ETV Bharat / international

ಜಿಂಬಾಬ್ವೆಯಲ್ಲಿ ತಲೆದೂರಿದ ಭೀಕರ ಬರ: ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದ ಅಧ್ಯಕ್ಷ - Zimbabwean President Emmerson

author img

By ETV Bharat Karnataka Team

Published : Apr 4, 2024, 10:26 AM IST

ಎಲ್​ ನಿನೋ ಪರಿಣಾಮವಾಗಿ ದೇಶದಲ್ಲಿ ಮಳೆ ಕೊರತೆ ಶೇ 80ರಷ್ಟು ಆಗಿದ್ದು, ಕೃಷಿ ಇಳುವರಿ ನಿರೀಕ್ಷಿತ ಮಟ್ಟಕ್ಕಿಂತ ಕೆಳಗಿದೆ.

Zimbabwean President Emmerson Mnangagwa declares national disaster

ಹರಾರೆ( ಜಿಂಬಾಬ್ವೆ): ಎಲ್​ ನಿನೋ ಪರಿಣಾಮ ದೇಶದಲ್ಲಿ ವಿನಾಶಕಾರಿ ಬರ ಆವರಿಸಿದ್ದು, ಆಹಾರ ಭದ್ರತೆಗೆ ಬೆದರಿಕೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ದೇಶವನ್ನು ಬರ ವಿಪತ್ತು ಎಂದು ಜಿಂಬಾಬ್ವೆ ಅಧ್ಯಕ್ಷ ಎಮರ್ಸನ್​ ನಂಗಾಗ್ವ ಘೋಷಿಸಿದ್ದಾರೆ. ಎಲ್​ ನೀನೋ ಬರದ ಫಲಿತಾಂಶವಾಗಿ ದೇಶದಲ್ಲಿ ಶೇ 80ರಷ್ಟು ಸಾಮಾನ್ಯ ಮಳೆ ಕೊರತೆ ಎದುರಾಗಿದೆ. ಪ್ರಸ್ತುತದ ಕೃಷಿ ಋತುವಿನಲ್ಲಿ ಅಂದರೆ 2023-24 ನಿರೀಕ್ಷೆಗೆ ತಕ್ಕಮಟ್ಟಿಗೆ ಫಸಲು ಕೈ ಸೇರಿಲ್ಲ ಎಂದು ನಂಗಾಗ್ವ ಹರಾರರೆಯ ಸ್ಟೇಟ್​ಹೌಸ್​ನಲ್ಲಿ ಮಾತನಾಡಿದರು.

ರಾಷ್ಟ್ರೀಯ ವಿಪತ್ತಿನ ಘೋಷಣೆಯೊಂದಿಗೆ ಜಿಂಬಾಬ್ವೆ ಪರಿಸ್ಥಿತಿ ಸುಧಾರಣೆಗೆ ಡಯಾಸ್ಪೊರಾದಲ್ಲಿರುವ ಅಂತಾರಾಷ್ಟ್ರೀಯ ಸಮುದಾಯ, ವಿಶ್ವಸಂಸ್ಥೆಯ ಏಜೆನ್ಸಿಗಳು, ಅಭಿವೃದ್ಧಿ ಮತ್ತು ಮಾನವೀಯ ಪಾಲುದಾರರು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ಖಾಸಗಿ ವಲಯ, ಚರ್ಚ್‌ಗಳು ಮತ್ತು ಇತರ ನಂಬಿಕೆ ಆಧಾರಿತ ಸಂಸ್ಥೆಗಳು ಜಿಂಬಾಬ್ವೆಗೆ ಸಹಾಯ ಹಸ್ತ ಚಾಚಬೇಕು ಎಂದು ಕೋರಿಕೊಳ್ಳುತ್ತೇನೆ ಎಂದರು.

ಪ್ರಾಥಮಿಕ ಮೌಲ್ಯಮಾಪನದಲ್ಲಿ ಜಿಂಬಾಬ್ವೆಗೆ 2 ಬಿಲಿಯನ್​ಗೂ ಹೆಚ್ಚು ಮಧ್ಯಂತರ ಸಹಾಯ ಬೇಕಿದೆ. ಜಿಂಬಾಬ್ವೆಯು ಒಟ್ಟು 1,728,897 ಹೆಕ್ಟೇರ್‌ಗಳನ್ನು ಜೋಳದ ಬೆಳೆ ಸೇರಿದಂತೆ ಇತರ ಧಾನ್ಯಗಳನ್ನು ಬಿತ್ತನೆ ಮಾಡಲಾಗಿದೆ. ಈ ಫಲಗಳು ಸಮೃದ್ಧವಾಗಿ ಬರಲಿದೆ ಎಂಬ ಖಾತರಿ ಬೇಕಾಗಿದೆ ಎಂದರು.

ಈ ಋತುಮಾನದಲ್ಲಿ 868.273 ಮೆಟ್ರಿಕ್​ ಟನ್​ ಕೃಷಿ ನಿರೀಕ್ಷಿಸಲಾಗಿದೆ. ದೇಶವು 6,80,000 ಮೆಟ್ರಿಕ್​ ಟನ್​ ಆಹಾರ ಧಾನ್ಯದ ಕೊರತೆ ಎದುರಿಸುತ್ತಿದೆ. ಈ ಕೊರತೆಯನ್ನು ಆಹಾರ ಆಮದು ಮಾಡಿಕೊಳ್ಳುವ ಮೂಲಕ ನೀಗಿಸಲಾಗುವುದು ಎಂದರು.

ಸದ್ಯ ನಮ್ಮ ಆದ್ಯತೆ ಎಲ್ಲ ಜಿಂಬಾಬ್ವೆ ಜನರಿಗೆ ಆಹಾರ ಭದ್ರತೆ ನೀಡುವುದಾಗಿದೆ. ದೇಶದ ಯಾವುದೇ ಪ್ರಜೆ ಕೂಡ ಹಸಿವಿನಿಂದ ಸಾಯಬಾರದು. ಜಿಂಬಾಬ್ವೆಗೆ ವಾರ್ಷಿಕವಾಗಿ 2.3 ಮಿಲಿಯನ್​ ಟನ್​​ ಧಾನ್ಯಗಳು ಬೇಕಾಗುತ್ತದೆ. ಇದರಿಂದ ಮಾನವ ಮತ್ತು ಪ್ರಾಣಿಗಳಿಗೆ ಅಗತ್ಯ ಆಹಾರ ದೊರಕಲಿದೆ. ಬರದಿಂದಾಗಿ ಈ ವರ್ಷ ಧಾನ್ಯಗಳ ಉತ್ಪಾದನೆಯನ್ನು 2023-24ರ ಬೇಸಿಗೆ ಬೆಳೆ ಋತುವಿನಲ್ಲಿ 8,00,000 ಟನ್​ ಅನ್ನು ನಿರೀಕ್ಷಿಸಲಾಗಿದೆ ಎಂದು ಕೃಷಿ ಸಚಿವರು ತಿಳಿಸಿದ್ದಾರೆ.

ಎಲ್​ ನಿನೋ ಪರಿಣಾಮ: ಪ್ರತಿ ಎರಡರಿಂದ ಏಳು ವರ್ಷಗಳಿಗೊಮ್ಮೆ ಪೆಸಿಫಿಕ್ ಮಹಾಸಾಗರದ ಭಾಗಗಳನ್ನು ಬೆಚ್ಚಗಾಗಿಸುವ ನೈಸರ್ಗಿಕವಾಗಿ ಹವಾಮಾನ ವಿದ್ಯಮಾನವಾದ ಎಲ್ ನಿನೊ ಪ್ರಪಂಚದ ಹವಾಮಾನದ ಮೇಲೆ ವಿವಿಧ ಪರಿಣಾಮಗಳನ್ನು ಬೀರುತ್ತದೆ. ಇದು ಈ ಬಾರಿ ಜಗತ್ತಿನ ಬಹುತೇಕ ಕಡೆ ಬರ ಪರಿಸ್ಥಿತಿ, ಮಳೆ ಕೊರತೆ, ಭೀಕರ ಬಿಸಿಲಿನ ಪರಿಸ್ಥಿತಿಗೆ ಕಾರಣವಾಗಿದೆ. (ಐಎಎನ್​ಎಸ್​​)

ಇದನ್ನೂ ಓದಿ: ಸಮುದ್ರ ವಿದ್ಯಮಾನಗಳಾದ ಎಲ್‌ ನಿನೋ-ಲಾ ನಿನೋದಿಂದ ಹವಾಮಾನದ ಮೇಲೇನು ಪರಿಣಾಮ? ತಜ್ಞರ ಮಾತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.