ETV Bharat / international

ದೇಶ ವಿರೋಧಿ ಚಟುವಟಿಕೆ ಆರೋಪ: ಇಮ್ರಾನ್ ಖಾನ್​​ರ ಪಿಟಿಐ ಪಕ್ಷ ನಿಷೇಧಕ್ಕೆ ಪಾಕ್ ಸರ್ಕಾರ ಚಿಂತನೆ - Imran Khan party ban - IMRAN KHAN PARTY BAN

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಧಾನಿ ಶಹಬಾಜ್​ ಷರೀಫ್ ಸರ್ಕಾರವು ಪಿಟಿಐ ಪಕ್ಷವನ್ನು ನಿಷೇಧಿಸಲು ಮುಂದಾಗಿದೆ.

ಇಮ್ರಾನ್ ಖಾನ್​​ರ ಪಕ್ಷ ನಿಷೇಧಕ್ಕೆ ಪಾಕ್ ಸರ್ಕಾರ ಚಿಂತನೆ
ಇಮ್ರಾನ್ ಖಾನ್​​ರ ಪಕ್ಷ ನಿಷೇಧಕ್ಕೆ ಪಾಕ್ ಸರ್ಕಾರ ಚಿಂತನೆ (ETV Bharat)
author img

By PTI

Published : Jul 15, 2024, 6:17 PM IST

ಇಸ್ಲಾಮಾಬಾದ್ (ಪಾಕಿಸ್ತಾನ): ಹಲವು ಪ್ರಕರಣಗಳಲ್ಲಿ ಜೈಲು ಪಾಲಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅವರ 'ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್' ಪಕ್ಷವನ್ನು ದೇಶ ವಿರೋಧಿ ಚಟುವಟಿಕೆ ಚಟುವಟಿಕೆ ಆರೋಪಗಳ ಮೇಲೆ ನಿಷೇಧಿಸಲು ಅಲ್ಲಿನ ಸರ್ಕಾರ ಮುಂದಾಗಿದೆ.

ಈ ಬಗ್ಗೆ ಸರ್ಕಾರದ ಮಾಹಿತಿ ಇಲಾಖೆ ಸಚಿವ ಅತ್ತಾವುಲ್ಲಾ ತರಾರ್ ಸೋಮವಾರ ಮಾತನಾಡಿದ್ದು, "ಇಮ್ರಾನ್​ ಖಾನ್​ ಅವರ ಪಕ್ಷವು ದೇಶ ವಿರೋಧಿ ಚಟಿವಟಿಕೆಗಳಲ್ಲಿ ತೊಡಗಿದೆ. ಪಕ್ಷವನ್ನು ನಿಷೇಧಿಸಲು ಪ್ರಧಾನಿ ಶಹಬಾಜ್​ ಷರೀಫ್​ ನೇತೃತ್ವದ ಸರ್ಕಾರ ಚಿಂತಿಸಿದೆ. ಈ ಬಗ್ಗೆ ಶೀಘ್ರವೇ ಪ್ರಕಟಣೆ ಹೊರಬೀಳಲಿದೆ" ಎಂದು ತಿಳಿಸಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಭಿತ್ತರಿಸಿವೆ.

ಖಾನ್​ರ ಪಿಟಿಐ ಪಕ್ಷದ ಮೇಲೆ ನಿರ್ಬಂಧ ಹೇರಲು ಹಲವು ಪುರಾವೆಗಳು ಸಿಕ್ಕಿವೆ. ಇವುಗಳ ಆಧಾರದ ಮೇಲೆ ಸರ್ಕಾರ ಕ್ರಮಕ್ಕೆ ಮುಂದಾಗಲಿದೆ ಎಂದು ಪಾಕಿಸ್ತಾನ ಸಚಿವ ಹೇಳಿದ್ದಾರೆ. ಈಚೆಗಷ್ಟೇ ಮೀಸಲು ಸೀಟುಗಳ ಕೇಸ್​ ಮತ್ತು ಅಕ್ರಮ ವಿವಾಹ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ರಿಲೀಫ್​ ನೀಡಿದ ಬೆನ್ನಲ್ಲೇ, ಇಮ್ರಾನ್​ ಖಾನ್​ಗೆ ಷರೀಫ್​ ಸರ್ಕಾರ ಶಾಕ್​ ನೀಡಲು ಮುಂದಾಗಿದೆ.

ಸದ್ಯಕ್ಕೆ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅವರು ಅನೇಕ ಪ್ರಕರಣಗಳಲ್ಲಿ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ನಾಲ್ಕು ಪ್ರಕರಣಗಳಲ್ಲಿ ಅವರಿಗೆ 30 ಕ್ಕೂ ಅಧಿಕ ವರ್ಷ ಜೈಲು ಶಿಕ್ಷೆಯಾಗಿದೆ. ಪಕ್ಷವನ್ನು ಮುನ್ನಡೆಸಲು ಸಮರ್ಥ ನಾಯಕತ್ವ ಇಲ್ಲವಾಗಿದ್ದು, ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಇಮ್ರಾನ್​ ಖಾನ್​ ಪ್ರತಿಕ್ರಿಯೆ: ಸರ್ಕಾರ ತಮ್ಮ ಪಕ್ಷವನ್ನು ನಿಷೇಧಿಸುವ ನಿರ್ಧಾರಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಜೈಲಲ್ಲಿರುವ ಇಮ್ರಾನ್​ ಖಾನ್​, ಇದು ಷರೀಫ್​ ಸರ್ಕಾರದ ಹತಾಶ ಮನೋಭಾವ ತೋರಿಸುತ್ತದೆ. ನಮ್ಮನ್ನು ಕಂಡು ಹೆದರಿದ್ದಾರೆ ಎಂಬುದು ಈ ಮೂಲಕ ತಿಳಿಯುತ್ತಿದೆ ಎಂದಿದ್ದಾರೆ.

ನಮ್ಮ ಪಿಟಿಐ ಪಕ್ಷದ ಇಬ್ಬರು ಹಿರಿಯ ಮುಖಂಡರ ಮೇಲೆ ದೇಶದ್ರೋಹದ ಆರೋಪ ಮಾಡಲಾಗಿದೆ. ನನ್ನ ವಿರುದ್ಧವೂ ಹಲವು ನಕಲಿ ಪ್ರಕರಣಗಳನ್ನು ಹಾಕಿ ಜೈಲಿಗೆ ದೂಡಲಾಗಿದೆ. ಇದರಲ್ಲಿ ಕೆಲವನ್ನು ಸುಪ್ರೀಂಕೋರ್ಟ್​ ಖುಲಾಸೆ ಮಾಡಿದೆ. ಇದರಿಂದ ಷರೀಫ್​ ಸರ್ಕಾರ ಆತಂಕಕ್ಕೀಡಾಗಿದೆ. ಈಗ ನಮ್ಮ ಪಕ್ಷವನ್ನು ಮುಗಿಸಲು ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪಿಟಿಐ ಹಿರಿಯ ನಾಯಕ ಅಲಿ ಜಾಫರ್ ಮಾತನಾಡಿ, ಮೀಸಲಾತಿಯ ಸೀಟುಗಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಮ್ಮ ಪರವಾಗಿ ತೀರ್ಪು ನೀಡಿದ್ದು, ಷರೀಫ್​ ಸರ್ಕಾರಕ್ಕೆ ಹತಾಶೆ ತಂದಿದೆ. ಪಕ್ಷವನ್ನೇ ನಿಷೇಧಿಸಲು ಪ್ರಯತ್ನಿಸುತ್ತಿದೆ. ಇದನ್ನು ಜಾರಿಗೆ ತರಲು ಬಿಡುವುದಿಲ್ಲ. ಕಾನೂನಿಗೆ ವಿರುದ್ಧವಾಗಿ ಸರ್ಕಾರ ಚಿಂತನೆ ಮಾಡಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: 'ಅಮೆರಿಕದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಜಾಗವಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು': ಜೋ ಬೈಡನ್​ - Joe Biden statement in Oval Office

ETV Bharat Logo

Copyright © 2025 Ushodaya Enterprises Pvt. Ltd., All Rights Reserved.