ಲಾಸ್ ವೇಗಾಸ್ (ಅಮೆರಿಕ): ಆನ್ಲೈನ್ ಕಂಟೆಂಟ್ ಕ್ರಿಯೆಟರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬ ಲಾಸ್ವೇಗಾಸ್ನಲ್ಲಿರುವ ಗೋಳಾಕಾರದ ಎಲ್ಇಡಿ ಪರದೆ ಹೊಂದಿರುವ ಸ್ಫಿಯರ್‌ನ ಮೇಲ್ಭಾಗಕ್ಕೆ ಹತ್ತಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಸದ್ಯ ಆತನನ್ನು ಮೈಸನ್ ಡೆಸ್ ಚಾಂಪ್ಸ್ ಎಂದು ಗುರುತಿಸಲಾಗಿದ್ದು, ತಾನು ನಿರಾಶ್ರಿತ ಗರ್ಭಿಣಿಗೆ ಹಣವನ್ನು ಸಂಗ್ರಹಿಸುವ ಸಲುವಾಗಿ ಈ ರೀತಿಯಾಗಿ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಲಾಸ್ ವೆಗಾಸ್ನ ನೆವಾಡಾದ ಸ್ಪಿಯರ್ ಲೊಕೇಶನ್ ಎಂಬ ದೊಡ್ಡ ಕನ್ಸರ್ಟ್ ಹಾಲ್‌ನಲ್ಲಿ ಈ ಘಟನೆ ನಡೆದಿದ್ದು ಕಾನೂನು ಎನ್ಫೋರ್ಸ್ಮೆಂಟ್ ಮತ್ತು ಇತರ ಏಜೆನ್ಸಿಗಳು ಪ್ರತಿಕ್ರಿಯಿಸಿವೆ. ಘಟನೆಯ ತಕ್ಷಣವೇ ಲಾಸ್ ವೇಗಾಸ್ ಮೆಟ್ರೋಪಾಲಿಟನ್ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಬಂಧಿತ ವ್ಯಕ್ತಿ ಡೆಸ್ ಚಾಂಪ್ಸ್ ಸ್ಫಿಯರ್ ಮೇಲೆ ಏರಿದ್ದು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಅಲ್ಲಿನ ವಿಡಿಯೋವನ್ನು ಹಾಕಲು ನಿರ್ಧರಿಸಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಆತ ಗೋಳಾಕಾರದ ಗುಮ್ಮಟದ ಮೇಲೆ ಬಿಳಿ ಸ್ವೆಟ್‌ಶರ್ಟ್, ಸನ್‌ಗ್ಲಾಸ್ ಮತ್ತು ತಲೆಯ ಮೇಲೆ ಕ್ಯಾಮೆರಾವನ್ನು ಧರಿಸಿರುವುದು ಕಾಣಸಿಗುತ್ತದೆ. ಇಸಾಬೆಲ್ ಎಂಬ ತಾಯಿಗೆ ಹಣವನ್ನು ಸಂಗ್ರಹಿಸಲು ತಾನು ಸ್ಫಿಯರ್ ಏರಿದಾಗಿ ತಿಳಿಸಿದ್ದಾನೆ. ಇಸಾಬೆಲ್ ಗರ್ಭಿಣಿ ಮತ್ತು ನಿರಾಶ್ರಿತಳಾಗಿದ್ದು ಆಕೆಗೆ ಸಹಾಯದ ಅಗತ್ಯವಿದೆ ಎಂದು ಆ ವಿಡಿಯೋದಲ್ಲಿ ಆನ್ಲೈನ್ ಕಂಟೆಂಟ್ ಕ್ರಿಯೇಟರ್ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: ಅಮೆರಿಕದಲ್ಲಿ ಭಾರತ ಮೂಲದ ವಿದ್ಯಾರ್ಥಿ ಶವವಾಗಿ ಪತ್ತೆ