ETV Bharat / international

ಯುಕೆ ಚುನಾವಣಾ ಫಲಿತಾಂಶ: ಸಂಸತ್ತಿಗೆ ದಾಖಲೆ ಸಂಖ್ಯೆಯ ಭಾರತೀಯ ಮೂಲದವರು ಆಯ್ಕೆ! - British Indian MPs - BRITISH INDIAN MPS

ಬ್ರಿಟನ್​ ಸಂಸತ್ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಸೋಲು ಕಂಡಿದೆ. ಪ್ರತಿಪಕ್ಷವಾಗಿದ್ದ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿದೆ. ಎರಡೂ ಪಕ್ಷಗಳಿಂದಲೂ ಭಾರತೀಯ ಮೂಲದವರು ಆಯ್ಕೆಯಾಗಿದ್ದಾರೆ.

Rishi Sunak, Keir Starmer
ರಿಷಿ ಸುನಕ್, ಕೀರ್ ಸ್ಟಾರ್ಮರ್ (AP Photos)
author img

By PTI

Published : Jul 5, 2024, 6:32 PM IST

ಲಂಡನ್ (ಬ್ರಿಟನ್): ಬ್ರಿಟನ್​ನಲ್ಲಿ ಶುಕ್ರವಾರ ಸಾರ್ವತ್ರಿಕ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸುಮಾರು 26 ಭಾರತೀಯ ಮೂಲದ ಸದಸ್ಯರು ಹೌಸ್ ಆಫ್ ಕಾಮನ್ಸ್‌ಗೆ (ಯುಕೆ ಸಂಸತ್ತು) ಚುನಾಯಿತರಾಗಿದ್ದಾರೆ. 14 ವರ್ಷಗಳಿಂದ ಅಧಿಕಾರದಲ್ಲಿದ್ದ ಕನ್ಸರ್ವೇಟಿವ್‌ ಪಕ್ಷ ಈ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ್ದರೂ, ಆ ಪಕ್ಷದಿಂದ ಸ್ಪರ್ಧಿಸಿದ್ದ ಭಾರತೀಯರು ಸಹ ಗೆದ್ದು ಗಮನ ಸೆಳೆದಿದ್ದಾರೆ.

ಯುಕೆ ಸಂಸತ್ತಿನ 650 ಸ್ಥಾನಗಳ ಪೈಕಿ 412 ಸ್ಥಾನಗಳಲ್ಲಿ ಪ್ರತಿಪಕ್ಷ ಲೇಬರ್ ಪಾರ್ಟಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದೆ. ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷಕ್ಕೆ ಈ ಹಿಂದೆ ಗೆದ್ದಿದ್ದ 200ಕ್ಕೂ ಹೆಚ್ಚು ಸ್ಥಾನಗಳಲ್ಲೂ ಸೋಲು ಕಂಡಿದೆ. ನಿರ್ಗಮಿತ ಪ್ರಧಾನಿ, ಭಾರತೀಯ ಮೂಲದ ರಿಷಿ ಸುನಕ್ ಯಾರ್ಕ್‌ಷೈರ್‌ನ ರಿಚ್‌ಮಂಡ್ ಮತ್ತು ನಾರ್ತಲರ್‌ಟನ್ ಕ್ಷೇತ್ರದಲ್ಲಿ ನಿರ್ಣಾಯಕ ಗೆಲುವು ಸಾಧಿಸಿದ್ದಾರೆ. ಜೊತೆಗೆ ಇತರ ಬ್ರಿಟಿಷ್ - ಭಾರತೀಯರು ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇದು ನಾಯಕ ಸುನಕ್​ ಅವರಿಗೆ ಕೊಂಚ ಸಮಾಧಾನ ತರುವಂತೆ ಮಾಡಿದೆ.

ಕ್ಷೇತ್ರದ ಮತದಾರರಿಗೆ ಸುನಕ್​ ಕೃತಜ್ಞತೆ: ಚುನಾವಣಾ ಫಲಿತಾಂಶದ ಬಳಿಕ ರಿಷಿ ಸುನಕ್ ಮಾತನಾಡಿ, ಈ ಕಷ್ಟದ ಸಮಯದಲ್ಲಿ ನಿಮ್ಮ ನಿರಂತರ ಬೆಂಬಲಕ್ಕಾಗಿ ನಾನು ರಿಚ್​ಮಂಡ್ ಮತ್ತು ನಾರ್ತಲರ್​ಟನ್ ಕ್ಷೇತ್ರದ ಜನರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇವೆ. ನಾನು ಒಂದು ದಶಕದ ಹಿಂದೆ ಇಲ್ಲಿಗೆ ಬಂದಿದ್ದೆ. ಅಂದಿನಿಂದಲೂ ನೀವು ನನಗೆ ಮತ್ತು ನನ್ನ ಕುಟುಂಬಕ್ಕೆ ನಾವು ಮನೆಯಲ್ಲಿದ್ದೇವೆ ಎಂಬ ಅನುಭವವನ್ನು ನೀಡಿದ್ದೀರಿ. ಮುಂಬರುವ ವರ್ಷಗಳಲ್ಲಿ ನಿಮಗೆ ಸೇವೆ ಸಲ್ಲಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇತರ ಪ್ರಮುಖ ಬ್ರಿಟಿಷ್-ಭಾರತೀಯರಲ್ಲಿ ಮಾಜಿ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್‌ಮನ್ ಮತ್ತು ಪ್ರೀತಿ ಪಟೇಲ್, ಸುನಕ್‌ ಅವರ ಕ್ಯಾಬಿನೆಟ್​ ಸಹೋದ್ಯೋಗಿ ಗೋವಾ ಮೂಲದ ಕ್ಲೇರ್ ಕೌಟಿನ್ಹೋ ಸಹ ತಮ್ಮ ಸಂಸತ್​ ಸ್ಥಾನ ಉಳಿಸಿಕೊಂಡಿದ್ದಾರೆ. ಗಗನ್ ಮೊಹಿಂದ್ರಾ, ಶಿವಾನಿ ರಾಜಾ ಗೆಲುವು ಕಂಡಿದ್ದಾರೆ. ವಿಶೇಷ ಎಂದರೆ, ಭಾರತೀಯ ಮೂಲದ ಲೇಬರ್‌ ಪಕ್ಷದ ಅಭ್ಯರ್ಥಿ, ಮತ್ತೋರ್ವ ಭಾರತೀಯ ರಾಜೇಶ್ ಅಗರವಾಲ್ ವಿರುದ್ಧವೇ ಶಿವಾನಿ ರಾಜಾ ಜಯ ದಾಖಲಿಸಿದ್ದಾರೆ. ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಂಸದ ಕೀತ್ ವಾಜ್ ಗೆಲುವು ಕಂಡಿದ್ದಾರೆ.

ಲೇಬರ್ ಪಕ್ಷದಿಂದ ಅಧಿಕ ಭಾರತೀಯರಿಗೆ ಜಯ: ಒಟ್ಟಾರೆ ಚುನಾವಣಾ ಫಲಿತಾಂಶದಲ್ಲಿ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷದಿಂದಲೇ ಭಾರತೀಯ ಮೂಲದ ಅಧಿಕ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಪಕ್ಷದ ಅನುಭವಿಗಳಾದ ಸೀಮಾ ಮಲ್ಹೋತ್ರಾ, ಲಿಸಾ ನಂದಿ, ಕೀತ್ ವಾಜ್ ಅವರ ಸಹೋದರಿ ವ್ಯಾಲೆರಿ ವಾಜ್, ಪ್ರೀತ್ ಕೌರ್ ಗಿಲ್, ತನ್ಮಂಜೀತ್ ಸಿಂಗ್, ನವೆಂದು ಮಿಶ್ರಾ ಮತ್ತು ನಾಡಿಯಾ ವಿಟ್ಟೋಮ್ ಮರು ಆಯ್ಕೆಯಾಗಿದ್ದಾರೆ.

ಇವರೊಂದಿಗೆ ಬ್ರಿಟಿಷ್ - ಭಾರತೀಯರಲ್ಲಿ ಹೊಸ ಮುಖಗಳಾದ ಜಾಸ್ ಅಥ್ವಾಲ್, ಬ್ಯಾಗಿ ಶಂಕರ್, ಸತ್ವಿರ್ ಕೌರ್, ಹರ್‌ಪ್ರೀತ್ ಉಪ್ಪಲ್, ವಾರಿಂದರ್ ಜಸ್, ಗುರಿಂದರ್ ಜೋಸನ್, ಕಾನಿಷ್ಕಾ ನಾರಾಯಣ್, ಸೋನಿಯಾ ಕುಮಾರ್, ಸುರೀನಾ ಬ್ರಾಕೆನ್‌ಬ್ರಿಡ್ಜ್, ಕಿರಿತ್ ಎಂಟ್‌ವಿಸ್ಲ್, ಜೀವನ್ ಸಂಧರ್, ಸೋಜನ್ ಜೋಸೆಫ್ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಬ್ರಿಟನ್​ನಲ್ಲಿ 14 ವರ್ಷದ ನಂತರ ಬದಲಾದ ಸರ್ಕಾರ: ಹೊಸ ಪ್ರಧಾನಿ ಕೀರ್ ಸ್ಟಾರ್ಮರ್ ಯಾರು?, ಭಾರತದ ಪರ ಒಲವು ಹೇಗಿದೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.