ETV Bharat / international

ದ.ಆಫ್ರಿಕಾದಲ್ಲಿ ಕುಡಿಯುವ ನೀರಿಗೆ ಹಾಹಾಕಾರ; ಜೋಹಾನ್ಸ್​​ಬರ್ಗ್​ನಲ್ಲಿ ಜನರ ಪರದಾಟ - South Africa Water Crisis - SOUTH AFRICA WATER CRISIS

World Water Day: ದಕ್ಷಿಣ ಆಫ್ರಿಕಾ ಆರ್ಥಿಕತೆಯ ಹಬ್,​ 6 ಮಿಲಿಯನ್​ ಜನಸಂಖ್ಯೆ ಹೊಂದಿರುವ ಜೋಹಾನ್ಸ್​​ಬರ್ಗ್​​ನಲ್ಲಿ ಜನರು ನೀರಿಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

taps-have-run-dry-across-south-africas-largest-city-in-an-unprecedented-water-crisis

author img

By PTI

Published : Mar 21, 2024, 2:16 PM IST

ಜೋಹಾನ್ಸ್​​ಬರ್ಗ್​​: ಹವಾಮಾನ ಬದಲಾವಣೆಯಿಂದಾಗಿ ಜಗತ್ತಿನ ಹಲವೆಡೆ ಈಗಾಗಲೇ ನೀರಿನ ಬಿಕ್ಕಟ್ಟು ತಲೆದೋರಿದೆ. ಇದೀಗ ದಕ್ಷಿಣ ಆಫ್ರಿಕಾದಲ್ಲೂ ನೀರಿನ ಸಮಸ್ಯೆ ಉಂಟಾಗಿದ್ದು, ಅತೀ ದೊಡ್ಡ ನಗರವಾದ ಜೋಹಾನ್ಸ್​ಬರ್ಗ್​ನಲ್ಲಿ ಕಳೆದೆರಡು ವಾರದಿಂದ ನೀರಿಗೆ ಹಾಹಾಕಾರ ಉಂಟಾಗಿದೆ. ಜಲ ಮೂಲದ ಕುಸಿತದಿಂದಾಗಿ ಜನರು ಸಾಲುಗಟ್ಟಿ ನಿಂತಿದ್ದಾರೆ. ಈ ಜಲಕ್ಷಾಮ ಇದೀಗ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿದೆ.

ವಿಪರೀತ ಉಷ್ಣಾಂಶ ಅಣೆಕಟ್ಟೆಯ ನೀರಿನ ಪ್ರಮಾಣವನ್ನು ಕುಸಿಯುವಂತೆ ಮಾಡಿದೆ. ದೇಶ ಈಗಾಗಲೇ ಗಂಟೆಗಟ್ಟಲೆ ವಿದ್ಯುತ್​ ಕೊರತೆಗೆ ಕುಖ್ಯಾತಿ ಹೊಂದಿದ್ದು, ಇದೀಗ ನೀರಿನ ಶೆಡ್ಡಿಂಗ್​ ಅನ್ನು ಹೊಸದಾಗಿ ಅಳವಡಿಸಿಕೊಳ್ಳುತ್ತಿದೆ.

ಜೋಹಾನ್ಸ್​​ಬರ್ಗ್​​ನಲ್ಲಿ ಜನರು ದಿನ ಬಿಟ್ಟು ದಿನ ಪೂರೈಕೆಯಾಗುತ್ತಿರುವ ಮುನ್ಸಿಪಲ್​ ವಾಟರ್ ಟ್ಯಾಂಕರ್ ಅವಲಂಬಿಸುವಂತಾಗಿದೆ. ತುರ್ತು ನೀರಿಗೆ ಹತ್ತಿರದ ರೆಸ್ಟೋರೆಂಟ್​​ಗಳಿಗೆ ಮನವಿ ಮಾಡುತ್ತಿದ್ದಾರೆ ಎಂದು ಸೊವೆಟೊ ನಿವಾಸಿ ಮೊಲಾಯಿ ಎಂಬವರು ತಿಳಿಸಿದರು.

ನೀರಿಗೆ ಪರ್ಯಾಯ ಇಲ್ಲದಂತಾಗಿದೆ. ಐದು ಲೀಟರ್​ ಬಾಟಲ್​ ಅನ್ನು 1.30 ಅಮೆರಿಕನ್​ ಡಾಲರ್​​ಗೆ ಮಾರಾಟ ಮಾಡಲಾಗುತ್ತಿದೆ. ಶೇ.32ರಷ್ಟು ನಿರುದ್ಯೋಗ ಹೊಂದಿರುವ ದೇಶದಲ್ಲಿ ಇದು ಎಷ್ಟು ದುಬಾರಿ ಎಂಬುದನ್ನು ಊಹಿಸಬಹುದು.

ಜೋಹಾನ್ಸ್​ಬರ್ಗ್ ಮತ್ತು ಸುತ್ತಲಿನ ನಿವಾಸಿಗಳು ಈ ರೀತಿಯ ಜಲಕ್ಷಾಮವನ್ನು ದೀರ್ಘಕಾಲದ ಬಳಿಕ ಅನುಭವಿಸುತ್ತಿದ್ದಾರೆ. ಜೋಹಾನ್ಸ್​​ ಬರ್ಗ್​​ ಮತ್ತು ಪ್ರೆಟೋರಿಯಾದಲ್ಲಿ ನೀರಿನ ಬಳಕೆ ಕಡಿಮೆ ಮಾಡುವುದರಲ್ಲಾಗಿರುವ ವೈಫಲ್ಯತೆ ನೀರಿನ ವ್ಯವಸ್ಥೆಯ ನಷ್ಟಕ್ಕೆ ಕಾರಣವಾಗಿದೆ. ಜಲಾಶಯಗಳಲ್ಲಿ ಶೇ 10ಕ್ಕಿಂತಲೂ ಕಡಿಮೆ ಸಾಮರ್ಥ್ಯದಲ್ಲಿ ನೀರು ಸಂಗ್ರಹವಿದೆ ಎಂದು ಗಔಟೆಂಗ್​​ ಪ್ರಾಂತ್ಯದ ನೀರು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಇಲ್ಲಿ ಯಾವುದೇ ಕ್ಷಾಮವನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಅಧಿಕಾರಿಗಳು ನಿವಾಸಿಗಳಿಗೆ ನೀರಿನ ಸಂರಕ್ಷಣೆ ಮಾಡುವಂತೆ ಕೋರಿದ್ದಾರೆ. ಮಾರ್ಚ್​ 22ರಂದು ವಿಶ್ವ ನೀರಿನ ದಿನಾಚರಣೆ ಮಾಡಲಾಗುತ್ತಿದ್ದು, ವಿಶ್ವದೆಲ್ಲೆಡೆ ಜಲ ಸಂರಕ್ಷಣೆಯ ಕುರಿತು ಇದು ಮತ್ತೊಮ್ಮೆ ಎಚ್ಚರಿಸುತ್ತಿದೆ.

ಇದನ್ನೂ ಓದಿ: ಐಸ್‌ಲ್ಯಾಂಡ್‌ನಲ್ಲಿ ಜ್ವಾಲಾಮುಖಿ ಸ್ಫೋಟ: ಗ್ರಿಂಡವಿಕ್ ನಗರದತ್ತ ಹರಿದುಬರುತ್ತಿರುವ ಲಾವಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.