ETV Bharat / international

ಸಹಾಯಕ್ಕೆ ಕಾಯುತ್ತಿದ್ದವರ ಮೇಲೆ ಇಸ್ರೇಲ್​ ದಾಳಿ: ಗಾಜಾದಲ್ಲಿ 100ಕ್ಕೂ ಹೆಚ್ಚು ಜನರು ಸಾವು - Palestinian

ಮಾನವೀಯ ನೆರವಿಗಾಗಿ ಕಾಯುತ್ತಿರುವವರ ಮೇಲೆ ಇಸ್ರೇಲ್​ ವೈಮಾನಿಕ ಹಾಗೂ ಗುಂಡಿನ ದಾಳಿ ನಡೆಸಿದ್ದು, ಗಾಜಾದಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

Gaza  ಗಾಜಾ  ಇಸ್ರೇಲ್​ ಸೇನೆಯ ವೈಮಾನಿಕ ದಾಳಿ  Palestinian  Israeli Vs Hamas War
ಸಹಾಯಕ್ಕಾಗಿ ಕಾಯುತ್ತಿರುವವರ ಮೇಲೆ ಇಸ್ರೇಲ್​ ಸೇನೆ ಗುಂಡಿನ ದಾಳಿ: 100ಕ್ಕೂ ಹೆಚ್ಚು ಜನರು ಸಾವು
author img

By ANI

Published : Mar 1, 2024, 8:14 AM IST

ಗಾಜಾ ನಗರ: ಗಾಜಾ ನಗರದಲ್ಲಿ ಗುರುವಾರ ಮಾನವೀಯ ನೆರವಿಗಾಗಿ ಕಾಯುತ್ತಿದ್ದ ಜನರ ಮೇಲೆಯೇ ಇಸ್ರೇಲ್​ ಸೇನೆ ನಡೆಸಿದ ವೈಮಾನಿಕ ಮತ್ತು ಗುಂಡಿನ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಮೊದಲು ವೈಮಾನಿಕ ದಾಳಿ ನಡೆಸಿದ ಇಸ್ರೇಲ್ ಸೇನೆಯು, ನಂತರ ಆಹಾರ ಪೂರೈಕೆಗಾಗಿ ಬಂದಿದ್ದ ಟ್ರಕ್‌ಗಳ ಬಳಿ ತೆರಳಿದ್ದ ಸಂತಸ್ತರ ಮೇಲೆ ಗುಂಡಿನ ದಾಳಿ ನಡೆಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಮಲ್ ಅಡ್ವಾನ್ ಆಸ್ಪತ್ರೆಯ ಆಂಬ್ಯುಲೆನ್ಸ್ ಸೇವೆಗಳ ಮುಖ್ಯಸ್ಥ ಅಫಾನಾ ಅವರು, ದಾಳಿಯ ಸ್ಥಳಕ್ಕೆ ತಲುಪಿದ ಸಮಯದಲ್ಲಿ ನೂರಾರು ಮೃತದೇಹಗಳು ಬಿದ್ದಿದ್ದರು. ಜೊತೆಗೆ ಗಾಯಗೊಂಡವರು ನೆಲದ ಮೇಲೆ ಒದ್ದಾಡುತ್ತಿದ್ದರು. ಮೃತದೇಹಗಳು ಮತ್ತು ಗಾಯಾಳುಗಳನ್ನು ಸಾಗಿಸಲು ಆಂಬ್ಯುಲೆನ್ಸ್‌ಗಳು ಸಾಕಾಗದ ಕಾರಣ, ಕತ್ತೆ ಮತ್ತು ಕುದುರೆ ಗಾಡಿಗಳಲ್ಲಿ ರವಾನೆ ಮಾಡಲಾಯಿತು ಎಂದು ತಿಳಿಸಿದರು.

ನೆರವಿಗಾಗಿ ಕಾಯುತ್ತಿರುವವರ ಮೇಲೆ ಗುಂಡಿನ ದಾಳಿ: ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿಯನ್ನು ಇಸ್ರೇಲ್ ಖಚಿತಪಡಿಸಿದೆ. ಆದರೆ, ಯೋಧರ ಮೇಲೆ ದಾಳಿ ನಡೆಸಲು ಮುಂದಾದಾಗ ಗುಂಡಿನ ದಾಳಿ ನಡೆಸಬೇಕಾಯಿತು ಎಂದು ತಿಳಿದುಬಂದಿದೆ. ಈ ವೇಳೆ ಟ್ರಕ್‌ಗಳು ಸಂತ್ರಸ್ತರಿದ್ದ ಗುಂಪಿನ ಬಂದಿವು. ಟ್ರಕ್‌ಗಳಲ್ಲಿನ ಆಹಾರ ತೆಗೆದುಕೊಳ್ಳಲು ಮುತ್ತಿಗೆ ಹಾಕಿದ ನೂರಾರು ಜನರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

''ಆಹಾರ ಟ್ರಕ್‌ಗಳು ಬಂದಿರುವ ವಿಷಯ ತಿಳಿದು ಎಲ್ಲರೂ ಒಮ್ಮೆಲೇ ಅಲ್ಲಿಗೆ ತೆರಳಿದ್ದರು. ಆದರೆ, ಈ ವೇಳೆ ಇಸ್ರೇಲ್ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ನೂರಾರು ಜನರು ಸಾವನ್ನಪ್ಪಿದ್ದು, ತುಂಬಾ ಜನರು ಗಾಯಗೊಂಡಿದ್ದಾರೆ'' ಎಂದು ಘಟನೆಯಲ್ಲಿ ಗಾಯಗೊಂಡಿರುವ ಕಮೆಲ್ ಅಬು ನಹೆಲ್ ತಿಳಿಸಿದ್ದಾರೆ.

''ಗುಂಪನ್ನು ಚದುರಿಸಲು ಇಸ್ರೇಲ್​ ಸೇನೆ ಗುಂಡು ಹಾರಿಸಿತು. ಇದರ ಪರಿಣಾಮವಾಗಿ ಅನೇಕ ಜನರು ವಾಹನ ಕೆಳಗಡೆ ಅಡಗಿಕೊಂಡರು. ಗುಂಡಿನ ದಾಳಿ ನಿಲ್ಲಿಸಿದ ನಂತರ ಅವರು ಆಹಾರ ಚೀಲಗಳನ್ನು ಪಡೆಯಲು ಹಿಂತಿರುಗಿದರು. ಇದೇ ವೇಳೆ ಮತ್ತೊಂದು ಗುಂಡಿನ ದಾಳಿ ನಡೆಯಲಾಗಿದೆ. ಜೊತೆಗೆ ಇಸ್ರೇಲ್ ಕ್ಷಿಪಣಿ ದಾಳಿಯನ್ನು ಮಾಡಿದೆ'' ಎಂದು ಇನ್ನೊಬ್ಬ ಗಾಯಾಳು ಅಲಾ ಅಬು ದೈಯಾ ಹೇಳಿದ್ದಾರೆ.

ಗಾಜಾ ಆರೋಗ್ಯ ಇಲಾಖೆ ಮಾಹಿತಿ: ಗಾಜಾ ಆರೋಗ್ಯ ಇಲಾಖೆ ಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಗುರುವಾರ ನಡೆದ ಘೋರ ಘಟನೆಯಲ್ಲಿ 104 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್​ ದಾಳಿಯಿಂದಾಗಿ ಗಾಜಾದಲ್ಲಿ ಇದುವರೆಗೆ 30,035 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 70,457 ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ನೀಡಿದ ಸಾಲ ಮರುಪಾವತಿ ಅವಧಿ ಮತ್ತೊಂದು ವರ್ಷ ವಿಸ್ತರಿಸಿದ ಚೀನಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.