ETV Bharat / international

ಇಂಗ್ಲೆಂಡ್​​ ಸಂಸತ್ತಿನಲ್ಲಿಯೂ ಶ್ರೀರಾಮನ ಜಪ - chants of shri ram

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಹೊಸ್ತಿಲಿಲ್ಲೇ ಇಂಗ್ಲೆಂಡ್ ಸಂಸತ್ತಿನಲ್ಲಿ ಜೈ ಶ್ರೀರಾಮ್ ಘೋಷಣೆ ಮೊಳಗಿದೆ.

uk-parliament-echoes-with-chants-of-shri-ram
ಇಂಗ್ಲೆಂಡ್​​ ಸಂಸತ್ತಿನಲ್ಲಿಯೂ ಶ್ರೀರಾಮನ ಜಪ
author img

By ETV Bharat Karnataka Team

Published : Jan 20, 2024, 1:37 AM IST

ಲಂಡನ್ (ಯುಕೆ): ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಪ್ರಾರಂಭವಾಗಿದೆ. ಮತ್ತೊಂದೆಡೆ, ಇಂಗ್ಲೆಂಡ್ ಸಂಸತ್ತಿನಲ್ಲಿ ಜೈ ಶ್ರೀರಾಮ್ ಘೋಷಣೆ ಮೊಳಗಿದೆ. ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಆಚರಣೆಗಳನ್ನು ಯುಕೆಯ ಸನಾತನ ಸಂಸ್ಥೆ (SSUK) ಪ್ರಾರಂಭಿಸಿದ್ದು, ಶ್ರೀರಾಮನ ಜಪ ಮತ್ತು ಶಂಖದ ಧ್ವನಿಯೊಂದಿಗೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಮೊಳಗಿತು.

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಶೇರ್​ ಆಗಿದ್ದು, ಭಗವಾನ್ ರಾಮನನ್ನು ಯುಗ ಪುರುಷ ಎಂದು ಶ್ಲಾಘಿಸುವ ಕಾರ್ಯಕ್ರಮವು ಭಜನೆಯೊಂದಿಗೆ ಪ್ರಾರಂಭವಾಯಿತು. SSUK ಸದಸ್ಯರು ಕಾಕಭೂಶುಂಡಿ ಸಂವಾದದ ಪ್ರಸ್ತುತಿಯೊಂದಿಗೆ ಆರಂಭವಾದ ಈ ಕಾರ್ಯಕ್ರಮ ಭಗವದ್ಗೀತೆಯ 12 ನೇ ಅಧ್ಯಾಯವನ್ನು ಪಠಿಸುವ ಮೂಲಕ ಭಗವಾನ್ ವಿಷ್ಣುವಿನ 10 ನೇ ಅವತಾರವಾದ ಭಗವಾನ್ ಕೃಷ್ಣನಿಗೆ ಗೌರವ ಸಲ್ಲಿಸಿದರು.

ಹಾರೋ ಸಂಸದ ಬಾಬ್ ಬ್ಲ್ಯಾಕ್‌ಮನ್, ರಾಜ್ ರಾಜೇಶ್ವರ್ ಗುರು ಮತ್ತು ಹನ್ಸ್ಲೋ ಬ್ರಹ್ಮಋಷಿ ಆಶ್ರಮದ ಸ್ವಾಮಿ ಸೂರ್ಯ ಪ್ರಭಾ ದೀದಿ ಆಧ್ಯಾತ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೇಶಾದ್ಯಂತ 200 ಕ್ಕೂ ಹೆಚ್ಚು ದೇವಾಲಯಗಳು, ಸಮುದಾಯ ಸಂಘಟನೆಗಳು ಮತ್ತು ಸಂಘಗಳು ಸಹಿ ಮಾಡಿದ ಯುಕೆ ಘೋಷಣೆಯನ್ನು ಜನವರಿ 22 ರಂದು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಮೊದಲು ದೇವಾಲಯದ ಪಟ್ಟಣದಲ್ಲಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಪ್ರಸ್ತುತ ಪಡಿಸಲಾಗುತ್ತದೆ. ಬ್ರಿಟನ್‌ನಲ್ಲಿರುವ ಧಾರ್ವಿುಕ ಸಮುದಾಯಗಳು ಅಯೋಧ್ಯೆಯ ರಾಮಜನ್ಮಭೂಮಿ ಮಂದಿರದ ಪ್ರತಿಷ್ಠಾಪನೆ ಸಮಾರಂಭವನ್ನು ಸ್ವಾಗತಿಸಲು ಸಂತಸ ವ್ಯಕ್ತಪಡಿಸಿವೆ.

ಇನ್ನು, ಜನವರಿ 22ರಂದು ಭವ್ಯ ಮಂದಿರದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿವಿಧಾನಗಳನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ. ಸಮಾರಂಭಕ್ಕೆ ಹಲವಾರು ಸೆಲೆಬ್ರಿಟಿಗಳು ಮತ್ತು ಹೆಸರಾಂತ ವ್ಯಕ್ತಿಗಳನ್ನು ಸಹ ಆಹ್ವಾನಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.