ETV Bharat / international

ಕೆಂಪು ಸಮುದ್ರದಲ್ಲಿ ಹೆಚ್ಚಿದ ಉದ್ವಿಗ್ನತೆ: ವಾಣಿಜ್ಯ ಹಡಗಿನ ಮೇಲೆ ಶಂಕಿತ ಹೌತಿ ಬಂಡುಕೋರರ ದಾಳಿ - ದಕ್ಷಿಣ ಕೆಂಪು ಸಮುದ್ರ

''ಬಾರ್ಬಡೋಸ್ - ಧ್ವಜದ, ಯುನೈಟೆಡ್ ಕಿಂಗ್‌ಡಮ್ - ಮಾಲೀಕತ್ವದ ಸರಕು ಹಡಗಿನ ಮೇಲೆ ಶಂಕಿತ ಹೌತಿ ಬಂಡುಕೋರರು ಡ್ರೋನ್ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್, ಹಡಗಿನಲ್ಲಿ ಸಣ್ಣ ಹಾನಿ ಸಂಭವಿಸಿದ್ದು, ಯಾರಿಗೂ ಗಾಯಗಳಾಗಿಲ್ಲ'' ಎಂದು ಖಾಸಗಿ ಭದ್ರತಾ ಸಂಸ್ಥೆ ಆಂಬ್ರೆ ತಿಳಿಸಿದೆ.

Etv Bharat
Etv Bharat
author img

By ETV Bharat Karnataka Team

Published : Feb 6, 2024, 1:59 PM IST

ಟೆಲ್ ಅವೀವ್ (ಇಸ್ರೇಲ್): ದಕ್ಷಿಣ ಕೆಂಪು ಸಮುದ್ರದ ಮೂಲಕ ಪ್ರಯಾಣಿಸುತ್ತಿದ್ದ ಹಡಗಿನ ಮೇಲೆ ಮಂಗಳವಾರ ಶಂಕಿತ ಯೆಮೆನ್‌ನ ​​​​ ಹೌತಿ ಬಂಡುಕೋರರು ಡ್ರೋನ್ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾ ಪಟ್ಟಿಯಲ್ಲಿರುವ ಹಮಾಸ್‌ನ ಮೇಲೆ ಇಸ್ರೇಲ್‌ನ ಯುದ್ಧದ ಹಿನ್ನೆಲೆ ಈ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಯೆಮೆನ್‌ನ ಹೊಡೆಡಾದ ಪಶ್ಚಿಮದಲ್ಲಿ ಈ ದಾಳಿ ನಡೆಸಲಾಗಿದೆ. ಹಡಗಿನ ಕಿಟಕಿಗಳಿಗೆ ಸ್ವಲ್ಪ ಹಾನಿ ಉಂಟುಮಾಡಲಾಗಿದೆ. ದಾಳಿಗೂ ಮುನ್ನ ಹಡಗಿನ ಸಮೀಪದಲ್ಲಿ ಒಂದು ಸಣ್ಣ ಹಡಗು ಇರುವುದು ಕಂಡು ಬಂದಿತ್ತು ಎಂದು ಬ್ರಿಟಿಷ್ ಮಿಲಿಟರಿಯ ಯುನೈಟೆಡ್ ಕಿಂಗ್‌ಡಮ್ ಮೆರಿಟೈಮ್ ಟ್ರೇಡ್ ಆಪರೇಷನ್ಸ್ ತಿಳಿಸಿದೆ.

ಖಾಸಗಿ ಭದ್ರತಾ ಸಂಸ್ಥೆ ಅಂಬ್ರೆ, ಈ ಹಡಗನ್ನು ಬಾರ್ಬಡೋಸ್ - ಧ್ವಜದ, ಯುನೈಟೆಡ್ ಕಿಂಗ್‌ಡಮ್-ಮಾಲೀಕತ್ವದ ಸರಕು ಹಡಗು ಎಂದು ಗುರುತಿಸಿದೆ. ಹಡಗಿನಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ, ಹಡಗಿನ ಕಿಟಕಿಗಳಿಗೆ ಸಣ್ಣ ಹಾನಿಯಾಗಿದೆ ಎಂದು ತಿಳಿಸಿದೆ. ದಾಳಿಯ ಹೊಣೆಯನ್ನು ತಕ್ಷಣವೇ ಯಾವುದೇ ಗುಂಪು ಹೊತ್ತುಕೊಂಡಿಲ್ಲ. ಆದಾಗ್ಯೂ, ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ಮೇಲೆ ಅನುಮಾನಗಳು ವ್ಯಕ್ತವಾಗಿವೆ.

ನವೆಂಬರ್‌ನಿಂದ, ಬಂಡುಕೋರರು ಹಮಾಸ್ ವಿರುದ್ಧ ಗಾಜಾದಲ್ಲಿ ಇಸ್ರೇಲ್‌ನ ಆಕ್ರಮಣದ ಹಿನ್ನೆಲೆ ಕೆಂಪು ಸಮುದ್ರದಲ್ಲಿ ಹಡಗುಗಳನ್ನು ಪದೇ ಪದೆ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಆದರೆ, ಅವರು ಆಗಾಗ್ಗೆ ಇಸ್ರೇಲ್‌ಗೆ ದುರ್ಬಲವಾದ ಅಥವಾ ಸ್ಪಷ್ಟವಾದ ಸಂಪರ್ಕ ಹೊಂದಿರುವ ಹಡಗುಗಳನ್ನು ಗುರಿಯಾಗಿಸಿಕೊಂಡು ಅಟ್ಯಾಕ್​ ಮಾಡುತ್ತಿದ್ದಾರೆ. ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್ ನಡುವಿನ ಪ್ರಮುಖ ಮಾರ್ಗದಲ್ಲಿ ವಾಣಿಜ್ಯ ಹಡಗುಗಳನ್ನು ತಡೆಯುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ.

ಇತ್ತೀಚಿನ ವಾರಗಳಲ್ಲಿ, ಅಮೆರಿಕ ಮತ್ತು ಇಂಗ್ಲೆಂಡ್​​​, ಇತರ ಮಿತ್ರರಾಷ್ಟ್ರಗಳ ಬೆಂಬಲದೊಂದಿಗೆ, ಹೌತಿ ಕ್ಷಿಪಣಿ ಶಸ್ತ್ರಾಗಾರಗಳನ್ನು ಗುರಿಯಾಗಿಟ್ಟುಕೊಂಡು ವೈಮಾನಿಕ ದಾಳಿಗಳನ್ನು ಆರಂಭಿಸಲಾಗಿದೆ. ಅಮೆರಿಕ ಮತ್ತು ಬ್ರಿಟನ್ ಪಡೆಗಳು ಶನಿವಾರ ಯೆಮೆನ್‌ನಲ್ಲಿ 36 ಹೌತಿ ಬಂಡುಕೋರರ ಮೇಲೆ ದಾಳಿ ಮಾಡಿವೆ. ಇರಾಕ್ ಮತ್ತು ಸಿರಿಯಾದಲ್ಲಿ ಶುಕ್ರವಾರ ನಡೆದ ವೈಮಾನಿಕ ದಾಳಿಯು ಇತರ ಇರಾನಿನ ಬೆಂಬಲಿತ ಸೇನಾಪಡೆಗಳು ಮತ್ತು ಇರಾನಿನ ಕ್ರಾಂತಿಕಾರಿ ಗಾರ್ಡ್ ಅನ್ನು ಗುರಿಯಾಗಿಟ್ಟುಕೊಂಡು ಜೋರ್ಡಾನ್‌ನಲ್ಲಿ ಮೂವರು ಅಮೆರಿಕನ್​​ ಸೈನಿಕರನ್ನು ಕೊಂದ ಡ್ರೋನ್ ದಾಳಿಗೆ ಪ್ರತಿಯಾಗಿ ಅಮೆರಿಕವು ವೈಮಾನಿಕ ದಾಳಿ ಮಾಡಿದೆ. ಅಮೆರಿಕ ಸೇನೆಯು, ಹೌತಿಗಳ ಮೇಲೆ ದಾಳಿ ನಡೆಸಿರುವ ಬಗ್ಗೆ ಒಪ್ಪಿಕೊಂಡಿದೆ. ಸ್ಫೋಟಕಗಳನ್ನು ತುಂಬಿದ ಎರಡು ಹೌತಿ ಡ್ರೋನ್ ದೋಣಿಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಅನಾನಸ್ ಎಕ್ಸ್‌ಪ್ರೆಸ್​ಗೆ ತತ್ತರಿಸಿದ ಕ್ಯಾಲಿಫೋರ್ನಿಯಾ: ದಾಖಲೆಯ ಮಳೆಯಿಂದ ಪ್ರವಾಹ, ಸಾವು-ನೋವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.