ETV Bharat / international

ನ್ಯೂಯಾರ್ಕ್​ನಲ್ಲಿ ದಲೈ ಲಾಮ ಭೇಟಿಯಾದ ಅಮೆರಿಕದ ಹಿರಿಯ ಅಧಿಕಾರಿಗಳು - Senior US Officials Meet Dalai Lama - SENIOR US OFFICIALS MEET DALAI LAMA

ನ್ಯೂಯಾರ್ಕ್​ನಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರನ್ನು ಅಮೆರಿಕದ ಹಿರಿಯ ಅಧಿಕಾರಿಗಳು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

senior-us-officials-meet-dalai-lama-in-new-york
ಅಮೆರಿಕ ನಿಯೋಗ ಧರ್ಮಶಾಲಾಗೆ ಭೇಟಿ ನೀಡಿದ ಸಂದರ್ಭದ ಫೋಟೋ (ETV Bharat)
author img

By ETV Bharat Karnataka Team

Published : Aug 22, 2024, 12:24 PM IST

ವಾಷಿಂಗ್ಟನ್​: ಅಮೆರಿಕದ ಹಿರಿಯ ಅಧಿಕಾರಿಗಳು ಧಾರ್ಮಿಕ ಗುರು ದಲೈ ಲಾಮ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ಸ್ಟೇಟ್​ ಡಿಪಾರ್ಟ್​ಮೆಂಟ್​ ಹೇಳಿಕೆ ಪ್ರಕಾರ, ದಲೈ ಲಾಮ ಅವರೊಂದಿಗೆ ಅಪರೂಪದ ಉನ್ನತ ಮಟ್ಟದ ನೇರ ಸಭೆ ಇದಾಗಿದೆ.

ಅಮೆರಿಕದ ಸ್ಟೇಟ್​ ಡಿಪಾರ್ಟ್​ಮೆಂಟ್​ನ ಅಧಿಕಾರಿಗಳಾದ ಉಜ್ರಾ ಜೆಯಾ ಮತ್ತು ಶ್ವೇತ ಭವನದ ರಾಷ್ಟ್ರೀಯ ಭದ್ರತಾ ಮಂಡಳಿ ಅದಿಕಾರಿ ಕೆಲ್ಲಿ ರಾಜೋಕ್​ ನ್ಯೂಯಾರ್ಕ್​ನಲ್ಲಿ ಭೇಟಿಯಾಗಿದ್ದಾರೆ. ದಲೈಲಾಮ ಕೂಡ ವೈದ್ಯಕೀಯ ಚಿಕಿತ್ಸೆಯನ್ನು ಇಲ್ಲಿ ಪಡೆಯುತ್ತಿದ್ದು, ಈ ಭೇಟಿ ವೇಳೆ ದಲೈ ಲಾಮಾ ಅವರಿಗೆ ಟಿಬೇಟಿಯನ್​ ಮಾನವ ಹಕ್ಕು ಪುನರ್​ಸ್ಥಾಪಿಸಲು ಅಮೆರಿಕ ಬದ್ಧವಾಗಿದ್ದು, ಧಾರ್ಮಿಕ ಪರಂಪರೆ ಮತ್ತು ಸಂಸ್ಕೃತಿ, ಭಾಷೆ ಮತ್ತು ಐತಿಹಾಸಿವನ್ನು ಕಾಪಾಡುವ ಪ್ರಯತ್ನಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಲಾಗಿದೆ.

ಟಿಬೆಟ್​ ಮೇಲೆ ಬೀಜಿಂಗ್​ ಬಿಗಿ ನಿಯಂತ್ರಣವನ್ನು ಹೇರಿದ್ದು, ಇದು ತಮ್ಮ ಪ್ರದೇಶವಾಗಿದ್ದು ಬೇರ್ಪಡಿಸಲಾಗದು ಎಂಬ ವಾದ ಮಂಡಿಸಿದೆ. ಟಿಬೆಟ್​ಗೆ ಹೆಚ್ಚಿನ ಸ್ವಾಯುತತ್ತೆ ಬೇಕು ಎಂದು ವಾದ ಮಂಡಿಸಿದ್ದ ದಲೈ ಲಾಮರನ್ನು ಗಡಿಪಾರು ಮಾಡಲಾಗಿದೆ. ಈ ನಡುವೆ ಟಿಬೆಟಿಯನ್ನರಿಗೆ ತಾಯ್ನಾಡನ್ನು ಮರಳಿಸುವ ಪ್ರಯತ್ನಕ್ಕೆ ಅಮರಿಕ ಮುಂದಾಗಿದೆ. ಇದಕ್ಕಾಗಿ ರಿಸ್ವಾಲ್​ ಟಿಬೆಟ್​ ಮಸೂದೆಯನ್ನು ಅಮೆರಿಕ ಅಂಗೀಕರಿಸಿದ್ದು, ಟಿಬೆಟ್​ಯನ್ನರಿಗೆ ತಮ್ಮ ತಾಯ್ನಾಡನ್ನು ಮರಳಿಸುವ ಪ್ರಯತ್ನ ನಡೆಸಿದೆ.

2010ರಿಂದ ಬೀಜಿಂಗ್​ ಮತ್ತು ಟಿಬೆಟಿಯನ್​ ನಾಯಕರ ನಡುವಿನ ಮಾತುಕತೆ ಸ್ಥಗಿತಗೊಂಡಿದೆ. 89 ವರ್ಷದ ದಲೈಲಾಮ ಇತ್ತೀಚಿಗೆ ನ್ಯೂಯಾರ್ಕ್​ನಲ್ಲಿ ಮೊಣಕಾಲಿನ ಸರ್ಜರಿಗೆ ಒಳಗಾಗಿದ್ದರು. ಜುಲೈನಲ್ಲಿ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದ ಅವರು, ಚೇತರಿಕೆ ಕಾಣುತ್ತಿರುವುದಾಗಿ ತಿಳಿಸಿದ್ದರು. ಟಿಬೆಟಿಯನ್ನರ ಹಕ್ಕಿಗಾಗಿ ಹೋರಾಡುತ್ತಿರುವ ದಲೈಲಾಮ 2011ರಲ್ಲಿ ತಮ್ಮ ರಾಜಕೀಯ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿದರು.

ಜುಲೈನಲ್ಲಿ ಟಿಬೆಟ್​ಗೆ ಬೆಂಬಲ ವ್ಯಕ್ತಪಡಿಸುವ ಕಾನೂನನ್ನು ಅಮೆರಿಕ ಅಂಗೀಕರಿಸಿತು. ಇದಾದ ತಿಂಗಳ ಬಳಿಕ ಅಮೆರಿಕದ ಕಾಂಗ್ರೆಸ್​ನ ಹಿರಿಯ ಶಾಸಕರ ನಿಯೋಗ ಭಾರತದ ಧರ್ಮಶಾಲಾಗೆ ಭೇಟಿ ನೀಡಿ ದಲೈಲಾಮ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಟಿಬೆಟಿಯನ್ನರಿಗೆ ಬೆಂಬಲವನ್ನು ಅನುಮೋದಿಸಲಾಗಿದೆ. 1951ರಲ್ಲಿ ಚೀನಾ ಟಿಬೆಟ್​ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ 1959ರಲ್ಲಿ ದಲೈ ಲಾಮ ಅವರನ್ನು ಗಡಿಪಾರು ಮಾಡಲಾಯಿತು. ಈ ಹಿಂದೆ ಮೂರು ಶತಮಾನಗಳ ಕಾಲ ಕ್ವಿಂಗ್​ ರಾಜವಂಶದ ಕಾಲದಲ್ಲಿ ಟೆಬೆಟ್​ ಹೆಚ್ಚು ಸ್ವಾಯುತ್ತವಾಗಿತ್ತು.

ಇದನ್ನೂ ಓದಿ: ಧರ್ಮಶಾಲಾದಲ್ಲಿ ಅಮೆರಿಕ ನಿಯೋಗದಿಂದ ದಲೈ ಲಾಮಾ ಭೇಟಿ: ಚೀನಾಗೆ ಕಠಿಣ ಸಂದೇಶ ರವಾನಿಸಿದ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.