How to Make Black chickpeas Pakoda Recipe: ಕ್ರಿಸ್ಪಿಯಾದ ಬಾಯಿ ರುಚಿಯ ಪಕೋಡ ಎಲ್ಲರೂ ಇಷ್ಟಪಟ್ಟು ಸೇವಿಸುತ್ತಾರೆ. ಪಕೋಡ ಟೀ ಟೈಮ್ ಸ್ನ್ಯಾಕ್ ಐಟಂಗಳಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ. ಬಹುತೇಕ ಎಲ್ಲರೂ ಕಡಲೆ ಹಿಟ್ಟು ಹಾಗೂ ಸ್ವಲ್ಪ ಅಕ್ಕಿ ಹಿಟ್ಟಿನ ಜೊತೆಗೆ ಪಕೋಡ ಸಿದ್ಧಪಡಿಸುತ್ತಾರೆ.
ಅಂದ ಹಾಗೆ ನಿಮಗೆ ಯಾವಾಗಲೂ ಒಂದೇ ಬಗೆಯ ಪಕೋಡ ಸೇವಿಸಿ ಬೇಸರವಾಗಿಯೇ? ಈ ಬಾರಿ ಹೊಸದಾದ ಪಕೋಡವೊಂದನ್ನು ಟ್ರೈ ಮಾಡಿ. ನಾವು ತಿಳಿಸಿದ ರೀತಿಯಲ್ಲಿ ಕಪ್ಪು ಕಡಲೆ ಕಾಳಿನ ಪಕೋಡ ಮಾಡಿದರೆ ಮನೆಯಲ್ಲಿ ಪ್ರತಿಯೊಬ್ಬರು ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ. ಕಪ್ಪು ಕಡಲೆ ಕಾಳಿನ ಪಕೋಡ ತುಂಬಾ ಗರಿಗರಿಯಾಗಿದ್ದು, ರುಚಿಯು ಸಖತ್ ಆಗಿರುತ್ತವೆ. ಈ ಗರಿಗರಿಯಾದ ಪಕೋಡ ಮಾಡಲು ಬೇಕಾಗುವ ಸಾಮಗ್ರಿಗಳು? ಉತ್ಪಾದನಾ ಪ್ರಕ್ರಿಯೆ ಹೇಗೆ ಎಂಬುದನ್ನು ನೋಡೋಣ.
ಕಡಲೆ ಕಾಳಿನ ಪಕೋಡಕ್ಕೆ ಬೇಕಾಗುವ ಸಾಮಗ್ರಿ:
- ಸ್ವಲ್ಪ ಕಪ್ಪಗೆ ಇರುವ ಕಪ್ಪು ಕಡಲೆ ಕಾಳು - ಕಾಲು ಕೆಜಿ
- ಹಸಿಮೆಣಸಿನಕಾಯಿ - 3
- ಜೀರಿಗೆ - ಟೀಸ್ಪೂನ್
- ಧನಿಯಾ - ಟೀಸ್ಪೂನ್
- ಬೆಳ್ಳುಳ್ಳಿ ಎಸಳು - 4
- ಈರುಳ್ಳಿ - 1
- ಒಂದು ಇಂಚು ಶುಂಠಿ ಪೀಸ್
- ರುಚಿಗೆ ತಕ್ಕಷ್ಟು ಉಪ್ಪು
- ಅಕ್ಕಿ ಹಿಟ್ಟು - 2 ಟೀ ಸ್ಪೂನ್
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಖಾರದ ಪುಡಿ - ಟೀ ಚಮಚ
- ಚಾಟ್ ಮಸಾಲಾ - ಅರ್ಧ ಟೀಸ್ಪೂನ್
- ಡೀಪ್ ಪ್ರೈ ಮಾಡಲು ಬೇಕಾಗುವಷ್ಟು ಎಣ್ಣೆ
ಪಕೋಡ ತಯಾರಿಸುವ ವಿಧಾನ:
- ಮೊದಲು ಕಡಲೆ ತೊಳೆದು 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು
- ನಂತರ ಪುನಃ ತೊಳೆಯಿರಿ.. ಕಡಲೆಯಲ್ಲಿನ ನೀರಿನ ಸೋಸಿಕೊಳ್ಳಿ.
- ಈಗ ಜೀರಿಗೆ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಎಸಳು ಮತ್ತು ಒಂದು ಇಂಚು ಶುಂಠಿ ಪೀಸ್ ಮಿಕ್ಸಿ ಜಾರ್ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ನೆನೆಸಿದ ಕಡಲೆ ಹಾಕಿ ಸ್ವಲ್ಪ ಒರಟಾಗಿ ರುಬ್ಬಿಕೊಳ್ಳಬೇಕಾಗುತ್ತದೆ.
- ಈಗ ಹಿಟ್ಟನ್ನು ಮಿಕ್ಸಿಂಗ್ ಬೌಲ್‌ಗೆ ತೆಗೆದುಕೊಳ್ಳಬೇಕು. ಈರುಳ್ಳಿ ಪೀಸ್, ಕೊತ್ತಂಬರಿ ಸೊಪ್ಪು, ಉಪ್ಪು, ಖಾರದ ಪುಡಿ, ಚಾಟ್ ಮಸಾಲ, ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ಹಿಟ್ಟನ್ನು ಕೈಯಿಂದ ಮೀಕ್ಸ್ ಮಾಡಿಕೊಳ್ಳಿ. ಅದು ಉಂಡೆಯಂತ ಆಗಬೇಕಾಗುತ್ತದೆ. ಇದರಿಂದ ಪಕೋಡಗಳು ಸಂಪೂರ್ಣವಾಗಿ ಗರಿಗರಿಯಾಗಿ ಮತ್ತು ರುಚಿಯಾಗಿರುತ್ತದೆ. (ಈ ಪಕೋಡ ಹಿಟ್ಟು ಸ್ವಲ್ಪ ಗಟ್ಟಿಯಾಗಿರಬೇಕು. ನೀರು ಸೇರಿಸುವುದರಿಂದ ಪಕೋಡ ಎಣ್ಣೆಯನ್ನು ಹೀರಿಕೊಳ್ಳುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ.)
- ಈಗ ಪಕೋಡ ಹುರಿಯಲು ಬೇಕಾದಷ್ಟು ಎಣ್ಣೆ ಕಡಾಯಿಯಲ್ಲಿ ಸುರಿಯಿರಿ. ಎಣ್ಣೆ ಬಿಸಿಯಾದ ನಂತರ ಸ್ಟವ್ ಮಧ್ಯಮ ಉರಿಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಈಗ ಅದನ್ನು ಸಣ್ಣ ಉಂಡುಗಳಾಗಿ ಮಾಡಿ ಎಣ್ಣೆಯಲ್ಲಿ ಹಾಕಿ.
- ಒಂದು ನಿಮಿಷದ ನಂತರ ಅವುಗಳನ್ನು ಒಂದು ಚಮಚದಿಂದ ತಿರುಗಿಸಿ ಮತ್ತು ಅವುಗಳನ್ನು ಎರಡೂ ಬದಿಗಳಲ್ಲಿ ಹುರಿಯಿರಿ. ಚೆನ್ನಾಗಿ ಕರಿದ ಪಕೋಡಗಳನ್ನು ತಟ್ಟೆಯಲ್ಲಿ ತೆಗೆದುಕೊಳ್ಳಿ.
- ಉಳಿದ ಹಿಟ್ಟಿನಿಂದ ಇದೇ ರೀತಿಯ ಪಕೋಡಗಳನ್ನು ಮಾಡಿದರೆ ನಿಮ್ಮ ಮುಂದೆ ಗರಿಗರಿಯಾದ ಮತ್ತು ರುಚಿಕರವಾದ ಪಕೋಡಗಳು ಸಿದ್ಧವಾಗುತ್ತವೆ.
- ಈ ಪಕೋಡ ರೆಸಿಪಿ ನಿಮಗೆ ಇಷ್ಟವಾಗಿದ್ದರೆ ಮನೆಯಲ್ಲಿಯೇ ಟ್ರೈ ಮಾಡಿ, ಮನೆ ಮಂದಿಗೆಲ್ಲ ಇಷ್ಟವಾಗುತ್ತದೆ.