ETV Bharat / lifestyle

ವಿಶ್ವದ ಹಳೆಯ 11 ಚಿಕ್ಕ ಕಾರುಗಳ ಬಗ್ಗೆ ಗೊತ್ತೇ? ಒಂದನ್ನು ಹಿಟ್ಲರ್ ಬಳಸಿದರೆ, ಕೆಲವು ಕಾರುಗಳದ್ದು ಇಂಟರೆಸ್ಟಿಂಗ್ ಇತಿಹಾಸ! - SMALLEST CARS IN THE PAST

ವಿಶೇಷ ವಿನ್ಯಾಸ ಹೊಂದಿರುವ ಹಳೆಯ 11 ಚಿಕ್ಕ ಕಾರುಗಳ ಬಗ್ಗೆ ನಿಮಗೆ ತಿಳಿದಿದೆಯೇ? ಈ ಕಾರುಗಳು ನವೀನ ಎಂಜಿನಿಯರಿಂಗ್ ಹಾಗೂ ಸ್ಮಾರ್ಟ್ ವಿನ್ಯಾಸವನ್ನು ಹೊಂದಿವೆ. ಪುಟಾಣಿ ಕಾರುಗಳಿಗೆ ಮರೆಯಲಾಗದ ಇತಿಹಾಸವಿದೆ.

HARRY POTTER  CHAMBER OF SECRETS  ADOLF HITLER  BMW
ಚಿಕ್ಕ ಕಾರು (Getty Images)
author img

By ETV Bharat Lifestyle Team

Published : Dec 10, 2024, 8:22 PM IST

ಆಶ್ಚರ್ಯಕರ ವಿನ್ಯಾಸ ಹೊಂದಿರುವ ಹಳೆಯ ಕೆಲವು ಚಿಕ್ಕ ಕಾರುಗಳು 1922ರಿಂದ 1984ರ ಅವಧಿಯಲ್ಲಿ ಮಾರುಕಟ್ಟೆಗೆ ಬಂದಿದ್ದವು. ಈ ಕಾರುಗಳು ಆಕರ್ಷಕ ಎಂಜಿನಿಯರಿಂಗ್ ಮತ್ತು ಸ್ಮಾರ್ಟ್ ವಿನ್ಯಾಸವನ್ನು ಹೊಂದಿವೆ. ನೋಡಲು ಚಿಕ್ಕದಾದ ಕಾರುಗಳು ಹಿಂದೆ ಕೈಗೆಟುಕುವ ದರದಿಂದಾಗಿ ತುಂಬಾ ಜನಪ್ರಿಯವಾಗಿದ್ದವು. ಮುದ್ದಾದ ಅಂಬೆಗಾಲಿಡುತ್ತಾ ಓಡಾಡುವ ಮಗುವಿನಂತೆ ಕಾರುಗಳು ಕಾಣಿಸುತ್ತಿದ್ದವು. ಹಾಸ್ಯಮಯವಾಗಿಯೂ ಕಾಣುವ ಅಂಥ 11 ಕಾರುಗಳ ಕುರಿತ ಮಾಹಿತಿ ಇಲ್ಲಿದೆ.

1. ಪೀಲ್ ಟ್ರೈಡೆಂಟ್- 90-150 ಕೆಜಿ: ಪೀಲ್ ಟ್ರೈಡೆಂಟ್ ಭವಿಷ್ಯದ ಕಾರುಗಳಲ್ಲಿ ಒಂದು. ಇವುಗಳನ್ನು 1960ರಿಂದ ಉತ್ಪಾದನೆ ಮಾಡಲಾಗುತ್ತಿದೆ. ಆರಂಭಿಕ ತೂಕ 90 ಕೆ.ಜಿ ಆಗಿತ್ತು. ಆದರೆ, ಹಲವು ಆವಿಷ್ಕಾರಗಳ ನಂತರ, ಈಗ 150 ಕೆ.ಜಿವರೆಗೂ ಹೆಚ್ಚಾಗಿದೆ. ಇಬ್ಬರಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಒಳಗೆ ಹೋಗಲು ನೀವು ಕೆಳಗೆ ಬಾಗಬೇಕು. ಕಾರಿಗೆ ಬಾಗಿಲುಗಳಿಲ್ಲ. ಮೂರು ಚಕ್ರಗಳಿವೆ.

2. ಆಸ್ಟಿನ್ ಸೆವೆನ್: 1922ರಲ್ಲಿ ತಯಾರಿಸಲಾದ ಆಸ್ಟಿನ್ ಸೆವೆನ್ ಕಾರು ತುಂಬಾ ಚಿಕ್ಕದ್ದು. BMW ಮತ್ತು ಫ್ರೆಂಚ್ ಔಟ್​ಫಿಟ್​ನ ರೋಸೆನ್‌ಗಾರ್ಟ್ ವಿನ್ಯಾಸಕ್ಕೆ ಪರವಾನಗಿ ನೀಡಿತ್ತು. 1939ರವರೆಗೆ ಇದನ್ನು ತಯಾರಿಸಲಾಯಿತು. ಇದಕ್ಕೆ ಪ್ರೀತಿಯಿಂದ 'ಬೇಬಿ ಆಸ್ಟಿನ್' ಎಂದೇ ಕರೆಯಲಾಗುತ್ತಿತ್ತು. ಈ ಕಾರಿಗೆ ಸಾಮಾನ್ಯವಾಗಿ ಬೈಕ್​ನ ರೀತಿಯ ಕಾಣುವ ಚಕ್ರಗಳನ್ನು ಅಳವಡಿಸಿರುವುದು ಭಾರೀ ಮನ್ನಣೆ ಪಡೆದಿತ್ತು. ಇದು ಮೊದಲ ಕೈಗೆಟುಕುವ ಕಾರುಗಳಲ್ಲಿ ಒಂದು. ಇದು ಸಾಂಪ್ರದಾಯಿಕ BMWನ ಮೊದಲ ಕಾರು ಹಾಗು ಡಿಕ್ಸಿ ಆಸ್ಟಿನ್ ಸೆವೆನ್‌ನ ಪರವಾನಗಿ ಪಡೆದ ಆವೃತ್ತಿಯಾಗಿದೆ. ಜಪಾನ್‌ನ ನಿಸ್ಸಾನ್ ದಟ್ಸನ್‌ ಕಾರಿಗೆ ಸ್ಫೂರ್ತಿ ಕೂಡ ಇದೇ ಅನ್ನೋದು ಕುತೂಹಲದ ಸಂಗತಿ.

3. ಫಿಯೆಟ್ ಟೊಪೊಲಿನೊ: ಫಿಯೆಟ್ ಸೆವೆನ್‌ಗಿಂತಲೂ ಚಿಕ್ಕದು. ಇದರಲ್ಲಿ ಇಬ್ಬರು ಕುಳಿತುಕೊಳ್ಳಬಹುದು. ಈ ಕಾರನ್ನು ಮೊದಲು ಸಣ್ಣ ಸೈಡ್-ವಾಲ್ವ್ ಎಂಜಿನ್‌ನಿಂದ ನಡೆಸಲಾಯಿತು. 1936ರಲ್ಲಿ ಪ್ರಾರಂಭಿಸಲಾಯಿತು. 1955ರವರೆಗೆ ಕಾರ್ಯ ನಿರ್ವಹಿಸಿದೆ. ಯುದ್ಧಾನಂತರದಲ್ಲಿ ಯುರೋಪ್​ನಲ್ಲಿ ಇದು ಕೈಗೆಟುಕುವ ದರದಲ್ಲಿ ದೊರೆಯುವ ಐಷಾರಾಮಿ ಕಾರು ಆಗಿತ್ತು.

4. ವೋಕ್ಸ್‌ವ್ಯಾಗನ್ ಬೀಟಲ್: 1930ರ ದಶಕದಲ್ಲಿ ಫರ್ಡಿನಾಂಡ್ ಪೋರ್ಚೆ ವಿನ್ಯಾಸಗೊಳಿಸಿದ ಬೀಟಲ್ ಕಾರು ತನ್ನ ದುಂಡಗಿನ ಆಕಾರ ಮತ್ತು ವಿಶ್ವಾಸಾರ್ಹತೆಗೆ ಪ್ರಸಿದ್ಧಿ. ಜನರು 1960ರ ದಶಕದಲ್ಲಿ ಈ ಕಾರನ್ನು ತುಂಬಾ ಇಷ್ಟಪಟ್ಟಿದ್ದರು. ಕಾರನ್ನು ಹರ್ಬಿಯಂತಹ ಚಲನಚಿತ್ರಗಳಲ್ಲೂ ಬಳಕೆ ಮಾಡಲಾಗಿದೆ. ಅಂದಾಜು 21 ಮಿಲಿಯನ್‌ಗಳಷ್ಟು ಇವು ಮಾರಾಟವಾಗಿವೆ. ಕಾರಿನ ಸರಳ ವಿನ್ಯಾಸ ಜನಮೆಚ್ಚುಗೆ ಪಡೆದಿತ್ತು. ಅಡಾಲ್ಫ್ ಹಿಟ್ಲರ್ ಈ ಕಾರು ಬಳಸುತ್ತಿದ್ದರು, ಮತ್ತು ಇದನ್ನು 'ಪೀಪಲ್ಸ್ ಕಾರ್' ಎಂದೂ ಕರೆದಿದ್ದರು.

5. ರೆನಾಲ್ಟ್ 4ಸಿವಿ: ಇದನ್ನು 1947ರಲ್ಲಿ ಪ್ರಾರಂಭಿಸಲಾಯಿತು. 4ಸಿವಿ ಡಬ್ಲ್ಯೂಡಬ್ಲ್ಯೂII ನಂತರದ ಫ್ರಾನ್ಸ್‌ನಲ್ಲಿ ಕೈಗೆಟುಕುವ ಕಾರು. ಫ್ರಾನ್ಸ್ ಹಾಗೂ ವಿವಿಧ ವಿದೇಶಗಳಲ್ಲಿ ಒಂದು ಮಿಲಿಯನ್ ಕಾರುಗಳು ಮಾರಾಟವಾಗಿವೆ. ದುಂಡಗಿನ ಮತ್ತು ನಯವಾದ ಆಕಾರದಿಂದಾಗಿ ಕಾರಿಗೆ 'ಲಾ ಮೊಟ್ಟೆ ಡಿ ಬ್ಯೂರೆ' (ಬೆಣ್ಣೆಯ ಮುದ್ದೆ) ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತಿತ್ತು.

6. ವೋಲ್ವೋ ಪಿವಿ444: ವೋಲ್ವೋ ಪಿವಿ444 ಅನ್ನು 1944ರಲ್ಲಿ ಪ್ರಾರಂಭಿಸಲಾಯಿತು. 4-ಸಿಲಿಂಡರ್ ಎಂಜಿನ್ ಹೊಂದಿತ್ತು. ಸುರಕ್ಷತಾ ವೈಶಿಷ್ಟ್ಯಗಳಿಗೆ ಹೆಸರುವಾಸಿ. ಇದರ ನಯವಾದ, ಆಧುನಿಕ ಲುಕ್​ ಅಮೆರಿಕನ್ ಕಾರುಗಳಿಂದ ಪ್ರಭಾವಿತವಾಗಿತ್ತು.

7. ಮೋರಿಸ್ ಮೈನರ್: ಮೋರಿಸ್ ಮೈನರ್ ಕಾರನ್ನು 1984ರಲ್ಲಿ ಬಿಡುಗಡೆ ಮಾಡಲಾಯಿತು. ಒಂದು ಮಿಲಿಯನ್​ವರೆಗೆ ಮಾರಾಟ ಮಾಡಿದ ಮೊದಲ ಬ್ರಿಟಿಷ್ ಕಾರು ಮೋರಿಸ್ ಮೈನರ್. ಈ ಕಾರನ್ನು ಅಲೆಕ್ ಇಸ್ಸಿಗೋನಿಸ್ ವಿನ್ಯಾಸಗೊಳಿಸಿದ್ದರು. ಮುದ್ದಾದ, ದುಂಡಗಿನ ಆಕಾರಕ್ಕೆ ಹೆಸರುವಾಸಿ. ಕೈಗೆಟುಕುವ ಹಾಗೂ ನೈಜ ಲುಕ್ ಹೊಂದಿದ್ದು, ಕುಟುಂಬಗಳ ನೆಚ್ಚಿನ ಕಾರು ಆಗಿತ್ತು.

8. ಸಿಟ್ರೊಯೆನ್ 2ಸಿವಿ: ಒರಟಾದ ಲುಕ್​ ಇರುವ ಕಾರ​ನ್ನು 1948ರಲ್ಲಿ ಫ್ರೆಂಚ್ ಗ್ರಾಮಾಂತರದಾದ್ಯಂತ ರೈತರನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿತ್ತು. 2ಸಿವಿ ಕಾರನ್ನು ಅದರ ಸಾಧಾರಣ 2- ಹಾರ್ಸ್​ಪವರ್​ ಎಂಜಿನ್‌ನ ನಂತರ 'ಡ್ಯೂಕ್ಸ್ ಚೆವಾಕ್ಸ್' (ಟು ಹಾರ್ಸ್​) ಎಂದು ಅಡ್ಡಹೆಸರಿನಿಂದ ಕರೆಯಲಾಗುತ್ತಿತ್ತು. 3.8 ಮಿಲಿಯನ್ ಕಾರುಗಳನ್ನು ಉತ್ಪಾದಿಸಲಾಗಿತ್ತು. ಈ ಕಾರು ಫ್ರೆಂಚ್ ಐಕಾನ್ ಆಗಿದೆ.

9. ಫಿಯೆಟ್ 600 ಮಲ್ಟಿಪ್ಲಾ: 1956ರಲ್ಲಿ ಬಿಡುಗಡೆಯಾದ ಫಿಯೆಟ್ 600 ಮಲ್ಟಿಪ್ಲಾ ಕಾರು ಮೊದಲ ಮಿನಿವ್ಯಾನ್‌ಗಳಲ್ಲಿ ಒಂದು. ಸಣ್ಣ ಗಾತ್ರದ ಹೊರತಾಗಿಯೂ ಆರು ಪ್ರಯಾಣಿಕರಿಗೆ ಕುಳಿತುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಮಲ್ಟಿಪ್ಲಾ ಇಟಲಿಯಲ್ಲಿ ಫ್ಯಾಮಿಲಿ ಕಾರ್ ಹಾಗೂ ಟ್ಯಾಕ್ಸಿಯಾಗಿ ಜನಪ್ರಿಯವಾಯಿತು. ವಿನ್ಯಾಸ ಮತ್ತು ಬಹುಬಳಕೆಗೆ ಖ್ಯಾತಿ ಗಳಿಸಿತು.

10. ಬಿಎಂಡಬ್ಲ್ಯೂ 700: ಬಿಎಂಡಬ್ಲ್ಯೂ (BMW) ಹಣಕಾಸಿನ ತೊಂದರೆಗಳಿಂದ ಚೇತರಿಸಿಕೊಳ್ಳಲು ಇದನ್ನು 1959ರಲ್ಲಿ ಪರಿಚಯಿಸಲಾಗಿತ್ತು. ಬ್ಯಾಕ್​ ಎಂಜಿನ್ ವಿನ್ಯಾಸ ಹೊಂದಿದೆ. ಕೂಪ್ ಅಥವಾ ಕನ್ವರ್ಟಿಬಲ್ ಆಗಿಯೂ ಲಭ್ಯ. ಸಣ್ಣ ಗಾತ್ರದ ಹೊರತಾಗಿಯೂ, ಇದು ಆಶ್ಚರ್ಯಕರ ಮತ್ತು ಕೈಗೆಟುಕುವ ಬೆಲೆಯಲ್ಲಿ ಲಭಿಸುತ್ತಿತ್ತು. ಯುರೋಪ್​ನಲ್ಲಿ ತುಂಬಾ ಜನಪ್ರಿಯವಾಯಿತು.

11. ಫೋರ್ಡ್ ಆಂಗ್ಲಿಯಾ: ಯುಕೆಯಲ್ಲಿ ಈ ಸಣ್ಣ, ಕೈಗೆಟುಕುವ ಮತ್ತು ಜನಪ್ರಿಯ ಕಾರನ್ನು 1959ರಲ್ಲಿ ಆರಂಭಿಸಲಾಯಿತು. ಇದು ವಿಶಿಷ್ಟವಾದ ಹಿಮ್ಮುಖ ಹಿಂಬದಿಯ ಕಿಟಕಿ ಹೊಂದಿತ್ತು. ಈ ಲುಕ್ ಅ​ನ್ನು ತಕ್ಷಣವೇ ಗುರುತಿಸುವಂತೆ ಮಾಡಿತ್ತು. 2 ಬಾಗಿಲು ಮತ್ತು 4 ಬಾಗಿಲಿನ ಆವೃತ್ತಿಗಳಲ್ಲಿ ಲಭ್ಯವಿತ್ತು. ಆರ್ಥಿಕ ಮತ್ತು ನೈಜತೆಯ ಕಾರಣಕ್ಕಾಗಿ ಕುಟುಂಬಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಕಾರು ಹ್ಯಾರಿ ಪಾಟರ್ ಆ್ಯಡ್ ದಿ ಚೇಂಬರ್ ಆಫ್ ಸೀಕ್ರೆಟ್ಸ್‌ನಲ್ಲಿ ಹಾರುವ ಕಾರೆಂದು ವಿಶ್ವಾದ್ಯಂತ ಖ್ಯಾತಿ ಗಳಿಸಿತ್ತು.

ಇದನ್ನೂ ಓದಿ: ಸನ್‌ರೂಫ್, ಸಿಕ್ಸ್​ ಏರ್‌ಬ್ಯಾಗ್ಸ್​, ಅತ್ಯುತ್ತಮ ಮೈಲೇಜ್​: ಕೇವಲ 8 ಲಕ್ಷ ರೂಪಾಯಿಗಳಿಗೆ ಲಭ್ಯ ಈ ಕಾರುಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.