ETV Bharat / international

ತೆಹ್ರೀಕ್ - ಇ - ಇನ್ಸಾಫ್ ವಿರುದ್ಧ ಡಿಜಿಟಲ್​ ಭಯೋತ್ಪಾದನೆ ಆರೋಪ: ಇಮ್ರಾನ್​ಖಾನ್​ಗೆ ಎದುರಾಯ್ತು ದೊಡ್ಡ ಸಂಕಷ್ಟ - Imran Khan faces trouble - IMRAN KHAN FACES TROUBLE

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪಕ್ಷದ ವಿರುದ್ಧ ಡಿಜಿಟಲ್ ಭಯೋತ್ಪಾದನೆ ಆರೋಪ ಹೊರಿಸಿರುವ ಪಾಕಿಸ್ತಾನ ಸರ್ಕಾರ, ಪಿಟಿಐನ ಸಾವಿರಾರು ನಾಯಕರು, ಕಾರ್ಯಕರ್ತರನ್ನು ಬಂಧಿಸಲು ಮುಂದಾಗಿದೆ.

ಪಿಟಿಐ ಪಕ್ಷದ ಬಾವುಟ
ಪಿಟಿಐ ಪಕ್ಷದ ಬಾವುಟ (IANS)
author img

By ETV Bharat Karnataka Team

Published : Jul 23, 2024, 7:44 PM IST

ಇಸ್ಲಾಮಾಬಾದ್ : ಇಸ್ಲಾಮಾಬಾದ್​ನಲ್ಲಿರುವ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಕೇಂದ್ರ ಕಚೇರಿಯ ಮೇಲೆ ಪೊಲೀಸರು ಸೋಮವಾರ ದಾಳಿ ನಡೆಸಿ ಪಕ್ಷದ ಮಾಹಿತಿ ಮತ್ತು ಸಂಪರ್ಕ ವಿಭಾಗದ ಕಾರ್ಯದರ್ಶಿ ರವೂಫ್ ಹಸನ್ ಅವರನ್ನು ಬಂಧಿಸಿದ್ದಾರೆ. ಈ ಕ್ರಮವು ಪಿಟಿಐ ಪಕ್ಷವನ್ನು ಮತ್ತಷ್ಟು ಹಣಿಯುವ ಆಡಳಿತಾರೂಢ ಶೆಹಬಾಜ್ ಷರೀಫ್ ಸರ್ಕಾರ ಮತ್ತು ಮಿಲಿಟರಿ ಆಡಳಿತದ ಉದ್ದೇಶಗಳನ್ನು ಬಹಿರಂಗಗೊಳಿಸಿದೆ.

ಡಿಜಿಟಲ್ ಭಯೋತ್ಪಾದನೆ, ಸುಳ್ಳು ಮಾಹಿತಿ ಪ್ರಚಾರ ಮತ್ತು ನಕಲಿ ಖಾತೆಗಳ ಮೂಲಕ ಸಾಮಾಜಿಕ ಮಾಧ್ಯಮ ಬಳಸಿದ ಆರೋಪದ ಮೇಲೆ ಮತ್ತಷ್ಟು ಪಿಟಿಐ ನಾಯಕರು ಮತ್ತು ಕಾರ್ಯಕರ್ತರನ್ನು ಇಷ್ಟರಲ್ಲೇ ಬಂಧಿಸಲಾಗುವುದು ಎಂದು ವಿಶ್ವಾಸಾರ್ಹ ಮೂಲಗಳು ಐಎಎನ್ಎಸ್​ಗೆ ತಿಳಿಸಿವೆ.

ಹೊಸದಾಗಿ ಪ್ರಾರಂಭಿಸಲಾದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ 'ಅಜ್ಮ್-ಎ-ಇಸ್ತಾಕಮ್' ಮತ್ತು ಜನರಲ್ ಸೈಯದ್ ಅಸಿಮ್ ಮುನೀರ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್​ಗಳನ್ನು ಸೃಷ್ಟಿಸಲು ಮೊಬೈಲ್ ಫೋನ್​ಗಳು, ಪಕ್ಷದ ಕಚೇರಿ ಮತ್ತು ಇಂಟರ್​​​ನೆಟ್ ಬಳಸುತ್ತಿರುವ ಪಿಟಿಐನ ಸಾವಿರಾರು ನಾಯಕರು ಮತ್ತು ಕಾರ್ಯಕರ್ತರ ಪಟ್ಟಿಯನ್ನೇ ತಯಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

"ಪಿಟಿಐ ಪಕ್ಷದ ಕಚೇರಿಗಳಲ್ಲಿ ಕುಳಿತುಕೊಳ್ಳುವ ನಾಯಕರು ಮತ್ತು ಕಾರ್ಯಕರ್ತರು ಸುಳ್ಳು, ನಕಲಿ ಮಾಹಿತಿಗಳನ್ನು ಸೃಷ್ಟಿಸುತ್ತಾರೆ ಮತ್ತು ಅವುಗಳನ್ನು ವಿದೇಶದಲ್ಲಿರುವ ಪಿಟಿಐ ಸಾಮಾಜಿಕ ಮಾಧ್ಯಮ ತಂಡದೊಂದಿಗೆ ಹಂಚಿಕೊಳ್ಳುತ್ತಾರೆ. ನಂತರ ವಿದೇಶಗಳಿಂದ ಪಾಕಿಸ್ತಾನ ಸಶಸ್ತ್ರ ಪಡೆಗಳ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದ್ವೇಷದ ಟ್ರೆಂಡ್​ಗಳನ್ನು ಸೃಷ್ಟಿಸಲಾಗುತ್ತಿರುವ ಬಗ್ಗೆ ಖಚಿತ ಮಾಹಿತಿಗಳಿವೆ" ಎಂದು ಮೂಲಗಳು ತಿಳಿಸಿವೆ.

ಸೋಮವಾರದ ದಾಳಿ ಮತ್ತು ಬಂಧನಗಳು ಪಿಟಿಐ ನಾಯಕರು, ಕಾರ್ಯಕರ್ತರು ಮತ್ತು ಸ್ವತಃ ಇಮ್ರಾನ್ ಖಾನ್ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆಯ ಆರಂಭಿಕ ಹಂತವಾಗಿದೆ ಎಂದು ಮೂಲಗಳು ಹೇಳಿವೆ. ಈಗಾಗಲೇ ಅಡಿಯಾಲಾ ಜೈಲಿನಲ್ಲಿರುವ ಮತ್ತು ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ ಪಿಟಿಐ ಸಂಸ್ಥಾಪಕ ಇಮ್ರಾನ್ ಖಾನ್, ಜನರಲ್ ಮುನೀರ್, ಮಿಲಿಟರಿ ವ್ಯವಸ್ಥೆ ಮತ್ತು ಆಡಳಿತಾರೂಢ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಇಮ್ರಾನ್​ ಖಾನ್​ ಅಡಿಯಾಲಾ ಜೈಲಿನಿಂದ ಇತ್ತೀಚೆಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಕಳೆದ ವರ್ಷ ರಾವಲ್ಪಿಂಡಿಯ ಮಿಲಿಟರಿ ಮುಖ್ಯ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುವಂತೆ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದು ನಿಜ. ಆದರೆ ಕಚೇರಿಯ ಮೇಲೆ ದಾಳಿ ಮಾಡುವಂತೆ ಅಥವಾ ಹಿಂಸಾತ್ಮಕವಾಗಿ ವರ್ತಿಸುವಂತೆ ನಾನು ಹೇಳಿರಲಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಬಾಂಗ್ಲಾದೇಶದಲ್ಲಿ ಗಲಭೆ ನಿಯಂತ್ರಣಕ್ಕೆ ವಿಶ್ವಸಂಸ್ಥೆ ಚಿಹ್ನೆಯ ವಾಹನಗಳ ಬಳಕೆ: ಯುಎನ್ ಆಕ್ಷೇಪ - Bangladesh deploying UN Vehicles

ETV Bharat Logo

Copyright © 2024 Ushodaya Enterprises Pvt. Ltd., All Rights Reserved.