ETV Bharat / international

ರಷ್ಯಾದ ಸಾರ್ವಭೌಮತೆಗೆ ಧಕ್ಕೆ ಬಂದರೆ ಪರಮಾಣು ಬಾಂಬ್​ ಬಳಕೆಗೆ ಸಿದ್ಧ: ಪುಟಿನ್ ಎಚ್ಚರಿಕೆ - nuclear weapons threatened

ರಷ್ಯಾದ ಸಾರ್ವಭೌಮತೆಗೆ ಧಕ್ಕೆ ಬಂದರೆ ಪರಮಾಣು ಬಾಂಬ್​ ಬಳಕೆಗೆ ಸಿದ್ಧ ಎಂದು ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಮತ್ತೊಮ್ಮೆ ಎಚ್ಚರಿಕೆ ರವಾನಿಸಿದ್ದಾರೆ.

ಪುಟಿನ್ ಎಚ್ಚರಿಕೆ
ಪುಟಿನ್ ಎಚ್ಚರಿಕೆ
author img

By PTI

Published : Mar 14, 2024, 7:53 AM IST

ಮಾಸ್ಕೋ (ರಷ್ಯಾ): ಯುದ್ಧದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್​ಗೆ ಬೆಂಬಲವಾಗಿ ನಿಂತಿವೆ. ಇದು ರಷ್ಯಾದ ಸಾರ್ವಭೌಮತೆಗೆ ಧಕ್ಕೆ ತಂದಲ್ಲಿ ಪರಮಾಣು ಬಾಂಬ್​ಗಳನ್ನು ಬಳಕೆ ಮಾಡಲು ಹಿಂಜರಿಯುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ಉಕ್ರೇನ್​ ಯುದ್ಧದಲ್ಲಿ ರಷ್ಯಾ ಅಣ್ವಸ್ತ್ರ ದಾಳಿಗೆ ಮುಂದಾಗಿದೆ ಎಂಬ ಮಾತುಗಳು ಪದೇ ಪದೆ ಕೇಳಿ ಬರುತ್ತಿದ್ದು, ಈ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳೂ ಅನುಮಾನ ವ್ಯಕ್ತಪಡಿಸಿವೆ. ಇದರ ಬೆನ್ನಲ್ಲೇ ಪುಟಿನ್​ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ದೊಡ್ಡ ನಿರ್ಧಾರಕ್ಕೆ ಹಿಂಜರಿಯಲ್ಲ: ರಷ್ಯಾ ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ರಷ್ಯಾದ ಸಾರ್ವಭೌಮತ್ವ ಅಥವಾ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದರೆ ಎಂತಹ ನಿರ್ಣಯಕ್ಕೂ ಸಿದ್ಧವಾಗಿದ್ದೇವೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಇತರ ರಾಷ್ಟ್ರಗಳು ಮೂಗು ತೂರಿಸುವುದು ನಿಲ್ಲಿಸಬೇಕು ಎಂದು ಹೇಳುವ ಮೂಲಕ ಅಮೆರಿಕ, ಇಂಗ್ಲೆಂಡ್​ ಸೇರಿದಂತೆ ಹಲವು ರಾಷ್ಟ್ರಗಳಿಗೆ ನೇರ ಎಚ್ಚರಿಕೆ ರವಾನಿಸಿದ್ದಾರೆ.

ಸದ್ಯಕ್ಕೆ ಪರಮಾಣು ಬಾಂಬ್​ಗಳನ್ನು ಬಳಸುವ ಅಗತ್ಯವಿಲ್ಲ. ಜಗತ್ತು ಅಪಾಯಕಾರಿ ಶಸ್ತ್ರಾಸ್ತ್ರಗಳ ಬಳಕೆಯತ್ತ ಸಾಗುತ್ತಿದೆ ಎಂದು ನಾನು ಭಾವಿಸುವುದಿಲ್ಲ. ಆದರೆ, ಎಲ್ಲದಕ್ಕೂ ಒಂದು ಗಡಿ ಇರುತ್ತದೆ. ಅದನ್ನು ಮೀರಿದಾಗ ದೊಡ್ಡ ನಿರ್ಣಯಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಹೇಳುವ ಮೂಲಕ ಅಣ್ವಸ್ತ್ರಗಳ ಬಳಕೆಗೆ ಹಿಂಜರಿಯುವುದಿಲ್ಲ ಎಂದು ಸೂಚನೆ ನೀಡಿದ್ದಾರೆ.

ಅಮೆರಿಕದ ಸೇನೆಯನ್ನು ಉಕ್ರೇನ್​ಗೆ ಕಳುಹಿಸಲ್ಲ ಎಂದು ಯುಎಸ್​ ಅಧ್ಯಕ್ಷ ಜೋ ಬೈಡನ್​ ಅವರು ತಿಳಿಸಿದ್ದಾರೆ. ಒಂದು ವೇಳೆ ಅಮೆರಿಕ ಡಬಲ್​ಗೇಮ್ ಆಡಿದರೆ, ರಷ್ಯಾ ಅದರ ವಿರುದ್ಧ ಹೋರಾಡಲಿದೆ. ನ್ಯಾಟೋ ರಾಷ್ಟ್ರಗಳ ದೇಶಗಳು ಉಕ್ರೇನ್​ನಲ್ಲಿ ತಮ್ಮ ಸೇನೆಯನ್ನು ನಿಲ್ಲಿಸಿ ಯುದ್ಧ ಮಾಡಿದರೆ ಅದರ ಹಾದಿಯನ್ನು ಬದಲಾಯಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಉಕ್ರೇನ್​ ಡ್ರೋನ್​​ ದಾಳಿ: ರಷ್ಯಾದೊಳಗೆ ಉಕ್ರೇನಿಯನ್ ಡ್ರೋನ್ ದಾಳಿಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ದೇಶದಲ್ಲಿ ಮೂರು ದಿನಗಳ ಕಾಲ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಅದಕ್ಕೆ ಭಂಗ ತರಲು ಈ ರೀತಿ ಮಾಡಲು ಶತ್ರುರಾಷ್ಟ್ರ ಮುಂದಾಗಿದೆ. ನಮ್ಮ 58 ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಡ್ರೋನ್‌ಗಳಲ್ಲಿ ಒಂದು ರಿಯಾಜಾನ್ ಪ್ರದೇಶದಲ್ಲಿನ ತೈಲ ಸಂಸ್ಕರಣಾಗಾರಕ್ಕೆ ಅಪ್ಪಳಿಸಿದೆ. ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ಉಕ್ರೇನ್​ ಮೇಲೆ ರಷ್ಯಾ ಬುಧವಾರ ರಾತ್ರಿ ನಡೆಸಿದ ಕ್ಷಿಪಣಿ ದಾಳಿಯಿಂದ ಮೃತರ ಸಂಖ್ಯೆ ಐದಕ್ಕೆ ಏರಿದೆ. ಕ್ರಿವಿ ರಿಹ್‌ನಲ್ಲಿ 12 ಮಕ್ಕಳು, ಕಿರಿಯ 2 ತಿಂಗಳ ಮಗು ಸೇರಿದಂತೆ 43 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್​ ರಕ್ಷಣಾ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಕಣದಲ್ಲಿ ಮತ್ತೆ ಜೋ ಬೈಡನ್​ v/s ಡೊನಾಲ್ಡ್​ ಟ್ರಂಪ್​ ಫೈಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.