ETV Bharat / international

ಉತ್ತರ ಅಮೆರಿಕದಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರ: ವಿಡಿಯೋ ಹಂಚಿಕೊಂಡ ನಾಸಾ - Solar Eclipse

author img

By PTI

Published : Apr 9, 2024, 11:20 AM IST

ಉತ್ತರ ಅಮೆರಿಕದಲ್ಲಿ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಿದ್ದು ನಾಸಾ ಇದರ ದೃಶ್ಯಗಳನ್ನು ಹಂಚಿಕೊಂಡಿದೆ.

ಉತ್ತರ ಅಮೆರಿಕಾದಲ್ಲಿ ಸಂಪೂರ್ಣ ಸೂರ್ಯಗ್ರಹಣ:
ಉತ್ತರ ಅಮೆರಿಕಾದಲ್ಲಿ ಸಂಪೂರ್ಣ ಸೂರ್ಯಗ್ರಹಣ:

ಮೆಸ್ಕ್ವೈಟ್ (ಅಮೆರಿಕ): ಸೋಮವಾರ (ಏ.8) ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿತು. ಉತ್ತರ ಅಮೆರಿಕಾದಾದ್ಯಂತಲೂ ಸೂರ್ಯಗ್ರಹಣ ಗೋಚರಿಸಿದೆ. ಈ ಖಗೋಳ ವಿಸ್ಮಯಕಾರಿಯನ್ನು ಜನರು ಕಣ್ತುಂಬಿಕೊಂಡರು.

54 ವರ್ಷಗಳ ನಂತರ ಕಾಣಿಸಿಕೊಂಡ ದೀರ್ಘಾವಧಿಯ ಗ್ರಹಣ ಇದಾಗಿದ್ದು, ನಾಲ್ಕು ನಿಮಿಷ 28 ಸೆಕೆಂಡುಗಳ ಕಾಲ ಸಂಭವಿಸಿತು. ಏಳು ವರ್ಷಗಳ ಹಿಂದೆ ಅಮೆರಿಕದ ಕರಾವಳಿ ಪ್ರದೇಶಗಳಲ್ಲಿ ಸಂಭವಿಸಿದ್ದ ಸೂರ್ಯಗ್ರಹಣಕ್ಕಿಂತ ಹೆಚ್ಚು ಕಾಲ ಗೋಚರಿಸಿದೆ. ಅಂದರೆ, ಈ ಬಾರಿ ಸಂಭವಿಸಿದ ಸಂಪೂರ್ಣ ಸೂರ್ಯಗ್ರಹಣ ಎರಡು ಪಟ್ಟು ಹೆಚ್ಚು ಕಾಲ ಗೋಚರಿಸಿದೆ. ಟೆಕ್ಸಾಸ್​ ಸೇರಿ ಅಮೆರಿಕದ 14 ರಾಜ್ಯಗಳಲ್ಲಿ ಸೂರ್ಯ ಗ್ರಹಣ ಗೋಚರಿಸಿದೆ.

ಈ ಭಾಗಗಳಲ್ಲಿ ಕೊನೆಯ ಸಂಪೂರ್ಣ ಸೂರ್ಯಗ್ರಹಣವು 1870ರ ದಶಕದಲ್ಲಿ ಸಂಭವಿಸಿತ್ತು. 21 ವರ್ಷಗಳ ಬಳಿಕ ಮತ್ತೆ ಸಂಪೂರ್ಣ ಗ್ರಹಣ ಕಾಣಬಹುದಾಗಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ. ಬಾಹ್ಯಾಕಾಶ ಸಂಸ್ಥೆ ನಾಸಾ ಸೂರ್ಯಗ್ರಹಣದ ವೇಳೆ ಸೆರಿ ಹಿಡಿದ ದೃಶ್ಯಗಳು ಮತ್ತು ಚಿತ್ರಗಳನ್ನು ಹಂಚಿಕೊಂಡಿದೆ. ಇದರಲ್ಲಿ ಚಂದ್ರನು ಸೂರ್ಯನನ್ನು ಹಾದು ಹೋಗುವ ಚಿತ್ರಗಳು ಸೆರೆಯಾಗಿವೆ.

ವರದಿಗಳ ಪ್ರಕಾರ, ಆರಂಭಿಕ ಸೂರ್ಯಗ್ರಹಣವು ಮೆಕ್ಸಿಕೋದ ಪೆಸಿಫಿಕ್ ಕರಾವಳಿಯಲ್ಲಿ ಕಂಡುಬಂದಿದೆ. ಭಾರತೀಯ ಕಾಲಮಾನ ಮುಂಜಾನೆ 5 ಗಂಟೆಯವರೆಗೆ ನಡೆದ ಈ ಸೂರ್ಯಗ್ರಹಣವು ದಕ್ಷಿಣ ಟೆಕ್ಸಾಸ್‌ನ ಮೆಕ್ಸಿಕೊ ಗಡಿಯಲ್ಲಿರುವ ಈಗಲ್ ಪಾಸ್ ಬಳಿ ಪ್ರಾರಂಭಗೊಂಡಿತು.

ಸೌರ ಗ್ರಹಣ ಎಂದರೇನು?: ಸೂರ್ಯಗ್ರಹಣವು ಖಗೋಳ ವಿದ್ಯಮಾನವಾಗಿದ್ದು, ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋದಾಗ ಸೂರ್ಯನ ಬೆಳಕು ಸಂಪೂರ್ಣ ಅಥವಾ ಭಾಗಶಃ ಕಣ್ಮರೆಯಾಗುತ್ತದೆ. ಆಗ ಇದನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದಾಗ, ಅದರ ನೆರಳು ಭೂಮಿಯ ಮೇಲೆ ಕಾಣಿಸುತ್ತದೆ. ಸಂಪೂರ್ಣ ಗ್ರಹಣವಾದಾಗ ಮುಂಜಾನೆ ವೇಳೆಯೂ ಕತ್ತಲೆಯಾಗುತ್ತದೆ. ಪೂರ್ಣ ಗ್ರಹಣ ಸಂಭವಿಸುತ್ತಿರುವಾಗ ಜನರು ಭಾಗಶಃ ಗ್ರಹಣವನ್ನು ಮಾತ್ರ ನೋಡಬಲ್ಲರು.

ಎಲ್ಲೆಲ್ಲಿ ಗ್ರಹಣ ಗೋಚರ: ಸಂಪೂರ್ಣ ಸೂರ್ಯಗ್ರಹಣವು ಅಟ್ಲಾಂಟಿಕ್, ಪಶ್ಚಿಮ ಯುರೋಪ್ ಪೆಸಿಫಿಕ್, ಉತ್ತರ ಅಮೆರಿಕ, ಆರ್ಕ್ಟಿಕ್ ಮೆಕ್ಸಿಕೊ, ಮಧ್ಯ ಅಮೆರಿಕ, ದಕ್ಷಿಣ ಅಮೆರಿಕದ ಉತ್ತರ ಭಾಗಗಳು, ಇಂಗ್ಲೆಂಡ್‌ನ ವಾಯುವ್ಯ ಪ್ರದೇಶ, ಐರ್ಲೆಂಡ್ ಮತ್ತು ಕೆನಡಾದಲ್ಲಿ ಗೋಚರಿಸಿದೆ.

ಇದನ್ನೂ ಓದಿ: ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯ 2031-32ರ ವೇಳೆಗೆ ಶೇ 50ರಷ್ಟು ಹೆಚ್ಚಳ: ಇಂಧನ ಸಚಿವಾಲಯ - Hydroelectric Power

ETV Bharat Logo

Copyright © 2024 Ushodaya Enterprises Pvt. Ltd., All Rights Reserved.