ETV Bharat / international

ಪಾಕಿಸ್ತಾನಕ್ಕೆ ಕ್ಷಿಪಣಿ ತಯಾರಿಸಲು ಸಹಾಯ ಮಾಡಿದ 3 ಚೀನಾ ಕಂಪನಿಗಳ ಮೇಲೆ ನಿರ್ಬಂಧ - US Imposes Sanctions On China - US IMPOSES SANCTIONS ON CHINA

ಪಾಕಿಸ್ತಾನದ ಕ್ಷಿಪಣಿ ಯೋಜನೆಗೆ ನೆರವು ನೀಡಿದ್ದಕ್ಕಾಗಿ ಅಮೆರಿಕವು ಚೀನಾದ ಮೂರು ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿದೆ.

ಕ್ಷಿಪಣಿ (ಪ್ರಾತಿನಿಧಿಕ ಚಿತ್ರ)
ಕ್ಷಿಪಣಿ (ಸಂಗ್ರಹ ಚಿತ್ರ) (IANS)
author img

By ETV Bharat Karnataka Team

Published : Sep 13, 2024, 12:35 PM IST

ನ್ಯೂಯಾರ್ಕ್: ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಗೆ ಸಹಾಯ ಮಾಡಿದ್ದಕ್ಕಾಗಿ ಅಮೆರಿಕವು ಮೂರು ಚೀನೀ ಮತ್ತು ಒಂದು ಪಾಕಿಸ್ತಾನಿ ಕಂಪನಿ ಹಾಗೂ ಓರ್ವ ಚೀನಾದ ಪ್ರಜೆಯ ಮೇಲೆ ನಿರ್ಬಂಧಗಳನ್ನು ವಿಧಿಸಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಗುರುವಾರ ಪ್ರಕಟಿಸಿದ್ದಾರೆ.

ಶಾಹೀನ್-3 ಮತ್ತು ಅಬಾಬೀಲ್ ಕ್ಷಿಪಣಿಗಳಲ್ಲಿ ಬಳಸಲಾಗುವ ದೊಡ್ಡ ವ್ಯಾಸದ ರಾಕೆಟ್ ಮೋಟರ್​ಗಳನ್ನು ಪರೀಕ್ಷಿಸಲು ಅಗತ್ಯವಾದ ಉಪಕರಣಗಳನ್ನು ಪಡೆಯಲು ಪಾಕಿಸ್ತಾನದ ರಾಷ್ಟ್ರೀಯ ಅಭಿವೃದ್ಧಿ ಸಂಕೀರ್ಣ (ಎನ್​ಡಿಸಿ) ದೊಂದಿಗೆ ಕೆಲಸ ಮಾಡಿದ್ದಕ್ಕಾಗಿ ಬೀಜಿಂಗ್ ರಿಸರ್ಚ್ ಇನ್ ಸ್ಟಿಟ್ಯೂಟ್ ಆಫ್ ಆಟೋಮೇಷನ್ ಫಾರ್ ಮೆಷಿನ್ ಬಿಲ್ಡಿಂಗ್ ಇಂಡಸ್ಟ್ರಿ (ಆರ್​ಐಎಎಂಬಿ) ಸಂಸ್ಥೆಯ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚೀನಾದ ಪ್ರಜೆ ಲುವೊ ಡೊಂಗ್ಮೆ (ಈತ ಸ್ಟೀಡ್ ಲುವೊ ಎಂಬ ಗುಪ್ತನಾಮ ಹೊಂದಿದ್ದಾನೆ) ಮತ್ತು ಪಾಕಿಸ್ತಾನ ಮೂಲದ ಇನ್ನೋವೇಟಿವ್ ಇಕ್ವಿಪ್ ಮೆಂಟ್ ಕಂಪನಿಗೆ ಸಹ ಇದೇ ಕಾರಣಗಳಿಗಾಗಿ ನಿಷೇಧ ಹೇರಲಾಗಿದೆ ಎಂದು ಅವರು ಹೇಳಿದರು.

ಯುಎಸ್ ಪ್ರಕಾರ, ಎನ್​ಡಿಸಿ ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸುತ್ತಿದೆ. ಆದರೆ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಪ್ರಸರಣ ಮತ್ತು ಅವುಗಳ ವಿತರಣಾ ಜಾಲಗಳನ್ನು ತಡೆಯಲು 2005 ರಿಂದ ಕಾರ್ಯನಿರ್ವಾಹಕ ಆದೇಶದ ಅಡಿಯಲ್ಲಿ ಆರ್​ಐಎಎಂಬಿ ಮೇಲೆ ನಿರ್ಬಂಧ ವಿಧಿಸಲಾಗಿದೆ.

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತ (ಎಂಟಿಸಿಆರ್) ಗುಂಪಿನ ಸದಸ್ಯನಲ್ಲದ ಪಾಕಿಸ್ತಾನಕ್ಕೆ ಉದ್ದೇಶಪೂರ್ವಕವಾಗಿ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ವರ್ಗಾಯಿಸಿದಕ್ಕಾಗಿ ಚೀನಾ ಮೂಲದ ಹುಬೈ ಹುವಾಚಾಂಗ್ಡಾ ಇಂಟೆಲಿಜೆಂಟ್ ಎಕ್ವಿಪ್ ಮೆಂಟ್ ಕಂಪನಿ, ಯುನಿವರ್ಸಲ್ ಎಂಟರ್ ಪ್ರೈಸ್ ಲಿಮಿಟೆಡ್ ಮತ್ತು ಕ್ಸಿಯಾನ್ ಲಾಂಗ್ಡೆ ಟೆಕ್ನಾಲಜಿ ಡೆವಲಪ್ ಮೆಂಟ್ ಕಂಪನಿ ಲಿಮಿಟೆಡ್ (ಲೋಂಟೆಕ್ ಎಂದೂ ಕರೆಯಲಾಗುತ್ತದೆ) ಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಮಿಲ್ಲರ್ ಹೇಳಿದರು. ಭಾರತ ಸೇರಿದಂತೆ ಎಂಟಿಸಿಆರ್​ನ 35 ಸದಸ್ಯ ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣವನ್ನು ತಡೆಯಲು ಕೆಲಸ ಮಾಡುತ್ತಿವೆ ಎಂಬುದು ಗಮನಾರ್ಹ.

ಪರಮಾಣು ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ಪಾಕಿಸ್ತಾನದ ಶಾಹೀನ್-3 ಕ್ಷಿಪಣಿಯು 2,750 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದ್ದರೆ, 2,200 ಕಿಲೋಮೀಟರ್ ವ್ಯಾಪ್ತಿಯ ಅಬಾಬೀಲ್ ಇದಕ್ಕೂ ಹೆಚ್ಚು ಅತ್ಯಾಧುನಿಕವಾಗಿದೆ. ಅಬಾಬೀಲ್ ಏಕಕಾಲಕ್ಕೆ ಅನೇಕ ಕಡೆಗಳಲ್ಲಿ ದಾಳಿ ಮಾಡಿ ಮರಳಿ ಬರಬಲ್ಲ ಮರುಪ್ರವೇಶ ವಾಹನಗಳನ್ನು (ಎಂಐಆರ್​ವಿ) ಹೊತ್ತು ಸಾಗಬಲ್ಲದು.

ಇದನ್ನೂ ಓದಿ: ಸೈನಿಕರಂತೆ ಗಸ್ತು ಕಾಯುವ ರೋಬೋಟ್ ತಯಾರಿಸಿದ ಆಸ್ಟ್ರೇಲಿಯಾ ಸೇನೆ - Uncrewed Robot

ETV Bharat Logo

Copyright © 2025 Ushodaya Enterprises Pvt. Ltd., All Rights Reserved.