ETV Bharat / international

ಪಾಕಿಸ್ತಾನ ಭಾರತಕ್ಕೆ ದೊಡ್ಡ ಆಸ್ತಿ, ಅವರ ಆತಿಥ್ಯ ದೊಡ್ಡದು: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ - ಪಾಕಿಸ್ತಾನ

ಪಾಕಿಸ್ತಾನಿಯರು ಭಾರತಕ್ಕೆ ಅತಿದೊಡ್ಡ ಆಸ್ತಿ ಎಂದು ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

ಮಣಿಶಂಕರ್ ಅಯ್ಯರ್
pakistan-is-a-big-asset-to-india-their-hospitality-is-big-congress-leader-mani-shankar-aiyar
author img

By PTI

Published : Feb 12, 2024, 4:56 PM IST

ಲಾಹೋರ್: ಅತಿಥಿಗಳಿಗೆ ಪಾಕಿಸ್ತಾನ ನೀಡುವಷ್ಟು ಆತಿಥ್ಯವನ್ನು ನಾನು ಬೇರೆಲ್ಲೂ ನೋಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಮತ್ತು ಭಾರತದ ಮಾಜಿ ರಾಜತಾಂತ್ರಿಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. "ಪಾಕಿಸ್ತಾನಿಗಳು ಕೆಲವೊಂದು ವಿಷಯಕ್ಕೆ ಪ್ರತಿಕ್ರಿಯಿಸುವುದು ಮಾತ್ರವಲ್ಲದೆ ಅತಿಯಾಗಿ ಪ್ರತಿಕ್ರಿಯಿಸುತ್ತಾರೆ. ನಾವು ಸ್ನೇಹಪರವಾಗಿದ್ದರೆ ಅವರು ನಮ್ಮೊಂದಿಗೆ ಇನ್ನಷ್ಟು ಸ್ನೇಹಪರವಾಗುತ್ತಾರೆ. ಹಾಗೆಯೇ ನಾವು ಅವರನ್ನು ವಿರೋಧಿಸಿದರೆ ಅವರು ಅದಕ್ಕೂ ಹೆಚ್ಚು ನಮ್ಮನ್ನು ವಿರೋಧಿಸುತ್ತಾರೆ" ಎಂಬ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯನ್ನು ಡಾನ್ ಪತ್ರಿಕೆ ವರದಿ ಮಾಡಿದೆ.

ಲಾಹೋರ್​ನ ಅಲ್ಹಮ್ರಾದಲ್ಲಿ ಫೈಜ್ ಉತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ 'ಹಿಜ್ರ್ ಕಿ ರಾಖ್, ವಿಸಾಲ್ ಕೇ ಫೂಲ್, ಇಂಡೋ-ಪಾಕ್ ಅಫೇರ್ಸ್' (Hijr Ki Rakh, Visaal Kay Phool, Indo-Pak affairs) ಹೆಸರಿನ ಚರ್ಚಾಕೂಟದಲ್ಲಿ ಅಯ್ಯರ್ ಮಾತನಾಡಿದರು.

ಪ್ರಧಾನಿ ಮೋದಿ ಚುನಾವಣೆಯಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮತಗಳನ್ನು ಪಡೆಯಲು ನಿರಂತರವಾಗಿ ವಿಫಲರಾದರೂ ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಇದು ಮೂರನೇ ಎರಡರಷ್ಟು ಸ್ಥಾನಗಳ ಬಹುಮತ ನೀಡುತ್ತದೆ. ಹೀಗಾಗಿ ಮೂರನೇ ಎರಡರಷ್ಟು ಭಾರತೀಯರು ನಿಮ್ಮ ಕಡೆಗೆ (ಪಾಕಿಸ್ತಾನದ ಕಡೆಗೆ) ಬರಲು ಸಿದ್ಧರಿದ್ದಾರೆ ಎಂದು ಅವರು ಒತ್ತಿ ಹೇಳಿದರು.

ಪಾಕಿಸ್ತಾನವನ್ನು 'ಭಾರತದ ಅತಿದೊಡ್ಡ ಆಸ್ತಿ' ಎಂದು ಉಲ್ಲೇಖಿಸಿದ ಅಯ್ಯರ್, ಪಾಕಿಸ್ತಾನ ಮತ್ತು ಅದರ ಜನರ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಪಾಕಿಸ್ತಾನ ಹೊರತುಪಡಿಸಿದರೆ ವಿಶ್ವದ ಬೇರಾವುದೇ ದೇಶದಲ್ಲಿ ತಮಗೆ ಅಷ್ಟು ಮುಕ್ತ ಮನಸಿನ ಸ್ವಾಗತ ಸಿಕ್ಕಿಲ್ಲ ಎಂದು ಹೇಳಿದರು.

"ಇಂದು ಸದ್ಭಾವನೆಯ ಅಗತ್ಯ ಹೆಚ್ಚಾಗಿದೆ. ಆದರೆ ಸದ್ಭಾವನೆಯ ಬದಲು, ಮೊದಲ ಬಾರಿಗೆ ನರೇಂದ್ರ ಮೋದಿ ಸರ್ಕಾರ ರಚನೆಯಾದ ನಂತರ ಕಳೆದ 10 ವರ್ಷಗಳಲ್ಲಿ ಇದಕ್ಕೆ ವಿರುದ್ಧವಾದದ್ದನ್ನು ಮಾಡಲಾಗಿದೆ" ಎಂಬ ಅಯ್ಯರ್ ಹೇಳಿಕೆಯನ್ನು ಡಾನ್ ಪತ್ರಿಕೆ ವರದಿ ಮಾಡಿದೆ.

ಅಯ್ಯರ್ ಅವರ ಹೇಳಿಕೆಗಳು ಭಾರತದ ಅಧಿಕೃತ ನಿಲುವಿಗೆ ವಿರುದ್ಧವಾಗಿವೆ. ಭಯೋತ್ಪಾದನೆ ಮತ್ತು ಮಾತುಕತೆಗಳು ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂಬುದು ಭಾರತದ ನಿಲುವಾಗಿದೆ. ಗಡಿಯಾಚೆಯಿಂದ ಭಾರತದ ವಿರುದ್ಧ ಭಯೋತ್ಪಾದನೆಯನ್ನು ಬಳಸುವುದು ಪಾಕಿಸ್ತಾನದ ಮೂಲಭೂತ ಕಾರ್ಯತಂತ್ರವಾಗಿದೆ ಎಂದು ಈ ಹಿಂದೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದರು. ಪ್ರಸ್ತುತ ಅಯ್ಯರ್ ಅವರ ಪಾಕಿಸ್ತಾನ ಪರವಾದ ಹೇಳಿಕೆಗಳು ಭಾರತದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿವೆ.

ಇದನ್ನೂ ಓದಿ: ರಫಾ ಮೇಲೆ ದಾಳಿ ಆರಂಭಿಸಿದ ಇಸ್ರೇಲ್: ನೂರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.