ETV Bharat / international

ಶ್ರೀರಾಘವೇಂದ್ರ ಚಿತ್ರವಾಣಿ 48ನೇ ವಾರ್ಷಿಕೋತ್ಸವ, 23ನೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಸಾಕ್ಷಿಯಾದ ತಾರಾಲೋಕ

author img

By ETV Bharat Karnataka Team

Published : Jan 29, 2024, 7:04 PM IST

ಶ್ರೀರಾಘವೇಂದ್ರ ಚಿತ್ರವಾಣಿ 48ನೇ ವಾರ್ಷಿಕೋತ್ಸವ ಹಾಗೂ 23ನೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಟರಾದ ಶಶಿಕುಮಾರ್, ವಿನೋದ್ ಪ್ರಭಾಕರ್, ತಾರಾ ಅನುರಾಧ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಪ್ರಶಸ್ತಿ ಪ್ರದಾನ
ಪ್ರಶಸ್ತಿ ಪ್ರದಾನ

ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿ. ಡಿವಿ ಸುಧೀಂದ್ರ ಅವರಿಂದ ಸ್ಥಾಪಿತವಾದ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 48ನೇ ವಾರ್ಷಿಕೋತ್ಸವ ಹಾಗೂ 23ನೇ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚಿಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಅದ್ಧೂರಿಯಾಗಿ ನಡೆಯಿತು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್​​ಎಂ ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಹಿರಿಯ ನಟ ಶಶಿಕುಮಾರ್, ತಾರಾ ಅನುರಾಧ, ಡಾ. ವಿಜಯಮ್ಮ, ಪೂರ್ಣಿಮ ರಾಮಕುಮಾರ್, ವಿನೋದ್ ಪ್ರಭಾಕರ್ ಭಾಗಿಯಾಗಿದ್ದರು.

ಪ್ರಶಸ್ತಿ ಪ್ರದಾನ
ಪ್ರಶಸ್ತಿ ಪ್ರದಾನ

ಈ ಬಾರಿ ಶ್ರೀರಾಘವೇಂದ್ರ ಚಿತ್ರವಾಣಿಯಿಂದ ನೀಡಲಾಗುವ ನಿರ್ಮಾಪಕರ ಪ್ರಶಸ್ತಿಯನ್ನು ಮರಣೋತ್ತರವಾಗಿ ನಿರ್ಮಾಪಕ ರಾಮು ಅವರಿಗೆ ನೀಡಲಾಯಿತು. ಅವರ ಪತ್ನಿ ಮಾಲಾಶ್ರೀ ಪ್ರಶಸ್ತಿ ಸ್ವೀಕರಿಸಿದರು. ಪತ್ರಕರ್ತರಿಗೆ ನೀಡುವ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರಾದ ಮುರಳೀಧರ ಖಜಾನೆ ಅವರಿಗೆ ನೀಡಲಾಯಿತು. ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ ಬಿಎನ್‍ ಸುಬ್ರಹ್ಮಣ್ಯ ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ಚಿತ್ರವಾಣಿ ಸಂಸ್ಥೆಯು ಅನೇಕ ಗಣ್ಯರಿಗೆ ವಿವಿಧ ಭಾಗಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ.

ಪ್ರಶಸ್ತಿ ಪ್ರದಾನ
ಪ್ರಶಸ್ತಿ ಪ್ರದಾನ

ಆ ಪೈಕಿ ಈ ಬಾರಿ ಭಾರತಿ ವಿಷ್ಣುವರ್ಧನ್ ಅವರು ನಿರ್ದೇಶಕರಿಗೆ ನೀಡುವ ದಿ. ಆರ್ ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿಯನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ, ಖ್ಯಾತ ಹಿನ್ನೆಲೆ ಗಾಯಕರಾದ ಹೇಮಂತ್ ಕುಮಾರ್‌ ಅವರು ಡಾ. ರಾಜ್‌ಕುಮಾರ್‌ ಕುಟುಂಬದವರು ನೀಡುವ ಡಾ. ರಾಜ್‌ಕುಮಾರ್ ಪ್ರಶಸ್ತಿಗೆ ಭಾಜನರಾದರು.

ಪ್ರಶಸ್ತಿ ಪ್ರದಾನ
ಪ್ರಶಸ್ತಿ ಪ್ರದಾನ

ಇನ್ನು ಎಂಎಸ್ ರಾಮಯ್ಯ ಚಿತ್ರಾಲಯದಿಂದ ಪಟ್ಟಾಭಿರಾಮ್ ಅವರು ಸಂಗೀತ ನಿರ್ದೇಶಕರಿಗೆ ನೀಡುವ ಪ್ರಶಸ್ತಿಯನ್ನು "ಹೊಂದಿಸಿ ಬರೆಯಿರಿ" ಚಿತ್ರಕ್ಕಾಗಿ ಜೋ ಕೋಸ್ಟ್​ ಅವರಿಗೆ ನೀಡಿದರೆ, ಹಿರಿತೆರೆ, ಕಿರುತೆರೆ ಹಾಗೂ ರಂಗಭೂಮಿ ಕಲಾವಿದ ಬಿ ಸುರೇಶ್ ಅವರು ಪ್ರಥಮ ಚಿತ್ರದ ನಿರ್ದೇಶಕರಿಗೆ ನೀಡುವ ಪ್ರಶಸ್ತಿಯನ್ನು "ಆಚಾರ್ & ಕೋ" ಚಿತ್ರದ ನಿರ್ದೇಶನಕ್ಕಾಗಿ ಸಿಂಧೂ ಶ್ರೀನಿವಾಸಮೂರ್ತಿ ಅವರಿಗೆ ಲಭಿಸಿತು. ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ದಿ. ಕೆವಿ ಜಯರಾಂ ಸ್ಮರಣಾರ್ಥ ಅವರ ಪತ್ನಿ ನಿರ್ಮಾಪಕಿ ಮೀನಾಕ್ಷಿ ಜಯರಾಂ ಅವರು ಉತ್ತಮ ಕಥಾ ಲೇಖಕರಿಗೆ ನೀಡುವ ಪ್ರಶಸ್ತಿಯನ್ನು "ಸಪ್ತಸಾಗರದಾಚೆ ಎಲ್ಲೋ" ಚಿತ್ರಕ್ಕಾಗಿ ಹೇಮಂತ್ ರಾವ್ ಅವರಿಗೆ ಕೊಡಲಾಯಿತು.

ಪ್ರಶಸ್ತಿ ಪ್ರದಾನ
ಪ್ರಶಸ್ತಿ ಪ್ರದಾನ

ಹಿರಿಯ ಚಿತ್ರಸಾಹಿತಿ ಹಾಗೂ ನಿರ್ದೇಶಕ ದಿ. ಹುಣಸೂರು ಕೃಷ್ಣಮೂರ್ತಿ ಅವರ ಸ್ಮರಣಾರ್ಥ ಅವರ ಮಗ ಎಸ್​ಕೆ ನರಹರಿ ಅವರು ಉತ್ತಮ ಸಂಭಾಷಣೆಗಾಗಿ ನೀಡುವ ಪ್ರಶಸ್ತಿಯನ್ನು "ವಿರಾಟಪುರದ ವಿರಾಗಿ" ಚಿತ್ರಕ್ಕಾಗಿ ಲಿಂಗದೇವರು ಹಾಗೂ ಶರಣು ಹುಲ್ಲೂರು ಅವರಿಗೆ ಹಾಗೂ ಪತ್ರಕರ್ತ ದಿ. ಸಿ ಸೀತಾರಾಮ್ ಸ್ಮರಣಾರ್ಥ ಪೋಷಕ ನಟರಿಗೆ ನೀಡುವ ಪ್ರಶಸ್ತಿಯನ್ನು ಹಿರಿಯ ನಟ ಸುಂದರರಾಜ್ ಅವರಿಗೆ, ಖ್ಯಾತ ಅಭಿನೇತ್ರಿ ಡಾ. ಜಯಮಾಲ ಹೆಚ್​ ಎಂ ರಾಮಚಂದ್ರ ಪ್ರಶಸ್ತಿಗೆ ಕಲಾವಿದರಾದ ಜಯಲಕ್ಷ್ಮಿ ಪಿ (ದುಬೈ) ಅವರಿಗೆ ನೀಡಲಾಯಿತು.

ಪ್ರಶಸ್ತಿ ಪ್ರದಾನ
ಪ್ರಶಸ್ತಿ ಪ್ರದಾನ

ಡಾಲಿ ಧನಂಜಯ ಅವರಿಗೆ ‘ಟಗರು ಪಲ್ಯ’ ಚಿತ್ರದ - ‘ಸಂಬಂಜ ಅನ್ನೋದು ದೊಡ್ಡದು ಕನಾ’ ಗೀತರಚನೆಗಾಗಿ ಹಿರಿಯ ಪತ್ರಕರ್ತರಾದ ಪಿಜಿ ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ ನೀಡಲಾಗಿದೆ. ಇದು ಪತ್ರಕರ್ತ ವಿನಾಯಕರಾಮ್ ಕಲಗಾರು ನೀಡಿರುವ ಪ್ರಶಸ್ತಿಯಾಗಿದೆ.

ಪ್ರಶಸ್ತಿ ಪ್ರದಾನ
ಪ್ರಶಸ್ತಿ ಪ್ರದಾನ

ಕಾರ್ಯಕ್ರಮಕ್ಕೂ ಮುನ್ನ ಗಾಯಕಿ ಜ್ಯೋತಿ ರವಿ ಪ್ರಕಾಶ್ ಅವರಿಂದ ಹಳೆಯ ಚಿತ್ರಗಳ ಗಾಯನ ಕಾರ್ಯಕ್ರಮವಿತ್ತು. ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್ ಸ್ವಾಗತ ಭಾಷಣ ಮೂಲಕ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.

ಇದನ್ನೂ ಓದಿ: 69ನೇ ಫಿಲ್ಮ್‌ಫೇರ್ ಅವಾರ್ಡ್ಸ್​: ಆದಿತ್ಯ ರಾವಲ್, ಅಲಿಜೆ ಅಗ್ನಿಹೋತ್ರಿಗೆ ಅತ್ಯುತ್ತಮ ಚೊಚ್ಚಲ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.