ETV Bharat / international

ದಾಖಲೆಯ 5ನೇ ಅವಧಿಗೆ ರಷ್ಯಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ವ್ಲಾಡಿಮಿರ್​ ಪುಟಿನ್​ - Vladimir Putin sworn - VLADIMIR PUTIN SWORN

ರಷ್ಯಾ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವ ವ್ಲಾಡಿಮಿರ್​ ಪುಟಿನ್​, ದಾಖಲೆಯ 5ನೇ ಬಾರಿಗೆ ಅಧಿಕಾರ ವಹಿಸಿಕೊಂಡರು.

ವ್ಲಾಡಿಮಿರ್​ ಪುಟಿನ್​
ವ್ಲಾಡಿಮಿರ್​ ಪುಟಿನ್​ (Source: File Photo (ETV Bharat))
author img

By ANI

Published : May 7, 2024, 8:22 PM IST

ಮಾಸ್ಕೋ (ರಷ್ಯಾ): ಉಕ್ರೇನ್​ ಮೇಲೆ ಯುದ್ಧ, ಪಾಶ್ಚಿಮಾತ್ಯ ರಾಷ್ಟ್ರಗಳಿಂದ ನಿರ್ಬಂಧ, ವ್ಯಾಪಾರ ಒಪ್ಪಂದಕ್ಕೆ ಹೊಡೆತ. ಇದೆಲ್ಲರ ಮಧ್ಯೆಯೂ ರಷ್ಯಾದ ಅಧ್ಯಕ್ಷರಾಗಿ ವ್ಲಾಡಿಮಿರ್​ ಪುಟಿನ್​ 5ನೇ ಅವಧಿಗೆ ಆಯ್ಕೆಯಾಗಿದ್ದಾರೆ. ಉನ್ನತ ನ್ಯಾಯಾಲಯದ ಮುಖ್ಯಸ್ಥ ವ್ಯಾಲೆರಿ ಜೋರ್ಕಿನ್ ಅವರು ಪುಟಿನ್ ಅವರಿಗೆ ರಷ್ಯಾದ ಅಧ್ಯಕ್ಷರಾಗಿ 6 ವರ್ಷಗಳ ಅವಧಿಗೆ ಅಧಿಕಾರ ಬೋಧನೆ ಮಾಡಿದರು. ಕ್ರೆಮ್ಲಿನ್‌ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ದಾಖಲೆಯ ಐದನೇ ಅವಧಿಗೆ ಪುಟಿನ್​ ಪ್ರಮಾಣ ವಚನ ಸ್ವೀಕರಿಸಿದರು.

ಜನರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ ಪುಟಿನ್​ಗೆ, ಜೋರ್ಕಿನ್ ಅವರು ಅಧ್ಯಕ್ಷೀಯ ಸಂಕೇತಗಳನ್ನು ನೀಡಿದರು. ಅಂದರೆ ಸೇಂಟ್ ಜಾರ್ಜ್ ಅವರ ಚಿನ್ನದ ಶಿಲುಬೆ, ರಷ್ಯಾದ ಕೋಟ್ ಆಫ್ ಆರ್ಮ್ಸ್ ಮತ್ತು ಸದ್ಗುಣ ಮತ್ತು ಪ್ರಾಮಾಣಿಕತೆಯ ಗುರುತಾದ ಚಿನ್ನದ ಸರಪಳಿಯನ್ನು ಪಡೆದರು.

ಅಧಿಕಾರಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ: ರಷ್ಯಾದ ಪ್ರಭಾವಿ ಅಧ್ಯಕ್ಷರಾದ ವ್ಲಾಡಿಮಿರ್​ ಪುಟಿನ್ ಅವರು ತಮ್ಮ ಅಧಿಕಾರವನ್ನು ಹೆಚ್ಚಿಸಿಕೊಳ್ಳಲು ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದರು. ಈ ಹಿಂದೆ ಅಧ್ಯಕ್ಷರ ಅಧಿಕಾರವಧಿ 4 ವರ್ಷಗಳಿದ್ದವು. ಇದಕ್ಕೆ ತಿದ್ದುಪಡಿ ತರಲಾಗಿದ್ದು, ಈಗ ಅದು 6 ವರ್ಷಕ್ಕೆ ಹೆಚ್ಚಿಸಲಾಗಿದೆ.

ಅಧ್ಯಕ್ಷರ 6 ವರ್ಷಗಳ ಅಧಿಕಾರವಧಿ 2012 ರಿಂದ ಆರಂಭವಾಯಿತು. 2018 ರ ಚುನಾವಣೆಯಲ್ಲೂ ಅದು ಮುಂದುವರಿಯಿತು. ಎರಡು ಬಾರಿಯೂ ವ್ಲಾಡಿಮಿರ್​ ಪುಟಿನ್​ ಅವರೇ ಅಧ್ಯಕ್ಷರಾಗಿದ್ದರು. ಈ ಮಧ್ಯೆ 2020 ರಲ್ಲಿ ಪುಟಿನ್​ ಅವರು 2024 ರ ಚುನಾವಣೆಯಲ್ಲೂ ಸ್ಪರ್ಧೆಗೆ ಅವಕಾಶ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು.

ಮಾರ್ಚ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ಭರ್ಜರಿ ಗೆಲುವು ಸಾಧಿಸಿದ್ದರು. ಚಲಾವಣೆಯಾದ ಮತದಾನದಲ್ಲಿ ಪುಟಿನ್​ ಶೇಕಡಾ 87.17 ರಷ್ಟು ಮತಗಳನ್ನು ಪಡೆದು ಏಕಪಕ್ಷೀಯವಾಗಿ ಆಯ್ಕೆಯಾಗಿದ್ದರು.

ಇವರ ಎದುರಾಳಿಯಾಗಿದ್ದ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ನಿಕೊಲಾಯ್ ಖರಿಟೋನೊವ್ ಅವರು ಶೇಕಡಾ 4.1 ರಷ್ಟು ಮತಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. ನ್ಯೂ ಪೀಪಲ್ ಪಕ್ಷದ ಅಭ್ಯರ್ಥಿ ವ್ಲಾಡಿಸ್ಲಾವ್ ದಾವಂಕೋವ್ ಶೇಕಡಾ 4 ರಷ್ಟು ಮತಗಳೊಂದಿಗೆ ಮೂರನೇ ಸ್ಥಾನಿಯಾಗಿದ್ದಾರೆ.

ಇದನ್ನೂ ಓದಿ: ರಷ್ಯಾ ಅಧ್ಯಕ್ಷೀಯ ಚುನಾವಣೆ: ಶೇ.87ರಷ್ಟು ಮತ ಪಡೆದು ಮತ್ತೆ ಗದ್ದುಗೆಗೇರಿದ ಪುಟಿನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.