ETV Bharat / international

ಇಂದು ನೆಲ್ಸನ್​ ಮಂಡೇಲಾ ಅಂತಾರಾಷ್ಟ್ರೀಯ ದಿನ: ಮಹತ್ವ, ಇತಿಹಾಸ ಗೊತ್ತೇ? - Nelson Mandela International Day

author img

By ETV Bharat Karnataka Team

Published : Jul 18, 2024, 11:37 AM IST

67 ವರ್ಷಗಳ ಕಾಲ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡಿದ ಧೀಮಂತ ವ್ಯಕ್ತಿ ನೆಲ್ಸನ್​ ಮಂಡೇಲಾ.

what-is-nelson-mandela-international-day-know-its-history-and-significance
ನೆಲ್ಸನ್​ ಮಂಡೇಲಾ ದಿನ (ETV Bharat)

ನವದೆಹಲಿ: ಇಂದು ನೆಲ್ಸನ್​ ಮಂಡೇಲಾ ಜನ್ಮದಿನ. 2009ರಲ್ಲಿ ಈ ದಿನವನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ವಿಶ್ವಸಂಸ್ಥೆ ಘೋಷಿಸಿತು. 2010 ಜುಲೈ 18ರಂದು ಮೊದಲ ಬಾರಿಗೆ ಮಂಡೇಲಾ ದಿನ ಜಾರಿಗೆ ಬಂತು. ಮಂಡೇಲಾ ಅವರ ಪರಂಪರೆಯನ್ನು ಗೌರವಿಸುವುದು, ಅವರನ್ನು ಸ್ಪೂರ್ತಿಯಾಗಿರಿಸಿಕೊಂಡು ಮಾನವೀಯ ಸೇವೆಯ ಮೂಲಕ ಜಗತ್ತನ್ನು ಉತ್ತಮವಾಗಿಸುವತ್ತ ಪ್ರೇರೇಪಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

67 ವರ್ಷಗಳ ಕಾಲ ವರ್ಣಭೇದ ನೀತಿಯ ವಿರುದ್ಧ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡಿದವರು ನೆಲ್ಸನ್​ ಮಂಡೇಲಾ. ಇದರ ಸಂಕೇತವಾಗಿ ಜನರನ್ನು ಈ ದಿನದಂದು 67 ನಿಮಿಷ ಬೇರೆಯವರಿಗೆ ಸಹಾಯ ಮಾಡಲು ಪ್ರೋತ್ಸಾಹಿಸಲಾಗುತ್ತದೆ. ಸಮುದಾಯ ಸೇವೆ, ಸ್ವಯಂಸೇವಕ ಕೆಲಸ ಸೇರಿದಂತೆ ಜನರ ಜೀವನ ಸುಧಾರಣೆಗೆ ಸಹಾಯ ಮಾಡುವ ಕಾರ್ಯವನ್ನು ಈ ದಿನ ಆಯೋಜಿಸಲಾಗುತ್ತದೆ.

ದಿನದ ಇತಿಹಾಸ: ನೆಲ್ಸನ್​ ಮಂಡೇಲಾ ಅಂತಾರಾಷ್ಟ್ರೀಯ ದಿನ ಅಥವಾ ಮಂಡೇಲಾ ದಿನವನ್ನು ಅಧಿಕೃತವಾಗಿ 2009ರ ನವೆಂಬರ್​ನಲ್ಲಿ ವಿಶ್ವಸಂಸ್ಥೆ ಘೋಷಿಸಿತ್ತು. ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧದ ಹೋರಾಟದ ನೇತಾರ ಮತ್ತು ಶಾಂತಿ, ಸಮನ್ವಯ ಮತ್ತು ಸಾಮಾಜಿಕ ನ್ಯಾಯದ ಜಾಗತಿಕ ಸಂಕೇತವಾದ ನೆಲ್ಸನ್ ಮಂಡೇಲಾ ಅವರನ್ನು ಗೌರವಿಸುವ ಹಿನ್ನೆಲೆಯಲ್ಲಿ ಈ ದಿನವನ್ನು ಸ್ಥಾಪಿಸಲಾಗಿದೆ.

ಮಂಡೇಲಾ ದಿನದ ಪ್ರಮುಖ ಮೈಲಿಗಲ್ಲುಗಳು:

ಸಮರ್ಥನೆ: ವಿಶ್ವಸಂಸ್ಥೆ ಅಧಿಕೃತ ದಿನವಾಗಿ ಘೋಷಿಸುವ ಮುನ್ನ ನೆಲ್ಸನ್ ಮಂಡೇಲಾ ಅವರ ಗೌರವಾರ್ಥ ದಿನವನ್ನು ಸ್ಥಾಪಿಸುವ ಪ್ರಯತ್ನಗಳು ನಡೆಯಿತು. ಶಾಂತಿ ಮತ್ತು ಸ್ವಾತಂತ್ರ್ಯಕ್ಕೆ ಮಂಡೇಲಾ ಅವರ ಕೊಡುಗೆಗಳ ಸ್ಮರಣೆಗೆ ವಿವಿಧ ಸಂಸ್ಥೆಗಳು ಮತ್ತು ವ್ಯಕ್ತಿಗಳು ಒಂದು ದಿನವನ್ನು ಮೀಸಲಾಗಿರಿಸುವ ಕುರಿತು ತಿಳಿಸಿದರು.

ವಿಶ್ವಸಂಸ್ಥೆ ಘೋಷಣೆ: ನವೆಂಬರ್ 2009ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜುಲೈ 18 ಅನ್ನು ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನವೆಂದು ಔಪಚಾರಿಕವಾಗಿ ಘೋಷಿಸಲಾಯಿತು. ಶಾಂತಿ ಮತ್ತು ಸ್ವಾತಂತ್ರ್ಯದ ಸಂಸ್ಕೃತಿಗೆ ಮಂಡೇಲಾ ಅವರ ಕೊಡುಗೆಗಳನ್ನು ಈ ವೇಳೆ ಅಂಗೀಕರಿಸಲಾಯಿತು.

2010ರಲ್ಲಿ ಮೊದಲ ಮಂಡೇಲಾ ದಿನ: ಉದ್ಘಾಟನಾ ದಿನ ಅಂದರೆ ಮೊದಲ ಮಂಡೇಲಾ ದಿನವನ್ನು ಜುಲೈ 18ರ 2010ರಂದು ಆಚರಿಸಲಾಯಿತು. ಈ ವೇಳೆ ಜನರಿಗೆ ಮಂಡೇಲಾ ಅವರ 67 ವರ್ಷದ ಹೋರಾಟದ ಪ್ರತಿಯಾಗಿ 67 ನಿಮಿಷ ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳ ಹೋರಾಟ ಸೇರಿದಂತೆ ಸಾರ್ವಜನಿಕ ಸೇವೆಯಲ್ಲಿ ಭಾಗಿಯಾಗಲು ಕರೆ ನೀಡಲಾಯಿತು.

ಜಾಗತಿಕ ಸಹಭಾಗಿತ್ವ: ಆರಂಭದಿಂದಲೂ ಮಂಡೇಲಾ ದಿನ ಜಾಗತಿಕ ಚಳುವಳಿಯಾಗಿ ಸಾಗಿ ಬಂದಿದೆ. ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆಗಳು ತಮ್ಮ ಸಮುದಾಯಗಳಲ್ಲಿ ಸಕಾರಾತ್ಮಕ ಪ್ರಭಾವ ಬೀರುವ ಗುರಿ ಹೊಂದಿ ವಿವಿಧ ಚಟುವಟಿಕೆಗಳು ಮತ್ತು ಉಪಕ್ರಮಗಳಲ್ಲಿ ಭಾಗಿಯಾಗುತ್ತಾರೆ.

ಮಂಡೇಲಾ ಪರಂಪರೆ: 2013ರ ಡಿಸೆಂಬರ್​ 5ರಂದು ಮಂಡೇಲಾ ನಿಧನರಾದರು. ಆದರೆ, ತಮ್ಮ ವ್ಯಕ್ತಿತ್ವದ ಮೂಲಕ ಜಗತ್ತಿನ ಮಿಲಿಯಗಟ್ಟಲೆ ಜನರಿಗೆ ಅವರು ಸ್ಪೂರ್ತಿಯಾಗಿದ್ದಾರೆ. ಮಂಡೇಲಾ ದಿನದಂದು ಅವರ ಜೀವನ ಕಾರ್ಯ, ನ್ಯಾಯ, ಸಮಾನತೆ ಮತ್ತು ಮಾನವ ಘನತೆಗೆ ಅವರ ಹೋರಾಟಗಳು ಸದಾ ಸ್ಮರಣೀಯವಾಗಿದೆ.

ಇದನ್ನೂ ಓದಿ: ಬೆಂಗಳೂರಿನ ನಿಮ್ಹಾನ್ಸ್​​ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ನೆಲ್ಸನ್ ಮಂಡೇಲಾ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.