ETV Bharat / opinion

ನಾಗರಿಕ ವಿಮಾನಯಾನ ಮತ್ತು ಆರ್ಥಿಕತೆ: ಸಮಸ್ಯೆ, ಸವಾಲುಗಳೇನು? - ನಾಗರಿಕ ವಿಮಾನಯಾನ

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ವಿಮಾನಯಾನ ಕ್ಷೇತ್ರದ ಬೆಳವಣಿಗೆ ಬಗ್ಗೆ ಹೆಚ್ಚಿನ ಚರ್ಚೆಗಳು ಆರಂಭವಾಗಿವೆ. ವಿಮಾನಯಾನ ಮತ್ತು ಏರೋನಾಟಿಕಲ್ ಉತ್ಪಾದನಾ ವಲಯದಲ್ಲಿ ಸುಮಾರು 2.5 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗಿವೆ. ಈ ಬಗ್ಗೆ ಡಾ.ಅನಂತ್.ಎಸ್ ಅವರು ಬರೆದಿರುವ ಲೇಖನ ಇದು.

Etv BharatCivil Aviation Sector and Economy: Issues and Challenges
Etv Bharatನಾಗರಿಕ ವಿಮಾನಯಾನ ಮತ್ತು ಆರ್ಥಿಕತೆ: ಸಮಸ್ಯೆ, ಸವಾಲುಗಳೇನು?
author img

By ETV Bharat Karnataka Team

Published : Feb 5, 2024, 1:39 PM IST

ಇತ್ತೀಚಿನ ದಿನಗಳಲ್ಲಿ ಭಾರತೀಯ ವಾಯುಯಾನ ವ್ಯವಹಾರ ಭಾರಿ ಸದ್ದು ಮಾಡುತ್ತಿದೆ. ಭಾರತದಲ್ಲಿನ ಕಂಪನಿಗಳು ಮುಂದಿನ ಒಂದು ವರ್ಷದಲ್ಲಿ ತಮ್ಮ ವ್ಯಾಪಾರ ಅಭಿವೃದ್ಧಿ ಯೋಜನೆಗಳಿಗಾಗಿ ಸುಮಾರು 1,120 ವಿಮಾನಗಳನ್ನು ಆರ್ಡರ್ ಮಾಡಲು ಮುಂದಾಗಿವೆ. ಈ ಸುದ್ದಿ ಈಗ ದೇಶದಲ್ಲಿ ಹೊಸ ಚರ್ಚೆಯೊಂದನ್ನು ಹುಟ್ಟು ಹಾಕಿದೆ.

ವಿಶ್ವದ ಅತಿದೊಡ್ಡ ವಿಮಾನ ತಯಾರಕರಾದ ಅಮೆರಿಕದ ಬೋಯಿಂಗ್ ಮತ್ತು ಯುರೋಪಿಯನ್​ ಒಕ್ಕೂಟ ರಾಷ್ಟ್ರಗಳ ಸಹಭಾಗಿತ್ವದ ಏರ್‌ಬಸ್ (ಜರ್ಮನಿ, ಫ್ರಾನ್ಸ್, ಸ್ಪೇನ್ ಮತ್ತು ಯುಕೆ, ಬೆಲ್ಜಿಯಂ ಮತ್ತು ಇಟಲಿಯ ಇತರ ಷೇರುದಾರರ ಒಡೆತನದ ಯುರೋಪಿಯನ್ ಒಕ್ಕೂಟ) ಭಾರತದಲ್ಲಿ ವಿಮಾನಗಳ ಬೇಡಿಕೆಯ ಬಗ್ಗೆ ಅತ್ಯಂತ ಆಶದಾಯಕವಾಗಿವೆ. ಮುಂದಿನ 20 ವರ್ಷಗಳಲ್ಲಿ ಭಾರತಕ್ಕೆ 2,840 ಹೊಸ ವಿಮಾನಗಳು ಬೇಕಾಗುತ್ತವೆ ಎಂದು ಏರ್‌ಬಸ್ ಭವಿಷ್ಯ ನುಡಿದಿದೆ. 2042 ರ ವೇಳೆಗೆ ಭಾರತಕ್ಕೆ 2,500 ಹೊಸ ವಿಮಾನಗಳು ಬೇಕಾಗುತ್ತವೆ ಎಂದು ಬೋಯಿಂಗ್ ಕೂಡಾ ಅಂದಾಜಿಸಿದೆ.

ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಸಾಮಾನ್ಯವಾಗಿ ಪ್ರತಿ ವಿಮಾನಕ್ಕೆ 100 ರಿಂದ 150 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತವೆ. ವಿಮಾನಯಾನಗಳ ಸಮರ್ಥ ಕಾರ್ಯಾಚರಣೆಗಳಿಗೆ ಅತಿದೊಡ್ಡ ಮಾನವ ಸಂಪನ್ಮೂಲದ ಅಗತ್ಯತೆ ಇದೆ. ದುರದೃಷ್ಟವಶಾತ್, ನುರಿತ ಮಾನವ ಸಂಪನ್ಮೂಲಗಳ ದೊಡ್ಡ ಕೊರತೆಯಿದೆ. ಈ ಹೊಸ ವಿಮಾನಗಳ ಸೇವೆಗಾಗಿ ಭಾರತದಲ್ಲಿ ಹೆಚ್ಚುವರಿಯಾಗಿ 41,000 ಪೈಲಟ್‌ಗಳು ಮತ್ತು 47,000 ತಾಂತ್ರಿಕ ಸಿಬ್ಬಂದಿಗಳ ಅಗತ್ಯವಿದೆ ಎಂದು ಏರ್‌ಬಸ್ ಹೇಳಿದೆ.

ಆಕಾಶ ಏರ್ ಪ್ರಸ್ತುತ 76 ವಿಮಾನಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ. ಈ ಸಂಸ್ಥೆ ಈಗ 150 ಬೋಯಿಂಗ್ 737 MAX ಮಾದರಿ ವಿಮಾನಗಳಿಗೆ ಆರ್ಡರ್​ ನೀಡಿದೆ. ಈ ಆರ್ಡರ್​ಗಳು 2032ರ ವೇಳೆಗೆ ಹಂತ- ಹಂತವಾಗಿ ವಿತರಣೆ ಆಗುವ ಸಾಧ್ಯತೆಗಳಿವೆ. ಇನ್ನು ಈಗ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಮುಂದಿನ ದಿನಗಳಲ್ಲಿ 470 ಹೊಸ ವಿಮಾನಗಳನ್ನು ತನ್ನ ಕಾರ್ಯಾಚರಣೆಗೆ ಸೇರ್ಪಡೆ ಮಾಡಿಕೊಳ್ಳಲು ಬಯಸಿದೆ. ಕಳೆದ ವರ್ಷ ಈ ಸಂಬಂಧ ಟಾಟಾ ಏರ್​​ಬಸ್​​​ ಮತ್ತು ಬೋಯಿಂಗ್​ ಜತೆ ಒಪ್ಪಂದವನ್ನ ಮಾಡಿಕೊಂಡಿದೆ.

ಮತ್ತೊಂದು ಕಡೆ, ಇಂಡಿಗೋ ಮುಂದಿನ 10 ವರ್ಷಗಳಲ್ಲಿ 500 ಏರ್‌ಬಸ್ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲು ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಇದು ಏನೇ ಇದ್ದರೂ ವಿಮಾನಯಾನ ವ್ಯವಹಾರ ತೀರ ಕಷ್ಟಕರವಾದ ಕೆಲಸವಾಗಿದೆ. ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಕನಿಷ್ಠ ಐದು ವಿಮಾನಯಾನ ಸಂಸ್ಥೆಗಳು ದಿವಾಳಿಯ ಅಂಚಿನಲ್ಲಿವೆ. ಇಂಗ್ಲೆಂಡ್​ನಲ್ಲಿ ವರ್ಜಿನ್ ಏರ್‌ಲೈನ್ಸ್ ನ ಉದ್ಯಮಿ ರಿಚರ್ಡ್ ಬ್ರಾನ್ಸನ್ ಪ್ರಕಾರ, ನೀವೇನಾದರೂ ಮಿಲಿಯೇನರ್​ ಆಗಬೇಕು ಅಂತಿದ್ದರೆ, ಬಿಲಿಯನೇರ್ ಆಗಿ ಈ ವ್ಯವಹಾರ ಪ್ರಾರಂಭಿಸಬೇಕು ಎಂದು ಹೇಳಿದ್ದರು. ಅವರ ಈ ಮಾತು ವಿಮಾನಯಾನದ ಕಷ್ಟ- ನಷ್ಟದ ಕೈಪಿಡಿಯಂತಿದೆ.

ಸಿರಿವಂತರಿಗೆ ಸೇರಿದ ಸೆಕ್ಟರ್​: ವಾಯುಯಾನ ಮತ್ತು ವಾಯುಯಾನ ಕ್ಷೇತ್ರವು ಮೂಲತಃ ಶ್ರೀಮಂತರಿಗೆ ಸಂಬಂಧಿಸಿದ್ದು ಎಂಬುದು ಸಾಮಾನ್ಯ ಗ್ರಹಿಕೆಯಾಗಿದೆ. ಆದರೆ ಆ ಗ್ರಹಿಕೆ ಇಂದು ಸುಳ್ಳಾಗುತ್ತಿದೆ. ನಾಲ್ಕೈದು ದಶಕಗಳ ಹಿಂದೆ, ವಿಮಾನ ಪ್ರಯಾಣವು ಶ್ರೀಮಂತರಿಗೆ ಮಾತ್ರ ಎಂಬಂತೆ ಇತ್ತು. ಈಗ ದೇಶದ ಮಧ್ಯಮ ವರ್ಗವೂ ಹೆಚ್ಚೆಚ್ಚು ವಿಮಾನ ಪ್ರಯಾಣವನ್ನು ಆಶ್ರಯಿಸಿದೆ. ದೇಶದಲ್ಲಿ ಹೆಚ್ಚುತ್ತಿರುವ ಆದಾಯ, ಬೆಳೆಯುತ್ತಿರುವ ಕಾರ್ಪೊರೇಟ್ ಪ್ರಯಾಣ ಮತ್ತು ಮಧ್ಯಮ ವರ್ಗದ ಜನರೂ ವಿಮಾನ ಪ್ರಯಣವನ್ನು ನೆಚ್ಚಿಕೊಂಡಿದ್ದರಿಂದ ವಿಮಾನಯಾನ ಜನಪ್ರೀಯವಾಗುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವಾಯುಯಾನ ಕ್ಷೇತ್ರವು ಭಾರಿ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ.

ಜಿಡಿಪಿಗೆ ವಿಮಾನಯಾನ ಕ್ಷೇತ್ರದ ಕೊಡುಗೆ ಇಷ್ಟು: ಭಾರತದ ಆರ್ಥಿಕತೆಯಲ್ಲಿ ಪ್ರಸ್ತುತ ವಿಮಾನಯಾನದ ಪಾತ್ರವೂ ಗಣನೀಯ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ಜಾಗತಿಕವಾಗಿ ಏವಿಯೇಷನ್ ವಲಯವು GDP ಗೆ $3.5 ಟ್ರಿಲಿಯನ್ ಡಾಲರ್​​​ ಕೊಡುಗೆ ನೀಡುತ್ತಿದೆ. ಈ ಮೂಲಕ ಆಯಾಯ ದೇಶಗಳ ಜಿಡಿಪಿಯಲ್ಲಿ ಗಣನೀಯ ಕೊಡುಗೆ ನೀಡುತ್ತಿದೆ. ಇನ್ನು ವಿಮಾನಯಾನ ವಲಯವು ಜಾಗತಿಕವಾಗಿ ಸುಮಾರು 1.13 ಕೋಟಿ ನೇರ ಉದ್ಯೋಗಗಳು ಮತ್ತು 8.3 ಕೋಟಿ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿದೆ. ಎಲ್ಲ ಅಂತಾರಾಷ್ಟ್ರೀಯ ಪ್ರವಾಸಿಗರಲ್ಲಿ ಸುಮಾರು ಶೇ58ರಷ್ಟು ಜನರು ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಇಷ್ಟೆಲ್ಲ ಅಂಕಿ - ಅಂಶಗಳು ವಿಮಾನಯಾನ ಒಲಯದ ಬೆಳವಣಿಗೆಯನ್ನು ಹೇಳುತ್ತಿದ್ದರೂ ಭಾರತದಲ್ಲಿ ನಾಗರಿಕ ವಿಮಾನಯಾನ ವಲಯದ ಬೆಳವಣಿಗೆ ತೀರಾ ಕಡಿಮೆ ಆಗಿದೆ.

ವಿಮಾನಯಾನ ಮತ್ತು ಏರೋನಾಟಿಕಲ್ ಉತ್ಪಾದನಾ ವಲಯದಲ್ಲಿ ಸುಮಾರು 2.5 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗಿವೆ. ಇದೀಗ ಬಂದಿರುವ ಮಾಹಿತಿ ಪ್ರಕಾರ, ವಿಮಾನಯಾನ ಸಂಸ್ಥೆಗಳು ನಷ್ಟವನ್ನು ಕಡಿಮೆ ಮಾಡುವುದು, ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ಮತ್ತು ಚೇತರಿಸಿಕೊಳ್ಳುತ್ತಿರುವ ಆರ್ಥಿಕತೆಯಿಂದಾಗಿ ಮುಂದಿನ 3 ವರ್ಷಗಳಲ್ಲಿ ಸುಮಾರು 40ರಷ್ಟು ಉದ್ಯೋಗಾವಕಾಶಗಳು ಹೆಚ್ಚಾಗಬಹುದು ಎಂಬ ಆಶಾವಾದಕ್ಕೆ ಕಾರಣವಾಗಿದೆ. ಬೆಳವಣಿಗೆಯ ಕ್ಷೇತ್ರಗಳಲ್ಲಿ ಒಂದಾದ ಏರೋನಾಟಿಕಲ್ ಉತ್ಪಾದನೆ ಮತ್ತು ನಿರ್ವಹಣೆ, ದುರಸ್ತಿ ಮತ್ತು ಪರೀಕ್ಷಾ ವಲಯದಲ್ಲಿ ಭಾರಿ ನಿರೀಕ್ಷೆಗಳಿಗೆ ಕಾರಣವಾಗಿದೆ. ಈ ವಲಯದಲ್ಲಿ ಸರಿಯಾದ ನೀತಿಗಳೊಂದಿಗೆ ಭಾರತವು ಲಾಭವನ್ನು ಪಡೆಯಬಹುದಾಗಿದೆ.

2030 ರ ವೇಳೆ ವಿಮಾನ ಪ್ರಯಾಣಿಕರ ಸಂಖ್ಯೆ ದ್ವಿಗುಣ ನಿರೀಕ್ಷೆ: ಪ್ರಸ್ತುತ ಭಾರತವು 148 ವಿಮಾನ ನಿಲ್ದಾಣಗಳನ್ನು ಹೊಂದಿದೆ. ಅದರಲ್ಲಿ 17 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ. 2030ರ ವೇಳೆಗೆ ವಿಮಾನ ನಿಲ್ದಾಣಗಳ ಸಂಖ್ಯೆ 200ಕ್ಕೆ ಏರಿಕೆ ಆಗುವ ನಿರೀಕ್ಷೆಗಳಿವೆ. ಕಳೆದ ವರ್ಷ ಸುಮಾರು 15.3 ಕೋಟಿ ಭಾರತೀಯರು ದೇಶೀಯ ವಿಮಾನ ಕೈಗೊಂಡಿದ್ದಾರೆ. ಈ ಪ್ರಮಾಣ 2004 ರಲ್ಲಿ 6.95 ಕೋಟಿಯಷ್ಟಿತ್ತು. ಈ ಪ್ರಮಾಣ 2030 ರ ವೇಳೆಗೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಈ ಹಣಕಾಸು ವರ್ಷದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯು ಸುಮಾರು 3.1 ಕೋಟಿಗಳಷ್ಟು ನಿರೀಕ್ಷಿಸಲಾಗಿದೆ.

ಭಾರತದ ವಿಮಾನಯಾನ ಸಂಸ್ಥೆಗಳು ದಿನಕ್ಕೆ ಸುಮಾರು 4.17 ಲಕ್ಷ ಪ್ರಯಾಣಿಕರನ್ನು ಹೊತ್ತೊಯ್ದಿವೆ. ದೇಶದಲ್ಲೀಗ 2891 ವಿಮಾನಗಳಿವೆ. ವಿಮಾನಯಾನ ಮಾಡುವವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿರುವುದರ ಹೊರತಾಗಿಯೂ, ಹೆಚ್ಚಿನ ವಿಮಾನಯಾನ ಸಂಸ್ಥೆಗಳು ನಷ್ಟದಲ್ಲಿವೆ. ಅಂದ ಹಾಗೆ 2022ರಲ್ಲಿ 17 ಸಾವಿರ ಕೋಟಿ ರೂಗಳ ನಷ್ಟವನ್ನು ವಿಮಾನಯಾನ ಕಂಪನಿಗಳು ಅನುಭವಿಸಿವೆ. ಆದರೆ, 2023ರಲ್ಲಿ ಈ ನಷ್ಟದ ಸರಾಸರಿ ಪ್ರಮಾಣ 3 ಸಾವಿರ ಕೋಟಿ ರೂಗಳಿಗೆ ಇಳಿಕೆ ಕಾಣುವ ನಿರೀಕ್ಷೆ ಇದೆ.

ರೇಟಿಂಗ್ ಏಜೆನ್ಸಿ ICRA ಪ್ರಕಾರ, ವಾಯುಯಾನ ಉದ್ಯಮದ ಆದಾಯವು ತೀವ್ರವಾಗಿ ಹೆಚ್ಚಿದೆ ಎಂಬುದನ್ನು ಹೇಳಿದೆ. 2019-20 ಹಣಕಾಸು ವರ್ಷದಲ್ಲಿ ಕೋವಿಡ್ ಪೂರ್ವದಲ್ಲಿ 84,970 ಕೋಟಿ ರೂಗಳಿಂದ ಮತ್ತು ಪ್ರಸ್ತುತ ಹಣಕಾಸು ವರ್ಷದಲ್ಲಿ ಸುಮಾರು 1,11,000 ಕೋಟಿ ರೂಗಳನ್ನು ಮುಟ್ಟುವ ನಿರೀಕ್ಷೆಯಿದೆ. ಇನ್ನು ಭಾರತದ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ದೊಡ್ಡ ಸವಾಲೆಂದರೆ ಪೂರೈಕೆ ಸರಪಳಿ ಮತ್ತು ನಿರ್ವಹಣೆ ಸಮಸ್ಯೆಯೇ ದೊಡ್ಡದಾಗಿದೆ. ಕಳೆದ ಒಂದು ವರ್ಷದಲ್ಲಿ, ಸುಮಾರು 150 ವಿಮಾನಗಳು ಪೂರೈಕೆ ಸರಪಳಿ ಸಮಸ್ಯೆಗಳು, ನಿರ್ವಹಣೆ ಸಮಸ್ಯೆಗಳು ಮತ್ತು ಸುರಕ್ಷತೆಯ ಕಾಳಜಿಗಳಿಂದಾಗಿ ಹಾರಾಟ ನಡೆಸಲು ಸಾಧ್ಯವಾಗಿಲ್ಲ.

ಇದನ್ನು ಓದಿ:ಭಾರತ ವಿಶ್ವದ ಆರ್ಥಿಕ ಶಕ್ತಿ ಕೇಂದ್ರವಾಗುವ ಹಾದಿಯಲ್ಲಿದೆ: ಪ್ರಧಾನಿ ಮೋದಿ ಬಣ್ಣನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.