ETV Bharat / international

ಹೊಸ ಅಧ್ಯಕ್ಷರ ಆಯ್ಕೆಗೆ ಇಂಡೋನೇಷ್ಯಾದಲ್ಲಿ ಚುನಾವಣೆ: ಮತದಾನ ಶುರು

author img

By ETV Bharat Karnataka Team

Published : Feb 14, 2024, 8:07 AM IST

ಇಂಡೋನೇಷ್ಯಾದಲ್ಲಿ ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು, ಇಂದು ಮತದಾನ ಆರಂಭವಾಗಿದೆ.

Voting begins in Indonesia to elect new President, other leaders
ಹೊಸ ಅಧ್ಯಕ್ಷರ ಆಯ್ಕೆಗೆ ಇಂಡೋನೇಷ್ಯಾದಲ್ಲಿ ಚುನಾವಣೆ: ಮತದಾನ ಶುರು

ಜಕಾರ್ತ (ಇಂಡೋನೇಷ್ಯಾ): ಬೆಲೆ ಏರಿಕೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರಗಳ ನಡುವೆ ಹೊಸ ಅಧ್ಯಕ್ಷರ ಆಯ್ಕೆಗೆ ಇಂಡೋನೇಷ್ಯಾದಲ್ಲಿ ಚುನಾವಣೆ ನಡೆಯುತ್ತಿದೆ. ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು 200 ಮಿಲಿಯನ್‌ಗಿಂತಲೂ ಹೆಚ್ಚು ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದು, ಇಂದು ತಮ್ಮ ಮತವನ್ನು ಹಾಕುವ ಮೂಲಕ ಹೊಸ ಅಧ್ಯಕ್ಷರ ನೇಮಕ ಮಾಡಲಿದ್ದಾರೆ ಎಂದು ಅಂತಾರಾಷ್ಟ್ರೀಯ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಇಂಡೋನೇಷ್ಯಾ ಅಧ್ಯಕ್ಷರಾಗಿ ಜೋಕೊ ವಿಡೋಡೊ ತಮ್ಮ ಗರಿಷ್ಠ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ ನಡೆಯುತ್ತಿರುವ ಮಹತ್ವದ ಚುನಾವಣೆ ಇದಾಗಿದೆ. ಇಂಡೋನೇಷ್ಯಾದ ಜನರು ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಮಾತ್ರವಲ್ಲದೇ ಸಂಸದೀಯ ಮತ್ತು ಸ್ಥಳೀಯ ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದ್ದಾರೆ. ಇಂಡೋನೇಷ್ಯಾದ 270 ಮಿಲಿಯನ್ ಜನರಲ್ಲಿ 204 ಮಿಲಿಯನ್‌ಗಿಂತಲೂ ಹೆಚ್ಚು ಜನರು ಮತ ಚಲಾವಣೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಮತದಾನ ಮಾಡುವುದು ಕಡ್ಡಾಯವಲ್ಲದಿದ್ದರೂ ಮತದಾನದ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. 2019 ರ ಇಂಡೋನೇಷ್ಯಾದ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡಾ 81 ರಷ್ಟು ಮತದಾನವಾಗಿತ್ತು ಎಂದು ಅಲ್ಲಿನ ಆಯೋಗ ಹೇಳಿತ್ತು.

ಇಂಡೋನೇಷ್ಯಾದಲ್ಲಿ 18 ರಾಷ್ಟ್ರೀಯ ಪಕ್ಷಗಳಿದ್ದು, 575 ಸಂಸದೀಯ ಸ್ಥಾನಗಳಿವೆ. ಪ್ರಸ್ತುತ ಇಂಡೋನೇಷ್ಯಾ ಅಧ್ಯಕ್ಷ ಜೋಕೋವಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜೋಕೊ ವಿಡೋಡೊ ಅವರು ಗರಿಷ್ಠ ಎರಡು ಅವಧಿಯ ಅಧಿಕಾರವನ್ನು ಪೂರ್ಣಗೊಳಿಸಿದ್ದಾರೆ, ಹೀಗಾಗಿ ಈ ಸಲದ ಚುನಾವಣೆ ಮಹತ್ವ ಪಡೆದುಕೊಂಡಿದೆ. ದೇಶ ನಾಯಕತ್ವ ಬದಲಾವಣೆಯ ನಿರೀಕ್ಷೆಯಲ್ಲಿದೆ. ಮಾಜಿ ಮಿಲಿಟರಿ ಜನರಲ್ ಸಹ ಈ ಬಾರಿ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಇತರ ಪ್ರಮುಖ ಅಭ್ಯರ್ಥಿಗಳು ಎಂದರೆ, ಮಾಜಿ ಮಿಲಿಟರಿ ಸ್ಟ್ರಾಂಗ್‌ಮನ್ ಮತ್ತು ಇಂಡೋನೇಷ್ಯಾದ ಪ್ರಸ್ತುತ ರಕ್ಷಣಾ ಸಚಿವ ಪ್ರಬೋವೊ ಸುಬಿಯಾಂಟೊ (72) ಮೂರನೇ ಬಾರಿಗೆ ಉನ್ನತ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ. 2014 ಮತ್ತು 2019 ರಲ್ಲಿ ಜೋಕೋವಿ ವಿರುದ್ಧ ಇವರು ಸೋಲು ಕಂಡಿದ್ದರು.

ಪ್ರಬೋವೊ ರಾಷ್ಟ್ರೀಯವಾದಿ, ಬಲಪಂಥೀಯ ಜನಪ್ರಿಯ ರಾಜಕೀಯ ಪಕ್ಷವಾದ ಗೆರಿಂದ್ರದ ಮುಖ್ಯಸ್ಥರಾಗಿದ್ದಾರೆ. ಗೋಲ್ಕರ್ ಮತ್ತು ನ್ಯಾಷನಲ್ ಮ್ಯಾಂಡೇಟ್ ಪಾರ್ಟಿ (PAN) ಸೇರಿದಂತೆ ಇತರ ಪಕ್ಷಗಳ ಒಕ್ಕೂಟದ ಬೆಂಬಲವನ್ನು ಇವರು ಹೊಂದಿದ್ದಾರೆ. ಪ್ರಬೋವೊ ಅವರು ಗ್ರಾಮೀಣ, ಕರಾವಳಿ ಮತ್ತು ನಗರ ಪ್ರದೇಶಗಳಲ್ಲಿ ಮೂರು ಮಿಲಿಯನ್ ಹೊಸ ಮನೆಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.

ಇನ್ನೊಬ್ಬ ಪ್ರಮುಖ ಅಭ್ಯರ್ಥಿ, ಗಂಜಾರ್ ಪ್ರನೊವೊ (55) ಸೆಂಟ್ರಲ್ ಜಾವಾದ ಮಾಜಿ ಗವರ್ನರ್ ಆಗಿದ್ದವರು. ಇಂಡೋನೇಷಿಯನ್ ಡೆಮಾಕ್ರಟಿಕ್ ಪಾರ್ಟಿ ಆಫ್ ಸ್ಟ್ರಗಲ್ (ಪಿಡಿಐ-ಪಿ) ಸದಸ್ಯರಾಗಿದ್ದಾರೆ. ಈ ಪಕ್ಷ 2014 ಮತ್ತು 2019 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೋಕೋವಿಯನ್ನು ಬೆಂಬಲಿಸಿತ್ತು. (ANI)

ಇದನ್ನು ಓದಿ: 2020ರ ಪ್ರಕರಣ: ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿದ ಟ್ರಂಪ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.