ETV Bharat / international

ಉಕ್ರೇನ್ ಮೇಲಿನ ಯುದ್ಧ: 'ರಷ್ಯಾಗೆ ನಮ್ಮ ಸಂಪೂರ್ಣ ಬೆಂಬಲ' ಎಂದ ಕಿಮ್ ಜಾಂಗ್-ಉನ್ - Kim Jong Un Supports Russia

ಉಕ್ರೇನ್ ಮೇಲಿನ ಯುದ್ಧದ ವಿಷಯದಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ರಷ್ಯಾಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (IANS)
author img

By ETV Bharat Karnataka Team

Published : Jun 19, 2024, 6:33 PM IST

ಸಿಯೋಲ್: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಸಂಪೂರ್ಣ ಬೆಂಬಲಿಸುವುದಾಗಿ ಹೇಳಿರುವ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್, ಮಾಸ್ಕೊದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪ್ಯೋಂಗ್ಯಾಂಗ್​ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ನಡೆದ ಶೃಂಗಸಭೆ ಮಾತುಕತೆಗಳಲ್ಲಿ ಅವರು ಮಾತನಾಡಿದರು. ಉತ್ತರ ಕೊರಿಯಾ ಮತ್ತು ರಷ್ಯಾ ಸಂಬಂಧಗಳ ಬಲವರ್ಧನೆಯನ್ನು ಜಗತ್ತಿನ ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸುತ್ತಿರುವ ಹೊತ್ತಿನಲ್ಲಿ ಕಿಮ್ ಜಾಂಗ್-ಉನ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಜಾಗತಿಕ ಕಾರ್ಯತಂತ್ರದ ಸಮತೋಲನದಲ್ಲಿ ರಷ್ಯಾದ ಪಾತ್ರವನ್ನು ಶ್ಲಾಘಿಸಿದ ಕಿಮ್, ಉಭಯ ದೇಶಗಳ ನಡುವಿನ ಸಂಬಂಧಗಳು ಸಮೃದ್ಧಿಯ ಹೊಸ ಅವಧಿಯನ್ನು ಪ್ರವೇಶಿಸುತ್ತಿವೆ ಎಂದು ಹೇಳಿದರು ಮತ್ತು ಮಾಸ್ಕೋದೊಂದಿಗೆ ಕಾರ್ಯತಂತ್ರದ ಸಹಕಾರವನ್ನು ಬಲಪಡಿಸಲು ಪ್ರತಿಜ್ಞೆ ಮಾಡಿದರು ಎಂದು ರಷ್ಯಾದ ಸುದ್ದಿ ಸಂಸ್ಥೆ ಟಾಸ್ ವರದಿ ಮಾಡಿದೆ.

"ರಷ್ಯಾ ತನ್ನ ಸಾರ್ವಭೌಮತ್ವ, ಭದ್ರತಾ ಹಿತಾಸಕ್ತಿ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಿಕೊಳ್ಳಲು, ಅದು ಉಕ್ರೇನ್​ನಲ್ಲಿ ನಡೆಸುತ್ತಿರುವ ವಿಶೇಷ ಮಿಲಿಟರಿ ಕಾರ್ಯಾಚರಣೆಗೆ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾದ ಸರ್ಕಾರವು ರಷ್ಯಾ ಸರ್ಕಾರ, ಸೇನೆ ಮತ್ತು ಜನರೊಂದಿಗೆ ತನ್ನ ಸಂಪೂರ್ಣ ಬೆಂಬಲ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸುತ್ತದೆ" ಎಂದು ಕಿಮ್ ಹೇಳಿದ್ದಾರೆ.

ಉಕ್ರೇನ್​ ಮೇಲಿನ ಯುದ್ಧದ ವಿಷಯದಲ್ಲಿ ಮಾಸ್ಕೋದ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಪುಟಿನ್ ಕಿಮ್ ಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಮಾಸ್ಕೋದಲ್ಲಿ ಕಿಮ್ ಅವರೊಂದಿಗೆ ಮುಂದಿನ ಶೃಂಗಸಭೆಯನ್ನು ನಡೆಸುವ ಭರವಸೆಯನ್ನು ವ್ಯಕ್ತಪಡಿಸಿದರು ಎಂದು ಟಾಸ್ ವರದಿ ಮಾಡಿದೆ. ಶೃಂಗಸಭೆಯ ನಂತರ, ಪುಟಿನ್ ಮತ್ತು ಕಿಮ್ ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗಾಗಿ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದರು ಎಂದು ರಷ್ಯಾದ ಮಾಧ್ಯಮ ವರದಿಗಳು ತಿಳಿಸಿವೆ.

ಉಭಯ ದೇಶಗಳ ನಡುವಿನ ಸಂಬಂಧಗಳಿಗೆ ಆಧಾರವಾಗಿ ಕಾರ್ಯನಿರ್ವಹಿಸಲು ಹೊಸ ಮೂಲಭೂತ ದಾಖಲೆ ಸಿದ್ಧಪಡಿಸಲಾಗಿದೆ ಎಂದು ರಷ್ಯಾ ನಾಯಕ ಪುಟಿನ್ ಈ ಹಿಂದೆ ಹೇಳಿದ್ದಾರೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

9 ತಿಂಗಳ ಹಿಂದೆ ಇಬ್ಬರೂ ನಾಯಕರ ಮಧ್ಯೆ ರಷ್ಯಾದಲ್ಲಿ ಶೃಂಗ ಸಭೆ ನಡೆದಿತ್ತು. ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದ ಮೇಲೆ ಹಲವಾರು ರಾಷ್ಟ್ರಗಳು ನಿರ್ಬಂಧ ವಿಧಿಸಿವೆ. ಹೀಗಾಗಿ ರಷ್ಯಾ ಉತ್ತರ ಕೊರಿಯಾದೊಂದಿಗೆ ಮಿಲಿಟರಿ ಮತ್ತು ಇತರ ಸಹಕಾರವನ್ನು ಹೆಚ್ಚಿಸಿಕೊಳ್ಳುತ್ತಿದೆ.

ಇದನ್ನೂ ಓದಿ: ಮೃತ ಖಲಿಸ್ತಾನಿ ಉಗ್ರನಿಗೆ ಕೆನಡಾ ಸಂಸತ್ತಿನಲ್ಲಿ ಶ್ರದ್ಧಾಂಜಲಿ: ಭಾರತ ಕೆಂಡಾಮಂಡಲ - Tribute to Khalistani Terrorist

ETV Bharat Logo

Copyright © 2024 Ushodaya Enterprises Pvt. Ltd., All Rights Reserved.