ವಾಷಿಂಗ್ಟನ್ ಡಿಸಿ: ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ನಿಕ್ಕಿ ಹ್ಯಾಲೆ, ನ್ಯಾಟೋ ಕುರಿತು ಇತ್ತೀಚಿನ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಟೀಕೆಗಳ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು 'ಸಬಲಗೊಳಿಸುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ನ್ಯಾಟೋ ಸದಸ್ಯರಾಷ್ಟ್ರಗಳು ರಕ್ಷಣಾ ವೆಚ್ಚದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದೇ ಇದ್ದರೆ ರಷ್ಯಾವನ್ನು ಪ್ರೋತ್ಸಾಹಿಸಬೇಕಾಗುತ್ತದೆ ಎಂದು ಟ್ರಂಪ್ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ನಿಕ್ಕಿ ಹ್ಯಾಲೆ ಮಾಜಿ ಅಧ್ಯಕ್ಷರ ವಿರುದ್ಧ ಹರಿಹಾಯ್ದಿದ್ದಾರೆ. ಮರು-ಚುನಾಯಿಸಿದರೆ ಮೈತ್ರಿಕೂಟದ ಹೃದಯಭಾಗದಲ್ಲಿರುವ ಸಾಮೂಹಿಕ ರಕ್ಷಣಾ ಷರತ್ತನ್ನು ಅವರು ಪಾಲಿಸುವುದಿಲ್ಲ ಎಂಬ ಹೇಳಿಕೆ ಬೆರಗುಗೊಳಿಸುತ್ತದೆ ಎಂದಿದ್ದಾರೆ.
ನ್ಯಾಟೋವನ್ನು ಛಿದ್ರಗೊಳಿಸಲಾಗಿದೆ ಎಂದು ಟ್ರಂಪ್ ದಕ್ಷಿಣ ಕೆರೊಲಿನಾದ ಕಾನ್ವೇಯಲ್ಲಿ ನಡೆದ ರ‍್ಯಾಲಿಯಲ್ಲಿ ಹೇಳಿದ್ದರು. ದಕ್ಷಿಣ ಕೆರೊಲಿನಾ ನಿಕ್ಕಿ ಹ್ಯಾಲಿ ಅವರ ತವರು ರಾಜ್ಯವಾಗಿದೆ. ಈ ನಡುವೆ ಕಳೆದ ಶುಕ್ರವಾರ ರಷ್ಯಾದ ವಿರೋಧ ಪಕ್ಷದ ನಾಯಕ ಮತ್ತು ಕ್ರೆಮ್ಲಿನ್ ಕಟು ಟೀಕಾಕಾರ ಅಲೆಕ್ಸಿ ನವಲ್ನಿ ಅವರ ಮರಣದ ನಂತರ ಹ್ಯಾಲೆ ಅವರು ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನವಲ್ನಿ ಅವರ ಸಾವಿನ ಕಾರಣ ಅಸ್ಪಷ್ಟವಾಗಿದ್ದರೂ ಇದರ ಹಿಂದೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕೈವಾಡ ಇದೆ ಎಂದು ವಿಶ್ವ ನಾಯಕರು ಆರೋಪಿಸುತ್ತಿದ್ದಾರೆ. ನವಲ್ನಿ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಪುಟಿನ್ ಮೇಲೆ ಆರೋಪ ಹೊರಿಸಿದ್ದಾರೆ.
ಆದರೆ ನವಲ್ನಿ ಸಾವಿನ ಬಗ್ಗೆ ನೇರವಾಗಿ ಮಾತನಾಡಲು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ. ಮತ್ತೊಂದು ಕಡೆ ನಿಕ್ಕಿ ಹ್ಯಾಲೆ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದರೂ ಟ್ರಂಪ್ ಮಾತ್ರ ರಷ್ಯಾ ಅಧ್ಯಕ್ಷ ಪುಟಿನ ಪರ ಮೃದುದೋರಣೆ ಹೊಂದಿದ್ದಾರೆ. ಟ್ರಂಪ್, ತಮ್ಮ ರಾಜಕೀಯ ವಿರೋಧಿಗಳನ್ನು ಕೊಲ್ಲುವ ವ್ಯಕ್ತಿಯ ಪರವಾಗಿ ನಿಂತಿದ್ದಾರೆ. ಅಮೆರಿಕನ್ ಪತ್ರಕರ್ತರನ್ನು ಬಂಧಿಸುವ ಮತ್ತು ಅವರನ್ನು ಒತ್ತೆಯಾಳಾಗಿ ಇರಿಸುವ ಕೊಲೆಗಡುಕನ ಪರವಾಗಿದ್ದಾರೆ. ನನಗೆ ಸವಾಲು ಹಾಕಬೇಡಿ ಮುಂದಿನ ಚುನಾವಣೆ ಅಥವಾ ಇದು ನಿಮಗೂ ಸಂಭವಿಸುತ್ತದೆ ಎಂದು ಹ್ಯಾಲಿ ಟ್ರಂಪ್ಗೆ ಎಚ್ಚರಿಕೆ ನೀಡಿದ್ದಾರೆ.
ನ್ಯಾಯಾಲಯದಲ್ಲಿನ ಪ್ರಕರಣಗಳಿಂದ ವಿಚಲಿತನಾಗಿರುವುದರಿಂದ ಪುಟಿನ್ ಬಗ್ಗೆ ಏನನ್ನೂ ಹೇಳದೆ ಇರಬಹುದು ಎಂದೂ ನಿಕ್ಕಿ ಹ್ಯಾಲೆ ಟೀಕಿಸಿದ್ದಾರೆ. ಸಿವಿಲ್ ವಂಚನೆ ಪ್ರಕರಣದಲ್ಲಿ ನ್ಯೂಯಾರ್ಕ್ನ ಕೋರ್ಟ್ ಟ್ರಂಪ್ ಅವರಿಗೆ USD 355 ಮಿಲಿಯನ್ ದಂಡ ವಿಧಿಸಿದ ಒಂದು ದಿನದ ನಂತರ ಹ್ಯಾಲಿ ಟ್ರಂಪ್ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಏತನ್ಮಧ್ಯೆ, ಟ್ರಂಪ್ ಮತ್ತು ಹ್ಯಾಲೆ ಅವರು ಮುಂದಿನ ವಾರ ದಕ್ಷಿಣ ಕೆರೊಲಿನಾ GOP ಪ್ರಾಥಮಿಕದಲ್ಲಿ ಮುಖಾಮುಖಿಯಾಗಲಿದ್ದಾರೆ.
ಇದನ್ನು ಓದಿ: ಸಿವಿಲ್ ವಂಚನೆ ಕೇಸ್: ಡೊನಾಲ್ಡ್ ಟ್ರಂಪ್ಗೆ 355 ಮಿಲಿಯನ್ ಡಾಲರ್ ದಂಡ ವಿಧಿಸಿದ ಕೋರ್ಟ್