ETV Bharat / opinion

ಮೊಬೈಲ್ ಕರೆ ದರ ಹೆಚ್ಚಳ ಮತ್ತು ಟೆಲಿಕಾಂ ಉದ್ಯಮದಲ್ಲಿ ತರ್ಕಬದ್ಧ ಬೆಲೆ ನಿಗದಿ: ಒಂದು ವಿಶ್ಲೇಷಣೆ - TELECOM PRICE RISE

author img

By ETV Bharat Karnataka Team

Published : Jul 19, 2024, 11:08 AM IST

ಟೆಲಿಕಾಂ ಕಂಪನಿಗಳ ಆದಾಯ ಸುಧಾರಣೆ ಮತ್ತು ಉದ್ಯಮದಲ್ಲಿ ಸಮಾನ ಅವಕಾಶಗಳನ್ನು ಸೃಷ್ಟಿಸುವ ಅಗತ್ಯದ ಬಗ್ಗೆ ಒಂದು ಅವಲೋಕನ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ಸರಕುಗಳನ್ನು ತಯಾರಿಸುವ ಯಾವುದೇ ಪ್ರಮುಖ ಉದ್ಯಮವು ಆರಂಭದಲ್ಲಿ ಒಂದು ಕಾರ್ಖಾನೆಯೊಂದಿಗೆ ಪ್ರಾರಂಭವಾಗುತ್ತದೆ. ಅದರ ಉತ್ಪನ್ನಗಳನ್ನು ಗ್ರಾಹಕರು ಎಷ್ಟು ಪ್ರಮಾಣದಲ್ಲಿ ಖರೀದಿಸುತ್ತಾರೆ ಎಂಬುದನ್ನು ಆಧರಿಸಿ ಕಾರ್ಖಾನೆಗಳನ್ನು ಮತ್ತಷ್ಟು ಸ್ಥಳಗಳಿಗೆ ವಿಸ್ತರಿಸಲಾಗುತ್ತದೆ. ಹೀಗೆ ಕ್ರಮೇಣ ಕಂಪನಿಗಳು ಸ್ಥಳೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದ ಮಾರುಕಟ್ಟೆಗಳಿಗೆ ಪ್ರವೇಶಿಸುತ್ತವೆ. ಈ ವಿಭಾಗಗಳಲ್ಲಿ, ಗ್ರಾಹಕರು ತಮ್ಮ ವೈಯಕ್ತಿಕ ಗ್ರಹಿಕೆಯ ಆಧಾರದ ಮೇಲೆ ಬ್ರಾಂಡ್​ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವ್ಯವಹಾರಗಳ ಕ್ಯಾಪೆಕ್ಸ್ ಮಾರಾಟದ ವೆಚ್ಚದೊಂದಿಗೆ ಸಮನ್ವಯದಲ್ಲಿರುತ್ತದೆ, ಇದು ಅವರ ಲಾಭಾಂಶವನ್ನು ಅನುಸರಣಾ ಬಂಡವಾಳಕ್ಕಾಗಿ ಬಳಕೆ ಮಾಡಲು ಅನುವು ಮಾಡಿಕೊಡುತ್ತದೆ. ಅಂದರೆ ಆರಂಭಿಕ ವೆಚ್ಚವು ಕನಿಷ್ಠವಾಗಿರಬಹುದು.

ಆದರೆ, ಸೇವಾ ಉದ್ಯಮವಾಗಿರುವ ಟೆಲಿಕಾಂ ಕ್ಷೇತ್ರದ ಕಥೆ ಹಾಗಿರುವುದಿಲ್ಲ. ರಾಷ್ಟ್ರಮಟ್ಟದಲ್ಲಿ ತಡೆರಹಿತ ಮೊಬೈಲ್ ಸಂಪರ್ಕವನ್ನು ಒದಗಿಸಲು ಪರವಾನಗಿ ಪಡೆದ ಸೇವಾ ಪ್ರದೇಶ ಅಥವಾ ರಾಷ್ಟ್ರಾದ್ಯಂತ ಈ ಸೇವೆಯನ್ನು ಒಂದೇ ಬಾರಿಗೆ ಆರಂಭಿಸಬೇಕಾಗುತ್ತದೆ. ಚಾಲ್ತಿಯಲ್ಲಿರುವ ಸರ್ಕಾರದ ನೀತಿ, ಸ್ಪೆಕ್ಟ್ರಮ್ ಲಭ್ಯತೆ, ನಿಯಂತ್ರಕ ಬಿಕ್ಕಟ್ಟುಗಳು, ಹಾರ್ಡ್​ವೇರ್ ದೀರ್ಘಾಯುಷ್ಯ ಮತ್ತು ಹೊಂದಾಣಿಕೆ, ಭವಿಷ್ಯದ ತಾಂತ್ರಿಕ ಬದಲಾವಣೆಗಳು, ಸೇವಾ ಪ್ರದೇಶದ ವೈವಿಧ್ಯಮಯ ಭೌಗೋಳಿಕ ಪರಿಸ್ಥಿತಿಗಳಂತಹ ಎಲ್ಲ ನಿಯತಾಂಕಗಳನ್ನು ಗಣನೆಗೆ ತೆಗೆದುಕೊಂಡರೆ ಈ ವಲಯದಲ್ಲಿ ಹೂಡಬೇಕಾದ ಬಂಡವಾಳದ ಮೊತ್ತ ಬಹಳ ದೊಡ್ಡದಾಗಿದೆ.

ಈ ತೊಂದರೆಯನ್ನು ನಿವಾರಿಸಲು ಟಿಎಸ್​ಪಿಗಳು ವಿವಿಧ ರೀತಿಯ ಉಚಿತ ಕೊಡುಗೆಗಳ ಆಫರ್​ಗಳನ್ನು ನೀಡುತ್ತಾರೆ. ಕಂಪನಿಯನ್ನು ಲಾಭದಾಯಕವಾಗಿಸಲು ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಟಿಎಸ್​ಪಿಗಳಿಂದ, ವಿಶೇಷವಾಗಿ ಬಿಎಸ್ಎನ್ಎಲ್ / ಎಂಟಿಎನ್ಎಲ್​ನಿಂದ ದೊಡ್ಡ ಪ್ರಮಾಣದಲ್ಲಿ ಗ್ರಾಹಕರನ್ನು ತಮ್ಮತ್ತ ಸೆಳೆದುಕೊಳ್ಳಲು ವಿವಿಧ ಉತ್ಪನ್ನಗಳ ಬೆಲೆಗಳನ್ನು ಉದ್ದೇಶ ಪೂರ್ವಕವಾಗಿ ವಾಸ್ತವ ಬೆಲೆಗಿಂತ ಕಡಿಮೆ ಇರಿಸಲಾಗಿದೆ. ಜನವರಿ 2011 ರಿಂದ ಟ್ರಾಯ್ ಎಂಎನ್​ಪಿಗೆ ಅವಕಾಶ ನೀಡಿದ್ದಕ್ಕೆ ಅದಕ್ಕೆ ಧನ್ಯವಾದ ಹೇಳಬೇಕು. 1990 ರ ಉದಾರೀಕರಣದ ನಂತರ, ಡಜನ್​ಗಟ್ಟಲೆ ಟಿಎಸ್​ಪಿಗಳು ಸ್ಪರ್ಧಾತ್ಮಕ ವಾತಾವರಣದಲ್ಲಿ ಮೊಬೈಲ್ ಸೇವೆಗಳನ್ನು ಹೊರತರಲು ಮುಂದಾದವು ಮತ್ತು 2004 ರಲ್ಲಿ ಆರ್​ ಕಾಮ್ ಪ್ರವೇಶದೊಂದಿಗೆ ತರ್ಕಬದ್ಧವಲ್ಲದ ಬೆಲೆ ನಿಗದಿಯ ದರಸಮರ ವೇಗ ಪಡೆಯಿತು. ಅದರ ಮುಂದಿನ ದಶಕದಲ್ಲಿ ಅನೇಕ ಸಣ್ಣ ಟಿಎಸ್​ಪಿಗಳು ನಷ್ಟಕ್ಕೀಡಾಗಿ ನಾಶವಾದವು. ಅಂಥ ಪ್ರಮುಖ ಟಿಎಸ್​ಪಿಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಟೆಲಿಕಾಂ ಸೇವಾ ಪೂರೈಕೆದಾರರ ಪಟ್ಟಿ:

ಆಪರೇಟರ್ ಆರಂಭದ ವರ್ಷ ಮುಚ್ಚಿದ ವರ್ಷ ಸ್ಥಗಿತಕ್ಕೆ ಕಾರಣ
ಮೋದಿ ಟೆಲ್​ ಸ್ಟ್ರಾ 1990 2001 ಸ್ಪೈಸ್ ಕಮ್ಯುನಿಕೇಶನ್ ಜೊತೆಗೆ ವಿಲೀನ
ಸ್ಪೈಸ್ ಕಮ್ಯುನಿಕೇಶನ್ 1992 2010 ಐಡಿಯಾ ಸೆಲ್ಯುಲರ್ ಜೊತೆಗೆ ವಿಲೀನ
ಬಿಪಿಎಲ್ ಮೊಬೈಲ್ 1995 2014 ಲೈಸೆನ್ಸ್​ ಅವಧಿ ಮುಕ್ತಾಯ
ಎಸ್ಕೊಟೆಲ್ 1996 2004ಐಡಿಯಾ ಸೆಲ್ಯುಲರ್ ಜೊತೆಗೆ ವಿಲೀನ
ಹಚ್ ಎಸ್ಸಾರ್1999 2007ವೊಡಾಫೋನ್ ಐಡಿಯಾದಿಂದ ಸ್ವಾಧೀನ
ಏರ್​ ಸೆಲ್ 1999201912 ಸಾವಿರ ಕೋಟಿ ರೂ. ನಷ್ಟ- ದಿವಾಳಿ
ಐಡಿಯಾ ಸೆಲ್ಯುಲರ್ 20022018ವೊಡಾಫೋನ್ ಐಡಿಯಾ ಜೊತೆಗೆ ವಿಲೀನ
ಆರ್​ ಕಾಮ್ 20042019 ಆರ್​ ಜಿಯೊ ದಿಂದ ಸ್ವಾಧೀನ
ಟೆಲೆನಾರ್ ಇಂಡಿಯಾ 20082018 ಭಾರ್ತಿ ಏರ್​ ಟೆಲ್​ನಿಂದ ಸ್ವಾಧೀನ
ವರ್ಜಿನ್ ಮೊಬೈಲ್ 20082015ಟಾಟಾ ಡೊಕೊಮೊ ಜೊತೆ ವಿಲೀನ
ಟಾಟಾ ಡೊಕೊಮೊ 2009 2019ಭಾರ್ತಿ ಏರ್ಟೆಲ್​​ನಿಂದ ಸ್ವಾಧೀನ
ಎಂಟಿಎಸ್​ ಇಂಡಿಯಾ2009 2017ಆರ್​ ಕಾಮ್​ನಿಂದ ಸ್ವಾಧೀನ
ವಿಡಿಯೊಕಾನ್ ಟೆಲಿಕಾಮ್ 20102016 ತರಂಗಾಂತರ ಏರ್ ಟೆಲ್​ಗೆ ಮಾರಾಟ
ವೋಡಾಫೋನ್ ಇಂಡಿಯಾ20072018ವೋಡಾಫೋನ್ ಐಡಿಯಾ ಜೊತೆ ವಿಲೀನ

1995ರ ಜುಲೈ 31ರಂದು ಕಲ್ಕತ್ತಾದಿಂದ ನವದೆಹಲಿಯಲ್ಲಿ ಆಗಿನ ಕೇಂದ್ರ ದೂರಸಂಪರ್ಕ ಸಚಿವ ಸುಖ್ ರಾಮ್ ಅವರಿಗೆ ಮೋದಿ ಟೆಲ್ ಸ್ಟ್ರಾ ಮೊಬೈಲ್ ನೆಟ್​ವರ್ಕ್​​ನಿಂದ ಪ್ರಥಮ ಮೊಬೈಲ್ ಕರೆ ಮಾಡುವ ಮೂಲಕ ಅಂದಿನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಅವರು ಟೆಲ್ ಸ್ಟ್ರಾ ಮೊಬೈಲ್ ನೆಟ್​ವರ್ಕ್​ ಅನ್ನು ಉದ್ಘಾಟಿಸಿದ್ದರು ಎಂಬುದು ಗಮನಾರ್ಹ.

2016 ರಲ್ಲಿ ಜಿಯೋ ಪಾದಾರ್ಪಣೆ ಮಾಡಿದ ನಂತರ ಮಾರುಕಟ್ಟೆಯ ಪರಿಸ್ಥಿತಿಗಳು ಗಮನಾರ್ಹವಾಗಿ ಬದಲಾದವು. ಕಂಪನಿಯು ತನ್ನ ಕಾರ್ಯಾಚರಣೆಯ ಮೊದಲ ವರ್ಷದಲ್ಲಿ ಉಚಿತ ಡೇಟಾ, ಧ್ವನಿ ಸೇವೆಗಳನ್ನು ನೀಡಿತು. ಇದು ಮಾರುಕಟ್ಟೆಯಲ್ಲಿ ತೀವ್ರ ಬೆಲೆ ಸಮರಕ್ಕೆ ಕಾರಣವಾಯಿತು. ಜಿಯೋ ತನ್ನ ಕಾರ್ಯಾಚರಣೆಯ ಮೊದಲ 6 ತಿಂಗಳಲ್ಲಿ 100 ಮಿಲಿಯನ್ ಚಂದಾದಾರರನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಭಾರ್ತಿ ಏರ್ ಟೆಲ್ ಮಾತ್ರ ಈ ಪೈಪೋಟಿಯನ್ನು ತಡೆಯಲು ಶಕ್ತವಾಯಿತು. ಐಡಿಯಾ ಸೆಲ್ಯುಲಾರ್ ಮತ್ತು ವೊಡಾಫೋನ್ ಇಂಡಿಯಾ ಲಿಮಿಟೆಡ್ 2018 ರಲ್ಲಿ ವಿಲೀನಗೊಂಡು ವೊಡಾಫೋನ್ ಐಡಿಯಾ ಲಿಮಿಟೆಡ್ ಅನ್ನು ರಚಿಸಬೇಕಾಯಿತು. ಈ ಪ್ರಮುಖ ವಲಯದಲ್ಲಿ ದ್ವಂದ್ವವನ್ನು ತಪ್ಪಿಸಲು ಎಜಿಆರ್ ಬಾಕಿಗಳ ವಿಳಂಬ ಪಾವತಿ, ಬಾಕಿಗಳನ್ನು ಈಕ್ವಿಟಿಗೆ ಪರಿವರ್ತಿಸುವುದು ಇತ್ಯಾದಿಗಳನ್ನು ಪರಿಗಣಿಸುವಲ್ಲಿ ವಿಐಎಲ್ ಬಗ್ಗೆ ಸರ್ಕಾರ ಸಹಾನುಭೂತಿ ಹೊಂದಿರುವುದು ಅಗತ್ಯವಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ 2024 ರ ಜೂನ್ 25 ರ ಸ್ಪೆಕ್ಟ್ರಮ್ ಹರಾಜಿನಲ್ಲಿ, ಸರ್ಕಾರವು 96,238 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 10,500 ಮೆಗಾಹರ್ಟ್ಸ್ ರೇಡಿಯೋ ತರಂಗಗಳನ್ನು ಹರಾಜಿಗೆ ಇಟ್ಟಿತ್ತು. ಏರ್ ಟೆಲ್, ಆರ್ ಜಿಯೋ ಮತ್ತು ವಿಐಎಲ್ ಒಟ್ಟಾಗಿ 11,341 ಕೋಟಿ ರೂ.ಗೆ ಕೇವಲ 141.4 ಮೆಗಾಹರ್ಟ್ಸ್ ಅನ್ನು ಖರೀದಿಸಿವೆ. ಇದು ಭಾರತ ಸರ್ಕಾರದ ಬಜೆಟ್ ಆದಾಯವನ್ನು ಗಣನೀಯವಾಗಿ ಕಡಿಮೆ ಮಾಡಿತು. ಟೆಲಿಕಾಂ ಕಂಪನಿಗಳು ಹಣದ ಕೊರತೆ ಎದುರಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಖಾಸಗಿ ಟಿಎಸ್​ಪಿಗಳು ಅಳವಡಿಸಿಕೊಂಡ ಅನೈತಿಕ ಸ್ಪರ್ಧೆ ಮತ್ತು ತರ್ಕಬದ್ಧವಲ್ಲದ ಬೆಲೆಯಿಂದಾಗಿ, ಭಾರತೀಯ ಗ್ರಾಹಕರು ಎರಡು ದಶಕಗಳಿಗಿಂತ ಹೆಚ್ಚು ಕಾಲ ಯಾವುದೇ ವೆಚ್ಚವಿಲ್ಲದೇ ಅಥವಾ ಕಡಿಮೆ ವೆಚ್ಚದಲ್ಲಿ ಡೇಟಾವನ್ನು ಆನಂದಿಸಿದರು. ದೀರ್ಘಕಾಲದವರೆಗೆ ವಿಶ್ವದ 237 ದೇಶಗಳ ಪೈಕಿ ಭಾರತದಲ್ಲಿ ಡೇಟಾ ತೀರಾ ಅಗ್ಗವಾಗಿತ್ತು. ಪ್ರಸ್ತುತ ಭಾರತ 8 ನೇ ಸ್ಥಾನದಲ್ಲಿದೆ. ಯುಕೆ 58 ಮತ್ತು ಯುಎಸ್ಎ 219 ನೇ ಸ್ಥಾನದಲ್ಲಿದೆ. ಈಗ ಮೂರು ಟೆಲಿಕಾಂ ಕಂಪನಿಗಳು ಸುಂಕವನ್ನು ಶೇ 12 ರಿಂದ 25ರಷ್ಟು ಹೆಚ್ಚಿಸಿವೆ ಮತ್ತು ಎಆರ್​ಪಿಯು ಪ್ರಸ್ತುತ 200 ಮಟ್ಟದಿಂದ 2025 ರ ಹಣಕಾಸು ವರ್ಷದ ಅಂತ್ಯದ ವೇಳೆಗೆ 300 ರೂಪಾಯಿಗಳಿಗೆ ಏರುವ ನಿರೀಕ್ಷೆಯಿದೆ. ಕ್ಯಾಪೆಕ್ಸ್ ಮೇಲಿನ ತರ್ಕಬದ್ಧ ಆದಾಯವು ಟೆಲಿಕಾಂ ಕಂಪನಿಗಳನ್ನು ಲಾಭದಾಯಕವಾಗಿಸುತ್ತದೆ ಮತ್ತು ಅಗತ್ಯಕ್ಕೆ ತಕ್ಕಂತೆ ಅದರ ಟವರ್ ಮೂಲಸೌಕರ್ಯವನ್ನು ಹೆಚ್ಚಿಸುವ ಮೂಲಕ, ಕರೆ ಡ್ರಾಪ್ ಆಗುವುದನ್ನು ತಪ್ಪಿಸುವ ಮೂಲಕ ಬೆಳವಣಿಗೆಯೊಂದಿಗೆ ಏಕಕಾಲದಲ್ಲಿ ಕ್ಯೂಒಎಸ್ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ ಎಂದು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗ್ರಾಹಕರ ತುಷ್ಟೀಕರಣವು ಕ್ರಮೇಣ ಸಂಪೂರ್ಣ ನಿಲ್ಲಬೇಕಿದೆ.

ನಿಯಂತ್ರಕ ಪ್ರಾಧಿಕಾರ ಮತ್ತು ಭಾರತ ಸರ್ಕಾರವು ತರ್ಕಬದ್ಧ ಬೆಲೆ ನಿಗದಿಯ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಇದು ಟಿಎಸ್​ಪಿಗಳಿಗೆ ಮಾತ್ರವಲ್ಲ, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೂ ಪ್ರಯೋಜನ ನೀಡುತ್ತದೆ. ಟಿಎಸ್​ಪಿಗಳಿಂದ ಉಂಟಾಗುವ ಎನ್​ಪಿಎಗಳನ್ನು ಕಡಿಮೆ ಮಾಡುತ್ತದೆ. ಸ್ಪೆಕ್ಟ್ರಮ್​​ನ ಮೂಲ ಬೆಲೆ ಮತ್ತು ಎಜಿಆರ್ ಬಾಕಿಗಳನ್ನು ಪೂರ್ಣವಾಗಿ ವಸೂಲಿ ಮಾಡುವಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳಬಾರದು. ಇದು ತನ್ನದೇ ಆದ ಹಣಕಾಸಿನ ಸಂಗ್ರಹಕ್ಕೆ ಸಹಾಯ ಮಾಡುತ್ತದೆ. ಇದರಿಂದ ಗ್ರಾಹಕರು ಡೇಟಾವನ್ನು ಬೇಕಾಬಿಟ್ಟಿಯಾಗಿ ಬಳಸುವುದನ್ನು ತಡೆಯಬಹುದು.

ಲೇಖನ : ಎಂ ಆರ್ ಪಟ್ನಾಯಕ್, ನಿವೃತ್ತ ಡೆಪ್ಯುಟಿ ಜನರಲ್ ಮ್ಯಾನೇಜರ್, ಬಿಎಸ್ಎನ್ಎಲ್, ವಿಶಾಖಪಟ್ಟಣಂ.

ಇದನ್ನೂ ಓದಿ: ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಉದ್ಯೋಗಗಳ ಸೃಷ್ಟಿ: ಅವಲೋಕನ - Employment creation

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.