಕೆ ಬಂದು 'ಟಿಬೆಟ್ ಜನರ ಸ್ವಯಂ ನಿರ್ಣಯ ಮತ್ತು ಮಾನವ ಹಕ್ಕುಗಳ ಹಕ್ಕುಗಳನ್ನು' ಒಳಗೊಂಡಿರುವ 'ಟಿಬೆಟ್ ಸಮಸ್ಯೆಯನ್ನು ಪರಿಹರಿಸಿ ಕಾಯ್ದೆ' ಅಂಗೀಕರಿಸುವುದಾಗಿ ಘೋಷಿಸಿತು. ಈ ಕಾಯ್ದೆಯು ಪ್ರಸ್ತುತ ಯುಎಸ್ ಅಧ್ಯಕ್ಷರ ಸಹಿಗಾಗಿ ಕಾಯುತ್ತಿದೆ. ಸೆಂಟ್ರಲ್ ಟಿಬೆಟಿಯನ್ ಆಡಳಿತದ ಪ್ರಕಾರ, ಈ ಕಾಯ್ದೆಯು 'ಟಿಬೆಟಿಯನ್ ಜನರ ಸಾಮಾಜಿಕ-ಸಾಂಸ್ಕೃತಿಕ ಗುರುತನ್ನು, ವಿಶೇಷವಾಗಿ ಅವರ ವಿಶಿಷ್ಟ ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಭಾಷಾ ಗುರುತನ್ನು ಗುರುತಿಸುತ್ತದೆ ಮತ್ತು ಪರಿಹರಿಸುತ್ತದೆ.' ಇದು ಚೀನಾದ ಪ್ರತಿಪಾದನೆಗಳನ್ನು ನಿರ್ಲಕ್ಷಿಸಿ, ಉತ್ತರಾಧಿಕಾರಿಯನ್ನು ನೇಮಿಸುವಲ್ಲಿ ಅವರಿಗೆ ಜಾಗತಿಕ ಬೆಂಬಲ ನೀಡಲಿದೆ.

2020 ರಲ್ಲಿ, ಬೈಡನ್ ಅವರು ಪ್ರಚಾರದ ಸಮಯದಲ್ಲಿ ದಲೈ ಲಾಮಾ ಅವರನ್ನು ಭೇಟಿಯಾಗುವುದಾಗಿ ಘೋಷಿಸಿದ್ದರು. ಸದ್ಯ ದಲೈ ಲಾಮಾ ಅವರು ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿರುವ ಸಮಯ ರಾಜಕೀಯವಾಗಿ ಸೂಕ್ತವಾಗಿದೆ ಮತ್ತು ಬೈಡನ್ ಅವರ ಚುನಾವಣಾ ಪ್ರಚಾರ ಅಭಿಯಾನಕ್ಕೂ ಉತ್ತೇಜನ ನೀಡಲಿದೆ. ಒಂದು ವೇಳೆ ಅಮೆರಿಕ ಈ ಅವಕಾಶವನ್ನು ಬಳಸಿಕೊಂಡರೆ, ಟಿಬೆಟ್ ವಿಷಯದಲ್ಲಿ ಚೀನಾಗೆ ಅತ್ಯಂತ ಸ್ಪಷ್ಟ ಸಂದೇಶ ರವಾನೆಯಾಗಲಿದೆ.

02 ಆಗಸ್ಟ್ 2022 ರಂದು ಯುಎಸ್ ಹೌಸ್ ಸ್ಪೀಕರ್ ಆಗಿ ನ್ಯಾನ್ಸಿ ಪೆಲೋಸಿ ಅವರು ಈ ಹಿಂದೆ ತೈವಾನ್​ಗೆ ಭೇಟಿ ನೀಡಿದ್ದರಿಂದ ತೈವಾನ್ ಜಲಸಂಧಿಯಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಚೀನಾ ತನ್ನ ಸುತ್ತಮುತ್ತಲಿನ ಕಡಲ ಪ್ರದೇಶದಲ್ಲಿ ನೌಕಾ ಮತ್ತು ವಾಯು ಕಾರ್ಯಾಚರಣೆಗಳ ಸಮಯದಲ್ಲಿ ದ್ವೀಪದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿತು. ಕೆಲವು ಕ್ಷಿಪಣಿಗಳು ಜಪಾನ್​ ನಿಯಂತ್ರಣದ ಸಮುದ್ರದಲ್ಲಿ ಬಿದ್ದವು. ಚೀನಾದ ಸೈಬರ್ ದಾಳಿಗಳು ಕೂಡ ಇತ್ತೀಚೆಗೆ ತೀವ್ರವಾಗಿವೆ.

ಆದರೆ ಭಾರತವು ತೈವಾನ್ ಅಲ್ಲ ಮತ್ತು ತೈವಾನ್​ ಅನ್ನು ನಿಗ್ರಹಿಸಿದಂತೆ ಭಾರತವನ್ನು ನಿಗ್ರಹಿಸಲು ಸಾಧ್ಯವಿಲ್ಲ. ಭಾರತವು ಚೀನೀಯರ ವಿರುದ್ಧ ಸಮರ್ಥವಾಗಿ ಹೋರಾಡಬಲ್ಲ ಮಿಲಿಟರಿಯನ್ನು ಹೊಂದಿದೆ ಮತ್ತು ಚೀನಾದ ಕೃತ್ಯಗಳಿಗೆ ಸಮಾನ ಶಕ್ತಿಯಿಂದ ಪ್ರತಿಕ್ರಿಯಿಸಿದೆ. ಗಡಿ ಸಮಸ್ಯೆಯನ್ನು ಪರಿಹರಿಸದ ಹೊರತು, ದ್ವಿಪಕ್ಷೀಯ ಸಂಬಂಧಗಳು ಎಂದಿಗೂ ಸಾಮಾನ್ಯವಾಗಲು ಸಾಧ್ಯವಿಲ್ಲ ಎಂದು ಭಾರತ ಬೀಜಿಂಗ್​ಗೆ ತಿಳಿಸಿದೆ.

ಈ ಭೇಟಿಗೆ ಅನುಮತಿ ನೀಡುವುದು ಮತ್ತು ಕ್ಸಿ ಜಿನ್ ಪಿಂಗ್ ಮೇಲೆ ದಾಳಿ ಮಾಡಲು ನಿಯೋಗಕ್ಕೆ ಅವಕಾಶ ನೀಡಿರುವುದು ಚೀನಾ ಮತ್ತು ಭಾರತ ಮಧ್ಯದ ಸಂಬಂಧಗಳು ಹದಗೆಟ್ಟಿವೆ ಮತ್ತು ಅವುಗಳನ್ನು ಪುನಃಸ್ಥಾಪಿಸುವ ಜವಾಬ್ದಾರಿ ಚೀನಾದ ಮೇಲಿದೆ ಎಂದು ಚೀನಾಕ್ಕೆ ತಿಳಿಸುವ ಮತ್ತೊಂದು ಮಾರ್ಗವಾಗಿದೆ. ಇದಲ್ಲದೆ ಈಗಿನ ಜಿನ್​ಪಿಂಗ್ ಸರ್ಕಾರವು ಈ ಹಿಂದೆ ಇದ್ದುದಕ್ಕಿಂತ ದುರ್ಬಲವಾಗಿದೆ. ಈಗ ಚೀನಾ ತಾನು ಆಯ್ಕೆ ಮಾಡುವ ಮಾರ್ಗವನ್ನು ನಿರ್ಧರಿಸಬೇಕಿದೆ. ಭಾರತದೊಂದಿಗೆ ಹಗೆತನ ಮುಂದುವರಿಸಬೇಕೇ ಅಥವಾ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಬೇಕೆ ಎಂಬ ಬಗ್ಗೆ ಅದೇ ನಿರ್ಧರಿಸಬೇಕಿದೆ.

ಲೇಖನ: ಹರ್ಷ ಕಾಕರ್, ಮೇಜರ್ ಜನರಲ್ (ನಿವೃತ್ತ)

ಇದನ್ನೂ ಓದಿ : ಸುಸ್ಥಿರ ಕೃಷಿಯೊಂದಿಗೆ ಪರಿಸರ ರಕ್ಷಣೆ ಹೇಗೆ?: ಒಂದು ವಿಶ್ಲೇಷಣೆ - Environment Friendly Farming

ETV Bharat Logo

Copyright © 2024 Ushodaya Enterprises Pvt. Ltd., All Rights Reserved.