ETV Bharat / opinion

ಉತ್ತರ ರಾಮಾಯಣ ಘಟಿಸಿದ್ದು ಎಷ್ಟು ಸತ್ಯ? ವಾಸ್ತವಾಂಶಗಳು ಏನು ಹೇಳುತ್ತವೆ?: ವಿಶ್ಲೇಷಣೆ - UTTARA RAMAYANA - UTTARA RAMAYANA

ರಾಮಾಯಣ ಮಹಾಕಾವ್ಯದ ಉತ್ತರ ಕಾಂಡ ಅಥವಾ ಉತ್ತರ ರಾಮಾಯಣದ ಬಗ್ಗೆ ಈಟಿವಿ ಭಾರತ ಸಂಸ್ಥೆಯ ಸಿಇಒ ಶ್ರೀನಿವಾಸ್ ಜೊನ್ನಲಗಡ್ಡ ಅವರು ಬರೆದ ವಿದ್ವತ್ಪೂರ್ಣ ವಿಶ್ಲೇಷಣೆ ಇಲ್ಲಿದೆ.

ವಾಲ್ಮೀಕಿಯ ಆಶ್ರಮದಲ್ಲಿ ನಾರದ ಮುನಿ
ವಾಲ್ಮೀಕಿಯ ಆಶ್ರಮದಲ್ಲಿ ನಾರದ ಮುನಿ (ETV Bharat via Wikimedia Commons)
author img

By Srinivas Jonnalagadda

Published : Aug 25, 2024, 12:36 PM IST

Updated : Aug 25, 2024, 1:09 PM IST

'ಉತ್ತರ ರಾಮಾಯಣ' ಅಥವಾ ರಾಮಾಯಣದ 'ಉತ್ತರ ಕಾಂಡ' ಆವೃತ್ತಿಯು ನಿಜವಾಗಿಯೂ ರಾಮಾಯಣ ಮಹಾಕಾವ್ಯದ ಭಾಗವೇ? ವಾಸ್ತವದಲ್ಲಿ ಮಹರ್ಷಿ ವಾಲ್ಮೀಕಿಯವರೇ ಇದನ್ನು ಬರೆದರೇ? ಈ ಪ್ರಶ್ನೆಗಳಿಗೆ ವಿದ್ವಾಂಸರು ಶತಮಾನಗಳಿಂದ ಉತ್ತರ ಹುಡುಕುತ್ತಿದ್ದಾರೆ ಮತ್ತು ಈ ಬಗ್ಗೆ ಸಂಶೋಧನೆಗಳನ್ನು ಮಾಡುತ್ತಲೇ ಬಂದಿದ್ದಾರೆ.

ಸೀತಾಮಾತೆ ಮತ್ತು ಆಕೆಯ ಮಕ್ಕಳಾದ ಕುಶ - ಲವ ಎಂಬ ಇಬ್ಬರು ರಾಜಕುಮಾರರ ತ್ಯಾಗದ ಬಗ್ಗೆ ಭಾವನಾತ್ಮಕವಾಗಿ ನಿರೂಪಿಸಲ್ಪಟ್ಟಿರುವ ಉತ್ತರಕಾಂಡದ ಕಥೆಯು ಆಕರ್ಷಕವಾಗಿದ್ದು, ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ.

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುವಂಥ ಯಾವುದೇ ಪುರಾವೆಗಳಿವೆಯೇ ಎಂಬುದು ಅಧ್ಯಯನದ ವಿಷಯವಾಗಿದೆ. ಈ ಬಗ್ಗೆ ಒಂದಿಷ್ಟು ಅವಲೋಕನ ಇಲ್ಲಿದೆ. ಉತ್ತರಕಾಂಡದ ಬಗ್ಗೆ 'ಮಂದಾರಮು' ಕೃತಿ ಏನು ಹೇಳುತ್ತದೆ?: ವಾಸುದಾಸ ಸ್ವಾಮಿಗಳು ರಚಿಸಿರುವ 'ಮಂದಾರಮು' (ಕಲ್ಪವೃಕ್ಷ ಅಥವಾ ಎಲ್ಲವನ್ನೂ ನೀಡುವ ಮರ) ರಾಮಾಯಣಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ಕೃತಿಯಾಗಿದೆ. ಉತ್ತರ ಕಾಂಡವು ರಾಮಾಯಣದ ಅಧಿಕೃತ ಭಾಗವಾಗಿದೆ ಎಂದು ಈ ಕೃತಿಯಲ್ಲಿ ಪ್ರತಿಪಾದಿಸಲಾಗಿದ್ದು, ಇದಕ್ಕೆ ಪೂರಕವಾಗಿ ಕೃತಿಯಲ್ಲಿ 10 ವಾದಗಳನ್ನು ಮಂಡಿಸಲಾಗಿದೆ. ಆ ಹತ್ತು ವಾದಗಳ ಪೈಕಿ ಅತ್ಯಂತ ಪ್ರಮುಖವಾದ ಮೂರು ವಾದಗಳು ಹೀಗಿವೆ:

ಪವಿತ್ರ ಗಾಯತ್ರಿ ಮಂತ್ರವು 24 ಅಕ್ಷರಗಳನ್ನು ಹೊಂದಿದೆ. ಋಷಿ ವಾಲ್ಮೀಕಿಯವರು 24,000 ಶ್ಲೋಕಗಳನ್ನು ಒಳಗೊಂಡ ರಾಮಾಯಣ ಮಹಾಕಾವ್ಯವನ್ನು ಬರೆದಿದ್ದು, ಇದರಲ್ಲಿ ಪ್ರತಿ ಸಾವಿರ ಶ್ಲೋಕಗಳ ಗುಚ್ಛವು ಅನುಕ್ರಮವಾಗಿ ಗಾಯತ್ರಿ ಮಂತ್ರದ ಒಂದು ಅಕ್ಷರದಿಂದಲೇ ಆರಂಭವಾಗುತ್ತದೆ. ಹೀಗಿರುವಾಗ ರಾಮಾಯಣದಿಂದ ಉತ್ತರ ಕಾಂಡ ಭಾಗವನ್ನು ತೆಗೆದು ಹಾಕಿದಲ್ಲಿ ಇಡೀ ರಾಮಾಯಣದಲ್ಲಿನ ಶ್ಲೋಕಗಳ ಸಂಖ್ಯೆ 24,000ದಷ್ಟು ಕಡಿಮೆಯಾಗುತ್ತದೆ.

1.1.91 (ಬಾಲಕಾಂಡ) ಶ್ಲೋಕದಲ್ಲಿ, ರಾಮ ರಾಜ್ಯವು "ನ ಪುತ್ರಮರಣಂ ಕಿಂಚಿದ್ ದ್ರಾಕ್ಷ್ಯಂತಿ ಪುರುಷಃ" (ತಂದೆಯಾದವನು ತನ್ನ ಮಕ್ಕಳ ಮರಣವನ್ನು ನೋಡಬಾರದು) ಎಂಬ ಗುಣಲಕ್ಷಣವನ್ನು ಹೊಂದಿದೆ ಎಂಬುದಾಗಿ ನಾರದ ಮುನಿಗಳು ವಿವರಿಸಿದ್ದಾರೆ. ಇದನ್ನು ಉತ್ತರಕಾಂಡವು ದೃಢಪಡಿಸುತ್ತದೆ.

1.3.38 (ಬಾಲಕಾಂಡ) ಶ್ಲೋಕವು "ವೈದೇಯಸ್ಚ ವಿಸರ್ಜನಂ" (ಸೀತಾಮಾತೆಯ ತ್ಯಾಗ) ಎಂಬ ನುಡಿಗಟ್ಟನ್ನು ಒಳಗೊಂಡಿದೆ. ಇದು ಉತ್ತರ ಕಾಂಡದಲ್ಲಿನ ಅದಕ್ಕೆ ಸಂಬಂಧಿಸಿದ ಪ್ರಸಂಗದ ಮುನ್ನುಡಿಯಂತಿದೆ.

ಈಗ ಮಹಾಕಾವ್ಯದ ಇತರ ಭಾಗಗಳಿಂದ ಪಠ್ಯ ಪುರಾವೆಗಳನ್ನು ಬಳಸಿಕೊಂಡು ಮೇಲಿನ ವಾದಗಳನ್ನು ಪರಿಶೀಲಿಸೋಣ.

ಗಾಯತ್ರಿ ಮಂತ್ರದೊಂದಿಗೆ ಸಂಬಂಧ: ವಾದದ ಸರಣಿಯನ್ನು ಮುಂದುವರಿಸುವುದಕ್ಕಾಗಿ, ಮಹರ್ಷಿ ವಾಲ್ಮೀಕಿಯವರು ಗಾಯತ್ರಿ ಮಂತ್ರದ 24 ಅಕ್ಷರಗಳನ್ನು ಗಮನದಲ್ಲಿಟ್ಟುಕೊಂಡೇ ಮಹಾಕಾವ್ಯದ 24,000 ಶ್ಲೋಕಗಳನ್ನು ರಚಿಸಿದ್ದಾರೆ ಎಂದು ಭಾವಿಸೋಣ. ಇದು ಅಷ್ಟೊಂದು ದೊಡ್ಡ ಸಾಧನೆ ಎಂದಾದರೆ ಈ ಬಗ್ಗೆ, ಮಹರ್ಷಿ ವಾಲ್ಮೀಕಿಯವರು ಎಲ್ಲಾದರೂ ಉಲ್ಲೇಖಿಸಬೇಕಾಗಿತ್ತು ಅಲ್ಲವೇ? ಆದರೆ ಕೃತಿಯಲ್ಲಾಗಲೀ ಅಥವಾ ಬೇರೆ ಎಲ್ಲೇ ಆಗಲಿ ಮಹರ್ಷಿ ವಾಲ್ಮೀಕಿಯವರು ಇದರ ಬಗ್ಗೆ ಹೇಳಿಕೊಂಡಿಲ್ಲ ಅಥವಾ ಪ್ರಸ್ತಾಪಿಸಿಲ್ಲ.

ಇದಲ್ಲದೆ, ಕಾಲಾನಂತರದಲ್ಲಿ ರಾಮಾಯಣದ ಮುಖ್ಯ ಪಠ್ಯಕ್ಕೆ ಹಲವಾರು ಪಠ್ಯಗಳನ್ನು ಸೇರಿಸಲಾಗಿದೆ ಎಂದು ಹಲವಾರು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಇವುಗಳನ್ನು ತೆಗೆದು ಹಾಕಿದಲ್ಲಿ ರಾಮಾಯಣ ಮಹಾಕಾವ್ಯವು 24,000 ಕ್ಕಿಂತ ತೀರಾ ಕಡಿಮೆ ಶ್ಲೋಕಗಳನ್ನು ಹೊಂದಿರುತ್ತದೆ. ಇದೊಂದು ಅಂಶವು ಮಹಾಕಾವ್ಯದಲ್ಲಿನ ಶ್ಲೋಕಗಳ ಸಂಖ್ಯೆ ಮತ್ತು ಗಾಯತ್ರಿ ಮಂತ್ರದಲ್ಲಿನ ಅಕ್ಷರಗಳ ನಡುವಿನ ಸಂಬಂಧವನ್ನು ನೇರವಾಗಿ ತುಂಡರಿಸುತ್ತದೆ.

ರಾಮರಾಜ್ಯದ ವಿವರಣೆ: ಬಾಲಕಾಂಡದ 1.1.90 ರಿಂದ 1.1.97 ಶ್ಲೋಕಗಳು ನಾರದ ಮುನಿಗಳು ನಿರೂಪಿಸಿದಂತೆ ರಾಮರಾಜ್ಯದ ಸಂಕ್ಷಿಪ್ತ ವಿವರಣೆಯನ್ನು ಹೊಂದಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, 1.1.91ರ ನಂತರದ ಶ್ಲೋಕಗಳನ್ನು ಭವಿಷ್ಯತ್ಕಾಲದಲ್ಲಿ ನಿರೂಪಿಸಲಾಗಿದೆ. ಯುದ್ಧಕಾಂಡದ ಕೊನೆಯಲ್ಲಿನ 6.128.95 ರಿಂದ 6.128.106 ಶ್ಲೋಕಗಳಲ್ಲಿ ಇದೇ ರೀತಿಯ ಚಿತ್ರಣ ಕಂಡುಬರುತ್ತದೆ. ಈ ವಿವರಣೆಯನ್ನು ಪುನರಾವರ್ತಿಸಲು ಪ್ರತ್ಯೇಕ ಕಾಂಡ ಅಗತ್ಯವಾಗಿತ್ತು ಎಂಬುದನ್ನು ಈ ಭಾಗವು ಅಮಾನ್ಯಗೊಳಿಸುತ್ತದೆ.

1.1.91 ರಲ್ಲಿನ ಪ್ರತಿಪಾದನೆಯು (ತಂದೆಯಾದವನು ತನ್ನ ಮಕ್ಕಳ ಸಾವನ್ನು ನೋಡಬಾರದು) ಉತ್ತರ ಕಾಂಡದ 73 ರಿಂದ 76 ರವರೆಗಿನ ಸರ್ಗಗಳಲ್ಲಿ ಬ್ರಾಹ್ಮಣ ಬಾಲಕನ ಸಾವಿನ ಘಟನೆಯನ್ನು ನಿರೀಕ್ಷಿಸುತ್ತದೆ ಎಂದು ವಾಸುದಾಸ ಸ್ವಾಮಿ ವಾದಿಸುತ್ತಾರೆ.

ಶ್ಲೋಕ 1.1.91 ವು ಅಂತಹ ಘಟನೆಯು ರಾಮರಾಜ್ಯದಲ್ಲಿ ಎಂದಿಗೂ ಸಂಭವಿಸುವುದಿಲ್ಲ ಎಂದು ಪ್ರತಿಪಾದಿಸುತ್ತದೆ. ವಾಸ್ತವಿಕ ಘಟನೆಯಲ್ಲಿ, ಸಂಬೂಕನಿಂದ ವರ್ಣವ್ಯವಸ್ಥದ ಉಲ್ಲಂಘನೆಯಾಗಿರುವುದನ್ನು ಪತ್ತೆಹಚ್ಚುವುದು ಮತ್ತು "ಧರ್ಮ"ವನ್ನು ಪುನಃಸ್ಥಾಪಿಸುವ ಮೂಲಕ ಸತ್ತ ಬಾಲಕನ ಪುನರುತ್ಥಾನದ ಘಟನೆಗಳು ತಾವು ಉತ್ತರಿಸುವುದಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.

ಈ ಪ್ರಸಂಗವು ಮಹರ್ಷಿ ವಾಲ್ಮೀಕಿಯವರು ಮೂಲ ಕಾವ್ಯವನ್ನು ರಚಿಸಿದ ಶತಮಾನಗಳ ನಂತರ ಸಂಭವಿಸಿದ ಬದಲಾಗುತ್ತಿರುವ ಸಾಮಾಜಿಕ ನೀತಿಗೆ ಸೃಜನಶೀಲ ಪ್ರತಿಕ್ರಿಯೆಯಾಗಿ ಕಂಡುಬರುತ್ತದೆ.

ಸೀತಾಮಾತೆಯ ತ್ಯಾಗದ ಬಗ್ಗೆ ಅಸ್ಪಷ್ಟ ಉಲ್ಲೇಖ: ಮೊದಲನೆಯದಾಗಿ, 1.3.10 ರಿಂದ 1.3.38 ರವರೆಗಿನ ಶ್ಲೋಕಗಳು 1.1.19 ರಿಂದ 1.1.89ರ ವರೆಗಿನ ಶ್ಲೋಕಗಳಲ್ಲಿ ನಾರದ ಮುನಿಗಳು ಪಠಿಸಿದ ಸಂಕ್ಷಿಪ್ತ (ಸಂಕ್ಷೇಪ) ರಾಮಾಯಣದ ಪುನರಾವರ್ತನೆಯಾಗಿವೆ. ಅವುಗಳನ್ನು ಬ್ರಹ್ಮ ದೇವರಿಗೆ ಅರ್ಪಿಸಲಾಗಿದೆ. ಹೀಗೆ ಪುನರಾವರ್ತನೆ ಮಾಡುವುದು ಪ್ರವಚನದಲ್ಲಿ ಉತ್ತಮ ಗುಣವೆಂದು ಪರಿಗಣಿಸಲಾದರೂ, ಕವಿತೆಯಲ್ಲಿ (ಅಥವಾ ಸಾಮಾನ್ಯವಾಗಿ ಸಾಹಿತ್ಯ ಕೃತಿ) ಹೀಗೆ ಮಾಡುವುದು ಕಳಪೆ ಲಕ್ಷಣವೆಂದು ಪರಿಗಣಿಸಲಾಗುತ್ತದೆ. ಮಹರ್ಷಿ ವಾಲ್ಮೀಕಿಯವರು ಇಂಥ ಮೂಲಭೂತ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದರೆ ಅದು ಅವರ ಕಾವ್ಯ ಪ್ರತಿಭೆಗೆ ಅಪಮಾನ ಮಾಡಿದಂತೆ.

ಎರಡನೆಯದಾಗಿ, ಮೇಲೆ ಹೇಳಲಾದ 1.3.10 ರಿಂದ 1.3.38 ವರೆಗಿನ ಈ ಶ್ಲೋಕಗಳನ್ನು ತೆಗೆದುಹಾಕಿದರೂ ಕಥೆಯ ನಿರೂಪಣೆಗೆ ಯಾವುದೇ ಅಡ್ಡಿಯುಂಟಾಗುವುದಿಲ್ಲ! ಇದು ಈ ಶ್ಲೋಕಗಳನ್ನು ನಂತರ ಸೇರಿಸಲಾಯಿತು ಎಂಬ ವಾದಕ್ಕೆ ಬಲವಾದ ಪುಷ್ಟಿ ನೀಡುತ್ತದೆ.

ಮೂರನೆಯದಾಗಿ, "ವೈದೇಯಸ್ಚ ವಿಸರ್ಜನಂ" ಎಂಬ ಪದಗುಚ್ಛವು ನಾರದ ಋಷಿಗಳ ಸಂಕ್ಷಿಪ್ತ ರಾಮಾಯಣದಲ್ಲಿ ಉಲ್ಲೇಖವೇ ಆಗಿಲ್ಲ. ಆದರೆ ಬ್ರಹ್ಮ ದೇವರಿಗೆ ಅರ್ಪಿಸಲಾದ ಕಾವ್ಯದ ಸಣ್ಣ ಆವೃತ್ತಿಯಲ್ಲಿ ಅದು ಹೇಗೋ ಬಂದು ಸೇರಿಕೊಳ್ಳುತ್ತದೆ. ಇದಲ್ಲದೆ, ಈ ಪುನರಾವರ್ತಿತ ಆವೃತ್ತಿಯಲ್ಲಿ ಉತ್ತರ ಕಾಂಡದ ಬೇರೆ ಯಾವುದೇ ಕಥೆಯ ಉಲ್ಲೇಖವಿಲ್ಲ.

ಮೇಲಿನ ಎಲ್ಲಾ ಅಂಶಗಳನ್ನು ನೋಡಲಾಗಿ- 1.3.10 ರಿಂದ 1.3.38ರ ವರೆಗಿನ ಶ್ಲೋಕಗಳನ್ನು ನಂತರ ಸೇರಿಸಲಾಗಿದೆ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತದೆ. ಇದು ಉತ್ತರ ಕಾಂಡಕ್ಕೆ ಅಧಿಕೃತತೆಯನ್ನು ನೀಡಲೆಂದೇ ಹಾಗೆ ಮಾಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ.

ಆಲೋಚಿಸಬಹುದಾದ ಇತರ ಕೆಲ ಅಂಶಗಳು ಹೀಗಿವೆ: ವಾಸುದಾಸ ಸ್ವಾಮಿಯ ವಾದಗಳು ಅಸಮರ್ಥನೀಯವಾಗಿರುವುದರ ಜೊತೆಗೆ, ಉತ್ತರ ಕಾಂಡವು ಮಹರ್ಷಿ ವಾಲ್ಮೀಕಿಯವರು ರಚಿಸಿದ ಮಹಾಕಾವ್ಯದ ಮೂಲ ಆವೃತ್ತಿಯ ಭಾಗವಾಗಿರಲಿಲ್ಲ ಎಂದು ಸೂಚಿಸುವ ಇತರ ಹಲವಾರು ಅಂಶಗಳು ನಮಗೆ ಕಂಡು ಬರುತ್ತವೆ.

ಕಥಾಹಂದರದ ಮುಕ್ತಾಯ: ಋಷಿ ನಾರದರು ವಿವರಿಸಿದ ಸಂಕ್ಷಿಪ್ತ ರಾಮಾಯಣವನ್ನು ನೋಡಿದರೆ, 1.4.1 (ಬಾಲಕಾಂಡ) ಶ್ಲೋಕದಲ್ಲಿ ಶ್ರೀರಾಮನು ತನ್ನ ರಾಜ್ಯವನ್ನು ಮರಳಿ ಪಡೆದ ಕಥೆಯನ್ನು ("ಪ್ರಾಪ್ತರಾಜ್ಯಸ್ಯ ರಾಮಸ್ಯ") ಎಷ್ಟು ಸುಂದರವಾಗಿ ಮತ್ತು ಶಕ್ತಿಯುತ ಸಂದೇಶದೊಂದಿಗೆ ನಿರೂಪಿಸಲಾಗಿದೆ ಎಂಬುದು ತಿಳಿದು ಬರುತ್ತದೆ.

ಹಾಗೆಯೇ, 1.4.7 ಶ್ಲೋಕವು ಮಹರ್ಷಿ ವಾಲ್ಮೀಕಿಯವರು ತಾವು ರಚಿಸಿದ ಮಹಾಕಾವ್ಯಕ್ಕೆ ಮೂರು ಹೆಸರುಗಳನ್ನು ಕಲ್ಪಿಸಿಕೊಂಡಿದ್ದರು ಎಂದು ಹೇಳುತ್ತದೆ. ಅವು ಹೀಗಿವೆ: "ರಾಮಾಯಣಂ" (ರಾಮನ ಮಾರ್ಗ), "ಸೀತಾಯಾಶ್ಚರಿತಂ ಮಹತ್" (ಸೀತಾಮಾತೆಯ ಮಹಾನ್ ಕಥೆ) ಮತ್ತು "ಪೌಲಸ್ತ್ಯ ವಧ" (ರಾವಣನ ವಧೆ).

ಉತ್ತರ ಕಾಂಡದಷ್ಟೇ ದೊಡ್ಡದಾದ ಮತ್ತು ವೈವಿಧ್ಯಮಯವಾದ ವಿಷಯಗಳನ್ನು ಒಳಗೊಂಡಿರುವ ಪೂರ್ಣ ಕಾಂಡದ ವಿಷಯದಲ್ಲಿ ನೋಡುವುದಾದರೆ, ಯುದ್ಧ ಕಾಂಡದ ನಂತರ ಬಂದ ಪೂರ್ಣ ಕಾಂಡಕ್ಕೆ ಮಹರ್ಷಿ ವಾಲ್ಮೀಕಿಯವರು ರಾವಣ ವಧೆಯ ವಿಷಯವಾಗಿ ಶೀರ್ಷಿಕೆ ನೀಡಲು ಸಾಧ್ಯವಿಲ್ಲ ಅನಿಸುತ್ತದೆ. ರಾಮನ ಕಿರೀಟಧಾರಣೆಯೊಂದಿಗೆ ಕಥಾವಸ್ತುವು ಕೊನೆಗೊಳ್ಳದ ಹೊರತು ಈ ಶೀರ್ಷಿಕೆಗಳು ಒಂದಕ್ಕೊಂದು ಅಸಂಗತವಾಗುತ್ತವೆ.

ಒಟ್ಟು ಎಷ್ಟು ಕಾಂಡಗಳಿವೆ?: ಮಹರ್ಷಿ ವಾಲ್ಮೀಕಿಯವರು 6 ಕಾಂಡಗಳಲ್ಲಿ ರಾಮಾಯಣವನ್ನು ("ಸತ್ ಕಾಂಡಾನಿ") ರಚಿಸಿದ್ದಾರೆ ಎಂದು ಶ್ಲೋಕ 1.4.2 (ಬಾಲಕಾಂಡ)ವು ಸ್ಪಷ್ಟವಾಗಿ ಹೇಳುತ್ತದೆ. ಇದಲ್ಲದೆ, ಸರ್ಗಗಳ ಸಂಖ್ಯೆ ಸುಮಾರು 500 ("ಸರ್ಗ ಶತಾನ್ ಪಂಚಾ") ಎಂದು ಅದು ಹೇಳುತ್ತದೆ.

ಮತ್ತೊಂದೆಡೆ, ಉತ್ತರ ಕಾಂಡವನ್ನು ರಾಮಾಯಣದ ಅವಿಭಾಜ್ಯ ಅಂಗವೆಂದು ಪರಿಗಣಿಸುವುದು ಮೇಲೆ ಹೇಳಲಾದ ವಿಚಾರಗಳಿಗೆ ವ್ಯತಿರಿಕ್ತವಾಗುತ್ತದೆ. ಹಾಗೆ ಮಾಡಿದಲ್ಲಿ ಕಾಂಡಗಳ ಸಂಖ್ಯೆ 7 ಆಗುತ್ತದೆ ಮತ್ತು ಸರ್ಗಗಳ ಸಂಖ್ಯೆ 650 ರ ಹತ್ತಿರಕ್ಕೆ ಬರುತ್ತದೆ.

ಫಲಶ್ರುತಿ: ಹಿಂದಿನ ಕಾಲದ ಯಾವುದೇ ಸಾಹಿತ್ಯ ಕೃತಿಯ ಕೊನೆಯಲ್ಲಿ, ಕೃತಿಯನ್ನು ಓದುವ ಅಥವಾ ಅದನ್ನು ಕೇಳುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವ ಒಂದು ಸಣ್ಣ ವಿಭಾಗವನ್ನು ಬರೆದಿರಲಾಗಿರುತ್ತದೆ (ಫಲಶೃತಿ). ಈ ಮಾದರಿಯನ್ನು ಆಗಿನ ಕಾಲದಲ್ಲಿ ಬಹಳ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿತ್ತು.

1.1.90 ರಿಂದ 1.1.97 ಶ್ಲೋಕಗಳು ರಾಮರಾಜ್ಯವನ್ನು ವರ್ಣಿಸುತ್ತವೆ. ಅದರ ನಂತರ, 1.1.98 ರಿಂದ 1.1.100 ರವರೆಗಿನ ಶ್ಲೋಕಗಳು ಫಲಶೃತಿಯನ್ನು ಹೊಂದಿರುವುದನ್ನು ನಾವು ನೋಡುತ್ತೇವೆ. ಅದರಂತೆ, 6.128.95 ರಿಂದ 6.128.106 ವರೆಗಿನ ಯುದ್ಧಕಾಂಡದ ಶ್ಲೋಕಗಳು 10,000 ವರ್ಷಗಳ ಕಾಲ ನಡೆದ ರಾಮರಾಜ್ಯವನ್ನು ವಿವರಿಸುತ್ತವೆ ("ದಶ ವರ್ಷ ಸಹಸ್ರಾಣಿ ರಾಮೋ ರಾಜ್ಯಮಕಾರಯತ್"). ಅದರ ನಂತರ, 6.128.107 ರಿಂದ 6.128.125 ವರೆಗಿನ ಶ್ಲೋಕಗಳು ಫಲಶ್ರುತಿಯನ್ನು ಬಹಳ ವಿವರವಾಗಿ ನಿರೂಪಿಸುತ್ತವೆ.

ಮಹರ್ಷಿ ವಾಲ್ಮೀಕಿಯವರು ರಾಮಾಯಣವನ್ನು 7 ಕಾಂಡಗಳ ಮಹಾಕಾವ್ಯವಾಗಿ ರಚಿಸಿದ್ದರೆ, ಅವರು ರಾಮ ರಾಜ್ಯದ ವಿವರಣೆಯನ್ನು (ಭವಿಷ್ಯತ್ಕಾಲದ ನಿರೂಪಣೆ) ನೀಡುತ್ತಿರಲಿಲ್ಲ, ಜೊತೆಗೆ ಯುದ್ಧಕಾಂಡವಾಗಿರುವ 6 ನೇ ಕಾಂಡದ ಕೊನೆಯಲ್ಲಿ ವಿಸ್ತಾರವಾದ ಫಲಶ್ರುತಿಯನ್ನು ಕೂಡ ನಿರೂಪಿಸುತ್ತಿರಲಿಲ್ಲ.

ದೂತನ ಹತ್ಯೆ: ಉತ್ತರ ಕಾಂಡ 13.39 ರ ಪ್ರಕಾರ, ಕೋಪಗೊಂಡ ರಾವಣನು ತನ್ನ ಸೋದರಸಂಬಂಧಿ ಕುಬೇರನು ಕಳುಹಿಸಿದ ದೂತನನ್ನು ಕೊಂದನು ("ದೂತಂ ಖಡ್ಗೇನ ಜಘ್ನಿವಾನ") ಎಂದು ಹೇಳುತ್ತದೆ. ಆದರೆ ರಾವಣನು ದೇವತೆಗಳೊಂದಿಗೆ ತನ್ನ ಆರಂಭಿಕ ಯುದ್ಧಗಳನ್ನು ನಡೆಸುತ್ತಿದ್ದಾಗ ಈ ಪ್ರಸಂಗ ಜರುಗಿತ್ತು.

ಕಾಲಾನುಕ್ರಮದಲ್ಲಿ ನೋಡುವುದಾದರೆ, ತುಂಬಾ ನಂತರದಲ್ಲಿ, ಸುಂದರ ಕಾಂಡ ಸರ್ಗ 52 ರಲ್ಲಿ, ಹನುಮಂತನನ್ನು ಕೊಲ್ಲುವಂತೆ ರಾವಣನು ನೀಡಿದ ಆಜ್ಞೆಯ ವಿರುದ್ಧವಾಗಿ ವಿಭೀಷಣನು ಸಲಹೆ ನೀಡುತ್ತಾನೆ. ಶ್ಲೋಕ 5.52.15 ರಲ್ಲಿ, ದೂತನನ್ನು ಕೊಲ್ಲುವುದನ್ನು ಯಾವತ್ತೂ ಕೇಳಿಲ್ಲ ಎಂದು ವಿಭೀಷಣ ಹೇಳುತ್ತಾನೆ ("ವಧಾಃ ತು ದೂತಸ್ಯ ನಾ ನಾಃ ಶ್ರುತೋ ಅಪಿ"). ಈ ಘಟನೆಯು ಯುದ್ಧದ ಆರಂಭದಲ್ಲಿ, ಅದಕ್ಕಿಂತ ಕೇವಲ ಒಂದು ತಿಂಗಳು ಮುಂಚಿತವಾಗಿ ಸಂಭವಿಸಿತ್ತು.

ಮೇಲಿನ ಎರಡು ನಿರೂಪಣೆಗಳು ನೇರವಾಗಿ ಪರಸ್ಪರ ವಿರುದ್ಧವಾಗಿವೆ. ಕುಬೇರನ ರಾಯಭಾರಿಯ ಕಾಲಾನುಕ್ರಮದ ಹಿಂದಿನ ಘಟನೆ ನಿಜವಾಗಿಯೂ ಸಂಭವಿಸಿದ್ದರೆ, ವಿಭೀಷಣನಿಗೆ ಖಂಡಿತವಾಗಿಯೂ ಅದರ ಬಗ್ಗೆ ತಿಳಿದಿರುತ್ತಿತ್ತು. ಮತ್ತು, ರಾವಣನು ಹನುಮಂತನನ್ನು ಕೊಲ್ಲಲು ಆದೇಶಿಸಿದಾಗ ಅದು ತನಗೆ ಗೊತ್ತೇ ಇರಲಿಲ್ಲ ಎಂದು ಅವನು ಹೇಳಿಕೊಳ್ಳುತ್ತಿರಲಿಲ್ಲ.

ಮಹಾಭಾರತದಲ್ಲಿ ರಾಮಾಯಣದ ಕಥೆ: ಮಹಾಭಾರತದ ಅರಣ್ಯ ಪರ್ವದಲ್ಲಿ, ಮಾರ್ಕಂಡೇಯ ಋಷಿ ಧರ್ಮರಾಜನಿಗೆ 272 ರಿಂದ 289 ರವರೆಗೆ ಸರ್ಗಗಳಲ್ಲಿ ರಾಮಾಯಣದ ಕಥೆಯನ್ನು ವಿವರಿಸುತ್ತಾನೆ. ಕಥೆಯ ಕೆಲವು ಅಂಶಗಳು ವಾಲ್ಮೀಕಿ ರಾಮಾಯಣದಲ್ಲಿರುವ ಅಂಶಗಳಿಗಿಂತ ಭಿನ್ನವಾಗಿರುವುದು ನಮಗೆ ಕಂಡು ಬರುತ್ತದೆ.

ಅದೇನೇ ಇದ್ದರೂ ಈ ನಿರೂಪಣೆಯ ಪ್ರಕಾರ, ರಾಮಾಯಣದ ಕಥೆಯು ಸರ್ಗ 289 ರಲ್ಲಿ ರಾಮನ ಕಿರೀಟಧಾರಣೆಯೊಂದಿಗೆ ಕೊನೆಗೊಳ್ಳುತ್ತದೆ. ಹಾಗಾಗಿ ಮಹಾಭಾರತ ರಚನೆಯಾದ ನಂತರವೇ ಉತ್ತರ ಕಾಂಡವನ್ನು ರಾಮಾಯಣ ಮಹಾಕಾವ್ಯಕ್ಕೆ ಸೇರಿಸಲಾಯಿತು ಎಂಬುದು ಇದರಿಂದ ಸ್ಪಷ್ಟವಾಗಿದೆ.

ಲವ ಮತ್ತು ಕುಶರಿಂದ ರಾಮಾಯಣ ಪಠಣ: ಬಾಲಕಾಂಡದಲ್ಲಿ 1.4.27 ರಿಂದ 1.4.29 ರವರೆಗಿನ ಶ್ಲೋಕಗಳ ಪ್ರಕಾರ, ರಾಮನು ಅಯೋಧ್ಯೆಯ ಬೀದಿಗಳಲ್ಲಿ ಲವ ಮತ್ತು ಕುಶ ಎಂಬ ಇಬ್ಬರು ಸನ್ಯಾಸಿ ಬಾಲಕರು ರಾಮಾಯಣವನ್ನು ಪಠಿಸುತ್ತಿರುವುದನ್ನು ಕಾಣುತ್ತಾನೆ. ಆಗ ರಾಮನು ಆ ಬಾಲಕರನ್ನು ತನ್ನ ಅರಮನೆಗೆ ಆಹ್ವಾನಿಸಿ ಸೂಕ್ತವಾಗಿ ಗೌರವಿಸುತ್ತಾನೆ. ನಂತರ ಲವ ಮತ್ತು ಕುಶರು ರಾಮನ ಆಸ್ಥಾನದಲ್ಲಿಯೂ ರಾಮಾಯಣವನ್ನು ಪಠಿಸುತ್ತಾರೆ.

ಮತ್ತೊಂದೆಡೆ, ರಾಮನು ಕೈಗೊಂಡಿದ್ದ ಅಶ್ವಮೇಧ ಯಾಗದ (ಕುದುರೆ ಕಟ್ಟಿ ಹಾಕುವ ಸವಾಲು) ಆಚರಣೆಗಳಲ್ಲಿ ವಿರಾಮದ ಸಮಯದಲ್ಲಿ ಲವ ಮತ್ತು ಕುಶ ರಾಮಾಯಣವನ್ನು ಪಠಿಸಿದರು ಎಂದು ಉತ್ತರ ಕಾಂಡದ ಸರ್ಗ 94 ಹೇಳುತ್ತದೆ. ನೈಮಿಶಾರಣ್ಯದಲ್ಲಿನ ಗೋಮತಿ ನದಿಯ ದಡದಲ್ಲಿ ಈ ಪ್ರಸಂಗ ಜರುಗುತ್ತದೆ.

ಈ ಪ್ರಸಂಗಗಳು ಪರಸ್ಪರ ವ್ಯತಿರಿಕ್ತವಾಗಿವೆ: ಹೀಗಾಗಿ ಇವುಗಳಲ್ಲಿ ಯಾವುದಾದರೂ ಒಂದು ಮಾತ್ರ ಸತ್ಯವಾಗಿರಲು ಸಾಧ್ಯ.

ಸೀತೆಯ ತ್ಯಾಗ: ಉತ್ತರಕಾಂಡ ಶ್ಲೋಕ 42.29 ರ ಪ್ರಕಾರ, ರಾಮ ಮತ್ತು ಸೀತೆ 10,000 ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು ಮತ್ತು ಆ ಸಮಯದಲ್ಲಿ ಅವರು ರಾಜ ವೈಭೋಗಗಳನ್ನು ಆನಂದಿಸಿದರು: "ದಶವರ್ಷ ಸಹಸ್ರಾಣಿ ಗತಾನಿ ಸುಮಹಾತ್ಮನೋಃ ಪ್ರಾಪ್ತಯೋರ್ವಿವಿಧಾನ್ ಭೋಗಾನ್". ನಂತರ, ಸೀತಾಮಾತೆಯು ಸಾಧುಗಳು ಮತ್ತು ಸನ್ಯಾಸಿಗಳೊಂದಿಗೆ ಅರಣ್ಯದಲ್ಲಿ ಸ್ವಲ್ಪ ಸಮಯ ಕಳೆಯುವ ಬಯಕೆಯನ್ನು ವ್ಯಕ್ತಪಡಿಸುತ್ತಾಳೆ.

ನಂತರ ಸರ್ಗ 43 ರಲ್ಲಿ, ರಾವಣನಿಂದ ಒಂದು ವರ್ಷ ಬಂಧನಕ್ಕೊಳಗಾದ ಸೀತೆಯನ್ನು ರಾಮನು ಒಪ್ಪಿಕೊಂಡಿದ್ದಕ್ಕಾಗಿ ಅಯೋಧ್ಯೆಯ ಕೆಲ ಪುರುಷರು ವಿಷಾದಿಸುತ್ತಿರುವ ಬಗ್ಗೆ ಭದ್ರನು ರಾಮನಿಗೆ ತಿಳಿಸುತ್ತಾನೆ. ಏಕೆಂದರೆ ಅವರು ಕೂಡ ತಮ್ಮ ಹೆಂಡತಿಯರನ್ನು ಅದೇ ರೀತಿ ನೋಡುವಂತೆ ಮಾಡುತ್ತಿದೆ ಎಂಬುದು ಅವರ ಅಭಿಪ್ರಾಯವಾಗಿರುತ್ತದೆ.

ಕಿರೀಟಧಾರಣೆಯ ನಂತರ 10,000 ವರ್ಷಗಳವರೆಗೆ ರಾಮನು ಸೀತೆಯನ್ನು ಸ್ವೀಕರಿಸಿದ್ದನ್ನು ಅಯೋಧ್ಯೆಯ ನಾಗರಿಕರು ಒಪ್ಪಿದ್ದರು ಮತ್ತು ಅದರ ನಂತರವಷ್ಟೇ ಈ ವಿಷಯದಲ್ಲಿ ನಾಗರಿಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಆರಂಭಿಸಿದರು ಎಂದು ಹೇಳುವುದು ಹಾಸ್ಯಾಸ್ಪದ ಮತ್ತು ವಿಚಿತ್ರವಾಗಿದೆ. ಅವರ ಆಕ್ಷೇಪಣೆಗಳನ್ನು ಕೇಳಿದ ನಂತರ ರಾಮನು ಸೀತೆಯನ್ನು ತ್ಯಜಿಸಿದನೆಂದು ವಾದಿಸುವುದು ಚಾರಿತ್ರ್ಯ ಹರಣವಾಗಿದೆ. ತಾರ್ಕಿಕವಾಗಿ ಈ ವಾದವು ಸಮರ್ಥನೀಯವಲ್ಲ.

ಉಪಸಂಹಾರ: ಮೇಲಿನ ಎಲ್ಲ ಕಾರಣಗಳಿಂದಾಗಿ, ಉತ್ತರ ಕಾಂಡವನ್ನು ಬಹಳ ಸಮಯದ ನಂತರ ರಾಮಾಯಣ ಮಹಾಕಾವ್ಯಕ್ಕೆ ಸೇರಿಸಲಾಯಿತು ಮತ್ತು ಪ್ರಮಾದಗಳಿಗೆ ವಿಶ್ವಾಸಾರ್ಹತೆಯನ್ನು ನೀಡಲು ಮಹಾಕಾವ್ಯದ ಮುಖ್ಯ ಪಠ್ಯದಲ್ಲಿ ಕೆಲ ಸೇರ್ಪಡೆಗಳನ್ನು ಮತ್ತು ಮಾರ್ಪಾಡುಗಳನ್ನು ಮಾಡಲಾಯಿತು ಎಂದು ನಾವು ದೃಢವಾಗಿ ತೀರ್ಮಾನಿಸಬಹುದು. ಹೀಗಾಗಿ ಉತ್ತರ ಕಾಂಡವು ಮಹಾಕಾವ್ಯದ ಅವಿಭಾಜ್ಯ ಅಂಗವಲ್ಲ.

ಲೇಖನ: ಶ್ರೀನಿವಾಸ್ ಜೊನ್ನಲಗಡ್ಡ (ಜೆಎಸ್), ಸಿಇಒ, ಈಟಿವಿ ಭಾರತ. ಶ್ರೀಯುತರು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ 30 ವರ್ಷಗಳ ಅನುಭವದೊಂದಿಗೆ, ಹಲವಾರು ಜಾಗತಿಕ ಶ್ರೇಣಿಯ ಕಂಪನಿಗಳಿಗೆ ಕಾರ್ಯತಂತ್ರದ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀನಿವಾಸ್ ಅವರು ಡಿಜಿಟಲ್ ವಲಯದ ಮಾನ್ಯತೆ ಪಡೆದ ತಜ್ಞರಾಗಿದ್ದಾರೆ ಮತ್ತು ಭಾರತೀಯ ಸಂಸ್ಕೃತಿ ಮತ್ತು ತತ್ವಶಾಸ್ತ್ರದಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದ್ದಾರೆ. ಅವರು ವಿವಿಧ ವಿಚಾರ ಸಂಕಿರಣಗಳಲ್ಲಿ ಅತಿಥಿ ಭಾಷಣಕಾರ / ಪ್ಯಾನಲಿಸ್ಟ್ ಆಗಿ ವಿಚಾರಗಳನ್ನು ಮಂಡನೆ ಮಾಡಿದ್ದಾರೆ. ಅವರು ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಪಡಿಸಿದ್ದಾರೆ.

Last Updated : Aug 25, 2024, 1:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.