ಸ್ಟಾಕ್ ಹೋಮ್: ವಿವಿಧ ರಾಷ್ಟ್ರಗಳ ನಡುವಿನ ಸಮೃದ್ಧಿಯಲ್ಲಿನ ವ್ಯತ್ಯಾಸಗಳ ಸಂಶೋಧನೆಗಾಗಿ ಡಾರಾನ್ ಅಸೆಮೊಗ್ಲು, ಸೈಮನ್ ಜಾನ್ಸನ್ ಮತ್ತು ಜೇಮ್ಸ್ ಎ.ರಾಬಿನ್ಸನ್ ಅವರಿಗೆ ಅರ್ಥಶಾಸ್ತ್ರದ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ನೀಡಲಾಗಿದೆ. ಸ್ಟಾಕ್ ಹೋಮ್ನಲ್ಲಿ ಸೋಮವಾರ ಈ ಘೋಷಣೆ ಮಾಡಲಾಗಿದೆ. ಈ ಮೂವರು ಅರ್ಥಶಾಸ್ತ್ರಜ್ಞರು ದೇಶವೊಂದರ ಸಮೃದ್ಧಿಯಲ್ಲಿ ಸಾಮಾಜಿಕ ಸಂಸ್ಥೆಗಳ ಮಹತ್ವವನ್ನು ತೋರಿಸಿದ್ದಾರೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ಸ್ನ ನೊಬೆಲ್ ಸಮಿತಿ ತಿಳಿಸಿದೆ.
ಕಾನೂನು ಸುವ್ಯವಸ್ಥೆ ದುರ್ಬಲವಾಗಿರುವ ಸಮಾಜಗಳು ಮತ್ತು ಜನಸಂಖ್ಯೆಯನ್ನು ಶೋಷಿಸುವ ಸಂಸ್ಥೆಗಳು ಉತ್ತಮವಾಗಿ ಬೆಳವಣಿಗೆ ಹೊಂದುವುದಿಲ್ಲ ಅಥವಾ ಯಾವುದೇ ಉತ್ತಮ ಬದಲಾವಣೆಯನ್ನು ತರುವುದಿಲ್ಲ. ಇದು ಹೀಗೇಕೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಶಸ್ತಿ ವಿಜೇತರ ಸಂಶೋಧನೆಗಳು ನಮಗೆ ಸಹಾಯ ಮಾಡುತ್ತವೆ ಎಂದು ಅದು ಹೇಳಿದೆ.
BREAKING NEWS
— The Nobel Prize (@NobelPrize) October 14, 2024
The Royal Swedish Academy of Sciences has decided to award the 2024 Sveriges Riksbank Prize in Economic Sciences in Memory of Alfred Nobel to Daron Acemoglu, Simon Johnson and James A. Robinson “for studies of how institutions are formed and affect prosperity.”… pic.twitter.com/tuwIIgk393
ಅಸೆಮೊಗ್ಲು ಮತ್ತು ಜಾನ್ಸನ್ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದು, ರಾಬಿನ್ಸನ್ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿದ್ದಾರೆ.
ಅರ್ಥಶಾಸ್ತ್ರ ಪ್ರಶಸ್ತಿಯನ್ನು ಔಪಚಾರಿಕವಾಗಿ ಆಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥ ಆರ್ಥಿಕ ವಿಜ್ಞಾನದಲ್ಲಿ ಬ್ಯಾಂಕ್ ಆಫ್ ಸ್ವೀಡನ್ ಪ್ರಶಸ್ತಿ ಎಂದು ಕರೆಯಲಾಗುತ್ತದೆ. ಡೈನಮೈಟ್ ಅನ್ನು ಕಂಡುಹಿಡಿದ ಮತ್ತು ಐದು ನೊಬೆಲ್ ಪ್ರಶಸ್ತಿಗಳನ್ನು ಸ್ಥಾಪಿಸಿದ 19ನೇ ಶತಮಾನದ ಸ್ವೀಡಿಷ್ ಉದ್ಯಮಿ ಮತ್ತು ರಸಾಯನಶಾಸ್ತ್ರಜ್ಞ ನೊಬೆಲ್ ಅವರ ಸ್ಮಾರಕವಾಗಿ ಬ್ಯಾಂಕ್ ಆಫ್ ಸ್ವೀಡನ್ ಇದನ್ನು 1968ರಲ್ಲಿ ಸ್ಥಾಪಿಸಿತು.
ಅರ್ಥಶಾಸ್ತ್ರದ ಪ್ರಶಸ್ತಿಯು ತಾಂತ್ರಿಕವಾಗಿ ನೊಬೆಲ್ ಪ್ರಶಸ್ತಿಯಲ್ಲ ಎಂದು ನೊಬೆಲ್ ಪರಿಶುದ್ಧತಾವಾದಿಗಳು ಒತ್ತಿಹೇಳಿದರೂ, ಇದನ್ನು ಯಾವಾಗಲೂ 1896ರಲ್ಲಿ ನೊಬೆಲ್ ಅವರ ಮರಣದ ವಾರ್ಷಿಕೋತ್ಸವವಾದ ಡಿಸೆಂಬರ್ 10ರಂದು ನೀಡಲಾಗುತ್ತದೆ.
ಇದನ್ನೂ ಓದಿ: ನರೇಂದ್ರ ಮೋದಿ ಬದಲಾವಣೆಯ ಹರಿಕಾರ, ಅವರಲ್ಲಿದೆ ದಿವ್ಯಶಕ್ತಿ: ಬ್ರಿಟನ್ ಮಾಜಿ ಪ್ರಧಾನಿ ಜಾನ್ಸನ್ ಶ್ಲಾಘನೆ