ETV Bharat / international

3ನೇ ಮಹಾಯುದ್ಧಕ್ಕೆ ಒಂದೇ ಹೆಜ್ಜೆ ದೂರ: ನ್ಯಾಟೋಗೆ ಪುಟಿನ್​ ಎಚ್ಚರಿಕೆ

ಉಕ್ರೇನ್‌ ವಿರುದ್ಧದ ಯುದ್ಧದ ವಿಚಾರವಾಗಿ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಷ್ಯಾಧ್ಯಕ್ಷ ವ್ಲಾಡಿಮಿರ್‌ ಪುಟಿನ್​, ಗಂಭೀರ ಸ್ವರೂಪದ ಎಚ್ಚರಿಕೆ ನೀಡಿದ್ದಾರೆ.

putin on nato conflict one step away from world war 3

author img

By ETV Bharat Karnataka Team

Published : Mar 18, 2024, 11:46 AM IST

ಮಾಸ್ಕೋ: ರಷ್ಯಾ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವ ವಾಡ್ಲಿಮಿರ್​ ಪುಟಿನ್​ ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್​ನಲ್ಲಿ ಸೇನೆ ನಿಯೋಜಿಸಲು ಅಮೆರಿಕ ನೇತೃತ್ವದಲ್ಲಿ ನ್ಯಾಟೋ ಮುಂದಾದಲ್ಲಿ ಪೂರ್ಣ ಪ್ರಮಾಣದಲ್ಲಿ ಮೂರನೇ ಮಹಾಯುದ್ಧಕ್ಕೆ ಸಜ್ಜಾಗುವುದಕ್ಕೆ ನಾವು ಹಿಂಜರಿಯಲಾರೆವು ಎಂದು ಹೇಳಿದ್ದಾರೆ.

ಅಧ್ಯಕ್ಷೀಯ ಚುನಾವಣೆ ಗೆದ್ದ ಬಳಿಕ ಮಾತನಾಡಿದ ಅವರು, ಈಗಾಗಲೇ ಉಕ್ರೇನ್​ನಲ್ಲಿ ನ್ಯಾಟೋ ಪಡೆಗಳು ಕಾರ್ಯಾಚರಣೆ ಮಾಡುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಉಕ್ರೇನ್​ನಲ್ಲಿ ಅಮೆರಿಕ ನೇತೃತ್ವದ ಮಿಲಿಟರಿ ಪಡೆಗಳನ್ನು ನಿಯೋಜಿಸುವ ಕುರಿತು ಮಾಸ್ಕೋಗೆ ಅರಿವಿದೆ ಎಂದು ತಿಳಿಸಿದ್ದಾರೆ.

ರಷ್ಯಾ-ಉಕ್ರೇನ್‌ ಯುದ್ಧದ ವಿಚಾರವಾಗಿ ಫ್ರೆಂಚ್​​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಈ ಹಿಂದಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಪುಟಿನ್​, ಆಧುನಿಕ ಜಗತ್ತಿನಲ್ಲಿ ಎಲ್ಲವೂ ಸಾಧ್ಯವಿದೆ. ಎಲ್ಲರಿಗೂ ಇದು ತಿಳಿದಿದೆ. ಮೂರನೇ ಮಹಾಯುದ್ಧಕ್ಕೆ ಒಂದೇ ಹೆಜ್ಜೆ ದೂರದಲ್ಲಿದ್ದೇವೆ. ಆದರೆ ಇದರಲ್ಲಿ ಯಾರಿಗಾದರೂ ಆಸಕ್ತಿ ಇದೆ ಎಂದು ನಾನು ಭಾವಿಸುವುದಿಲ್ಲ ಎಂದರು.

ನಾವು ಶಾಂತಿ ಮಾತುಕತೆಗೆ ಬದ್ಧ. ಶತ್ರುಗಳ ಬುಲೆಟ್‌ಗಳು ಖಾಲಿಯಾಗುತ್ತಿವೆ ಎಂಬ ಕಾರಣಕ್ಕಲ್ಲ. ಅವರು ನಿಜವಾಗಿಯೂ ಎರಡು ದೇಶಗಳ ನಡುವೆ ದೀರ್ಘಕಾಲದ ಉತ್ತಮ ನೆರೆ ಹೊರೆ ಸಂಬಂಧ ಕಾಯ್ದುಕೊಳ್ಳಲು ಬಯಸಿದರೆ ಮಾತ್ರ ಇದು ಸಾಧ್ಯ ಎಂದಿದ್ದಾರೆ.

ರಷ್ಯಾದ 200 ವರ್ಷದ ಇತಿಹಾಸದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ನಾಯಕ ಎಂಬ ಕೀರ್ತಿಗೆ ಇದೀಗ ಪುಟಿನ್​ ಭಾಜನರಾಗಿದ್ದಾರೆ. ಚುನಾವಣೆ ಗೆಲುವಿನ ಭಾಷಣದಲ್ಲಿ ಮಾತನಾಡಿದ ಅವರು, ತಮ್ಮನ್ನು ಬೆಂಬಲಿಸಿದ ಮತ್ತು ನಂಬಿಕೆ ಇಟ್ಟ ಎಲ್ಲಾ ನಾಗರಿಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಪುಟಿನ್ ಇದೀಗ ಐದನೇ ಅವಧಿಗೆ ಅಧ್ಯಕ್ಷರಾಗಿದ್ದಾರೆ. ಇವರು 1999ರಿಂದಲೂ ಅಧ್ಯಕ್ಷ ಮತ್ತು ಪ್ರಧಾನಿಯಾಗಿ ಅಧಿಕಾರದಲ್ಲಿದ್ದಾರೆ. ಅನಾರೋಗ್ಯದ ಕಾರಣ, ಬೋರಿಸ್ ಯೆಲ್ಟ್ಸಿನ್ 1999ರಲ್ಲಿ ಅಧಿಕಾರವನ್ನು ಪುಟಿನ್‌ಗೆ ಹಸ್ತಾಂತರಿಸಿದ್ದರು. ಅಂದಿನಿಂದ ಯಾವುದೇ ಚುನಾವಣೆಯಲ್ಲಿಯೂ ಪುಟಿನ್‌ ಸೋತಿಲ್ಲ ಎಂಬುದು ಗಮನಾರ್ಹ. (ಐಎಎನ್​ಎಸ್​)

ಇದನ್ನೂ ಓದಿ: ರಷ್ಯಾ ಅಧ್ಯಕ್ಷೀಯ ಚುನಾವಣೆ: ಶೇ.87ರಷ್ಟು ಮತ ಪಡೆದು ಮತ್ತೆ ಗದ್ದುಗೆಗೇರಿದ ಪುಟಿನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.