ವಿಯೆನ್ನಾ(ಆಸ್ಟ್ರಿಯಾ): ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆಸ್ಟ್ರಿಯಾದ ವಿಯೆನ್ನಾಗೆ ಆಗಮಿಸಿದರು. ರಷ್ಯಾ ರಾಜಧಾನಿ ಮಾಸ್ಕೋದಿಂದ ನೇರವಾಗಿ ಇಲ್ಲಿಗೆ ಬಂದಿಳಿದರು.
#WATCH | Prime Minister Narendra Modi arrives in Vienna, Austria for the second leg of his visit. pic.twitter.com/eEs51K3Wh4
— ANI (@ANI) July 9, 2024
ಎರಡು ದಿನಗಳ ಪ್ರವಾಸಕ್ಕಾಗಿ ಬಂದಿರುವ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಆಸ್ಟ್ರಿಯಾ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್‌ಬರ್ಗ್ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ, ಸೇನಾ ಗೌರವಗಳನ್ನು ಸಲ್ಲಿಸಿ ಅದ್ಧೂರಿ ಸ್ವಾಗತ ಕೋರಲಾಯಿತು. ಇಂದು ಆಸ್ಟ್ರಿಯಾ ಗಣರಾಜ್ಯದ ಅಧ್ಯಕ್ಷ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ಅವರನ್ನು ಪ್ರಧಾನಿ ಭೇಟಿ ಮಾಡಲಿದ್ದಾರೆ. ಜೊತೆಗೆ ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರೊಂದಿಗೆ ಮಾತುಕತೆ ನಡೆಸುವರು. ಈ ವೇಳೆ, ಪ್ರಧಾನಿ ಮತ್ತು ಚಾನ್ಸೆಲರ್ ಭಾರತ ಮತ್ತು ಆಸ್ಟ್ರಿಯಾದ ಉದ್ಯಮಿಗಳನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
#WATCH | Prime Minister Narendra Modi arrives at the hotel Ritz-Carlton in Vienna, Austria; greets members of the Indian diaspora at the hotel pic.twitter.com/alepT9XZC4
— ANI (@ANI) July 9, 2024
ಆಸ್ಟ್ರಿಯಾಕ್ಕೆ ಮೋದಿ ಭೇಟಿ ಕುರಿತು ಚಾನ್ಸೆಲರ್ ನೆಹಮ್ಮರ್ ಪ್ರತಿಕ್ರಿಯಿಸಿ, ''ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿನ ವಾರ ವಿಯೆನ್ನಾದಲ್ಲಿ ಸ್ವಾಗತಿಸಲು ನಾನು ತುಂಬಾ ಎದುರು ನೋಡುತ್ತಿದ್ದೇನೆ. ಈ ಭೇಟಿಯು ವಿಶೇಷ ಗೌರವವಾಗಿದೆ. ಏಕೆಂದರೆ ಇದು 40 ವರ್ಷಗಳ ನಂತರ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ ಮತ್ತು ನಾವು ಭಾರತದೊಂದಿಗೆ 75 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಆಚರಿಸುತ್ತಿರುವ ಮಹತ್ವದ ಮೈಲಿಗಲ್ಲು'' ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
#WATCH | Austrian artists sing Vande Mataram to welcome Prime Minister Narendra Modi, as he arrives at the hotel Ritz-Carlton in Vienna. pic.twitter.com/mza5OHMrWY
— ANI (@ANI) July 9, 2024
''ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುವ ಮತ್ತು ಅನೇಕ ಭೌಗೋಳಿಕ ರಾಜಕೀಯ ಸವಾಲುಗಳ ಮೇಲೆ ನಿಕಟ ಸಹಕಾರದ ಬಗ್ಗೆ ಮಾತನಾಡಲು ನಮಗೆ ಅವಕಾಶವಿದೆ'' ಎಂದು ಆಸ್ಟ್ರಿಯಾದ ಚಾನ್ಸೆಲರ್ ತಿಳಿಸಿದ್ದಾರೆ.
ನೆಹಮ್ಮರ್ ಪೋಸ್ಟ್ಗೆ ಮೋದಿ, "ಧನ್ಯವಾದಗಳು, ಚಾನ್ಸೆಲರ್ ಕಾರ್ಲ್ ನೆಹಮ್ಮರ್. ಈ ಐತಿಹಾಸಿಕ ಸಂದರ್ಭವನ್ನು ಗುರುತಿಸಲು ಆಸ್ಟ್ರಿಯಾಕ್ಕೆ ಭೇಟಿ ನೀಡುವುದು ನಿಜಕ್ಕೂ ಗೌರವವಾಗಿದೆ. ನಮ್ಮ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಮತ್ತು ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸುವ ನಮ್ಮ ಚರ್ಚೆಗಳನ್ನು ನಾನು ಎದುರು ನೋಡುತ್ತಿದ್ದೇನೆ'' ಎಂದು ಪ್ರತಿಕ್ರಿಯಿಸಿದ್ದಾರೆ.
#WATCH | Vienna, Austria | After meeting & interacting with PM Modi, a member of the Indian diaspora says, " we met pm modi and we congratulated him for his third term as pm of india. we are very happy that we got a chance to meet him..." pic.twitter.com/aasBeguCTz
— ANI (@ANI) July 9, 2024
ಅಲ್ಲದೇ, ''ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಕಾನೂನಿನ ನಿಯಮದ ಹಂಚಿಕೆಯ ಮೌಲ್ಯಗಳು ತಳಹದಿಯನ್ನು ರೂಪಿಸುತ್ತವೆ. ಅದರ ಮೇಲೆ ನಾವು ಎಂದಿಗೂ ನಿಕಟ ಪಾಲುದಾರಿಕೆಯನ್ನು ನಿರ್ಮಿಸುತ್ತೇವೆ'' ಎಂದು ಪ್ರಧಾನಿ ಹೇಳಿದ್ದಾರೆ. ಇದಕ್ಕೂ ಮುನ್ನ ಮೋದಿ ಎರಡು ದಿನಗಳ ರಷ್ಯಾದ ಪ್ರವಾಸ ಕೈಗೊಂಡು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.
ಇದನ್ನೂ ಓದಿ: 'ನೀವು ಇಡೀ ಜೀವನವನ್ನೇ ದೇಶಕ್ಕಾಗಿ ಸಮರ್ಪಿಸಿದ್ದೀರಿ': ಪ್ರಧಾನಿ ಮೋದಿಯನ್ನು ಕೊಂಡಾಡಿದ ರಷ್ಯಾಧ್ಯಕ್ಷ ಪುಟಿನ್