ETV Bharat / international

ವ್ಯಕ್ತಿಗೆ 80 ಛಡಿ ಏಟಿನ ಶಿಕ್ಷೆ ಪ್ರಕಟಿಸಿದ ಪಾಕಿಸ್ತಾನ ಕೋರ್ಟ್‌! - 80 Lashes To Pak Man - 80 LASHES TO PAK MAN

ಛಡಿ ಏಟಿನ ಶಿಕ್ಷೆಯನ್ನು ಪಾಕಿಸ್ತಾನದಲ್ಲಿ ಕಳೆದೊಂದು ದಶಕದಿಂದ ನೀಡಿರಲಿಲ್ಲ.

session court in Karachi sentenced the man to 80 lashes in a rare decision

author img

By ETV Bharat Karnataka Team

Published : Apr 8, 2024, 4:43 PM IST

ಕರಾಚಿ: ಮಾಜಿ ಪತ್ನಿಯ ಶೀಲದ ಮೇಲೆ ಶಂಕೆ ಮತ್ತು ಆರೋಪಿಯಿಂದ ಆಕೆಗೆ ಜನಿಸಿದ ಮಗುವಿನ ಪಿತೃತ್ವವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನಿಗೆ 80 ಛಡಿ ಏಟಿನ ಶಿಕ್ಷೆ ನೀಡಿ ಕರಾಚಿ ಸೆಷನ್ಸ್‌​​ ಕೋರ್ಟ್​​ ತೀರ್ಪು ನೀಡಿದೆ. ಅಪರೂಪದ ಪ್ರಕರಣದಲ್ಲಿ ಫರೀದ್​ ಖಾದೀರ್ ಎಂಬಾತನಿಗೆ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌​ ನ್ಯಾಯಾಧೀಶ ಮಲಿರ್​ ಶೆಹನಾಜ್​ ಬೊಹ್ಯೊ ಆದೇಶಿಸಿದ್ದಾರೆ.

ಆರೋಪಿ ಸುಳ್ಳುಗಾರ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮಗಳ ಹುಟ್ಟಿನ ಬಗ್ಗೆ ಆತ ಆರೋಪ ಮಾಡಿದ್ದಾನೆ. ಆರೋಪಿ ತಪ್ಪಿತಸ್ಥನಾಗಿದ್ದು, ಆತನಿಗೆ ಛಡಿಯೇಟಿನ ಶಿಕ್ಷೆ ನೀಡಲಾಗುತ್ತಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಚಡಿ ಏಟಿನ ಶಿಕ್ಷೆಗೆ ಒಳಪಟ್ಟಾಗ ಮಾತ್ರ ಆತನಿಗೆ ಜಾಮೀನು ನೀಡಲಾಗುವುದು. ನ್ಯಾಯಾಲಯವು ಛಡಿ ಏಟು ನೀಡುವ ಸಮಯ ಮತ್ತು ಸ್ಥಳವನ್ನು ನಿರ್ಧರಿಸಲಿದೆ ಎಂದು ಹೇಳಿದೆ. (ಐಎಎನ್ಎಸ್)

ಇದನ್ನೂ ಓದಿ: ಸಿರಿಯಾದಲ್ಲಿ ವೈಮಾನಿಕ ದಾಳಿ: ಇಸ್ರೇಲ್​ನಿಂದ ದೂರ ಉಳಿಯಲು ಅಮೆರಿಕಕ್ಕೆ ಇರಾನ್​ ಎಚ್ಚರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.