ETV Bharat / international

ಸಿರಿಯಾ ಮೇಲೆ ಅಮೆರಿಕ ವೈಮಾನಿಕ ದಾಳಿ: ಇಬ್ಬರು ಹಿರಿಯ ನಾಯಕರು ಸೇರಿ 37 ಐಎಸ್​ ಉಗ್ರರು ಹತ - US Airstrikes On Syria - US AIRSTRIKES ON SYRIA

ಸಿರಿಯಾದಲ್ಲಿನ ಐಎಸ್​ ಉಗ್ರರ ಮೇಲೆ ಅಮೆರಿಕ ಸೇನಾಪಡೆಗಳು ವೈಮಾನಿಕ ದಾಳಿ ಮಾಡಿದ್ದು 37 ಭಯೋತ್ಪಾದಕರು ಹತರಾಗಿದ್ದಾರೆ.

ಸಿರಿಯಾ ಮೇಲೆ ಅಮೆರಿಕ ವೈಮಾನಿಕ ದಾಳಿ
ಸಿರಿಯಾ ಮೇಲೆ ಅಮೆರಿಕ ವೈಮಾನಿಕ ದಾಳಿ (ETV Bharat)
author img

By ETV Bharat Karnataka Team

Published : Sep 29, 2024, 8:47 PM IST

ಬೈರುತ್: ಲೆಬನಾನ್​​ನ ಹಿಜ್ಬುಲ್ಲಾ ಬಂಡುಕೋರರ ಮೇಲೆ ಇಸ್ರೇಲ್​ ಮುರಿದುಬಿದ್ದಿರುವ ನಡುವೆಯೇ, ಇತ್ತ ಸಿರಿಯಾದಲ್ಲಿ ಅಮೆರಿಕ ಐಎಸ್​ ಉಗ್ರರನ್ನು ಸದೆಬಡಿದಿದೆ. ಸಿರಿಯಾದ ಮೇಲಿನ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಗುಂಪು ಮತ್ತು ಅಲ್ ಖೈದಾ ಜೊತೆಗೆ ಗುರುತಿಸಿಕೊಂಡಿರುವ ಸಂಘಟನೆಯ 37 ಉಗ್ರಗಾಮಿಗಳು ಹತರಾಗಿದ್ದಾರೆ. ಇದರಲ್ಲಿ ಇಬ್ಬರು ಹಿರಿಯ ಭಯೋತ್ಪಾದಕರು ಇದ್ದಾರೆ ಎಂದು ಅಮೆರಿಕ ಭಾನುವಾರ ಹೇಳಿದೆ.

ಅಪಾಯಕಾರಿ​​ ಉಗ್ರ ಸಂಘಟನೆಯಾದ ಅಲ್ ಖೈದಾ ಜೊತೆಗೆ ಗುರುತಿಸಿಕೊಂಡಿರುವ ಹುರಾಸ್ ಅಲ್ ದೀನ್ ಗುಂಪಿನ ಉಗ್ರ ನಾಯಕ ಮತ್ತು ಆತನ 8 ಸಹಚರರನ್ನು ಗುರಿಯಾಗಿಸಿಕೊಂಡು ವಾಯವ್ಯ ಸಿರಿಯಾದ ಮೇಲೆ ದಾಳಿ ನಡೆಸಲಾಗಿದೆ. ಇದರಲ್ಲಿ ಅಷ್ಟೂ ಜನರು ಸಾವನ್ನಪ್ಪಿದ್ದಾರೆ. ಹಿರಿಯ ಉಗ್ರ ಕಮಾಂಡರ್​​ ಮಿಲಿಟರಿ ಕಾರ್ಯಾಚರಣೆಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದ್ದ ಎಂದು ಅಮೆರಿಕ ಸೇನೆ ತಿಳಿಸಿದೆ.

ಸಿರಿಯಾದ ರಾಜಧಾನಿಯಿಂದ ದೂರದ ಪ್ರದೇಶದ ಗೌಪ್ಯ ಸ್ಥಳದಲ್ಲಿ ಉಗ್ರ ತರಬೇತಿ ನೀಡಲಾಗುತ್ತಿದ್ದ ಶಿಬಿರದ ಮೇಲೆ ಸೆಪ್ಟೆಂಬರ್​ 16 ರಂದು ದಾಳಿ ವೈಮಾನಿಕ ದಾಳಿ ನಡೆಸಲಾಗಿತ್ತು. ಅದರಲ್ಲಿ ನಾಲ್ವರು ಸಿರಿಯನ್​ ನಾಯಕರು ಸೇರಿದಂತೆ 28 ಉಗ್ರರು ಹತರಾಗಿದ್ದರು.

ಸಿರಿಯಾದಲ್ಲಿರುವ ಅಮೆರಿಕದ ಸೇನಾಪಡೆಗಳ ಮೇಲೆ ಐಎಸ್​ ಉಗ್ರರು ದಾಳಿ ಮಾಡಿದ್ದರು. ಇದಕ್ಕೆ ವಿರುದ್ಧವಾಗಿ ಅಮೆರಿಕ ಸೇನೆ ಪ್ರತಿದಾಳಿ ನಡೆಸುತ್ತಿದೆ. ಜೊತೆಗೆ ಮಿತ್ರರಾಷ್ಟ್ರಗಳು ಮತ್ತು ಪಾಲುದಾರ ರಾಷ್ಟ್ರಗಳು ಕೂಡ ವಿಶ್ವದ ದೊಡ್ಡಣ್ಣನಿಗೆ ಬೆಂಬಲವಾಗಿ ನಿಂತಿವೆ. ಸಿರಿಯಾದಲ್ಲಿ ಅಮೆರಿಕ ತನ್ನ 900 ಪಡೆಗಳನ್ನು ನಿಯೋಜಿಸಿದೆ. ಜೊತೆಗೆ ರಹಸ್ಯ ಪಡೆಗಳೂ ಇವೆ. ಸೇನಾಪಡೆಗಳ ನಿಯೋಜನೆ 2014 ರ ನಂತರ ಹೆಚ್ಚಾಗಿದೆ. ಇರಾಕ್ ಮತ್ತು ಸಿರಿಯಾದ ಮೂಲಕ ಐಎಸ್​​ ಉಗ್ರಗಾಮಿಗಳು ಭೂಪ್ರದೇಶವನ್ನು ವಶಪಡಿಸಿಕೊಂಡಿದ್ದರಿಂದ ಉಗ್ರರ ನಿಯಂತ್ರಣಕ್ಕೆ ಅಮೆರಿಕ ಸೇನೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಬಂಡುಕೋರರ ಮತ್ತೊಬ್ಬ ನಾಯಕ ಹತ: ಇಸ್ರೇಲ್ - Israel killed Hezbollah official

ETV Bharat Logo

Copyright © 2025 Ushodaya Enterprises Pvt. Ltd., All Rights Reserved.