ETV Bharat / international

ಪಾಕ್​ ಚುನಾವಣೆ: ಪಿಎಂಎಲ್​-ಎನ್​, ಪಿಪಿಪಿ ನಡುವೆ ಅಧಿಕಾರ ಹಂಚಿಕೆ ಮಾತುಕತೆ - ಪಾಕ್​ ಚುನಾವಣೆ

ಪಾಕಿಸ್ತಾನದಲ್ಲಿ ಈಗ ಸರ್ಕಾರ ರಚನೆ ಕಸರತ್ತು ಜೋರಾಗಿಯೇ ನಡೆದಿದೆ. ಪಿಎಂಎಲ್​​- ಎನ್​ ಮತ್ತು ಪಿಪಿಪಿ ನಡುವೆ ಪ್ರಧಾನಿ ಸ್ಥಾನವನ್ನು ಸಮನಾಗಿ ಹಂಚಿಕೊಳ್ಳುವ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.

pakistan-elections-pml-n-ppp-in-negotiations-for-power-sharing-deal
ಪಾಕ್​ ಚುನಾವಣೆ: ಪಿಎಂಎಲ್​-ಎನ್​ , ಪಿಪಿಪಿ ನಡುವೆ ಅಧಿಕಾರ ಹಂಚಿಕೆ ಮಾತುಕತೆ
author img

By ETV Bharat Karnataka Team

Published : Feb 13, 2024, 6:40 AM IST

ನವದೆಹಲಿ: ಪಾಕಿಸ್ತಾನದ ಅಂತಿಮ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಚುನಾವಣೆಯಲ್ಲಿ ಇದುವರೆಗೂ ಯಾವುದೇ ಪಕ್ಷಕ್ಕೆ ಬಹುಮತ ಬಂದಿಲ್ಲ. ಇಮ್ರಾನ್​ಖಾನ್​ ಅವರ ಪಕ್ಷದ ಬೆಂಬಲಿಗರು 92 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ. ಇನ್ನು ಪಕ್ಷಗಳ ವಿಚಾರಕ್ಕೆ ಬರುವುದಾದರೆ 75 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಪಿಎಂಎಲ್​-ಎನ್​ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಿಎಂಎಲ್-ಎನ್, ಬಿಲಾವಲ್ ಭುಟ್ಟೊ ಜರ್ದಾರಿ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ -ಪಿಪಿಪಿ ಜೊತೆ ಸಮ್ಮಿಶ್ರ ಸರ್ಕಾರ ರಚಿಸಲು ಮಾತುಕತೆ ನಡೆಸುತ್ತಿದೆ.

ಫೆಬ್ರವರಿ 8 ರಂದು ಮತದಾನ ನಡೆದಾಗಿನಿಂದ ಕೆಲವು ದಿನಗಳ ವಿಳಂಬದ ನಂತರ ಅಂತಿಮವಾಗಿ ಫಲಿತಾಂಶ ಹೊರ ಬಿದ್ದಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ -ಪಿಟಿಐ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಪಾಕಿಸ್ತಾನದ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ - ಅಂಶಗಳ ಪ್ರಕಾರ, ಪಿಟಿಐ ಬೆಂಬಲಿತ ಸ್ವತಂತ್ರರು ಪಾಕಿಸ್ತಾನ ಸಂಸತ್​ನ ಒಟ್ಟು 266 ಸ್ಥಾನಗಳಲ್ಲಿ 92, PML-N 75 ಮತ್ತು PPP 54 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಪಾಕಿಸ್ತಾನ ಸೇನೆ ಹಾಗೂ ಇಮ್ರಾನ್​ಖಾನ್​ ನಡುವೆ ತೀವ್ರವಾದ ಭಿನ್ನಮತವಿದೆ. ಹೀಗಾಗಿ ಇಮ್ರಾನ್​ ಖಾನ್ ಪಾಕ್​ನಲ್ಲಿ ಅಧಿಕಾರಕ್ಕೆ ಬರುವುದು ಬೇಡವಾಗಿದೆ. ಇನ್ನು ಪಾಕಿಸ್ತಾನದ ಚುನಾವಣಾ ಆಯೋಗವು ಇಮ್ರಾನ್​​ಖಾನ್ ನೇತೃತ್ವದ ಪಿಟಿಐಗೆ ಈ ಹಿಂದೆ ಇದ್ದ ಚಿನ್ಹೆ ಕ್ರಿಕೆಟ್ ಬ್ಯಾಟ್ ಅನ್ನು ನೀಡಲು ನಿರಾಕರಿಸಿತು. ಮತ್ತೊಂದು ಕಡೆ ಇಮ್ರಾನ್ ಖಾನ್ ಮೂರು ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಪಾಲಾಗಿದ್ದಾರೆ. ಹೀಗಾಗಿ ಅವರನ್ನು ಚುನಾವಣೆಗೆ ನಿಲ್ಲದಂತೆ ನಿರ್ಬಂಧಿಸಲಾಗಿದೆ.

ಇಮ್ರಾನ್​ ಖಾನ್​ ಇಷ್ಟೆಲ್ಲ ಸಂಕಷ್ಟಗಳ ಮಧ್ಯೆ ಅವರ ಬೆಂಬಲಿಗರು ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸೇನೆಗೆ ಸೆಡ್ಡು ಹೊಡೆದಿದ್ದಾರೆ. ಮತ್ತೊಂದು ಕಡೆ ಪಿಟಿಐ ಪಕ್ಷದ ಹಿರಿಯ ನಾಯಕ ಗೋಹರ್ ಅಲಿ ಖಾನ್ ಮಾತನಾಡಿ, ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಸ್ವಂತ ಸರ್ಕಾರ ರಚಿಸುವ ಸ್ಥಿತಿಯಲ್ಲಿದ್ದಾರೆ. ನಾವು ಪಿಎಂಎಲ್-ಎನ್ ಅಥವಾ ಪಿಪಿಪಿಯೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಪಿಎಂಎಲ್-ಎನ್ ಮತ್ತು ಪಿಪಿಪಿ ಎರಡೂ ಅಧಿಕಾರ ಹಂಚಿಕೆ ಒಪ್ಪಂದಕ್ಕಾಗಿ ಸೋಮವಾರ ಸಂಜೆ ಗಂಭೀರ ಮಾತುಕತೆ ನಡೆಸುತ್ತಿವೆ. ಒಂದೊಮ್ಮೆ ಒಪ್ಪಂದಕ್ಕೆ ಬಂದರೆ, ಮಾಜಿ ಪ್ರಧಾನಿ ಮತ್ತು ನವಾಜ್ ಷರೀಫ್ ಅವರ ಸಹೋದರ ಶೆಹಬಾಜ್ ಷರೀಫ್ ಮತ್ತು ಬಿಲಾವಲ್ ಭುಟ್ಟೋ ಜರ್ದಾರಿ ಅವರು ಹೊಸ ಸರ್ಕಾರದ ಭಾಗವಾಗುವ ಸಾಧ್ಯತೆ ಇದೆ. ಎರಡೂ ಪಕ್ಷಗಳ ನಡುವೆ ಐದುವರ್ಷಗಳಲ್ಲಿ ಸಮನಾಗಿ ಪ್ರಧಾನಿ ಸ್ಥಾನ ಹಂಚಿಕೆ ಮಾಡಿಕೊಳ್ಳುವ ಒಪ್ಪಂದ ಆಗಿದೆ ಎಂದು ತಿಳಿದು ಬಂದಿದೆ.

ಈ ನಡುವೆ, ನವಾಜ್ ಷರೀಫ್ ಅವರ ಪುತ್ರಿ ಮರ್ಯಮ್ ನವಾಜ್ ಅವರನ್ನು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಮಗದೊಂದು ಕಡೆ ಪಿಪಿಪಿಯ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯು ಇಸ್ಲಾಮಾಬಾದ್‌ನಲ್ಲಿ ಆಸಿಫ್ ಅಲಿ ಜರ್ದಾರಿ ಮತ್ತು ಬಿಲಾವಲ್ ಭುಟ್ಟೋ-ಜರ್ದಾರಿ ನೇತೃತ್ವದಲ್ಲಿ ನಡೆಯಿತು ಎಂದು ಪಕ್ಷದ ಹೇಳಿಕೆಯನ್ನು ಉಲ್ಲೇಖಿಸಿ ಡಾನ್ ವರದಿ ಮಾಡಿದೆ.

ಪಿಎಂಎಲ್​ - ಎನ್​ ಹಾಗೂ ಪಿಪಿಪಿಗಳು ಸರ್ಕಾರ ರಚನೆ ಕುರಿತು ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದರೆ, ಅದೇ ಸಮಯದಲ್ಲಿ ಇಮ್ರಾನ್ ಖಾನ್ ಅವರ ಪಿಟಿಐ ಕೂಡ ಕೇಂದ್ರದಲ್ಲಿ ಮತ್ತು ಪಂಜಾಬ್ ಮತ್ತು ಖೈಬರ್ - ಪಖ್ತುಂಖ್ವಾ ಪ್ರಾಂತ್ಯಗಳಲ್ಲಿ ಸರ್ಕಾರ ರಚಿಸಲು ಕಾರ್ಯತಂತ್ರ ರೂಪಿಸುತ್ತಿದೆ. ಪಿಟಿಐ ನಾಯಕರು ಸೋಮವಾರ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅವರೊಂದಿಗೆ ಸಭೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸಾರ್ವತ್ರಿಕ ಚುನಾವಣೆ ವೇಳೆ ನಡೆದ ಅಕ್ರಮಗಳ ಬಗ್ಗೆ ಪಿಟಿಐ ನಾಯಕರು ಅಧ್ಯಕ್ಷರಿಗೆ ವಿವರಣೆ ನೀಡಿದ್ದಾರೆ.

ಇದನ್ನು ಓದಿ: ಬ್ಯಾಟ್​ ಇಲ್ಲದೇ ಸೆಂಚುರಿ ಬಾರಿಸಿದ್ದ ಇಮ್ರಾನ್​ಗೆ ಮತ್ತೆ ಹಿನ್ನೆಡೆ: ಅಧಿಕಾರದ ಚುಕ್ಕಾಣಿ ಹಿಡಿಯಲು ಮೈತ್ರಿ ಸರ್ಕಾರದ ಉತ್ಸಾಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.