ETV Bharat / international

8 ತಿಂಗಳ ಹಿಂದೆ ಕೈಬಿಟ್ಟಿದ್ದ ಚೀನಾದ ಬೆಲ್ಟ್​ ಅಂಡ್​ ರೋಡ್​ ಯೋಜನೆಗೆ ಮರು ಸೇರಿದ ಇಟಲಿ - Italy PM Meloni china tour

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಚೀನಾ ಪ್ರವಾಸ ಕೈಗೊಂಡಿದ್ದಾರೆ. ಕೈಬಿಡಲಾಗಿದ್ದ ಬೆಲ್ಟ್​ ಅಂಡ್​ ರೋಡ್​​ ಯೋಜನೆಗೆ ಮರು ಸೇರ್ಪಡೆಯಾಗಿದ್ದಾರೆ.

ಚೀನಾದ ಬೆಲ್ಟ್​ ಅಂಡ್​ ರೋಡ್​ ಯೋಜನೆಗೆ ಮರು ಸೇರಿದ ಇಟಲಿ
ಚೀನಾದ ಬೆಲ್ಟ್​ ಅಂಡ್​ ರೋಡ್​ ಯೋಜನೆಗೆ ಮರು ಸೇರಿದ ಇಟಲಿ (AFP)
author img

By ETV Bharat Karnataka Team

Published : Jul 29, 2024, 9:15 PM IST

ಬೀಜಿಂಗ್(ಚೀನಾ:): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಚೀನಾದ ಮಹತ್ವಾಕಾಂಕ್ಷಿ ಬೆಲ್ಟ್​ ಅಂಡ್​ ರೋಡ್​ ಯೋಜನೆಗೆ ಮರು ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ ಈ ಯೋಜನೆಯಿಂದ ಇಟಲಿ ಹೊರಬಂದಿತ್ತು. ಮತ್ತೆ ಅಧಿಕಾರಕ್ಕೆ ಬಂದ ಜಾರ್ಜಿಯಾ ಅವರು ಮತ್ತೆ ಚೀನಾದ ಜೊತೆಗೆ ಕೈಜೋಡಿಸುವುದಾಗಿ ಘೋಷಿಸಿದ್ದಾರೆ.

ಬೆಲ್ಟ್ ಅಂಡ್ ರೋಡ್‌ನ ಯೋಜನೆಯು ಇಟಲಿಗೆ ಸಹಕಾರಿಯಲ್ಲ ಎಂದು ಕಳೆದ ವರ್ಷದ ಡಿಸೆಂಬರ್​​ನಲ್ಲಿ ಟೀಕಿಸಿ, ಅದರಿಂದ ಹೊರಬರುವುದಾಗಿ ಇಟಲಿ ಪಧಾನಿ ಜಾರ್ಜಿಯಾ ಮೆಲೋನಿ ಘೋಷಿಸಿದ್ದರು. ಚುನಾವಣೆ ನಡೆದು ಮತ್ತೆ ಭರ್ಜರಿಯಾಗಿ ಅಧಿಕಾರಕ್ಕೆ ಬಂದಿರುವ ಜಾರ್ಜಿಯ ಅವರು ಎಂಟೇ ತಿಂಗಳಲ್ಲಿ ಮನಸ್ಸು ಬದಲಿಸಿ ಮತ್ತೆ ಚೀನಾದ ಯೋಜನೆಗೆ ಸೈ ಎಂದಿದ್ದಾರೆ. ಅವರ ಈ ನಿರ್ಧಾರ ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಚೀನಾ ಪ್ರಮುಖ ಸಂವಹನಕಾರ: ಎರಡನೇ ಬಾರಿಗೆ ಅಧಿಕಾರಕ್ಕೇರಿರುವ ಇಟಲಿ ಪ್ರಧಾನಿ ಮೆಲೋನಿ ಅವರು ಚೀನಾಕ್ಕೆ ಮೊದಲ ಭೇಟಿ ನೀಡಿದ್ದಾರೆ. ಈ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್​ ಅವರೊಂದಿಗಿನ ಮಾತುಕತೆಯಲ್ಲಿ, ಜಾಗತಿಕ ಸಮಸ್ಯೆಗಳಿಗೆ ಚೀನಾ ಪ್ರಮುಖ ಸಂವಹನಕಾರ ದೇಶವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭದ್ರತೆ ಹೆಚ್ಚುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಚೀನಾ ಪ್ರಮುಖ ಮಧ್ಯವರ್ತಿಯಾಗುವುದು ಅನಿವಾರ್ಯ ಎಂಬುದು ನನ್ನ ಭಾವನೆ ಎಂದು ಮೆಲೋನಿ ಹೇಳಿದ್ದಾರೆ.

ಉಭಯ ದೇಶಗಳ ನಡುವಿನ ಸ್ಥಿರತೆಯನ್ನು ಹೆಚ್ಚಿಸುವುದು, ಶಾಂತಿಯನ್ನು ಮುಂದುವರಿಸುವ ಬಗ್ಗೆ ಒಟ್ಟಿಗೆ ಯೋಚಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಸ್ಥಿರವಾಗಿ ಉಳಿಯಲು ಕಾರ್ಯನಿರ್ವಹಿಸುವ ನಿಯಮಗಳ ವ್ಯವಸ್ಥೆ ಬೇಕು. ಕಳೆದ ವರ್ಷದ ಕೊನೆಯಲ್ಲಿ ಹೊರಬಂದಿದ್ದ ಬೆಲ್ಟ್ ಮತ್ತು ರೋಡ್ ಯೋಜನೆಗೆ ಮರುಸೇರ್ಪಡೆಯಾಗುವುದಾಗಿ ಮೆಲೋನಿ ಇದೇ ವೇಳೆ ಘೋಷಿಸಿದರು.

ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ: ಬಳಿಕ ಚೀನಾದ ಪ್ರಧಾನಿ ಲಿ ಕಿಯಾಂಗ್ ಅವರನ್ನು ಭೇಟಿಯಾದ ಮೆಲೋನಿ ಅವರು, ದ್ವಿಪಕ್ಷೀಯ ಸಹಕಾರವನ್ನು ಮರುಪ್ರಾರಂಭಿಸುವುದಾಗಿ ತಿಳಿಸಿದರು. ನಂತರ ಉಭಯ ನಾಯಕರು ದ್ವಿಪಕ್ಷೀಯ ಕ್ರಿಯಾ ಯೋಜನೆಗೆ ಸಹಿ ಹಾಕಿದರು.

ಇಟಲಿ ಪ್ರಧಾನಿ ಮೆಲೋನಿ ಸರ್ಕಾರವು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್‌ನಿಂದ ಹೊರಬಂದಿತ್ತು. ಚೀನಾದ ಮಹತ್ವಾಕಾಂಕ್ಷಿಯ ಯೋಜನೆಯಿಂದ ಹೊರಬಿದ್ದಿದ್ದ ಏಕೈಕ ಜಿ7 ರಾಷ್ಟ್ರವಾಗಿತ್ತು. ಚುನಾವಣೆಗೂ ಮೊದಲು ಸಾಗರೋತ್ತರದಲ್ಲಿ ಚೀನಾದ ಪ್ರಭಾವ ವಿಸ್ತರಿಸುವುದನ್ನು ಮೆಲೋನಿ ವಿರೋಧಿಸಿದ್ದರು.

ಇದನ್ನೂ ಓದಿ: ಮತ್ತೆ ಮೆಲೋಡಿ ಮೂಮೆಂಟ್​: ಮೋದಿ ಜೊತೆಗಿನ ಸೆಲ್ಫಿ ವಿಡಿಯೋ ಹಂಚಿಕೊಂಡ ಮೆಲೋನಿ - Modi Meloni Selfie

ETV Bharat Logo

Copyright © 2024 Ushodaya Enterprises Pvt. Ltd., All Rights Reserved.