ETV Bharat / international

ಜಪಾನ್ ಚುನಾವಣೆ: ಬಹುಮತ ಪಡೆಯುವಲ್ಲಿ ಪ್ರಧಾನಿ ಶಿಗೆರು ಇಶಿಬಾ ಪಕ್ಷ ವಿಫಲ

ಜಪಾನ್​ನ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ಗೆ ಭಾನುವಾರ ನಡೆದ ಚುನಾವಣೆಯಲ್ಲಿ ನೂತನ ಪ್ರಧಾನಿ ಶಿಗೆರು ಇಶಿಬಾ ಅವರ ಪಕ್ಷ ಬಹುಮತ ಕಳೆದುಕೊಂಡಿದೆ.

Etv Bharat
Etv Bharat (Etv Bharat)
author img

By ANI

Published : Oct 28, 2024, 9:51 AM IST

ಟೋಕಿಯೋ (ಜಪಾನ್): ಜಪಾನ್‌ನ ಆಡಳಿತ ಪಕ್ಷ ಭಾನುವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ನಡೆದ ಚುನಾವಣೆಯಲ್ಲಿ ತನ್ನ ಬಹುಮತವನ್ನು ಕಳೆದುಕೊಂಡಿದ್ದು, ನೂತನ ಪ್ರಧಾನಿ ಶಿಗೆರು ಇಶಿಬಾ ಅವರಿಗೆ ಭಾರಿ ಹೊಡೆತ ನೀಡಿದೆ. ಹೀಗಾಗಿ ಸ್ಥಿರ ಸರ್ಕಾರವನ್ನು ನಡೆಸಲು ಒಕ್ಕೂಟದ ಹೊರಗೆ ಹೆಚ್ಚುವರಿ ಬೆಂಬಲವನ್ನು ಹುಡುಕಬೇಕು ಎಂದು ಅಧಿಕೃತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಸ್ಲಶ್ ಫಂಡ್ ಹಗರಣವು ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಮತಗಳ ಕೊರತೆಯಾಗಿದೆ. ಈ ನಡುವೆ ಪಕ್ಷದ ಈ ಹಿಂದಿನ ಸರ್ಕಾರದಲ್ಲಿದ್ದ ಕೆಲ ಶಾಸಕರು ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಅವರ ಬೆಂಬಲ ನೀಡಿದರೂ ಜಪಾನ್‌ನ ಕೆಳಮನೆಯಲ್ಲಿ ಸಮ್ಮಿಶ್ರ ಸರ್ಕಾರ ಇನ್ನೂ ಬಹುಮತದ ಕೊರತೆ ಎದುರಿಸುತ್ತಿದೆ.

ಒಟ್ಟಾರೆ 465 ಸದಸ್ಯ ಬಲ ಹೊಂದಿರುವ ಕೆಳಮನೆಯಲ್ಲಿ LDP-Komeito (ಪ್ರಧಾನಿ ಶಿಗೆರು ಇಶಿಬಾ ಪಕ್ಷ) ನೇತೃತ್ವದ ಸಮ್ಮಿಶ್ರ ಸರ್ಕಾರ, ಬಹುಮತಕ್ಕೆ ಬೇಕಾದ 233 ಸ್ಥಾನಗಳ ಮ್ಯಾಜಿಕ್​ ನಂಬರ್​​​​ ದಾಟಲು ವಿಫಲವಾಗಿದೆ. ಚುನಾವಣೆಗೆ ಮುನ್ನ ಇಶಿಬಾ ನೇತೃತ್ವದ ಸಮ್ಮಿಶ್ರ ಸರ್ಕಾರ ಒಟ್ಟು 288 ಸ್ಥಾನಗಳನ್ನು ಹೊಂದಿತ್ತು. ವರದಿ ಪ್ರಕಾರ ಚುನಾವಣೋತ್ತರ ದೃಷ್ಟಿಕೋನವು ಅನಿಶ್ಚಿತವಾಗಿರುವ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಗಮನಾರ್ಹ ಮತಗಳನ್ನು ಪಡೆದ ಕೆಲವು ಪ್ರಮುಖ ವಿರೋಧ ಪಕ್ಷಗಳು, ಆಡಳಿತಾರೂಢ ಗುಂಪಿನೊಂದಿಗೆ ಸರ್ಕಾರದಲ್ಲಿ ಭಾಗಿಯಾಗುವ ಸಾಧ್ಯತೆಗಳನ್ನು ತಿರಸ್ಕರಿಸಿವೆ.

ಚುನಾವಣೆಯ ಮೊದಲು 256 ಸ್ಥಾನಗಳನ್ನು ಹೊಂದಿದ್ದ LDP ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಮ್ಯಾಜಿಕ್​ ನಂಬರ್​ ತಲುಪಲು ಸಾಧ್ಯವಾಗದೇ ಭಾರಿ ಹಿನ್ನಡೆ ಅನುಭವಿಸಿದೆ. ಆದರೆ, CDPJ ಪಕ್ಷ 140 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ. ಉದಾರವಾದಿ ಮತ್ತು ಬಲಪಂಥೀಯ ಒಲವು ಎರಡನ್ನೂ ಒಳಗೊಂಡಿರುವ ವಿರೋಧ ಪಕ್ಷಗಳು ತಮ್ಮ ನೀತಿ ಗುರಿಗಳಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ಒಕ್ಕೂಟವನ್ನು ರಚಿಸುವಲ್ಲಿ ಸಹಕರಿಸುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ.

ಜಪಾನಿನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಭಾನುವಾರ ಚುನಾವಣೆ ನಡೆಯಿತು. ಆರ್ಥಿಕ ಅನಿಶ್ಚಿತತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಅಸಮಾಧಾನದವಿರುವ ಈ ಸಂದರ್ಭದಲ್ಲಿ ದೇಶದ ರಾಜಕೀಯ ಸ್ಥಿರತೆಗಾಗಿ ಚುನಾವಣೆ ನಿರ್ಣಾಯಕ ಎಂದು ಪರಿಗಣಿಸಲಾಗಿದೆ.

ಇನ್ನು ರಾಷ್ಟ್ರೀಯ ಮಟ್ಟದಲ್ಲಿ ಜನಾಭಿಪ್ರಾಯ ಸಂಗ್ರಹಣೆಯ ಮೊದಲು ಸಂಸತ್ತಿನ ಮೂಲಕ ದೇಶದ ಸಂವಿಧಾನವನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಪ್ರಾರಂಭಿಸಿರುವ ಪ್ರಧಾನಿ ಇಶಿಬಾ ಅವರ ಪ್ರಮುಖ ಭರವಸೆ ಪೂರೈಸಲು ಈಗಿರುವ ಚುನಾವಣಾ ಫಲಿತಾಂಶವು ಅಸಾಧ್ಯವಾಗಿಸುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಇದಕ್ಕೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಅನುಮೋದನೆ ಬೇಕಾಗುತ್ತದೆ.

ಇದನ್ನೂ ಓದಿ: ಇಂದು ಶ್ವೇತಭವನದಲ್ಲಿ ಭಾರತೀಯ ಅಮೆರಿಕನ್ನರೊಂದಿಗೆ ಬೈಡನ್​​ ದೀಪಾವಳಿ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.