How To Identify Fake Cashews: ಎಲ್ಲರೂ ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕಾಗಿ ಎದುರು ನೋಡುತ್ತಿದ್ದಾರೆ. ದೇಶದೆಲ್ಲೆಡೆ ಈ ಹಬ್ಬವನ್ನು ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಹಲವರು ಹಬ್ಬದ ಸಂದರ್ಭದಲ್ಲಿ ತಮ್ಮ ಆತ್ಮೀಯರಿಗೆ ಡ್ರೈ ಫ್ರೂಟ್ಸ್ ಉಡುಗೊರೆಯಾಗಿ ನೀಡಿ ಶುಭ ಹಾರೈಸುತ್ತಾರೆ. ಗೋಡಂಬಿ ಅತ್ಯಂತ ಜನಪ್ರಿಯ ಡ್ರೈ ಫ್ರೂಟ್ ಆಗಿದೆ. ಮಾರುಕಟ್ಟೆಯಲ್ಲಿ ಇವುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದನ್ನೇ ಅವಕಾಶವನ್ನಾಗಿ ಮಾಡಿಕೊಂಡ ಕೆಲ ವ್ಯಾಪಾರಿಗಳು ನಕಲಿ ಗೋಡಂಬಿ ಮಾರಾಟ ಮಾಡುತ್ತಿದ್ದಾರೆ. ಆದಾಗ್ಯೂ, ಮಾರುಕಟ್ಟೆಯಲ್ಲಿ ನಕಲಿ ಗೋಡಂಬಿ ಗುರುತಿಸಲು ತಜ್ಞರು ಕೆಲವು ಸಲಹೆಗಳನ್ನು ನೀಡುತ್ತಾರೆ. ಆ ಟಿಪ್ಸ್ ಏನು ನೋಡೋಣ.
ಬಣ್ಣ ಗಮನಿಸಿ: ನಿಜವಾದ ಗೋಡಂಬಿ ಬಿಳಿ ಅಥವಾ ಕೆನೆ ಬಣ್ಣದಲ್ಲಿರುತ್ತದೆ. ನೀವು ಮಾರುಕಟ್ಟೆಯಲ್ಲಿ ಖರೀದಿಸುವ ಗೋಡಂಬಿ ಸ್ವಲ್ಪ ಹಳದಿ ಬಣ್ಣದಲ್ಲಿದ್ದರೆ ಅವುಗಳನ್ನು ಖರೀದಿಸದಿರುವುದು ಉತ್ತಮ. ಏಕೆಂದರೆ ಹಳದಿ ಬಣ್ಣದಲ್ಲಿದ್ದರೆ ಅದು ನಕಲಿಯಾಗಿರಬಹುದು. ಆದ್ದರಿಂದ, ಯಾವಾಗಲೂ ಬಿಳಿ ಅಥವಾ ಕೆನೆ ಬಣ್ಣದ ಗೋಡಂಬಿ ಖರೀದಿಸಿ.
ಯಾವುದೇ ಕಲೆಗಳಿರುವುದಿಲ್ಲ: ಉತ್ತಮ ಗುಣಮಟ್ಟದ ಗೋಡಂಬಿಯಲ್ಲಿ ಕಪ್ಪು ಕಲೆಗಳು ಮತ್ತು ರಂಧ್ರಗಳಿರಲ್ಲ. ನಕಲಿ ಗೋಡಂಬಿಗಳ ಮೇಲೆ ಕಲೆಗಳು ಇರುತ್ತವೆ. ಆದ್ದರಿಂದ, ಗೋಡಂಬಿಯನ್ನು ಖರೀದಿಸುವಾಗ, ಅವುಗಳ ಮೇಲೆ ಕಪ್ಪು ಕಲೆಗಳಿವೆಯೇ ಎಂದು ಪರೀಕ್ಷಿಸಲು ಮರೆಯದಿರಿ.
ಮೇಲಿನ ಪದರು ಹಾಳಾಗಿರುತ್ತೆ: ಮೇಲು ತಳಿಯ ಗೋಡಂಬಿ ಬೇಗ ಕೆಡುವುದಿಲ್ಲ ಮತ್ತು ದೀರ್ಘಕಾಲ ತಾಜಾವಾಗಿರುತ್ತದೆ. ಅದೇ ನಕಲಿ ಗೋಡಂಬಿ ಬೇಗ ಹಾಳಾಗುತ್ತದೆ. ಅದರಲ್ಲಿ ಕೀಟಗಳು ಮತ್ತು ಹುಳುಗಳು ಕೂಡ ರೂಪುಗೊಳ್ಳಬಹುದು. ಆದರೆ, ಗುಣಮಟ್ಟದ ಗೋಡಂಬಿ ಕನಿಷ್ಠ 6 ತಿಂಗಳವರೆಗೆ ಇರುತ್ತದೆ. ಹಾಗಾಗಿ ಗೋಡಂಬಿ ಖರೀದಿಸುವ ಮುನ್ನ ಎರಡು ಬಾರಿ ಪರಿಶೀಲಿಸಿ ಉತ್ತಮ ಗೋಡಂಬಿ ಖರೀದಿಸಲು ತಜ್ಞರು ಸಲಹೆ ನೀಡುತ್ತಾರೆ.
ಗಾತ್ರವನ್ನು ಪರಿಶೀಲಿಸಿ: ಉತ್ತಮ ಗುಣಮಟ್ಟದ ಗೋಡಂಬಿ ಸುಮಾರು ಒಂದು ಇಂಚು ಉದ್ದ ಮತ್ತು ಸ್ವಲ್ಪ ದಪ್ಪವಾಗಿರಬೇಕು. ಸಣ್ಣ ಮತ್ತು ತೆಳ್ಳಗಿದ್ದರೆ, ಅವು ನಕಲಿ ಗೋಡಂಬಿ ಎಂದು ನೆನಪಿಡಿ. ಅಂತಹ ಸಣ್ಣ ಮತ್ತು ತೆಳುವಾದವುಗಳನ್ನು ಖರೀದಿಸದಿರುವುದು ಉತ್ತಮ.
ರುಚಿಯನ್ನು ಗಮನಿಸಿ: ನೀವು ಮಾರುಕಟ್ಟೆಯಲ್ಲಿ ಗೋಡಂಬಿ ಖರೀದಿಸಿದಾಗ, ಅಂಗಡಿಯವರಲ್ಲಿ ಎರಡು ಅಥವಾ ಮೂರು ಗೋಡಂಬಿಗಳನ್ನು ಕೇಳಿ ತಿನ್ನಿರಿ. ಉತ್ತಮ ಗುಣಮಟ್ಟದ ಗೋಡಂಬಿ ಹಲ್ಲುಗಳಿಗೆ ಅಂಟಿಕೊಳ್ಳುವುದಿಲ್ಲ. ಆದರೆ, ನಕಲಿ ಗೋಡಂಬಿಗಳು ಹಲ್ಲುಗಳಿಗೆ ಅಂಟಿಕೊಳ್ಳುತ್ತವೆ. ನಿಜವಾದ ಗೋಡಂಬಿಗಳು ಸುಲಭವಾಗಿ ತುಂಡುಗಳಾಗಿ ಒಡೆಯುತ್ತವೆ. ಜೊತೆಗೆ ಉತ್ತಮವಾದ ಗೋಡಂಬಿ ತುಂಬಾ ರುಚಿ ಇರುತ್ತದೆ. ನಕಲಿ ಗೋಡಂಬಿಗಳು ಕಹಿಯಾಗಿರುತ್ತವೆ.
ಅಸಲಿ ಗೋಡಂಬಿ ನೀರಿನಲ್ಲಿ ಮುಳುಗುತ್ತೆ: ನೀವು ಖರೀದಿಸಿದ ಗೋಡಂಬಿ ಉತ್ತಮ ಗುಣಮಟ್ಟದ್ದಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀರಿನ ಪರೀಕ್ಷೆಯು ತಿಳಿಸುತ್ತದೆ. ಇದಕ್ಕಾಗಿ ಒಂದು ಲೋಟದಲ್ಲಿ ನೀರು ತುಂಬಿಸಿ ಮತ್ತು ಅದರಲ್ಲಿ ಗೋಡಂಬಿ ಸೇರಿಸಿ. ಅರ್ಧ ಗಂಟೆಯ ನಂತರ ಪರಿಶೀಲಿಸಿ. ಉತ್ತಮ ಗೋಡಂಬಿ ನೀರಿನಲ್ಲಿ ಮುಳುಗುತ್ತದೆ. ಅವು ನಕಲಿಯಾಗಿದ್ದರೆ ಮೇಲೆ ತೇಲುತ್ತವೆ.
ಇವುಗಳನ್ನು ಟ್ರೈ ಮಾಡಿ: ಉತ್ತಮ ಗುಣಮಟ್ಟದ ಗೋಡಂಬಿ ಸ್ವಲ್ಪ ಭಾರವಾಗಿರುತ್ತದೆ. ನಕಲಿ ಗೋಡಂಬಿಗಳು ಭಾರ ಇರುವುದಿಲ್ಲ. ನಿಜವಾದ ಗೋಡಂಬಿ ಮೇಲೆ ಮೃದು ಆಗಿರುತ್ತದೆ. ಅದೇ ನಕಲಿ ಗೋಡಂಬಿಗಳು ಮೇಲೆ ಸ್ವಲ್ಪ ಒರಟಾಗಿರುತ್ತದೆ. ಹಾಗಾಗಿ ಗೋಡಂಬಿ ಖರೀದಿಸುವ ಮುನ್ನ ಕೈಗೆ ತೆಗೆದುಕೊಂಡು ಪರೀಕ್ಷಿಸಿ ಎನ್ನುತ್ತಾರೆ ತಜ್ಞರು.