ETV Bharat / international

ನೈಜರ್, ಚಾಡ್​ನಿಂದ ಸೇನಾಪಡೆಗಳನ್ನು ಹಿಂಪಡೆಯಲು ಅಮೆರಿಕ ಸಿದ್ಧತೆ - troops withdrawal from niger - TROOPS WITHDRAWAL FROM NIGER

ನೈಜರ್​ ದೇಶದಿಂದ ತನ್ನ ಪಡೆಗಳನ್ನು ಹಿಂಪಡೆಯಲು ಅಮೆರಿಕ ಸಮ್ಮತಿ ಸೂಚಿಸಿದೆ.

US prepares to withdraw troops from Chad and Niger

author img

By ETV Bharat Karnataka Team

Published : Apr 26, 2024, 12:54 PM IST

ವಾಷಿಂಗ್ಟನ್​: ನೈಜರ್​ ದೇಶದಿಂದ ತನ್ನ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಅಮೆರಿಕ ಸಿದ್ಧತೆ ನಡೆಸುತ್ತಿದೆ. ನೈಜರ್​ನಲ್ಲಿ ಸದ್ಯ ಮಿಲಿಟಿರಿ ಜುಂಟಾ ಆಡಳಿತ ನಡೆಸುತ್ತಿದ್ದು, ತನ್ನ ಪಡೆಗಳನ್ನು ಹಿಂಪಡೆಯಲು ಅಮೆರಿಕ ಮಿಲಿಟರಿ ಜುಂಟಾದೊಂದಿಗೆ ಮಾತುಕತೆ ನಡೆಸುತ್ತಿದೆ. ಕಳೆದ ವರ್ಷದ ಅಂಕಿ - ಅಂಶಗಳ ಪ್ರಕಾರ, 1,000 ಕ್ಕೂ ಹೆಚ್ಚು ಅಮೆರಿಕ ಸೈನಿಕರು ನೈಜರ್​ನಲ್ಲಿ ಬೀಡುಬಿಟ್ಟಿದ್ದಾರೆ.

ಸೇನಾ ಪಡೆಗಳ ಸಂಭಾವ್ಯ ವಾಪಸಾತಿ ಕುರಿತು ಮಾತುಕತೆ ಈ ವಾರ ಮತ್ತು ಮುಂದಿನ ವಾರ ರಾಜಧಾನಿ ನಿಯಾಮಿಯಲ್ಲಿ ಪ್ರಾರಂಭವಾಗಲಿದೆ ಎಂದು ಅಮೆರಿಕ ಸ್ಟೇಟ್ ಡಿಪಾರ್ಟ್​ಮೆಂಟ್ ಘೋಷಿಸಿದೆ. ಜುಲೈ 2023 ರಿಂದ ಮಿಲಿಟರಿ ಜುಂಟಾದೊಂದಿಗೆ ನಡೆಯುತ್ತಿರುವ ಚರ್ಚೆಗಳು ಎರಡೂ ಕಡೆಗಳ ಅಗತ್ಯತೆಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡುವಂಥ ನೀತಿಯನ್ನು ರೂಪಿಸಲು ವಿಫಲವಾಗಿವೆ ಎಂದು ವಿದೇಶಾಂಗ ಇಲಾಖೆ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

ನೈಗರ್ ಇದು ಸಹೇಲ್ ಪ್ರದೇಶದಲ್ಲಿ ಯುಎಸ್ ಮಿಲಿಟರಿಯ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಕೇಂದ್ರವಾಗಿತ್ತು. ಆದರೆ, ಜುಲೈ 2023 ರಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ಮಿಲಿಟರಿ ಜುಂಟಾ ಅಮೆರಿಕದ ಪಡೆಗಳು ಹೊರ ಹೋಗುವಂತೆ ಒತ್ತಾಯಿಸುತ್ತಿದೆ.

ಅಲ್ಲದೆ ಮಾರ್ಚ್​ನಲ್ಲಿ ಅಮೆರಿಕದೊಂದಿಗಿನ ಮಿಲಿಟರಿ ಸಹಕಾರ ಒಪ್ಪಂದವನ್ನು ಕೂಡ ಜುಂಟಾ ರದ್ದುಗೊಳಿಸಿದೆ. ಅಮೆರಿಕ ಪಡೆಗಳ ಅನುಚಿತ ವರ್ತನೆ ಮತ್ತು ಪ್ರತೀಕಾರದ ಬೆದರಿಕೆಯ ಕಾರಣದಿಂದ ಮಿಲಿಟರಿ ಒಪ್ಪಂದ ರದ್ದುಗೊಳಿಸಲಾಯಿತು ಎಂದು ಮಿಲಿಟರಿ ಜುಂಟಾ ವಕ್ತಾರ ಅಮದೌ ಅಬದ್ರಮನೆ ಹೇಳಿದರು.

ಸೇನಾಪಡೆಗಳು ವಾಪಸಾತಿ ಯೋಜನೆಗಳ ಬಗ್ಗೆ ಅಮೆರಿಕದ ಮಾಧ್ಯಮಗಳು ಈಗಾಗಲೇ ವರದಿ ಮಾಡಿವೆ. ಅಲ್ಲದೇ ಪೆಂಟಗನ್ ಮುಂದಿನ ದಿನಗಳಲ್ಲಿ ನೆರೆಯ ಚಾಡ್​ನಿಂದ ಕೂಡ ಡಜನ್​ಗಟ್ಟಲೆ ಅಮೆರಿಕದ ವಿಶೇಷ ಪಡೆಗಳನ್ನು ಹಿಂತೆಗೆದುಕೊಳ್ಳಲಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

ಈ ಪರಿವರ್ತನೆಯು ಈ ಪ್ರದೇಶದಲ್ಲಿ ಗಂಭೀರ ರಾಜತಾಂತ್ರಿಕ ಬಿಕ್ಕಟ್ಟನ್ನು ಹುಟ್ಟುಹಾಕಿದೆ. ನೆರೆಯ ಮಾಲಿ ಮತ್ತು ಬುರ್ಕಿನಾ ಫಾಸೊ ಕೂಡ ಪಾಶ್ಚಿಮಾತ್ಯ ದೇಶಗಳ ಮಿತ್ರತ್ವದಿಂದ ದೂರ ಸರಿದು ರಷ್ಯಾದ ಕಡೆಗೆ ಮುಖ ಮಾಡಿವೆ. ಈ ತಿಂಗಳ ಆರಂಭದಲ್ಲಿ ಮಾಸ್ಕೋ ನೈಜರ್​ಗೆ ವಾಯು ರಕ್ಷಣಾ ವ್ಯವಸ್ಥೆ ಮತ್ತು 100 ಮಿಲಿಟರಿ ತರಬೇತುದಾರರನ್ನು ಕಳುಹಿಸಿರುವುದು ಗಮನಾರ್ಹ.

ನೈಜರ್ ಇದು ಪಶ್ಚಿಮ ಆಫ್ರಿಕಾದ ಭೂ - ಆ ವೃತ ದೇಶವಾಗಿದೆ. ಇದು ವಾಯುವ್ಯದಲ್ಲಿ ಅಲ್ಜೀರಿಯಾ, ಈಶಾನ್ಯದಲ್ಲಿ ಲಿಬಿಯಾ, ಪೂರ್ವದಲ್ಲಿ ಚಾಡ್, ದಕ್ಷಿಣದಲ್ಲಿ ನೈಜೀರಿಯಾ ಮತ್ತು ಬೆನಿನ್ ಮತ್ತು ಪಶ್ಚಿಮದಲ್ಲಿ ಬುರ್ಕಿನಾ ಫಾಸೊ ಮತ್ತು ಮಾಲಿಯಿಂದ ಸುತ್ತುವರೆಯಲ್ಪಟ್ಟಿದೆ.

ಇದನ್ನೂ ಓದಿ: 324 ಕೋಟಿ ತಲುಪಿದ ಮೆಟಾ ಆ್ಯಪ್​ ಬಳಕೆದಾರರ ಸಂಖ್ಯೆ: ರೀಲ್ಸ್​ಗೆ ಅತ್ಯಧಿಕ ವೀಕ್ಷಕರು - META APPS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.