ETV Bharat / international

ಜಪಾನ್ ಹೊಸ ಪ್ರಧಾನಿಯಾಗಿ ಶಿಗೆರು ಇಶಿಬಾ ಆಯ್ಕೆ - Japan New PM - JAPAN NEW PM

ಜಪಾನ್ ಹೊಸ ಪ್ರಧಾನಿಯಾಗಿ ಶಿಗೆರು ಇಶಿಬಾ ಆಯ್ಕೆಯಾಗಿದ್ದಾರೆ.

ಶಿಗೆರು ಇಶಿಬಾ
ಶಿಗೆರು ಇಶಿಬಾ (IANS)
author img

By ETV Bharat Karnataka Team

Published : Oct 1, 2024, 3:55 PM IST

ಟೋಕಿಯೊ: ಜಪಾನ್​ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್ ಡಿಪಿ) ನಾಯಕ ಶಿಗೆರು ಇಶಿಬಾ ಅವರು ದೇಶದ ಹೊಸ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಸಂಸತ್ತಿನಲ್ಲಿ ನಡೆದ ಮತದಾನದಲ್ಲಿ ಇಶಿಬಾ ಅವರನ್ನು ಆಯ್ಕೆ ಮಾಡಲಾಯಿತು. ಇವರು ಫ್ಯೂಮಿಯೊ ಕಿಶಿಡಾ ಅವರ ಉತ್ತರಾಧಿಕಾರಿಯಾಗಲಿದ್ದಾರೆ.

ಜಪಾನ್ ಸಂಸತ್ತಿನ ಕೆಳ ಮತ್ತು ಮೇಲ್ಮನೆಗಳೆರಡೂ ಪ್ರಧಾನಿ ಸ್ಥಾನಕ್ಕಾಗಿ ಕಳೆದ ವಾರ ಎಲ್​ಡಿಪಿ ಅಧ್ಯಕ್ಷ ಸ್ಥಾನವನ್ನು ಗೆದ್ದ ಇಶಿಬಾ ಅವರ ಹೆಸರನ್ನು ಅನುಮೋದಿಸಿದವು.

ಹಗರಣಗಳಿಂದ ಕುಖ್ಯಾತಿ ಪಡೆದಿರುವ ಎಲ್​ಡಿಪಿಯ ಮೇಲೆ ಮತದಾರರ ವಿಶ್ವಾಸವನ್ನು ಪುನಃಸ್ಥಾಪಿಸಲು ಇಶಿಬಾ ಬಹಳ ಶ್ರಮಪಡಬೇಕಾಗಲಿದೆ. ಹೀಗಾಗಿ ಅವರ ಅಧಿಕಾರಾವಧಿಯು ಬಹಳಷ್ಟು ಸವಾಲುಗಳಿಂದ ಕೂಡಿರಲಿದೆ. ಕಳೆದ ವಾರ ನಡೆದ ಚುನಾವಣೆಯಲ್ಲಿ ಆರ್ಥಿಕ ಭದ್ರತಾ ಸಚಿವ ಸನೇ ತಕೈಚಿ ಅವರನ್ನು ಸೋಲಿಸುವ ಮೂಲಕ ಇಶಿಬಾ ತಮ್ಮ ಐದನೇ ಪ್ರಯತ್ನದಲ್ಲಿ ಎಲ್​ಡಿಪಿ ನಾಯಕನಾಗಿ ವಿಜಯಶಾಲಿಯಾದರು. ಇಶಿಬಾ 215 ಮತಗಳನ್ನು ಗಳಿಸಿ 194 ಮತ ಪಡೆದ ತಕೈಚಿ ಅವರನ್ನು ಹಿಂದಿಕ್ಕಿದರು.

ಅ.27ರಂದು ಸಾರ್ವತ್ರಿಕ ಚುನಾವಣೆ: ಇದಕ್ಕೂ ಮುನ್ನ ಸೋಮವಾರ, ಇಶಿಬಾ ಅಕ್ಟೋಬರ್ 9ರಂದು ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸುವ ಯೋಜನೆಯನ್ನು ಘೋಷಿಸಿದರು. ಅಕ್ಟೋಬರ್ 27ರಂದು ಸಾರ್ವತ್ರಿಕ ಚುನಾವಣೆ ನಿಗದಿಯಾಗಿದೆ. ಹಠಾತ್ ಚುನಾವಣೆಗೆ ಕರೆ ನೀಡಿದ ಅವರ ನಿರ್ಧಾರವನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ. ಅಧಿಕೃತವಾಗಿ ಪ್ರಧಾನಿಯಾಗಿ ಆಯ್ಕೆಯಾಗುವ ಮೊದಲೇ ಇಂಥ ಘೋಷಣೆ ಮಾಡುವುದು ಅಗೌರವ ಮತ್ತು ಅಸಂವಿಧಾನಿಕ ಎಂದು ಪ್ರತಿಪಕ್ಷಗಳು ಟೀಕಿಸಿವೆ.

ಶಿಗೆರು ಇಶಿಬಾ ತಾವು ಜಪಾನಿನ ಆಡಳಿತ ಪಕ್ಷದ ಹೊಸ ನಾಯಕರಾಗಿ ಆಯ್ಕೆಯಾದ ಕೇವಲ ಮೂರು ದಿನಗಳ ನಂತರ ಅಕ್ಟೋಬರ್ 27 ರಂದು ಚುನಾವಣೆ ನಡೆಸುವುದಾಗಿ ಹಠಾತ್ ಘೋಷಿಸಿದ್ದಾರೆ.

ಶುಕ್ರವಾರದ ನಾಯಕತ್ವದ ಚುನಾವಣೆಯಲ್ಲಿ ಗೆದ್ದ ನಂತರ, ಇಶಿಬಾ ಅವರು ಜಪಾನ್​ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವುದಾಗಿ, ಭದ್ರತಾ ಅಪಾಯಗಳನ್ನು ಪರಿಹರಿಸುವುದಾಗಿ, ಸಾರ್ವಜನಿಕ ಹಗರಣಗಳು ಮತ್ತು ಆಂತರಿಕ ಸಂಘರ್ಷಗಳಿಂದಾಗಿ ಹೆಸರು ಕೆಡಿಸಿಕೊಂಡಿರುವ ಎಲ್​ಡಿಪಿ ಪಕ್ಷವನ್ನು ಸ್ವಚ್ಛಗೊಳಿಸುವುದಾಗಿ ಹೇಳಿದರು.

ಜಪಾನ್​ನ ವಿವಾದಾತ್ಮಕ ಯುನಿಫಿಕೇಶನ್ ಚರ್ಚ್ ಎಲ್​ಡಿಪಿಯೊಳಗೆ ಹೊಂದಿರುವ ಪ್ರಭಾವದ ವ್ಯಾಪ್ತಿಯ ಬಗ್ಗೆ ಮಾಹಿತಿಗಳು ಬಹಿರಂಗವಾಗಿದ್ದು, ಜೊತೆಗೆ ಪಕ್ಷಕ್ಕೆ ಸಿಕ್ಕ ದೇಣಿಗೆಯನ್ನು ಕಡಿಮೆ ತೋರಿಸಿರುವುದು ಇವು ಎಲ್​ಡಿಪಿ ಪಕ್ಷಕ್ಕೆ ಅಂಟಿಕೊಂಡ ಪ್ರಮುಖ ಹಗರಣಗಳಾಗಿವೆ. ಹಗರಣಗಳ ಹೊರತಾಗಿಯೂ, ಯುದ್ಧಾನಂತರದಲ್ಲಿ ಬಹುಪಾಲು ಅವಧಿಯಲ್ಲಿ ಜಪಾನ್ ಅನ್ನು ಆಳಿದ ಎಲ್​ಡಿಪಿ ಈಗಲೂ ದೇಶದ ಅತ್ಯಂತ ಜನಪ್ರಿಯ ರಾಜಕೀಯ ಪಕ್ಷವಾಗಿದೆ.

ಇದನ್ನೂ ಓದಿ: ಲೆಬನಾನ್​ನಲ್ಲಿ ಇಸ್ರೇಲ್​ನಿಂದ ಸೀಮಿತ ಭೂ ಆಕ್ರಮಣ: ಬೈರುತ್​ ಮೇಲೆ ಮತ್ತೆ ಬೃಹತ್ ದಾಳಿ - IDF raids on Hezbollah

ETV Bharat Logo

Copyright © 2025 Ushodaya Enterprises Pvt. Ltd., All Rights Reserved.