ETV Bharat / opinion

ಕಾಶ್ಮೀರದಲ್ಲಿ ಮತ್ತೆ ಮುನ್ನಲೆಗೆ ಬಂದ ಅಬ್ದುಲ್ಲಾ:ಕಣಿವೆ ರಾಜ್ಯದಲ್ಲಿ ಮುಂದುವರಿದ ಅನಿಶ್ಚಿತತೆ, ಗೊಂದಲ - KASHMIR POLITICS

ಕಾಶ್ಮೀರ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತಾಗಿ 'ಈಟಿವಿ ಭಾರತ್'​ ಸಂಪಾದಕರಾದ ಬಿಲಾಲ್​ ಭಟ್ ಅವರು​ ಬರೆದ ಲೇಖನ ಇಲ್ಲಿದೆ.

kashmir-politics-abdullahs-again-in-the-forefront-the-saga-of-uncertainty-and-perplexity
ವಾರ್ಷಿಕ ಉರುಸ್​ ಅಂಗವಾಗಿ ಚರಾರ್-ಎ-ಶರೀಫ್​ಗೆ ಒಮರ್​ ಅಬ್ಧುಲ್ಲಾ ಭೇಟಿ ನೀಡಿದ್ದ ಫೋಟೋ (PTI)
author img

By ETV Bharat Karnataka Team

Published : Nov 4, 2024, 3:03 PM IST

ದಶಕಗಳ ಬಳಿಕ ವಿಧಾನಸಭೆ ಚುನಾವಣೆ ಎದುರಿಸಿದ ಜಮ್ಮು ಕಾಶ್ಮೀರ ರಾಜಕೀಯ ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಅದರಲ್ಲೂ ನ್ಯಾಷನಲ್​ ಕಾನ್ಫರೆನ್ಸ್​ (ಎನ್‌ಸಿ) ಸರ್ಕಾರ ರಚಿಸಿದ ಬಳಿಕ ಇದು ಮತ್ತಷ್ಟು ರೋಚಕತೆ ಪಡೆದುಕೊಂಡಿದೆ. ಚುನಾವಣಾ ಸಮಯದಲ್ಲಿ ಜಮ್ಮು ನಗರದ ಹತ್ತಿರದ ಜಿಲ್ಲೆಗಳು ಬಿಜೆಪಿಗೆ ಮತ್ತಷ್ಟು ಹತ್ತಿರವಾಗಿವೆ. ಸಾಂದರ್ಭಿಕವಾಗಿ ತಪ್ಪಿಸಿಕೊಳ್ಳಬೇಕು ಎಂದು ಅಲ್ಲಿನ ಜನ ಬಯಸಿದರೂ ಬಿಜೆಪಿಯ ಅಜೆಂಡಾಗಳು ಅವರನ್ನು ಹೆಚ್ಚು ಆಕರ್ಷಣೆಗೊಳಗಾಗುವಂತೆ ಮಾಡಿವೆ.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಐದನೇ ಸಂಸ್ಥಾಪನ ದಿನದ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕರು ಗೈರು ಹಾಜರಾದ ಬಳಿಕ ಈ ಗೊಂದಲಗಳು ಮುಂದುವರೆದಿವೆ. ಜಮ್ಮು ಜನರು ಬಿಜೆಪಿಗೆ ಅತ್ಯಂತ ಉತ್ಸಾಹದಿಂದಲೇ ಮತ ಚಲಾಯಿಸಿದ್ದಾರೆ. ಬಿಜೆಪಿ ಪರ ಘೋಷಣೆಗಳನ್ನು ಮೊಳಗಿಸಿ ಸಂವಿಧಾನದ ವಿಧಿ 370ಕ್ಕೆ ರದ್ದತಿಯನ್ನು ಬೆಂಬಲಿಸಿದ್ದರು.

kashmir-politics-abdullahs-again-in-the-forefront-the-saga-of-uncertainty-and-perplexity
ವಾರ್ಷಿಕ ಉರುಸ್​ ಅಂಗವಾಗಿ ಚರಾರ್-ಎ-ಶರೀಫ್​ ನಲ್ಲಿ ಒಮರ್​ ಅಬ್ಧುಲ್ಲಾ ಪ್ರಾರ್ಥನೆ (ಪಿಟಿಐ)

ಇದಕ್ಕೆ ತದ್ವಿರುದ್ಧವಾಗಿ ಕಾಶ್ಮೀರದ ಜನರು ಹಳೆಯ ಪಕ್ಷವಾದ ನ್ಯಾಷನಲ್​ ಕಾನ್ಫರೆನ್ಸ್​ ಕುರಿತಾದ ಹಿಂದಿನ ವಿವಾದವನ್ನು ಮರೆತು, ಅದೇ ತಮ್ಮ ಉತ್ತಮ ಆಯ್ಕೆ ಎಂದು ಈ ಚುನಾವಣೆಯಲ್ಲಿ ಮಣೆ ಹಾಕಿದರು. ಇದೇ ವೇಳೆ ಪಿಡಿಪಿ ವಿರುದ್ಧ ಸೇಡು ಸಹ ತೀರಿಸಿಕೊಂಡು ಆ ಪಕ್ಷವನ್ನು ಅಧಿಕಾರದಿಂದ ದೂರ ಇಡುವಲ್ಲಿಯೂ ಯಶಸ್ವಿಯಾಗಿದ್ಧಾರೆ.

ಮತ್ತೆ ನಾಷನಲ್​ ಕಾನ್ಫರೆನ್ಸ್​ ಜಮ್ಮು - ಕಾಶ್ಮೀರ ಆಡಳಿತ ಚುಕ್ಕಾಣಿ ಹಿಡಿದಿದೆ. ರಾಜ್ಯದ ಅಭಿವೃದ್ದಿ ಹಾಗೂ ರಾಜ್ಯದ ಸ್ಥಾನಮಾನ ತಂದು ಕೊಡುವ ಭರವಸೆಯೊಂದಿಗೆ ಎನ್​​ಸಿ ಕಾಶ್ಮೀರದ ಗದ್ದುಗೆ ಏರಿದೆ. ಆದರೆ, ಹಿಂದಿನಂತೆ ಹೊಸ ಆಡಳಿತಕ್ಕೆ ಅಪರಮಿತ ಅಧಿಕಾರ ಇಲ್ಲ. ಈ ಬಾರಿ ಎನ್​​ಸಿ ಸೀಮಿತ ಅಧಿಕಾರದ ವ್ಯಾಪ್ತಿಯಲ್ಲೇ ಆಡಳಿತ ನಡೆಸಬೇಕಿದೆ. ಮತ್ತೊಂದು ಕಡೆ, ವಿಧಾನಸಭೆ ಕೂಡ ಹಿಂದೆ ಹೊಂದಿದ್ದ ತನ್ನ ಶಕ್ತಿಶಾಲಿ ಅಧಿಕಾರವನ್ನು ಮೊಟಕು ಮಾಡಿಕೊಂಡಿದೆ. ಅದರ ಬಲ ಕುಗ್ಗಿದೆ. ಈ ಬಾರಿ ಕಾಶ್ಮೀರ ವಿಧಾನಸಭೆಯ ಸದಸ್ಯರು ಕೊಂಚವೇ ಅಧಿಕಾರ ಹೊಂದಿದ್ದಾರೆ. ಅಧಿಕಾರದ ಬಹುಪಾಲು ಕೇಂದ್ರದಿಂದ ನೇರ ನಿಯಂತ್ರಣಕ್ಕೆ ಒಳಪಟ್ಟಿದ್ದು, ಕೇಂದ್ರಾಡಳಿತದ ಅಧಿಕಾರ ಸೀಮಿತ ಆದೇಶಗಳಿಗೆ ಒಳಪಟ್ಟಿದೆ.

ಅ. 29ರಂದು ಪಟೇಲರ ಜನ್ಮದಿನದ ಅಂಗವಾಗಿ 'ಏಕತೆಗಾಗಿ ಓಟ' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಒಮರ್​ ಅಬ್ದುಲ್ಲಾ (PTI)

ಮುಖ್ಯಮಂತ್ರಿಗಳು ಮತ್ತು ಕ್ಯಾಬಿನೆಟ್ ಸಚಿವರು ಲೆಫ್ಟಿನೆಂಟ್​ ಗವರ್ನರ್​ ಅವರ ಮರ್ಜಿಗೆ ಒಳಗಾಗಿ ಅಧಿಕಾರವನ್ನು ಚಲಾಯಿಸಬೇಕಾಗಿದೆ. ಅಂದರೆ ಕೇಂದ್ರ ಸರ್ಕಾರದ ಅನುಮತಿಯ ಮೇಲೆಯೇ ಅಧಿಕಾರವನ್ನು ಚಲಾಯಿಸಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ. ಹೀಗಾಗಿ ಎನ್​ಸಿ ಜೊತೆಗೆ ಕಾಂಗ್ರೆಸ್​ ಮೈತ್ರಿ ಹೊಂದಿದ್ದರೂ ಅವರ ಜೊತೆ ಮಾತುಕತೆ ಸುಲಭವಾಗಿಲ್ಲ. ಒಂದು ಕಾಲದಲ್ಲಿ ಎನ್​ಸಿ ಎನ್​ಡಿಎ ಭಾಗವಾಗಿತ್ತು. ಆಗ ಬಿಜೆಪಿ ನಾಯಕತ್ವದ ಜೊತೆ ಸಖ್ಯ ಹೊಂದಿದ್ದರಿಂದ ಒಮರ್​ ಅಬ್ದುಲ್ಲಾ ಬಗ್ಗೆ ಪರಸ್ಪರ ಅವರಲ್ಲೊಂದು ಮೃದುಧೋರಣೆ ಇದ್ದೇ ಇದೆ.

ಅ. 20, 2024ರಲ್ಲಿ ಕಾಶ್ಮೀರಿ ಮ್ಯಾರಾಥಾನ್​ನಲ್ಲಿ ಒಮರ್​ ಅಬ್ಧುಲ್ಲಾ ಓಟ (ಎಪಿ)

ಚುನಾವಣಾ ಪೂರ್ವ ಮೈತ್ರಿ ಇದ್ದರೂ ಕಾಂಗ್ರೆಸ್​ ಸರ್ಕಾರದ ಭಾಗವಾಗಿಲ್ಲ: ಚುನಾವಣಾಪೂರ್ವ ಮೈತ್ರಿಯನ್ನು ಎನ್​ಸಿಯೊಂದಿಗೆ ಹೊಂದಿದ್ದರೂ ಕಾಂಗ್ರೆಸ್​, ಒಮರ್​ ಅಬ್ದುಲ್ಲಾ ನೇತೃತ್ವದ ಕ್ಯಾಬಿನೆಟ್​ನ ಭಾಗವಾಗಿಲ್ಲ. ಅಧಿಕಾರ ಸ್ವೀಕಾರದ ಬಳಿಕ ಸಿಎಂ ಒಮರ್​ ಅಬ್ದುಲ್ಲಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಭೇಟಿಗೆ ಕಾಂಗ್ರೆಸ್​ ಏನೂ ಅತ್ಯುತ್ಸಾಹವನ್ನೇನು ತೋರ್ಪಡಿಸಿಲ್ಲ.

ಸರ್ಕಾರ ರಚನೆಯಾದ ಬಳಿಕ ಕಚೇರಿಯಲ್ಲಿ ಉಪ ಮುಖ್ಯಮಂತ್ರಿ ಸುರಿಂದರ್​ ಚೌದರಿ ಜೊತೆ ಸಿಎಂ ಒಮರ್​ ಅಬ್ದುಲ್ಲಾ (PTI)

ಕಾಂಗ್ರೆಸ್​ ಜತೆ ಅಷ್ಟೊಂದು ಸುಮಧುರ ಸಂಬಂಧವೇನೂ ಇಲ್ಲ: ಕಾಂಗ್ರೆಸ್​ ಜೊತೆಗೆ ನ್ಯಾಷನಲ್​ ಕಾನ್ಸರೆನ್ಸ್ ಉತ್ತಮ ಬಾಂಧವ್ಯ ಹೊಂದಲು ಯಾವುದೇ ಉತ್ತಮ ನೆನಪು ಕೂಡ ಹೊಂದಿಲ್ಲ ಎಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕಾಗುತ್ತದೆ. ನಾಷನಲ್​ ಕಾನ್ಫರೆನ್ಸ್​ ಸಂಸ್ಥಾಪಕ ಶೇಕ್​ ಅಬ್ದುಲ್ಲಾ ಅವರನ್ನು ಜವಾಹರ್​ ಲಾಲ್​ ನೆಹರು ಜೈಲಿಗೆ ಹಾಕಿದ್ದರು. ಇಂದಿರಾ ಗಾಂಧಿ ಪ್ರಧಾನಿಯಾದಾಗ ಫಾರೂಕ್ ಅಬ್ಧುಲ್ಲಾ ಅವರನ್ನು ಮೂಲೆಗೆ ತಳ್ಳಿದರು. ಒಬ್ಬರ ಬೆಳವಣಿಗೆಯನ್ನು ಒಬ್ಬರು ನೋಡಿಕೊಳ್ಳುವ ಹೊರತಾಗಿ ಒಮರ್​ ಅಬ್ಧುಲ್ಲಾ ಮತ್ತು ಗಾಂಧಿ ಒಡಹುಟ್ಟಿದವರ ನಡುವೆ ಹಂಚಿಕೊಳ್ಳುವಂತಹ ಯಾವುದೇ ದೊಡ್ಡ ನೆನಪುಗಳಿಲ್ಲ. ಇದು ಸಹ ಎರಡೂ ಪಕ್ಷಗಳ ನಡುವೆ ಬಾಂಧವ್ಯ ಗಟ್ಟಿ ನೆಲೆ ಹೊಂದಿದೆ ಎನ್ನುವುದಕ್ಕೆ ಪೂರಕವಾಗಿಲ್ಲ.

ಮುಫ್ತಿ ಮರೆತ ಕಾಶ್ಮೀರ ಜನತೆ: ಮತ್ತೊಂದು ಕಡೆ ಮೆಹಬೂಬಾ ಮುಫ್ತಿಯನ್ನು ಮರೆತ ಜನರು ಅವರನ್ನು ಸಂಪೂರ್ಣವಾಗಿ ತೆರೆಯಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ. ಪಿಡಿಪಿ ಆಡಳಿತದ ಅವಧಿಯಲ್ಲಿ ಯುವಕರ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದ ಮುಖ್ಯಮಂತ್ರಿ ಮೆಹಬೂಬಾ​ ಮುಫ್ತಿಯನ್ನು ಜನ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಅವರು ಜನರ ಒಲವು ಗಳಿಸಿದ ಎಲ್ಲ ತಂತ್ರಗಳು ವಿಫಲವಾಗಿದ್ದ, ಅವರ ಮೊಸಳೆ ಕಣ್ಣೀರನ್ನು ಜನ ತಿರಸ್ಕರಿಸಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಮಾಜಿ ಸಿಎಂ ಮುಫ್ತಿ ಪುತ್ರಿ ಇಲ್ತಿಜಾ ಮುಫ್ತಿ ಮೊದಲ ಚುನಾವಣೆಯಲ್ಲಿಯೇ ತಮ್ಮ ತಾತನ ಭದ್ರಕೋಟೆ ಬಿಜ್ಬೆರಾದಲ್ಲಿ ಹೀನಾಯ ಸೋಲು ಕಂಡರು.

ಪಿಡಿಪಿ ಮೇಲಿನ ಸಿಟ್ಟು ಎನ್​​​ಸಿಗೆ ವರ: ಇದೇ ವೇಳೆ ಕಣಿವೆ ಜನರಿಗೆ ಪಿಡಿಪಿ ಬಗ್ಗೆ ಇದ್ದ ಅಸಮಾಧಾನ ಎನ್​ಸಿಗೆ ವರದಾನವಾಯಿತು. ಮತದಾರರು ಕೆಲವು ಭರವಸೆಯೊಂದಿಗೆ ನ್ಯಾಷನಲ್​ ಕಾನ್ಫರೆನ್ಸ್​​ ಅನ್ನು ತಮ್ಮ ಮೊದಲ ಆಯ್ಕೆಯಾಗಿ ಮಾಡಿದರು. ಈ ಹಿಂದೆ ಆದ ಘಟನೆಗಳು ಇದೇ ಪಕ್ಷವೂ ಜವಾಬ್ದಾರಿಯಾಗಿದ್ದು, ಇದರ ಹೊರತಾಗಿ ಯಾವುದೇ ನಿರೀಕ್ಷೆ ಇರಲಿಲ್ಲ.

ಕಾಶ್ಮೀರ ಕಲಹವನ್ನು ಅಸ್ತ್ರವಾಗಿಸಿಕೊಂಡು 1987ರಿಂದ ಚುನಾವಣೆ ಕಣದಲ್ಲಿರುವ ಜಮೆತ್​-ಇ-ಇಸ್ಲಾಮಿ, ಎನ್​ಸಿ ವಿರುದ್ಧ ಅಖಾಡಕ್ಕಿಳಿಯಿತು. ಆದರೆ, ಇಂಜಿನಿಯರ್​ ರಶೀದ್​ ನೇತೃತ್ವದ ಎಐಪಿ ಯಾವುದೇ ಉತ್ತಮ ಪ್ರದರ್ಶನ ಕಾಣಲಿಲ್ಲ. ರಶೀದ್​ ಲೋಕಸಭಾ ಚುನಾವಣೆಯಲ್ಲಿ ಒಮರ್​ ಅಬ್ಧುಲ್ಲಾ ವಿರುದ್ಧ ಭಾರಿ ಅಂತರದಲ್ಲಿ ಗೆಲವು ದಾಖಲಿಸಿದ್ದರು. ಆದರೆ ಅದು ವಿಧಾನಸಭೆ ಚುನಾವಣೆಯಲ್ಲಿ ವರ್ಕೌಟ್​ ಆಗಲಿಲ್ಲ.

ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ: ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ. ಕಾಂಗ್ರೆಸ್​ ಶೇಖ್​ ಅಬ್ದುಲ್ಲಾ ಅವರನ್ನು ಜೈಲಿಗೆ ಅಟ್ಟಿದರೂ ನಂತರದಲ್ಲಿ ಅವರೊಂದಿಗೆ ಸ್ನೇಹ ಬೆಳಸಿದರು. ಭವಿಷ್ಯದಲ್ಲಿ ತಮ್ಮ ಜೊತೆ ಕೆಲಸ ಮಾಡುವ ಸಾಧ್ಯತೆ ಇದ್ದ ಎಲ್ಲಾ ಕಾಶ್ಮೀರಿ ನಾಯಕರನ್ನು ಬಿಜೆಪಿ ಬಂಧಿಸಿತು. ದೆಹಲಿಯಲ್ಲಿ ಮನವೊಲಿಸಿದ್ದು, ದೆಹಲಿಯಿಂದ ಶ್ರೀನಗರಕ್ಕೆ ವಾಪಸ್​ ಆಗುವ ಹೊತ್ತಿಗೆ ರಾಜ್ಯ ಸ್ಥಾನಮಾನ ಮರಳಿಸುವ ಭರವಸೆ ನೀಡಿದ್ದಾರೆ ಎಂಬ ಗಾಳಿ ಸುದ್ದಿಯನ್ನು ಎನ್​ಸಿ ಹಬ್ಬಿಸಿತ್ತು.

ವಿಧಿ 370 ಅನ್ನು ಪುನರ್​ಸ್ಥಾಪಿಸುವ ಕುರಿತು ಎನ್​ಸಿ ಚರ್ಚಿಸಬೇಕಿದ್ದು, ಹಿಂದಿನ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಾಯತ್ತತೆಯನ್ನು ಹೇಗೆ ನಿರ್ವಹಿಸಿದೆ ಎಂಬ ಕುರಿತು ಬಿಜೆಪಿ ಇಕ್ಕಟ್ಟಿಗೆ ಸಿಲುಕದಂತೆ ಮಾತನಾಡಬೇಕಿದೆ. ಇಷ್ಟೆಲ್ಲದರ ಮಧ್ಯೆ, ಕಣ್ಣೊರೆಸುವ ತಂತ್ರ ಕಾಶ್ಮೀರದಲ್ಲಿ ಮುಂದುವರೆಯಲಿದ್ದು, ನೈಜ ಸಮಸ್ಯೆಗಳು ಇನ್ನೂ ಮೂಲೆಯಲ್ಲಿಯೇ ಉಳಿಯಲಿವೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ ಚುನಾವಣೆ: ಪರಂಪರೆಯ ಹೋರಾಟ, ಹೊಸ ಪೀಳಿಗೆಯ ಭರವಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.